ಪುತ್ತೂರಿನಲ್ಲಿ ಮೈ ಭಾರತ್ ವತಿಯಿಂದ ಯುವ ಸಂವಾದ: ಮತದಾನದ ಮಹತ್ವದ ಬಗ್ಗೆ ಯುವಜನರಿಗೆ ಜಾಗೃತಿ
ಪುತ್ತೂರು: ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ MY Bharat – ದಕ್ಷಿಣ ಕನ್ನಡ ಹಾಗೂ ವಿವೇಕಾನಂದ ಕಾಲೇಜು ಪುತ್ತೂರು, ರಾಷ್ಟ್ರೀಯ ಸೇವಾ ಯೋಜನೆ (NSS) ಇವರ ಸಂಯುಕ್ತ ಆಶ್ರಯದಲ್ಲಿ ‘ವಿಕಸಿತ ಭಾರತ ಯುವ ಸಂವಾದ X Know Your Vote’ ಕಾರ್ಯಕ್ರಮವು ಬುಧವಾರ ವಿವೇಕಾನಂದ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಪುತ್ತೂರು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಉದ್ಘಾಟಿಸಿ ಮಾತನಾಡಿದರು. “ಪ್ರಜಾಪ್ರಭುತ್ವದ ಶಕ್ತಿ ಯುವಜನರ ಕೈಯಲ್ಲಿದೆ. ಪ್ರತಿಯೊಬ್ಬ ಯುವಕನೂ ತನ್ನ…
