ನಾಳೆ ಮಹಾನಗರ ಪಾಲಿಕೆಯಲ್ಲಿ ಡಿಸಿ ಫೋನ್ ಇನ್ ಕಾರ್ಯಕ್ರಮ

ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯವರ ಕೊಠಡಿಯಲ್ಲಿ ಡಿಸೆಂಬರ್ 18 ರಂದು ಬೆಳಿಗ್ಗೆ 11 ರಿಂದ 12 ರವರೆಗೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಸಾರ್ವಜನಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 0824-2220301 ಅಥವಾ 0824-2220318 ಗೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ತಿಳಿಸಬಹುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ

ಮಂಗಳೂರು:- ಮಂಗಳೂರು ಪ್ರೆಸ್‍ಕ್ಲಬ್ ದಿನಾಚರಣೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ಮಂಗಳೂರು ಪ್ರೆಸ್ ಕ್ಲಬ್‍ನ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.85 ಮತ್ತು ಅದಕ್ಕಿಂತ ಅಧಿಕ ಅಂಕ ಪಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಗುತ್ತದೆ. ಅರ್ಹ ವಿದ್ಯಾರ್ಥಿ/ ವಿದ್ಯಾರ್ಥಿನಿಯ ಭಾವಚಿತ್ರ, ಅಂಕ ಪಟ್ಟಿಯ ಪ್ರತಿಯ ದಾಖಲೆ, ಬ್ಯಾಂಕ್ ಪಾಸ್ ಪುಸ್ತಕದ ವಿವರ ಸಹಿತ ಪ್ರಧಾನ…

Read More

ಸರ್ಕಾರದ ಯೋಜನಾ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿಳಂಭ: ಕ್ರಮಕ್ಕೆ ಸೂಚನೆ

ಮಂಗಳೂರು:-ವಿವಿಧ ಸರ್ಕಾರಿ ನೇರಸಾಲ ಯೋಜನೆಯಲ್ಲಿ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಮಂಜೂರು ಮಾಡಲು ವಿಳಂಬಿಸಬಾರದು ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚಿಸಿದ್ದಾರೆ.ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ, ಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಎಸ್.ಸಿ.ಪಿ / ಟಿ.ಎಸ್.ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಇಲಾಖೆ ಮತ್ತು ಅಭಿವೃದ್ಧಿ ನಿಗಮಗಳ ಸಬ್ಸಿಡಿ ಆಧಾರಿತ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ಬ್ಯಾಂಕ್‍ಗಳು ಸಿಬಿಲ್ ಕೊರತೆ ನೆಪದಲ್ಲಿ…

Read More

ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನಲ್ಲಿ ‘ನಶೆ ಮುಕ್ತ ಮಂಗಳೂರು’ ಅಭಿಯಾನದ ಅಂಗವಾಗಿ ಕಾರ್ನರ್ ಮೀಟ್ ‘… !

ಮಂಗಳೂರು:ಮೇಕ್ ಆ ಚೇಂಜ್ ಫೌಂಡೇಶನ್ ಹಾಗೂ ಮಂಗಳೂರು ನಗರ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ‘ನಶೆ ಮುಕ್ತ ಮಂಗಳೂರು’ ಅಭಿಯಾನದ ಅಂಗವಾಗಿ ಕಾರ್ನರ್ ಮೀಟ್ ಕಾರ್ಯಕ್ರಮ ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನಲ್ಲಿ ಜರುಗಿತು.ಈ ಸಂದರ್ಭ ಮೇಕ್ ಆ ಚೇಂಜ್ ಫೌಂಡೇಶನ್ ಸಂಸ್ಥಾಪಕ ಸುಹೈಲ್ ಕಂದಕ್ ಮಾತನಾಡಿ, ಮಂಗಳೂರು ನಗರವು ಸಮೃದ್ಧ ಇತಿಹಾಸ ಹಾಗೂ ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ನಗರವಾಗಿದೆ. ಆದರೆ ಇತ್ತೀಚಿನ ಕೆಲ ದುರ್ಘಟನೆಗಳಿಂದ ಮಂಗಳೂರಿನ ಹೆಸರು ಋಣಾತ್ಮಕ ವಿಚಾರಗಳೊಂದಿಗೆ ಹೆಚ್ಚು ಕೇಳಿಬರುತ್ತಿರುವುದು…

Read More

ತೊಕ್ಕೊಟ್ಟುವಿನ ಕಲ್ಲಾಪು ಸೇವಂತಿಗುತ್ತು ಬಳಿ ನಿರ್ಮಾಣ ಕಾರ್ಯದ ಸಮಯದಲ್ಲಿ ಗುಡ್ಡ ಕುಸಿದು ಕಾರ್ಮಿಕನೊಬ್ಬನ ದುರ್ಮರಣ… !

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟುವಿನ ಕಲ್ಲಾಪು ಸೇವಂತಿಗುತ್ತು ಬಳಿ ನಿರ್ಮಾಣ ಕಾರ್ಯದ ಸಮಯದಲ್ಲಿ ಗುಡ್ಡ ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ . ಮೃತರನ್ನು ಹುನಗುಂದ ತಾಲೂಕಿನ ನಿವಾಸಿ ಬಾಳಪ್ಪ (45) ಎಂದು ಗುರುತಿಸಲಾಗಿದೆ. ಖಾಸಗಿ ಆಸ್ತಿಯಲ್ಲಿ ಐವರು ಕಾರ್ಮಿಕರು ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಕೆಲಸದ ಸಮಯದಲ್ಲಿ, ದಿಬ್ಬವನ್ನು ಅಗೆಯಲು ಜೆಸಿಬಿ ಬಳಸುತ್ತಿದ್ದಾಗ ಅದು ಇದ್ದಕ್ಕಿದ್ದಂತೆ ಕುಸಿದಿದೆ. ಸ್ಥಳದಲ್ಲಿ ಗಾರೆ ಹಿಡಿದು ಕೆಲಸ ನಿರ್ವಹಿಸುತ್ತಿದ್ದ ಬಾಳಪ್ಪ ದಿಡೀರ್‌ ಕುಸಿತಗೊಂಡ ಮಣ್ಣಿನಡಿಯಲ್ಲಿ ಹೂತುಹೋದರು. ಅವರು ತೀವ್ರವಾಗಿ…

Read More

ಡಿ 19 ರಿಂದ 21 ರ ತನಕ ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಡ್ ಫೆಸ್ಟಿವೆಲ್ …. !

ಮಂಗಳೂರು: ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಡ್ ಫೆಸ್ಟಿವೆಲ್ ನಡೆಯಲಿದೆ ಎಂದು ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷರಾದ ಸರೋಜಾ ಟಿ ಶೆಟ್ಟಿ ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು . ಈ ಬಗ್ಗೆ ಸಂಘದ ಕಾರ್ಯದರ್ಶಿಗಳಾದ ರಾಜೇಶ್ವರಿ ಡಿ ಶೆಟ್ಟಿ ಹೆಚ್ಚಿನ ಮಾಹಿತಿಯನ್ನು ನೀಡಿ,…

Read More

ಮಣೇಲ್ ಗ್ರಾಮದಲ್ಲಿ ಅಬ್ಬಕ್ಕ ರಾಣಿ ಗ್ರಾಮೋತ್ಸವ ನಡೆಯಲಿ : ಡಾ.ಚಿನ್ನಪ್ಪ ಗೌಡ’ಮಣೇಲ್‌ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರಗೋಷ್ಠಿ

ಮಂಗಳೂರು: ರಾಣಿ ಅಬ್ಬಕ್ಕನ ಅರಮನೆ ಇದ್ದಂತಹ ಹಾಗೂ ವಿದೇಶಿ ಪ್ರವಾಸಿ ಅಬ್ಬಕ್ಕನನ್ನು ಭೇಟಿ ಮಾಡಿದ ಗಂಜೀಮಠ ಗ್ರಾಂ.ಪಂ ವ್ಯಾಪ್ತಿಯ ಮಣೇಲಿನಲ್ಲಿ ಅಬ್ಬಕ್ಕ ರಾಣಿಯ ಉತ್ಸವ ಗ್ರಾಮೋತ್ಸವದ ರೂಪದಲ್ಲಿ ಆರಂಭಗೊಳ್ಳಬೇಕು, ಸಹಬಾಳ್ವೆ, ಕೋಮು ಸಾಮರಸ್ಯ, ಬಹುತ್ವದ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ಜತೆಗೆ ಅಬ್ಬಕ್ಕ ರಾಣಿಯ ಐತಿಹ್ಯದ ದಿನಗಳನ್ನು ಸ್ಮರಿಸಿಕೊಳ್ಳುವಂತಹ ‘ಅಬ್ಬಕ್ಕ’ ಸಾಂಸ್ಕೃತಿಕ ಗ್ರಾಮವನ್ನು ಕಟ್ಟುವ ಕಾರ್ಯ ನಡೆಯಬೇಕು ಎಂದು ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು. ಅವರು ಕರ್ನಾಟಕ…

Read More

ವಿವಾಹದ ತಯಾರಿಯಲ್ಲಿದ್ದ ಮನೆಯಿಂದ ಮದುಮಗಳು ನಾಪತ್ತೆ.. !

ಬಂಟ್ವಾಳ: ಮದುವೆಯ ತಯಾರಿಯಲ್ಲಿದ್ದ ಮನೆಯಿಂದ ಮದುಮಗಳು ನಾಪತ್ತೆಯಾದ ಘಟನೆ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ನಡೆದಿದ್ದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಶ್ಪಿಯ ( 21) ನಾಪತ್ತೆಯಾದ ಯುವತಿಯಾಗಿದ್ದಾಳೆ ಡಿ.14 ರಂದು ಅಶ್ಪಿಯಳನ್ನು . ಬಿ ಮೂಡ ಗ್ರಾಮದ ಬಂಟ್ವಾಳದ ಯುವಕನೋರ್ವನಿಗೆ ಮದುವೆ ಮಾಡುವುದಾಗಿ ಹಿರಿಯರೊಂದಿಗೆ ಮಾತುಕತೆ ಮಾಡಿ ಯುನಿಟಿ ಹಾಲ್ ಅಲ್ಲಿ ಮದುವೆ ನಿಶ್ಷಯಿಸಿರುತ್ತಾರೆ.ಡಿ‌. 14 ರಂದು ಬೆಳಗ್ಗೆ ಸುಮಾರು 03:30 ಗಂಟೆ ತನಕ ಮನೆಯಲ್ಲೇ ಮಲಗಿದ್ದು ಆ ಬಳಿಕ ಬೆಳಿಗ್ಗೆ ಸುಮಾರು 04:30 ಗಂಟೆಗೆ…

Read More

ಬೆಂಗಳೂರಿನಿಂದ ಮಾದಕ ವಸ್ತು ತಂದು ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ಪೂರೈಕೆ ಮಾಡುತ್ತಿದ್ದ ಮೂವರ ಬಂಧನ … !

ಮಂಗಳೂರು: ಮಂಗಳೂರು ಸಿಸಿಬಿ ಘಟಕದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರಿನಿಂದ ಮಾದಕ ವಸ್ತು ತಂದು ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ಪೂರೈಕೆ ಮಾಡುತ್ತಿದ್ದ ತಂಡದ ಮೂವರನ್ನು ಬಂಧಿಸಿದ್ದಾರೆ. ಮಂಗಳೂರು ಮಲ್ಲೂರಿನ ಅಹಮ್ಮದ್ ಶಾಬೀತ್ ( 35), ಬಂಟ್ವಾಳ ಪರ್ಲಿಯಾದ ಮಹಮ್ಮದ್ ಶಂಶೀರ್ (36) ಮತ್ತು ಸರಪಡಿಯ ನೌಶೀನ(27) ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಸಿಸಿಬಿ ಘಟಕದ ಪೊಲೀಸರು ಡಿ.13ರಂದು ಕಾರಿನಲ್ಲಿ ಬರುತ್ತಿದ್ದ ಅಹಮ್ಮದ್ ಶಾಬೀತ್, ಮತ್ತು ಆತನ ತಂಡವನ್ನು ಅರ್ಕುಳ ಬಳಿ ವಶಕ್ಕೆ ಪಡೆದು ದಸ್ತಗಿರಿ…

Read More

ತಲ್ವಾರ್ ಹಿಡಿದು ಡಾನ್ಸ್ ಮಾಡಿ ರೀಲ್ಸ್ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಿಗಳ ಬಂಧನ… !

ಮಂಗಳೂರು: ತಲ್ವಾರ್ ಹಿಡಿದು ಡಾನ್ಸ್ ಮಾಡಿ ರೀಲ್ಸ್ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಿಗಳ ಬಂಧನವಾಗಿದೆ.ಬಂಧಿತರನ್ನು ಬಂದರು ನಿವಾಸಿ ಅಮೀರ್ ಸುಹೇಲ್ (28) ಹಾಗೂ ಉರುಂದಾಡಿಗುಡ್ಡೆ ಕಾವೂರು ನಿವಾಸಿ ಸುರೇಶ (29) ಎಂದು ತಿಳಿದುಬಂದಿದೆ. ಆರೋಪಿಗಳು ದಿ.13 ರಂದು ಸಾಮಾಜಿಕ ಜಾಲತಾಣವಾದ ಪೇಸಬುಕ್ ಖಾತೆಯಲ್ಲಿ ಅಮೀರ್ ಸುಹೇಲನು ತಲ್ವಾರ್ ಹಿಡಿದು ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಮೇಲೆ VIBES ಮತ್ತು ಬಿಳಿ ಬಣ್ಣದ ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಿದ್ದು ಈ ವಿಡಿಯೋ ವೈರಲ್ ಆಗಿದೆ.ಸಾಮಾಜಿಕ ಜಾಲತಾಣದ…

Read More
error: Content is protected !!