Avatar

NAMMA MEDIA 24X7

ಉಳ್ಳಾಲ ಪುರಸಭೆ ಮಾಜಿ ಉಪಾಧ್ಯಕ್ಷೆ ಭವಾನಿ ನಿಧನ

ಉಳ್ಳಾಲ: ಉಳ್ಳಾಲ ಪುರಸಭೆಗೆ ಎರಡು ಬಾರಿ ಕಾಪಿಕಾಡು ವಾರ್ಡಿನಿಂದ ಸ್ಪರ್ಥಿಸಿ ಕೌನ್ಸಿಲರ್ ಆಗಿದ್ದ ಭವಾನಿ (70) ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿಯಾದ ಭಾವಕಣಿ ಇವರು ಅವಿವಾಹಿತರಾಗಿದ್ದು , ಬಿಜೆಪಿ ಸಕ್ರಿಯ ಮಹಿಳಾ ಸದಸ್ಯೆಯಾಗಿದ್ದರು. ಪುಲ್ಕೆದಡಿ ಆದಿ ಕ್ಷೇತ್ರ ಬಂಡಿಕೊಟ್ಯ ಕೋರ್ದಬ್ಬು ದೈವಸ್ಥಾನದ ಸಮಿತಿಯಲ್ಲಿ ಸಕ್ರಿಯ ಸದಸ್ಯೆಯಾಗಿದ್ದರು. ಅವಿವಾಹಿತರಾಗಿರುವ ಇವರು ಉಳ್ಳಾಲ ಪುರಸಭೆ ಗೆ ಎರಡು ಬಾರಿ ಕೌನ್ಸಿಲರ್ ಆಗಿ ಆಯ್ಕೆಗೊಂಡು ಒಂದು ಬಾರಿ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದರು.

Read More

ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಕವಿ, ಹಾಡುಗಾರ ರಹೀಮ್ ಬಿ.ಸಿ. ರೋಡ್ ಆಯ್ಕೆ

ಬಂಟ್ವಾಳ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್‌ನ ಸಹಯೋಗ ದೊಂದಿಗೆ ಮೇ 12 ರಂದು ಪಾಣೆಮಂಗಳೂರು ಆಲಡ್ಕದ ಎಸ್‌. ಎಸ್‌ ಆಡಿಟೋರಿಯಂ ನಲ್ಲಿ ಹಮ್ಮಿಕೊಂಡಿರುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ, ಹಾಡುಗಾರ ರಹೀಂ ಬಿ.ಸಿ. ರೋಡ್‌ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್‌ ಯು.ಹೆಚ್.‌ ತಿಳಿಸಿದ್ದಾರೆ. ಬಾಲ್ಯದಲ್ಲಿಯೇ ಹಾಡುಗಾರಿಕೆ ಯಲ್ಲಿ ಆಸಕ್ತಿ ಬೆಳೆಸಿಕೊಂಡ ರಹೀಂ ಬಿ.ಸಿ.ರೋಡ್‌ ತನ್ನ ತಾಯಿ ಪರಿಸರದ…

Read More

ಬನ್ನೂರಿನಲ್ಲಿ ಸುವರ್ಣ ಮಹೋತ್ಸವ: ಮೇ 7ರಿಂದ ಧಾರ್ಮಿಕ ಕಾರ್ಯಕ್ರಮ, ಅಂತರ್‌ರಾಜ್ಯ ದಫ್ ಸ್ಪರ್ಧೆ

ಪುತ್ತೂರು; ಧಾರ್ಮಿಕ ಜಾಗೃತಿ ಹಾಗೂ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಉಳಿಸಿಕೊಳ್ಳುವ ಉದ್ದೇಶದೊಂದಿಗೆ ಬನ್ನೂರು ದಖೀರತುಲ್ ಉಖ್ರಾ ಯಂಗ್ ಮೆನ್ಸ್ ಅಸೋಸಿಯೇಶನ್ ಸಂಸ್ಥೆ ತನ್ನ 50ನೇ ವರ್ಷದ ಸುವರ್ಣಮಹೋತ್ಸವ ಆಚರಣೆ ಪ್ರಯುಕ್ತ ಮೇ.7ರಿಂದ 9 ತನಕ 3 ದಿನಗಳ ಧಾರ್ಮಿಕ ಕಾರ್ಯಕ್ರಮ ಹಾಗೂ ಅಂತರ್‍ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಝರ್ ಬನ್ನೂರು ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಇಂದಿನ ಯುವಜನತೆಯನ್ನು ಅನೈತಿಕ ಚಟುವಟಿಕೆಗಳು, ಡ್ರಗ್ಸ್ ಮುಂತಾದ ತಪ್ಪು ಹಾದಿಗಳಿಂದ ದೂರ ಮಾಡುವ ನಿಟ್ಟಿನಲ್ಲಿ…

Read More

ಮಟಪಾಡಿಯಲ್ಲಿ ನೂತನ ಸಾರಿಗೆ ಬಸ್ಸಿಗೆ ಸಂಭ್ರಮದ ಸ್ವಾಗತ

ಉಡುಪಿ: ಉಡುಪಿ–ಕೊಕ್ಕರ್ಣೆ ಮಾರ್ಗದಲ್ಲಿ ಬ್ರಹ್ಮಾವರ, ಮಟಪಾಡಿ–ನೀಲಾವರ ಮೂಲಕ ಸಂಚರಿಸಲಿರುವ ನೂತನ ಸರ್ಕಾರಿ ಸಾರಿಗೆ ಬಸ್ಸಿಗೆ ಮಟಪಾಡಿ ಗ್ರಾಮದಲ್ಲಿ ಸಂಭ್ರಮದ ಸ್ವಾಗತ ಕೋರಲಾಯಿತು. ಫ್ರೆಂಡ್ಸ್ ಮಟಪಾಡಿ ಯೂಥ್ ಕ್ಲಬ್ ವತಿಯಿಂದ ಗ್ರಾಮಕ್ಕೆ ಆಗಮಿಸಿದ ಬಸ್ಸಿಗೆ ಹೂವಿನ ಹಾರ ಹಾಕಿ, ಆರತಿ ಬೆಳಗಿ, ತೆಂಗಿನಕಾಯಿ ಒಡೆದು ಹಾಗೂ ಪಟಾಕಿ ಸಿಡಿಸಿ ಭವ್ಯ ಸ್ವಾಗತ ನೀಡಲಾಯಿತು. ಇದೇ ವೇಳೆ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಗೆ ತಂಪು ಪಾನೀಯ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಮಟಪಾಡಿ ಯೂಥ್ ಕ್ಲಬ್ ಅಧ್ಯಕ್ಷ ಚೇತನ್ ಜಿ ಪೂಜಾರಿ, ಪ್ರಧಾನ…

Read More

ಬಿಜೆಪಿ ಕಾರ್ಯಕರ್ತರ ಮಧ್ಯೆ ಗೊಂದಲ ಸೃಷ್ಟಿಸಲು ಯತ್ನ : ಎಂ. ಎಲ್. ಅಶ್ವಿನಿ

​ಕಾಸರಗೋಡು: ಚುನಾವಣಾ ಫಲಿತಾಂಶ ಹೊರಬಂದ ನಂತರ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಬಿಜೆಪಿ ಕಾರ್ಯಕರ್ತರ ಮಧ್ಯೆ ಗೊಂದಲ ಮೂಡಿಸಲು ಮತ್ತು ಅವರನ್ನು ಪ್ರಚೋದಿಸಿ ನಾಡಿನ ಸಾಮುದಾಯಿಕ ಸೌಹಾರ್ದತೆಯನ್ನು ಹಾಳುಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ. ಎಲ್. ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ. ​ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಹೊಂದಿದ್ದ ಕರ್ನಾಟಕದ ಶಾಸಕರ ನೇತೃತ್ವದಲ್ಲಿ ಈ ಬಾರಿ ಅತ್ಯುತ್ತಮ ಚುನಾವಣಾ ಕಾರ್ಯ ಚಟುವಟಿಕೆಗಳು ನಡೆದಿವೆ. ಮಂಜೇಶ್ವರದಲ್ಲಿ ಬಿಜೆಪಿ ಇತಿಹಾಸದಲ್ಲೇ ಅತಿ ಹೆಚ್ಚಿನ…

Read More

ಬಿಜೆಪಿ ಪ್ರಶಿಕ್ಷಣ ಮಹಾಭಿಯಾನ ಸಮಾಪ್ತಿ: ‘ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ’ – ನಳಿನ್ ಕುಮಾರ್ ಕಟೀಲ್

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಒಡ್ಡೂರು ಪಾರ್ಮ್ಸ್ ನಲ್ಲಿ ನಡೆದ ಎರಡು ದಿನಗಳ ಪಂ.ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ವರ್ಗವು ಯಶಸ್ವಿಯಾಗಿ ಸಮಾಪ್ತಿಗೊಂಡಿತು. ಸಮಾರೋಪ ಸಮಾರಂಭದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರು, ಅಭ್ಯಾಸ ವರ್ಗ, ಕಾರ್ಯಕಾರಿಣಿ ಸಭೆ, ಪದಾಧಿಕಾರಿಗಳ ಸಭೆ, ಪ್ರಶಿಕ್ಷಣ, ಹೀಗೆ ನಿರಂತರ ಕಾರ್ಯ ಚಟುವಟಿಕೆಗಳೇ ಬಿಜೆಪಿ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಯಲು ಕಾರಣ. ವ್ಯಕ್ತಿಗಿಂತ ಪಕ್ಷ,ಮುಖ್ಯ, ಪಕ್ಷಕ್ಕಿಂತ…

Read More

ಕೇರಳ ಸಿಎಂ ಪಟ್ಟಕ್ಕಾಗಿ ಕಾಂಗ್ರೆಸ್‌ನಲ್ಲಿ ತ್ರಿಕೋನ ಸ್ಪರ್ಧೆ : ಸತೀಶನ್–ವೇಣುಗೋಪಾಲ್–ಚೆನ್ನಿತ್ತಲ ನಡುವೆ ಪೈಪೋಟಿ

ಕೇರಳದಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಕಾಂಗ್ರೆಸ್ ಒಳಗಿನ ಪೈಪೋಟಿ ತೀವ್ರಗೊಂಡಿದ್ದು, ಪ್ರಮುಖವಾಗಿ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಹಾಗೂ ರಮೇಶ್ ಚೆನ್ನಿತ್ತಲ ನಡುವಿನ ಸ್ಪರ್ಧೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಮೂವರು ನಾಯಕರ ಬೆಂಬಲಿಗರು ಮುಖ್ಯಮಂತ್ರಿ ಹುದ್ದೆಗಾಗಿ ತೀವ್ರ ಲಾಬಿ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಆಕಾಂಕ್ಷಿ ನಾಯಕರ ಪರವಾಗಿ ಅಭಿನಂದನಾ ಸಂದೇಶಗಳು ಹಾಗೂ ಪ್ರಚಾರ ಅಭಿಯಾನಗಳು ಜೋರಾಗಿವೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಸಂದರ್ಭದಲ್ಲಿ ಧರ್ಮ ಹಾಗೂ ಜಾತಿ ಸಮೀಕರಣಗಳು ಮಹತ್ವದ ಪಾತ್ರವಹಿಸುವ…

Read More

ಇಂಧನ ದರ ಏರಿಕೆ ವಿರೋಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಹೋಟೆಲ್ ಬಂದ್ ಮುಷ್ಕರ ಯಶಸ್ವಿ

ಮಂಜೇಶ್ವರ :ವಾಣಿಜ್ಯ ಬಳಕೆಯ ಇಂಧನ ದರವನ್ನು ಸತತವಾಗಿ ಏರಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಕರೆ ನೀಡಿದ್ದ 24 ಗಂಟೆಗಳ ರಾಜ್ಯವ್ಯಾಪಿ ಹೋಟೆಲ್ ಬಂದ್ ಮುಷ್ಕರ ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು ಜಿಲ್ಲೆಯಾದ್ಯಂತ ಹೋಟೆಲ್, ಬೇಕರಿ ಹಾಗೂ ಗೂಡಂಗಡಿಗಳು ಮುಚ್ಚಿದ್ದವು. ​ಪ್ರತಿಭಟನೆಯ ಅಂಗವಾಗಿ ಜಿಲ್ಲಾ ಘಟಕದ ವತಿಯಿಂದ ನಗರದ ಹೊಸ ಬಸ್ ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ನಡೆಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಮುಷ್ಕರಕ್ಕೆ ಚಾಲನೆ ನೀಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ…

Read More

ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಅಪಪ್ರಚಾರ: ಕಾಂಗ್ರೆಸ್ ಆರೋಪ

ಮಹಿಳಾ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದೆ, ಮಹಿಳೆಯರ ಪರವಾಗಿ ಪಕ್ಷವಿದ್ದು, ವಿರೋಧಿಯಾಗಲು ಸಾಧ್ಯವೇ ಇಲ್ಲ ಎಂದು ದ.ಕ.ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಹಮ್ಮದ್ ಆಲಿ ಹೇಳಿದರು.ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್, ಮಣಿಪುರ ಸಹಿತ ನಾನಾ ಕಡೆಗಳಲ್ಲಿ ಮಹಿಳೆಯರಿಗೆ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಆರೋಪಿಗಳ ಕೃತ್ಯ ಖಂಡಿಸುವ ಪ್ರಯತ್ನವನ್ನು ಬಿಜೆಪಿ ಮಾಡಿರಲಿಲ್ಲ ಎಂದರು. ಬಿಜೆಪಿಗೆ ಮಹಿಳೆಯರ ಕುರಿತು ಎಳ್ಳಷ್ಟೂ ಗೌರವವಿಲ್ಲ ಆದರೆ ಕಾಂಗ್ರೆಸ್…

Read More

2014ರ ಮಹಿಳೆ ಕೊಲೆ ಪ್ರಕರಣ: 6 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

2014ರಲ್ಲಿ ಮಂಗಳೂರಿನ ಹೊಸಬೆಟ್ಟುವಿನಲ್ಲಿ ನಡೆದಿದ್ದ ಮಹಿಳೆಯ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ರಾಜಸ್ಥಾನದ ಶಿವರಾಮ್ ಹಾಗೂ ಬಹುದ್ದೂರ್ ಸಿಂಗ್ @ ಬಹುದ್ದುರ @ ಬುಯ್ಯ ಎಂದು ಗುರುತಿಸಲಾಗಿದೆ.8.02.2014 ರ ಸಂಜೆ 4ರಿಂದ ರಾತ್ರಿ 8 ಗಂಟೆ ಮಧ್ಯೆ ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ದ ಬಳಿಯ ನಿವಾಸಿಯಾದ ಸುಮತಿ ಪ್ರಭು ಎಂಬವರನ್ನು ಕುತ್ತಿಗೆಗೆ ಚೂರಿಯಿದ ಕೊಯ್ದು ಕೊಲೆ ಮಾಡಿ ಮೈಮೇಲಿದ್ದ ಸುಮಾರು 3,80,000 ಬೆಲೆಬಾಳುವ 192 ಗ್ರಾಂ (24 ಪವನ್) ತೂಕದ ಬಂಗಾರದ…

Read More
error: Content is protected !!