ನನ್ನ ಮೇಲಿನ ಕಳ್ಳತನದ ಆರೋಪ ಸಾಬೀತು ಮಾಡಿ… ! ರವಿ ಪ್ರಸನ್ನರಿಗೆ ಓಪನ್ ಚಾಲೆಂಜ್ ಹಾಕಿದ ತಮ್ಮಣ್ಣ ಶೆಟ್ಟಿ ….. !

ಮಂಗಳೂರು: ನನ್ನ ಮೇಲಿನ ಆರೋಪ ಶುದ್ಧ ಸುಳ್ಳು ನಾನು ಕೊಂಡಾಣ , ಷಣ್ಮುಖ ದೇವಾಲಯದ ಭಂಡಾರ ಕದ್ದಿಲ್ಲ. ಒಂದು ವೇಳೆ ರವಿ ಪ್ರಸನ್ನರ ಆರೋಪ ಸತ್ಯ ಆಗಿದ್ದರೆ ನಾನು ಕೊಂಡಾಣದ ಮಣ್ಣಿನಲ್ಲಿ ಇನ್ನು ಮುಂದೆ ದೈವದ ಬಗ್ಗೆ ಮಾತನಾಡುವುದಿಲ್ಲ ಎಂದು ಶಪಥ ಮಾಡುತ್ತೇನೆ. ಒಂದು ವೇಳೆ ಪ್ರಸನ್ನ ರವಿ ಹೇಳಿರುವುದು ಸುಳ್ಳು ಎಂದು ಸಾಬೀತಾದರೆ ಆತನನ್ನು ತಂತ್ರಿ ಕಂತ್ರಿ ಕುತಂತ್ರಿ ಎಂದು ಕರೆಯುತ್ತೇನೆ ಎಂಬುದಾಗಿ ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,…

Read More

ಡಿಸೆಂಬರ್ 16 ರಂದು ನಗರದ ಕದ್ರಿ ಹಿಲ್ಸ್‌ ನಲ್ಲಿ “ವಿಜಯ ದಿವಸ” ವೀರಯೋಧರ ಸ್ಮರಣೆ … !

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘ , ನಿಟ್ಟೆ ಶಿಕ್ಷಣ ಸಂಸ್ಥೆ , ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3181 , ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317 ಡಿ ಇದರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ವೀರಯೋಧರು ಮಾಡಿದ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುತ್ತಾ ಡಿಸೆಂಬರ್ 16 ರಂದು ಬೆಳಿಗ್ಗೆ 9:00 ಗಂಟೆಗೆ, “ವಿಜಯ ದಿವಸ” ವನ್ನು ಮಂಗಳೂರು ನಗರದ ಕದ್ರಿ ಹಿಲ್ಸ್‌ ನಲ್ಲಿರುವ ಯೋಧರ ಯುದ್ಧಸ್ಮಾರಕದಲ್ಲಿ ಹೂಹಾರವನ್ನು ಅರ್ಪಿಸಿ, ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಲಾಗುವುದೆಂದು ದಕ್ಷಿಣ ಕನ್ನಡ…

Read More

ಡಿ.20ರಂದು ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ ರೋಶ್ನಿ ಅಲುಮ್ನಿ ಅಸೋಸಿಯೇಶನ್ ಮೊತ್ತ ಮೊದಲ ‘ ರೋಶ್ನಿ ಇಂಪ್ಯಾಕ್ಟ್ ಅವಾರ್ಡ್’ ಪ್ರಧಾನ … !

ಮಂಗಳೂರು: ನಗರದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ ರೋಶ್ನಿ ಅಲುಮ್ನಿ ಅಸೋಸಿಯೇಶನ್ ಮೊದಲ ಬಾರಿಗೆ ‘ರೋಶ್ನಿ ಇಂಪ್ಯಾಕ್ಟ್ಅ ವಾರ್ಡ್-202’5ನ್ನು ಘೋಷಿಸಿದೆ. ಡಿ.20ರಂದು ಸಂಜೆ 5ಕ್ಕೆ ರೋಶನಿ ನಿಲಯ ಕ್ಯಾಂಪಸ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಆನಂದ್ ಡಿಸಿಲ್ವ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಕಮ್ಯೂನಿಟಿ ಕ್ಯಾಟಲಿಸ್ಟ್ ಅವಾರ್ಡ್‌ಗೆ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಡಾ.ಎನ್.ಜೋಶ್ಚು ಜಯಶೀಲನ್ ರನ್ನು, ಮೈಂಡ್ ಮ್ಯಾಟರ್ಸ್ ಅವಾರ್ಡ್‌ಗೆ ನಿಮ್ಹಾನ್ಸ್‌ನ ಡಾ.ಅನಿಷ್ ವಿ. ಚೆರಿಯನ್,…

Read More

ಅವಿಭಜಿತ ಜಿಲ್ಲೆಯಿಂದ ವಿಧಾನ ಪರಿಷತ್‍ಗೆ ಇರುವ ಎರಡು ಸ್ಥಾನಗಳಲ್ಲಿ 1 ಸ್ಥಾನವನ್ನು ಕ್ರಿಶ್ಚಿಯನ್ ಸಮುದಾಯಕ್ಕೇ ನೀಡಬೇಕೆಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಒತ್ತಾಯ .. !

ಪುತ್ತೂರು: ಸುಮಾರು 38 ಲಕ್ಷ ಜನಸಂಖ್ಯೆ ಇರುವ ಕ್ರೈಸ್ತರಿಗೆ ಕರ್ನಾಟಕದಲ್ಲಿ ರಾಜಕೀಯ ಪಾಲು ತೀರಾ ಕಡಿಮೆ ಇದೆ. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಮಂಗಳೂರು ಕ್ರೈಸ್ತರಿಗೆ ಮಂತ್ರಿಮಂಡಲದಲ್ಲಿ ಸ್ಥಾನವಿಲ್ಲದೆ 31 ವರ್ಷಗಳಾಗಿವೆ. ಹಾಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಮುಂದಿನ ಸಂಪುಟ ಪುನಾರಚಣೆ ಸಂದರ್ಭದಲ್ಲಿ ಮಂತ್ರಿ ಸ್ಥಾನ ನೀಡಬೇಕು. ಅವಿಭಜಿತ ಜಿಲ್ಲೆಯಿಂದ ವಿಧಾನ ಪರಿಷತ್‍ಗೆ ಇರುವ ಎರಡು ಸ್ಥಾನಗಳಲ್ಲಿ 1 ಸ್ಥಾನವನ್ನು ಕ್ರಿಶ್ಚಿಯನ್ ಸಮುದಾಯಕ್ಕೇ ನೀಡಬೇಕು ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Read More

ಡಿ.14 ರಂದು ಪಿ.ಎ. ಕಾಲೇಜ್ ಆಫ್ ಫಾರ್ಮಸಿ ಹಾಗೂ ಪಿ.ಎ. ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಸಂಸ್ಥೆಗಳ ವತಿಯಿಂದ ‘ಪೇಸ್ ಸಿಲ್ವಥಾನ್ 2025’ ಮಾದಕ ವಸ್ತು ವಿರೋಧಿ ಜಾಗೃತಿ ಮ್ಯಾರಥಾನ್ … !

ಮಂಗಳೂರು: ನಗರದ ನಡುಪದವಿನಲ್ಲಿರುವ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ಹಾಗೂ ಪಿ.ಎ. ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಸಂಸ್ಥೆಗಳ ವತಿಯಿಂದ ಪೇಸ್ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬ ‘ಪೇಸ್ ಸಿಲ್ವಿಯೋರಾ’ ಆಚರಣೆಯ ಅಂಗವಾಗಿ ಪೇಸ್ ಸಿಲ್ವಥಾನ್ 2025- ಡ್ರಗ್ಸ್ ವಿರೋಧಿ ಜಾಗೃತಿ ಮ್ಯಾರಥಾನ್ ಡಿ.14ರ ಬೆಳಗ್ಗೆ 6:30ರಿಂದ 8:30ರವರೆಗೆ ಆಯೋಜಿಸಲಾಗಿದೆ ಎಂದು ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಉಪ ಪ್ರಾಂಶುಪಾಲ ಡಾ.ಮುಹಮ್ಮದ್ ಮುಬೀನ್ ತಿಳಿಸಿದರು . ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ಮಾದಕ ವಸ್ತು ದುರುಪಯೋಗ ತಡೆಗಟ್ಟುವ, ಜಾಗೃತಿ…

Read More

ಬೆಳೆ ವಿಮೆಯ ಪರಿಹಾರವನ್ನು ಸಹಕಾರಿ ಬ್ಯಾಂಕುಗಳ ಮೂಲಕ ರೈತರಿಗೆ ಪಾವತಿಸಿದರೆ ಉತ್ತಮ : ಎಸ್‌ ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್

ಮಂಗಳೂರು: ಬೆಳೆ ವಿಮೆ ಪರಿಹಾರದಲ್ಲಿ ನ್ಯೂನತೆಯಾಗಿದ್ದು, ಪರಿಷ್ಕರಣೆಯಾಗಬೇಕು ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾ‌ರ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಎಸ್ ಸಿ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಆಗ್ರಹಿಸಿದರು.ಸಭೆಯಲ್ಲಿ ಬೆಳೆ ವಿಮೆಯ ಪರಿಹಾರವನ್ನು ಸಹಕಾರಿ ಬ್ಯಾಂಕುಗಳ ಮೂಲಕ ರೈತರಿಗೆ ಪಾವತಿಸಿದರೆ ಉತ್ತಮ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್‌ ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ತೋಟಗಾರಿಕಾಧಿಕಾರಿ ದರ್ಶನ್ ಈ ಬಗ್ಗೆ ಮಾಹಿತಿ ನೀಡುತ್ತಾ,…

Read More

ಎಂಸಿಎಫ್‌ ಹೆಸರನ್ನು ತೆಗೆದು ಪಾರದೀಪ್ ಫಾಸ್ಪೇಟ್ಸ್ ಲಿಮಿಟೆಡ್ ಎಂದು ಮರುನಾಮಕರಣಕ್ಕೆ ನಿವೃತ್ತ ನೌಕರರ ಆಕ್ರೋಶ .. !

ಮಂಗಳೂರು:ಪಣಂಬೂರು ಬಳಿಯ ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ (ಎಂಸಿಎಫ್‌ ಹೆಸರನ್ನು ತೆಗೆದು ಪಾರದೀಪ್ ಫಾಸ್ಪೇಟ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿದೆ. ಇದಕ್ಕೆ ಅವಕಾಶ ನೀಡದೆ ಅದನ್ನು ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ ಎಂದೇ ಮುಂದುವರಿಸಬೇಕು ಎಂದು ಎಂಸಿಎಫ್‌ ಸಂಸ್ಥೆಯ ನಿವೃತ್ತ ಸದಸ್ಯರು , ಸಮಿತಿಯ ಸದಸ್ಯರಾದ ಮ್ಯಾಕ್ಸಿಮ್ ಅಬ್ರೆಡ್ ಡಿಸೋಜಾ ತಿಳಿಸಿದರು . ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , 1971ರಲ್ಲಿ ರಾಜಯ ಸರಕಾರ, ರಾಜ್ಯದ ಹೂಡಿಕೆದಾರರು ಮತ್ತು ರೈತರ ಪಾಲುದಾರಿಕೆಯೊಂದಿಗೆ ಸ್ಥಾಪನೆಯಾದ…

Read More

“ಧರ್ಮಾವಲೋಕನ ಸಭೆ”ಯ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ದೋಣಿಂಜೆಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಯತಿವರ್ಯರ ಮತ್ತು ತಂತ್ರಿವರ್ಯರ ಅನುಗ್ರಹ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಅರಮನೆ, ಬೀಡುಗಳ ಅರಸರು ಹಾಗೂ ಗುತ್ತು ಮನೆತನದ ಗಡಿಕಾರರು ಹಾಗೂ ಯಜಮಾನರುಗಳ ಸಮಕ್ಷಮದಲ್ಲಿ ವಿಶ್ವ ಹಿಂದೂ ಪರಿಷತ್, ಹಿಂದೂ ಯುವಸೇನೆ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸಹಕಾರದೊಂದಿಗೆ ಡಿ.21ರಂದು ನಡೆಯಲಿರುವ ಧರ್ಮಾವಲೋಕನ ಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ಸಂಜೆ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಜರುಗಿತು. ಬಳಿಕ ಮಾತಾಡಿದ ಪ್ರಮೋದ್…

Read More

ಅವಧಿ ಮೀರಿದ ಔಷಧ ಪೂರೈಕೆ . ಕಿಡಿ ಕಾರಿದ ಶಾಸಕ ವೇದವ್ಯಾಸ ಕಾಮತ್

ಮಂಗಳೂರಿನ ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ಮಾಡಿ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರು ಬೆಳಗಾವಿ ಅಧಿವೇಶನದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಅಕ್ರಮದ ಬಗ್ಗೆ ತಿಳಿದ ಕೂಡಲೇ ಆಡಿಯೋ-ವೀಡಿಯೋ ಮಾತ್ರವಲ್ಲದೇ ಅವಧಿ ಮೀರಿದ ಔಷಧಿಗಳ ರಾಶಿಯ ದಾಖಲೆಗಳ ಸಮೇತ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ. ಹಾಸನ, ಚಿಕ್ಕಮಗಳೂರು, ಸೇರಿದಂತೆ ವಿವಿಧ ಭಾಗದ…

Read More

ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರ ನೇತೃತ್ವದಲ್ಲಿ 11ನೇ ವರ್ಷದ ಭಾವೈಕ್ಯತೆಯ ಕ್ರಿಸ್ಮಸ್ ಸಂಭ್ರಮಾಚರಣೆ ಮತ್ತು ಕ್ಯಾರಲ್ ಸಂಗೀತ ಸ್ಪರ್ಧೆ

ಕರ್ನಾಟಕ ಸರಕಾರದ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾರವರು ಕಳೆದ 10 ವರ್ಷಗಳಿಂದ ಸರ್ವಧರ್ಮಗಳ ಭಾವೈಕ್ಯತೆಯ ಸಂಗಮವಾದ ದೀಪಾವಳಿ ಹಬ್ಬ, ಕ್ರಿಸ್ಮಸ್ ಸಂಭ್ರಮಾಚರಣೆ ಹಾಗೂ ರಂಜಾನ್ ಹಬ್ಬವನ್ನು ಮಂಗಳೂರಿನ ಹಲವು ಕಡೆಗಳಲ್ಲಿ ಸರ್ವಧರ್ಮಿಯರು ಸೇರಿಕೊಂಡು ಆಚರಿಸುತ್ತಾ ಬರುತ್ತಿದ್ದಾರೆ. ಈ ಭಾರಿ 11ನೇ ವರ್ಷದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಡಿ 22 ರಂದು ನಗರದ ಜೆಪ್ಪು ಸಂತ ಅಂತೋನಿ ಆಶ್ರಮದ ತೆರೆದ ಮೈದಾನದಲ್ಲಿ ಸಂಜೆ 3:30 ರಿಂದ ರಾತ್ರಿ 8:00ರ ವರೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಜೆ…

Read More
error: Content is protected !!