ಸಾಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೆಮಿಕಂಡಕ್ಟರ್ ಶಿಕ್ಷಣಕ್ಕೆ ಮತ್ತಷ್ಟು ಬಲ
ಮಂಗಳೂರು, ಜೂನ್ 3: ನಗರದ ಸಾಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ (SCEM)ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ECE) ವಿಭಾಗದಲ್ಲಿ ಸೆಮಿಕಂಡಕ್ಟರ್ ಕೇಂದ್ರಿತ ಶಿಕ್ಷಣಕ್ಕೆ ಮಹತ್ವದ ಉತ್ತೇಜನ ದೊರೆತಿದೆ. ಮೇ 30ರಂದು ನಡೆದ ವಿಭಾಗದ 7ನೇ ಅಧ್ಯಯನ ಮಂಡಳಿ (Board of Studies) ಸಭೆಯಲ್ಲಿ ಈ ಕುರಿತು ಮಹತ್ವದ ಬೆಳವಣಿಗೆಗಳು ಚರ್ಚೆಗೆ ಬಂದವು. ಸಭೆಯನ್ನು ಉದ್ದೇಶಿಸಿ ಆನ್‌ಲೈನ್ ಮೂಲಕ ಮಾತನಾಡಿದ ಆರ್‌ವಿ ಸ್ಕಿಲ್ಸ್ ಡಿಸೈನ್ ಸೆಂಟರ್ (VLSI Design Centre of Excellence)ನ ಮುಖ್ಯ…