ಟೆಹ್ರಾನ್ ಮೇಲೆ ಭೀಕರ ವಾಯುದಾಳಿ: ಐಆರ್‌ಜಿಸಿ ಗುಪ್ತಚರ ಮುಖ್ಯಸ್ಥ ಖಾದೆಮಿ ಸಾವು
ಟೆಹ್ರಾನ್:ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ದೇಶದ ವಿವಿಧ ಭಾಗಗಳ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ಸೋಮವಾರ ಭೀಕರ ವಾಯುದಾಳಿ ನಡೆಸಿದ ಪರಿಣಾಮ, ಇರಾನ್‌ನ ಪ್ರಭಾವಿ ಅರೆಸೇನಾ ಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗುಪ್ತಚರ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಮಾಜಿದ್ ಖಾದೆಮಿ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಐಆರ್‌ಜಿಸಿ ಅಧಿಕೃತವಾಗಿ ದೃಢಪಡಿಸಿದೆ. ಟೆಹ್ರಾನ್‌ನ ವಸತಿ ಪ್ರದೇಶಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಖಾದೆಮಿ ಹುತಾತ್ಮರಾಗಿದ್ದಾರೆ. ಇವರು ಕಳೆದ ಜೂನ್‌ನಲ್ಲಿ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದ ಮೊಹಮ್ಮದ್ ಕಾಜಿಮಿ…
