Avatar

NAMMA MEDIA 24X7

ಅಡು ಮರೋಳಿಯಲ್ಲಿ ₹20 ಲಕ್ಷ ವೆಚ್ಚದ ತಡೆಗೋಡೆ ಕಾಮಗಾರಿಗೆ ಭೂಮಿ ಪೂಜೆ

ಶಾಸಕ ವೇದವ್ಯಾಸ ಕಾಮತ್ ಚಾಲನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 37ನೇ ಮರೋಳಿ ವಾರ್ಡಿನ ಅಡು ಮರೋಳಿ ಬಳಿ 20 ಲಕ್ಷ ರೂ. ವಿಶೇಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣವಾಗಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು. ನಂತರ ಮಾತನಾಡಿದ ಶಾಸಕರು, ಕಳೆದ ಮಳೆಗಾಲದಲ್ಲಿ ಈ ಭಾಗದ ಗೋಡೆಯು ಸಂಪೂರ್ಣ ಹಾನಿಯಾಗಿದ್ದು ಇದೀಗ ಪರಿಹಾರ ನಿಧಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 300 ರಿಂದ 400 ಕೋಟಿಗೂ ಹೆಚ್ಚು ಹಾನಿಯಾಗಿದ್ದರೂ ಅಗತ್ಯ…

Read More

ಪಾರಂಪರಿಕ ಯಕ್ಷಕಲೆಗೆ ಅಳಿವಿಲ್ಲ: ಡಾ. ಪುನರೂರು.

“ನಮ್ಮ ಹೆಮ್ಮೆಯ ಕಲೆ ಯಕ್ಷಗಾನವಿಂದು ಪೀಳಿಗೆಯಿಂದ ಪೀಳಿಗೆಗೆ ಮಕ್ಕಳ ಸಕ್ರಿಯ ಭಾಗವಹಿಸುವಿಕೆಯಿಂದ ವರ್ಗಾಯಿಸಲ್ಪಟ್ಟು ಅಳಿವಿಲ್ಲದ ಕಲೆಯಾಗಿ ಬೆಳಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲೂ ಈ ಕಲೆಗೆ ಮಾನ್ಯತೆ ಇದೆ. ರಾಜಾಶ್ರಯವನ್ನು ಬಯಸುವ ಈ ಕಲೆಗೆ, ಸರಯೂ ಮಕ್ಕಳ ಮೇಳಕ್ಕೆ ನಾವೆಲ್ಲಾ ಪೂರ್ಣ ಬೆಂಬಲ ನೀಡೋಣ. ಕಲೆ, ಕಲಾವಿದರು ಬೆಳಗಲಿ” ಎಂದು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರುರವರು ಸರಯೂ ಮಕ್ಕಳ ಮೇಳದ 26ನೇ ವರ್ಷದ “ಸರಯೂ ಅಷ್ಠಾಹ”ವನ್ನು ಶ್ರೀ ಕ್ಷೇತ್ರ ಕದ್ರಿಯಲ್ಲಿ ಉದ್ಘಾಟಿಸು ತ್ತಾ ಸಂಸ್ಥೆಗೆ ಶುಭಹಾರೈಸಿದರು. ನಿವೃತ್ತ ಶಿಕ್ಷಕ ಹಾಗೂ ನಿರೂಪಕರಾದ…

Read More

ಪೇಜಾವರ ಶ್ರೀಗಳ ಸ್ಮೃತಿವನ ಉದ್ಘಾಟನೆ: ಪರಿಸರ ಸಂರಕ್ಷಣೆಗೆ ಈಶ್ವರ ಖಂಡ್ರೆ ಕರೆ

ಪೇಜಾವರ ಮಠದ ಪೀಠಾಧಿಪತಿಗಳಾಗಿದ್ದ ಕೀರ್ತಿಶೇಷ ಪೇಜಾವರ ಶ್ರೀಗಳು ತಮ್ಮ ಪ್ರಗತಿಪರ ಚಿಂತನೆಗಳಿಂದ ನಾಡಿನ ಜನರ ಮನಗೆದ್ದಿದ್ದರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಉಡುಪಿ ಬಳಿಯ ನೀಲಾವರದಲ್ಲಿ ಪೇಜಾವರ ಶ್ರೀಗಳ ಸ್ಮೃತಿವನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ, ಪರಿಸರ ಸಂರಕ್ಷಣೆಯ ಕ್ಷೇತ್ರಕ್ಕೂ ಶ್ರೀಗಳು ನೀಡಿರುವ ಕೊಡುಗೆ ಅಪಾರವಾದ್ದು, ಅವರು ನಕ್ಸಲರ ಮನವೊಲಿಸುವ ಕಾರ್ಯವನ್ನೂ ಮಾಡಿದ್ದರು, ಶಾಂತಿಯನ್ನು ಪ್ರತಿಪಾದಿಸುತ್ತಿದ್ದರು ಎಂದರು. 33ನೇ ಯತಿಗಳಾಗಿದ್ದ ಶ್ರೀ ಪೇಜಾವರ ಶ್ರೀಗಳ ಹೆಸರಿನ ಸ್ಮೃತಿವನ ಉದ್ಘಾಟಿಸುತ್ತಿರುವುದು…

Read More

ರಾಜ್ಯಸಭೆ ಚುನಾವಣೆ ಚರ್ಚೆಗೆ ಸಿಎಂ ದೆಹಲಿಗೆ: ಈಶ್ವರ ಖಂಡ್ರೆ

ಕುಕ್ಕೆ ಸುಬ್ರಹ್ಮಣ್ಯ,: ಮುಂಬರುವ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ವರಿಷ್ಠರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ದೆಹಲಿಗೆ ತೆರಳಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ಪರಮಾಧಿಕಾರವಾಗಿದ್ದು, ಊಹಾತ್ಮಕ ರಾಜಕೀಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕುಕ್ಕೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆಗೆ ಚೆಕ್‌ಪೋಸ್ಟ್ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ನಾಲ್ಕು ಪ್ರವೇಶ ಮಾರ್ಗಗಳಲ್ಲೂ…

Read More

ಮಾಣಿ ಸಮೀಪ ಭೀಕರ ಅಪಘಾತ: ದ್ವಿಚಕ್ರವಾಹನ ಸವಾರ ಸಾವು:ಮೀನಿನ ಲಾರಿಗೆ ಡಿಕ್ಕಿ ಹೊಡೆದು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತ್ಯು

ಪುತ್ತೂರು: ಮೀನಿನ ಲಾರಿ ಹಾಗೂ ದ್ವಿಚಕ್ರವಾಹನದ ಮಧ್ಯೆ ನಡೆದ ಅಪಘಾತದಲ್ಲಿ ದ್ವಿಚಕ್ರ ಸವಾರ ಗಂಭೀರಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ಮೇ.೨೫ರಂದು ಮಾಣಿ ಸಮೀಪ ನಡೆದಿದೆ. ಮೃತರನ್ನು ಸುಳ್ಯ ಗಾಂಧಿನಗರ ನಿವಾಸಿ ಮೊಹಿದೀನ್ ಅವರ ಪುತ್ರ ಖಲಂದ‌ರ್ ಷಾ ಎಂದು ಗುರುತಿಸಲಾಗಿದೆ. ಅವರು ಕೆಲವು ವರ್ಷಗಳಿಂದ ಪುತ್ತೂರು ಸಂಟ್ಯಾರಿನಲ್ಲಿ ವಾಸವಾಗಿದ್ದರು. ಕಲ್ಲಡ್ಕದಿಂದ ಪುತ್ತೂರಿನತ್ತ ಬರುತ್ತಿದ್ದ ಡಿಯೋ ದ್ವಿಚಕ್ರವಾಹನ ಮೀನಿನ ಲಾರಿಗೆ ಡಿಕ್ಕಿಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು…

Read More

ಉಡುಪಿ: ಟೈಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ; ಚಾಲಕ ಪಾರು

ಉಡುಪಿ: ಟೈಯರ್ ಸ್ಫೋಟಗೊಂಡ ಪರಿಣಾಮ ಮೀನು ಸಾಗಾಟದ ಲಾರಿಯೊಂದು ಪಲ್ಟಿಯಾದ ಘಟನೆ ನಗರದ ಅಂಬಾಗಿಲು ಜಂಕ್ಷನ್ ಸಮೀಪ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಕುಂದಾಪುರದತ್ತ ಸಾಗುತ್ತಿದ್ದ ಲಾರಿ ಅಂಬಾಗಿಲು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಹಿಂಬದಿಯ ಟೈಯರ್ ಸ್ಫೋಟಗೊಂಡಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯ ಬದಿಗೆ ಪಲ್ಟಿಯಾಗಿದೆ. ಅಪಘಾತದ ಪರಿಣಾಮ ಲಾರಿಯಲ್ಲಿದ್ದ ಮೀನುಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಲಾರಿಗೆ ಹಾನಿಯಾಗಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಅಪಘಾತದ ಮಾಹಿತಿ ತಿಳಿದ ತಕ್ಷಣ ಉಡುಪಿ ಸಂಚಾರ…

Read More

ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಚಾರಣ ತಾಣಗಳು ಮತ್ತು ಪ್ರಮುಖ ಜಲಪಾತಗಳು ಜೂನ್ 1 ರಿಂದ ಪ್ರವಾಸಿಗರಿಗೆ ಮತ್ತೆ ವೀಕ್ಷಣೆಗೆ ತೆರೆದುಕೊಳ್ಳಲಿವೆ.

ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಈ ಹಿಂದೆ ಜನವರಿಯಲ್ಲಿ ನೇತ್ರಾವತಿ ಶಿಖರ, ಬಂಡಾಜೆ ಜಲಪಾತ ಮತ್ತು ಗಡಾಯಿಕಲ್ಲು ಮುಂತಾದ ಜನಪ್ರಿಯ ತಾಣಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿತ್ತು. ಬೇಸಿಗೆಯ ತಿಂಗಳುಗಳಲ್ಲಿ ಕಾಡ್ಗಿಚ್ಚು ತಡೆಗಟ್ಟಲು ಮತ್ತು ಹುಲಿ ಗಣತಿಗೆ ಅನುಕೂಲವಾಗುವಂತೆ ಈ ನಿರ್ಬಂಧವನ್ನು ಜಾರಿಗೆ ತರಲಾಗಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಬರುವ ತಾಲ್ಲೂಕಿನ ಮಲವಂತಿಗೆ ಗ್ರಾಮವು ಹಲವಾರು ಪ್ರವಾಸಿ ಆಕರ್ಷಣೆಗಳಿಗೆ ನೆಲೆಯಾಗಿದೆ. ಇದು ಚಾರಣಿಗರು ಮತ್ತು ಪ್ರಕೃತಿ ಪ್ರಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದರೂ, ಬೇಸಿಗೆಯಲ್ಲಿ ಈ ದಟ್ಟ ಅರಣ್ಯ…

Read More

ಕದ್ರಿ ಪಾರ್ಕ್‌ನಲ್ಲಿ ಮೇ 28ರಿಂದ ಮಾವು ಮೇಳ: “ರೈತರಿಂದ ಗ್ರಾಹಕರಿಗೆ ನೇರ ಮಾರಾಟ”ಕ್ಕೆ ವೇದಿಕೆ

ಮಂಗಳೂರು: ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘ (ರಿ) ವತಿಯಿಂದ “ರೈತರಿಂದ ಗ್ರಾಹಕರಿಗೆ ನೇರ ಮಾರಾಟ” ಶೀರ್ಷಿಕೆಯಡಿ ಮಾವು ಮೇಳವು ಮೇ 28ರಿಂದ 31ರವರೆಗೆ ನಗರದ ಕದ್ರಿ ಪಾರ್ಕ್ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ 25ಕ್ಕೂ ಅಧಿಕ ಬೆಳೆಗಾರರಿಗೆ ತಮ್ಮ ಮಾವು ಹಾಗೂ ಮಾವಿನ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು. ಮೇ 28ರಂದು ಪೂರ್ವಾಹ್ನ 11…

Read More

“Birds on Canvas” ಮೂಲಕ ಮೆಚ್ಚುಗೆ ಗಳಿಸಿದ ಪುಟಾಣಿ ಕಲಾವಿದೆ ಫಾತಿಮಾ ಝೋಯಾ

ಗೇರು ಮೇಳದಲ್ಲಿ ಕಲಾಕೃತಿಗಳ ಪ್ರದರ್ಶನಕ್ಕೆ ಗಣ್ಯರಿಂದ ಸನ್ಮಾನ ಮಂಗಳೂರು: ಬೊಂದೆಲ್‌ನ ಸೈಂಟ್ ಲಾರೆನ್ಸ್ ಶಾಲೆ ಯ 3ನೇ ತರಗತಿ ವಿದ್ಯಾರ್ಥಿನಿ ಫಾತಿಮಾ ಝೋಯಾ ಇತ್ತೀಚೆಗೆ ಮಂಗಳೂರಿನ Kadri Park ನಲ್ಲಿ ನಡೆದ ಗೇರು ಮೇಳದಲ್ಲಿ ತನ್ನ “Birds on Canvas” ಕಲಾಕೃತಿಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಅವಳ ಸೃಜನಶೀಲತೆ ಮತ್ತು ಪರಿಶ್ರಮವನ್ನು ಗುರುತಿಸಿ ಪದ್ಮರಾಜ ಅರ್, ತಾರಾನಾಥ ಗಟ್ಟಿ, ಮಮತ ಎಸ್ ಗಟ್ಟಿ ಹಾಗೂ ಪುಷ್ಪರಾಜ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿ ಸನ್ಮಾನಿಸಿದರು. ಬಾಲ್ಯದಿಂದಲೇ ಪ್ರಕೃತಿ…

Read More

ಜಾಗತಿಕ ಆರ್ಥಿಕ ಸಂಕಷ್ಟ ಎದುರಿಸಲು ಕೇಂದ್ರದ “ತುರ್ತು ದ್ರವ್ಯತೆ ಯೋಜನೆ” ಘೋಷಣೆ

MSME ಹಾಗೂ ವಿಮಾನಯಾನ ವಲಯಕ್ಕೆ ₹2.55 ಲಕ್ಷ ಕೋಟಿ ಹೆಚ್ಚುವರಿ ಸಾಲ ಹರಿವು ಗುರಿ ಮಂಗಳೂರು: ಪಶ್ಚಿಮ ಏಷ್ಯಾದ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ಆರ್ಥಿಕ ಸಂಕಷ್ಟದ ಪರಿಣಾಮವನ್ನು ತಗ್ಗಿಸಲು ಹಾಗೂ ಅಲ್ಪಾವಧಿಯ ದ್ರವ್ಯತೆ ಅಸಮತೋಲನವನ್ನು ಎದುರಿಸಲು ಕೇಂದ್ರ ಸರ್ಕಾರ “ತುರ್ತು ದ್ರವ್ಯತೆ ಯೋಜನೆ” (Emergency Credit) ಘೋಷಿಸಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಿಎ ಎಸ್‌.ಎಸ್‌. ನಾಯಕ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, MSME ಹಾಗೂ MSME…

Read More
error: Content is protected !!