Avatar

NAMMA MEDIA 24X7

ಬದ್ರಿಯಾ ಜುಮಾ ಮಸೀದಿ ಮತ್ತು ಹಯತುಲ್ ಇಸ್ಲಾಂ ಮದರಸ ಬಜಾಲ್ ನಂತೂರ್ ಈದುಲ್ ಅಳ್ಹಾ (ಬಕ್ರೀದ್)ಆಚರಣೆ

ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಆಚರಣೆ ನಡೆಯಿತು.ಖತೀಬರಾದ ಅಬ್ದುಲ್ ನಾಸಿರ್ ಸಅದಿ ಈದ್ ಆಶಂಸ ಭಾಷಣ ಮಾಡಿದರು .ತನ್ನ ಭಾಷಣದಲ್ಲಿ ಯಾರೂ ಯಾರೊಂದಿಗೂ ದ್ವೇಷಿಸದೆ ಪರಸ್ಪರ ಕಚ್ಛಾಟದೆ ಒಗ್ಗಟ್ಟಿನಿಂದ ಬಾಳಿರಿ ಯಾವುದೇ ಪ್ರತಿಸಂದಿ ನೇರಿಟ್ಟರೂ ಅಲ್ಲಾಹನು ನೀಡಿದ ಅನುಗ್ರಹಗಳನ್ನು ಮರೆಯದೆ ಅದಕ್ಕೆ ಕೃತಜ್ಞತೆ ಸಲ್ಲಿಸಿ, ಸದಾ ಸಮಯ ಅಲ್ಲಾಹನಿಗೆ ತಲೆಬಾಗಿ ಇಹಪರ ವಿಜಯಿಗಳಾಗಲು ಪ್ರಯತ್ನಿಸಿರಿ ಎಂಬ ಹಿತವಚನ ನೀಡಿದರು‌ ನಂತರ ಸದರ್ ಮುಅಲ್ಲಿಮರಾದ ಅಬ್ದುಲ್ ಹಕೀಂ ಮದನಿ ಈದ್ ನಮಾಜು ಹಾಗೂ ಖುತುಬಾ ನಿರ್ವಹಿಸಿದರು….

Read More

ವಾರದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಗರಸಭೆಗೆ ಮುತ್ತಿಗೆ: ದಿನೇಶ್ ಅಮೀನ್

ಉಡುಪಿ: ಮಳೆಗಾಲದ ಪೂರ್ವ ತಯಾರಿ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಳ್ಳುವಲ್ಲಿ ಉಡುಪಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಆರೋಪಿಸಿದರು.ಉಡುಪಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ರಾಜಕಾಲುವೆ, ಸಣ್ಣ ಕಾಲುವೆ ಹಾಗೂ ಮಳೆ ನೀರು ಹರಿಯುವ ಚರಂಡಿಗಳ ಹೂಳೆತ್ತುವ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಮಳೆ ಆರಂಭವಾದರೆ ನಗರದಲ್ಲಿ ನೀರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಇದೆ ಎಂದು ಹೇಳಿದರು. ಬನ್ನಂಜೆ ಪ್ರದೇಶದಲ್ಲಿಯೂ ಚರಂಡಿ ಸ್ವಚ್ಛತಾ ಕಾರ್ಯ ಪ್ರಾರಂಭವಾಗಿಲ್ಲ. ವಾರದೊಳಗೆ…

Read More

ಮಂಜುನಾಥ ಭಂಡಾರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ

ಉಡುಪಿ: ಸುದ್ದಿಗೋಷ್ಠಿಯಲ್ಲಿ ಕುಂದಾಪುರ ಯೂತ್ ಕಾಂಗ್ರೆಸ್ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮುಖಂಡರು, ನೂತನ ಮಂತ್ರಿಮಂಡಲದಲ್ಲಿ ಎಂಎಲ್‌ಸಿ ಮಂಜುನಾಥ ಭಂಡಾರಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು. ಕುಂದಾಪುರ ಯೂತ್ ಕಾಂಗ್ರೆಸ್ ಅಧ್ಯಕ್ಷ ಇಚ್ಛಿತಾರ್ಥ್ ಶೆಟ್ಟಿ ಮಾತನಾಡಿ, ಮಂಜುನಾಥ ಭಂಡಾರಿ ಅವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದು, ಪಕ್ಷದ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ರಾಜ್ಯದ ಎಲ್ಲ ಮಂತ್ರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರಾಗಿದ್ದಾರೆ. ಹೀಗಾಗಿ…

Read More

ಉಳ್ಳಾಲದಲ್ಲಿ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ: ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ಗೌರವ

ಯು.ಟಿ ಫರೀದ್ ಫೌಂಡೇಶನ್ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಇವುಗಳ ಆಶ್ರಯದಲ್ಲಿ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ಹಾಗೂ ಅತ್ಯುನ್ನತ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಉಳ್ಳಾಲ ತಾಲೂಕಿನ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ತೊಕ್ಕೊಟ್ಟು ಯುನಿಟಿ ಸಭಾಂಗಣದಲ್ಲಿ ನಡೆಯಿತು. ಸ್ಪೀಕರ್ ಡಾ. ಯುಟಿ ಖಾದರ್ ಫರೀದ್ ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ಹಾಗೂ ಅತ್ಯುನ್ನತ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಉಳ್ಳಾಲ ತಾಲೂಕಿನ…

Read More

ದ.ಕ. ಜಿಲ್ಲೆಯಲ್ಲಿ ಸಡಗರದಿಂದ ನಡೆದ ಬಕ್ರೀದ್ ಹಬ್ಬದ ಆಚರಣೆ

ಮಂಗಳೂರು : ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ‘ಈದುಲ್ ಅಝ್ಹಾ’ (ಬಕ್ರೀದ್ ಹಬ್ಬ)ವನ್ನು ದ.ಕ. ಜಿಲ್ಲಾದ್ಯಂತ ಅತ್ಯಂತ ಸಡಗರ, ಸಂಭ್ರಮದಿಂದ ಇಂದು ಆಚರಿಸಲಾಯಿತು. ನಗರದ ಬಾವುಟಗುಡ್ಡದ ಈದ್ಗಾ ಮಸ್ಟಿದ್ದಲ್ಲಿ ದ.ಕ.ಜಿಲ್ಲಾ ಖಾಝಿ ಅಲ್ಲಾಝ್ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ನೇತೃತ್ವದಲ್ಲಿ ಖುತುಬಾ ಪಾರಾಯಣ ಮತ್ತು ಝೀನತ್ ಬಕ್ಸ್ ಮಸ್ಟಿದ್‌ನ ಖತೀಬ್ ಸೈಯದ್ ಶಂಶುದ್ದೀನ್ ಬಾಸಿತ್ ಬಾ ಅಲವಿ ತಂಜಳ್ ಅಲ್ ಅನ್ಸಾರಿ ನೇತೃತ್ವದಲ್ಲಿ ಈದ್ ನಮಾಝ್ ನಡೆಯಿತು. ಈ ಸಂದರ್ಭ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ನಗರ ಪೊಲೀಸ್‌…

Read More

ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಮಾವು ಮೇಳಕ್ಕೆ ಚಾಲನೆ.ಮೇ 31ರವರೆಗೆ ಅವಕಾಶ

ಮಂಗಳೂರು:ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘ (ರಿ) ವತಿಯಿಂದ “ರೈತರಿಂದ ಗ್ರಾಹಕರಿಗೆ ನೇರ ಮಾರಾಟ” ಶೀರ್ಷಿಕೆಯಡಿ ಆಯೋಜಿಸಲಾದ ಮಾವು ಮೇಳವು ನಗರದ ಕದ್ರಿ ಪಾರ್ಕ್‌ನಲ್ಲಿ ಆರಂಭಗೊಂಡಿದೆ. ಮೇಳವು ಮೇ 31ರವರೆಗೆ ನಡೆಯಲಿದೆ.ಮೇಳವನ್ನು ಕದ್ರಿ ಉದ್ಯಾನವನ ಸಮಿತಿಯ ಸದಸ್ಯ ಬಿ. ಜಗನ್ನಾಥ ಗಾಂಭೀರ್ ಉದ್ಘಾಟಿಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಂಗಳೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ., ಮೇಳದ ಮೂಲಕ ಮಂಗಳೂರಿನ ಜನತೆಗೆ ನೈಸರ್ಗಿಕವಾಗಿ ಮಾಗಿಸಿದ ಗುಣಮಟ್ಟದ ಹಣ್ಣುಗಳನ್ನು…

Read More

ಬಂಟ ಸಮಾಜ ಪ್ರವರ್ಗ 3 (ಬಿ) ಯಲ್ಲಿ ಸೇರಿರುವುದರಿಂದ ಸೌಲಭ್ಯಗಳಿಂದ ವಂಚಿತವಾಗಿದೆ: ಕೆ ಅಜಿತ್ ಕುಮಾರ್ ರೈ ಮಾಲಾಡಿ

ಮಂಗಳೂರು: ಬಂಟ ಸಮಾಜವನ್ನು ಕೇಂದ್ರ ಸರಕಾರವು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ, ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವನ್ನು ಪ್ರವರ್ಗ 2 (ಎ) ಯಲ್ಲಿ ಸೇರಲು ಅರ್ಹವಾಗಿದ್ದರೂ ಬಂಟ ಸಮುದಾಯವನ್ನು ಪ್ರವರ್ಗ 3 (ಬಿ) ಯಲ್ಲಿ ಸೇರಿಸಿರುವ ಕಾರಣ ಬಂಟರು ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತವಾಗಿ ಬಂಟ ಸಮುದಾಯಕ್ಕೆ ತುಂಬಾ ಹಿನ್ನಡೆಯಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್…

Read More

ಪೆರ್ಮುದೆಯಲ್ಲಿ ಭೀಕರ ರಸ್ತೆ ಅಪಘಾತ; ಯುವಕ ಸಾವು, ತಂದೆಗೆ ಗಂಭೀರ ಗಾಯ

ಕುಂಬ್ಳೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ–ಬದಿಯಡ್ಕ ರಸ್ತೆಯ ಪೆರ್ಮುದೆ ಪೆರಿಯಡ್ಕ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಅವರ ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೃತರನ್ನು ಚಿಪ್ಪಾರ್ ಬಾಯಾರ್‌ನ ನೇತ್ರಗುಳಿ ಹೌಸ್ ನಿವಾಸಿ ಎನ್. ಕಿಶನ್ (25) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರ ತಂದೆ ಮಾಧವ ದೇವಾಡಿಗ (55) ಅವರನ್ನು ಚಿಕಿತ್ಸೆಗಾಗಿ ಮಂಗಳೂರುದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಬೆಳಗ್ಗೆ ಕಿಶನ್ ಅವರು ತಂದೆಯೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ…

Read More

ಮಂಗಳೂರಿನಲ್ಲಿ ‘ಟಾಟಾ ಐಪಿಎಲ್ ಫ್ಯಾನ್ ಪಾರ್ಕ್’; ಉಚಿತವಾಗಿ ಪ್ಲೇ-ಆಫ್ ಮತ್ತು ಫೈನಲ್ ವೀಕ್ಷಣೆಗೆ ಅವಕಾಶ

ಮಂಗಳೂರು: ಕ್ರಿಕೆಟ್ ಅಭಿಮಾನಿಗಳಿಗೆ ಕ್ರೀಡಾಂಗಣದ ನೈಜ ಅನುಭವ ನೀಡುವ ಉದ್ದೇಶದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಮಂಗಳೂರಿನಲ್ಲಿ ‘ಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ ಆಯೋಜಿಸಲಾಗಿದೆ ಎಂದು ಮಾಜಿ ಮೇಯರ್ ಮಹಾಬಲ ಮಾರ್ಲ ತಿಳಿಸಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಐಪಿಎಲ್ ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯಗಳ ರೋಚಕತೆಯನ್ನು ಕರಾವಳಿಯ ಜನತೆಗೆ ಉಚಿತವಾಗಿ ತಲುಪಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ನಗರದ ಲಾಲ್‌ಬಾಗ್‌ನಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ…

Read More

ಬೈಕ್ ನಲ್ಲಿ 38 ದೇಶಗಳಿಗೆ ಪ್ರವಾಸ ಕೈಗೊಳ್ಳಲಿರುವ ಮಂಗಳೂರಿನ ಶರತ್

ಮಂಗಳೂರು: ಮಂಗಳೂರಿನ ಬೈಕ್‌ ರೈಡರ್‌ ಒರ್ವರು ತಮ್ಮ 60ನೇ ವಯಸ್ಸಿನಲ್ಲಿ ಯುರೋಪಿಯನ್‌ ಮತ್ತು ಗಲ್ಫ್‌ನ ಸುಮಾರು 38 ದೇಶಗಳಿಗೆ ಬೈಕ್‌ನಲ್ಲಿ ಸುತ್ತಾಟಕ್ಕೆ ಸಿದ್ಧತೆ ನಡೆಸಿದ್ದು, ಇದು ಅವರ ಬೈಕ್‌ನಲ್ಲಿ ಎರಡನೇ ಪ್ರವಾಸವಾಗಿದೆ. ಮಂಗಳೂರಿನ ಉದ್ಯಮಿ ಶರತ್‌ ಎಕ್ಕೂರು ಅವರು ಇದೀಗ ತಮ್ಮ ಬೈಕ್‌ನಲ್ಲಿ ವಿದೇಶ ಪ್ರವಾಸಕ್ಕೆ ಯೋಜನೆ ಹಾಕಿಕೊಂಡಿದ್ದು, ಮೇ 31ರಂದು ಮಂಗಳೂರಿನಿಂದ ತಮ್ಮ ಪ್ರಯಾಣ ಆರಂಭಿಸಲಿದ್ದು, ಮುಂದಿನ 5-6 ತಿಂಗಳ ವರೆಗೆ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.ಶರತ್‌ ಎಕ್ಕೂರು ಅವರು ತಮ್ಮ ರೋಯಲ್‌ ಎನ್‌ಫೀಲ್ಡ್‌ ಸೂಪರ್‌ ಮಿಟಿವ್ಯೂರ್‌…

Read More
error: Content is protected !!