ತಣ್ಣೀರ್‌ಭಾವಿಯಲ್ಲಿ ಅಲೆಗಳ ಅಬ್ಬರ; ಇಂಡಿಯನ್ ಓಪನ್ ಸರ್ಫಿಂಗ್‌ಗೆ ಅದ್ದೂರಿ ಚಾಲನೆ
ನಗರದ ತಣ್ಣೀರ್‌ಭಾವಿ ಬ್ಲೂ ಬೇ ಇಕೋ ಬೀಚ್‌ನಲ್ಲಿ ಶುಕ್ರವಾರ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್-2026ರ ಏಳನೇ ಆವೃತ್ತಿಗೆ ಭರ್ಜರಿ ಚಾಲನೆ ದೊರೆಯಿತು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಅಗ್ರ ಸರ್ಫರ್‌ಗಳು ಮೊದಲ ದಿನವೇ ಅಲೆಗಳ ಮೇಲೆ ತಮ್ಮ ಕೌಶಲ್ಯ ಪ್ರದರ್ಶಿಸಿ ಗಮನ ಸೆಳೆದರು. ರಾಷ್ಟ್ರೀಯ ಚಾಂಪಿಯನ್‌ಶಿಪ್ ಸರಣಿಯ ಪ್ರಮುಖ ಸ್ಪರ್ಧೆಯಾಗಿರುವ ಈ ಟೂರ್ನಿಯು ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. ಉತ್ತಮ ಹವಾಮಾನ ಹಾಗೂ ಸ್ಪರ್ಧೆಗೆ ಅನುಕೂಲಕರ ಅಲೆಗಳ ನಡುವೆ ಚಾಂಪಿಯನ್‌ಶಿಪ್ ಆರಂಭಗೊಂಡಿತು….