ಮಂಜೇಶ್ವರ: ಉದ್ಯಾವರದಲ್ಲಿ ಕೋಳಿ ಅಂಗಡಿಗೆ ಕಳ್ಳರ ಲಗ್ಗೆ; 20 ಸಾವಿರ ರೂಪಾಯಿ ನಗದು ಕಳವು
ಮಂಜೇಶ್ವರ: ಉದ್ಯಾವರ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಕೋಳಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ನಗದನ್ನು ದೋಚಿರುವ ಘಟನೆ ನಡೆದಿದೆ. ಉದ್ಯಾವರದ ರಫೀಕ್ ಎಂಬುವರಿಗೆ ಸೇರಿದ ಕೋಳಿ ಅಂಗಡಿಯನ್ನು ಗುರಿಯಾಗಿಸಿ ಈ ಕೃತ್ಯ ನಡೆದಿದೆ. ಅಂಗಡಿಯ ಡ್ರಾಯರ್‌ನಲ್ಲಿ ಇರಿಸಿದ್ದ ಸುಮಾರು 20,000 ರೂಪಾಯಿ ನಗದನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.ಬುಧವಾರ ಬೆಳಿಗ್ಗೆ ಅಂಗಡಿಯ ಮಾಲಕರು ಬಂದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ…