ಈಜು ಪಟು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದ ಕೆ. ಚಂದ್ರಶೇಖರ್ ರೈ ದುರಂತ ಸಾವು

ಈಜುಕೊಳದಲ್ಲಿ ಮುಳುಗಿ ಕೋಚ್, ಲೈಫ್‌ಗಾರ್ಡ್ ಸಾವನ್ನಪ್ಪಿದ ಘಟನೆ ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ರವಿವಾರ ಘಟನೆ ನಡೆದಿದೆ . ಮೃತರನ್ನು ಕೆ. ಚಂದ್ರಶೇಖರ್ ರೈ ಸೂರಿಕುಮೇರು (52) ಎಂದು ಗುರುತಿಸಲಾಗಿದೆ.


ನಿರ್ವಹಣೆ ಕೆಲಸಗಳು ನಡೆಯುತ್ತಿದ್ದರಿಂದ ಭಾನುವಾರ ಈಜುಕೊಳಕ್ಕೆ ರಜೆ ಇತ್ತು. ಈ ಸಮಯದಲ್ಲಿ ಈಜಲು ನೀರಿಗಿಳಿದ ಅವರು ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಕೆ. ಚಂದ್ರಶೇಖರ್ ರೈ ಅವರು 2023 ರಲ್ಲಿ ಈಜುಕೊಳದ ನೀರಿನೊಳಗೆ ಒಂದು ನಿಮಿಷದಲ್ಲಿ 28 ಬಾರಿ ಸಮ್ಮರ್‌ಸಾಲ್ಟ್ ಎಂಬ ಸ್ಟಂಟ್ ಮಾಡಿ ‘ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಮುಡಿಗೇರಿಸಿದ್ದರು . ಇನ್ನು ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!