ಬೆಟ್ಟಂಪಾಡಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು: ಕೇರಳದ ಬದಿಯಡ್ಕದಲ್ಲಿ ಆರೋಪಿ ಬಂಧನ

ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಮಾಡಿದ ಆರೋಪಿಯನ್ನು ದಕ್ಷಿಣ ಕನ್ನಡದ ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 25.08.2026 ರ ಬೆಳಿಗ್ಗೆ ದೇವಸ್ಥಾನದ ಹೊರಗೆ ಇಟ್ಟಿದ್ದ ಕಾಣಿಕೆ ಡಬ್ಬಿ ಕಳ್ಳತನವಾಗಿತ್ತು. ಈ ಬಗ್ಗೆ ದೇವಸ್ಥಾನದಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ 24.08.2026 ರ ರಾತ್ರಿ ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಎತ್ತಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ.‌ ಈ ಡಬ್ಬಿಯಲ್ಲಿ ಸುಮಾರು 4500 ರೂಪಾಯಿ ಹಣ ಇರುವ ಇತ್ತೆನ್ನಲಾಗಿತ್ತು. ಕಾಣಿಕೆ ಡಬ್ಬಿಯ ಮೌಲ್ಯ 2500 ರೂ ಆಗಿರುತ್ತದೆ…

Read More

ಎಸ್‌ಐಆರ್ ನೋಟಿಸ್ ಹಿಂಪಡೆದ ಚುನಾವಣಾ ಆಯೋಗ: ಹರೇಕಳ ಹಾಜಬ್ಬರಿಗೆ ಬಿಗ್ ರಿಲೀಫ್

ಎಸ್‌ಐಆರ್ ಪ್ರಕ್ರಿಯೆಯ ವೇಳೆ ಹೆಸರು ತಾಳೆಯಾಗದ ಕಾರಣ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ಜಾರಿಗೊಳಿಸಿದ್ದನ್ನು ಚುನಾವಣಾ ಆಯೋಗವು ವಾಪಸ್ ಪಡೆದಿದೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸೂಕ್ತ ದಾಖಲೆಯೊಂದಿಗೆ ಸೆಪ್ಟೆಂಬರ್ 11ರಂದು ಹಾಜರಾಗಲು ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದರ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ.ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜಬ್ಬರ ಮನೆಗೆ ಹೋಗಿ ಸದ್ಯ ನೋಟಿಸ್ ವಾಪಸ್ ಕೊಡಿ, ಪರಿಶೀಲಿಸಿ ಹೇಳುತ್ತೇವೆ ಎಂದು ನೋಟಿಸ್ ಪ್ರತಿ ಕೊಂಡು ಹೋಗಿದ್ದಾರೆ. ಅವರು ಮುಂದೇನು…

Read More

ಬಂಟ್ಸ್ ಹಾಸ್ಟೇಲ್‌ನಲ್ಲಿ ಸೆ.14ರಿಂದ 16ರವರೆಗೆ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ ಹಾಗೂ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಸೆ.14ರಿಂದ 16ರವರೆಗೆ ನಗರದ ಬಂಟ್ಸ್ ಹಾಸ್ಟೇಲ್‌ನ ‘ಓಂಕಾರ ನಗರ’ದಲ್ಲಿ ನಡೆಯಲಿದೆ ಎಂದು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ಬಳಿಯ…

Read More

ಸೆ.11ರಂದು ಮಂಗಳೂರಿನಲ್ಲಿ ‘ಸೀರತ್ ಅಭಿಯಾನ’ ವಿಚಾರಗೋಷ್ಠಿ

ಮಂಗಳೂರು:ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಅಂಗವಾಗಿ ಆ.26ರಿಂದ ರಾಜ್ಯಾದ್ಯಂತ ನಡೆಯುತ್ತಿರುವ ‘ಸೀರತ್ ಅಭಿಯಾನ’ದ ಪ್ರಯುಕ್ತ ಸೆ.11ರಂದು ಸಂಜೆ 7 ಗಂಟೆಗೆ ನಗರದ ಪುರಭವನದಲ್ಲಿ ಸಾರ್ವಜನಿಕ ವಿಚಾರಗೋಷ್ಠಿ ನಡೆಯಲಿದೆ. ‘ಪ್ರವಾದಿ ಮುಹಮ್ಮದ್ (ಸ): ವರ್ತಮಾನ ಭಾರತದ ಪೂರ್ವಗ್ರಹ ಮತ್ತು ವಾಸ್ತವ’ ಎಂಬ ಕೇಂದ್ರ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ ಎಂದು ಅಭಿಯಾನದ ಸಂಚಾಲಕ ಅಬ್ದುಲ್ ಗಫೂರ್ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್ (ಸ.)’…

Read More

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮೂವರು ಆರೋಪಿಗಳ ಬಂಧನ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.2026ರ ಫೆಬ್ರವರಿಯಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಜವಾದ್, ಶಾಹಿದ್, ರಿಯಾಝ್ ಅಲಿಯಾಸ್ ಅಬ್ದುಲ್ ಗಫೂರ್ ಸೇರಿದಂತೆ ಆರು ಮಂದಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಂತ್ರಸ್ತ ಬಾಲಕ ನೀಡಿದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 4ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ…

Read More

ಸುಳ್ಳಮಲೆ ಗುಹಾತೀರ್ಥ ಸ್ನಾನ ಸೆ.11ರಿಂದ 14ರವರೆಗೆ: ಸಾಂಪ್ರದಾಯಿಕ ಉಡುಪು ಕಡ್ಡಾಯ, ಛಾಯಾಗ್ರಹಣಕ್ಕೆ ನಿಷೇಧ

ಬಂಟ್ವಾಳ: ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಸುಳ್ಳಮಲೆ ಗುಹಾತೀರ್ಥ ಸ್ನಾನವು ಸೆ.11ರಿಂದ 14ರವರೆಗೆ ನಡೆಯಲಿದೆ.ಭಾದ್ರಪದ ಶುಕ್ಲ ಚೌತಿಯವರೆಗೆ ನಡೆಯುವ ಈ ತೀರ್ಥಸ್ನಾನಕ್ಕೆ ಪೂರ್ವಭಾವಿಯಾಗಿ ಸೋಣ ಅಮಾವಾಸ್ಯೆಯಂದು ಬಿದಿರಿನ ಕೇರ್ಪು (ಏಣಿ) ಇಡುವ ಸಂಪ್ರದಾಯ ನೆರವೇರಲಿದೆ. ಬಳಿಕ ಅರಸು ಶ್ರೀ ಗುಡ್ಡೆಚಾಮುಂಡಿ ಹಾಗೂ ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಸಲ್ಲಿಸಿದ ನಂತರ ಭಕ್ತಾದಿಗಳಿಗೆ ಗುಹಾತೀರ್ಥ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ತೀರ್ಥಸ್ನಾನಕ್ಕೆ ಆಗಮಿಸುವ ಭಕ್ತಾದಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬರುವ ಮೂಲಕ ಕ್ಷೇತ್ರದ ಪಾವಿತ್ರ್ಯತೆ ಹಾಗೂ…

Read More

ಸಾನಿಧ್ಯದಲ್ಲಿ ಶಿಕ್ಷಕರ ದಿನಾಚರಣೆ.ಶಿಕ್ಷಕರ ಸೇವೆ ಸಮಾಜ ನಿರ್ಮಾಣದಲ್ಲಿ ಮಹತ್ವದ್ದು: ಸಂತೋಷ್ ಕುಮಾರ್ ಶೆಟ್ಟಿ

ಮಂಗಳೂರು: ಶಕ್ತಿನಗರದಲ್ಲಿರುವ ವಿಶೇಷಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಹಾಗೂ ತರಬೇತಿ ಕೇಂದ್ರ ‘ಸಾನಿಧ್ಯ’ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಭಾಗವಹಿಸಿ ಶಿಕ್ಷಕರಿಗೆ ಶುಭಾಶಯ ಸಲ್ಲಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾನಿಧ್ಯದಲ್ಲಿ ವಿಶೇಷ ಮಕ್ಕಳೊಂದಿಗೆ ಶಿಕ್ಷಕರ ದಿನಾಚರಣೆ ಆಚರಿಸಿರುವುದು ತಮಗೆ ವಿಶೇಷ ಸಂತಸ ತಂದಿದೆ. ಇಲ್ಲಿನ ಮಕ್ಕಳು ಹಾಗೂ ಶಿಕ್ಷಕರ ಪ್ರೀತಿ, ಸೇವಾ…

Read More

ಡಿಸಿ ಮನ್ನಾ ಭೂಮಿ ಹಂಚಿಕೆಗೆ ಆಗ್ರಹ.ತಿಂಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ: ದಲಿತ ಸಂಘಟನೆಗಳ ಎಚ್ಚರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟಿರುವ ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕುರಿತು ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಬೇಕು. ಒಂದು ತಿಂಗಳೊಳಗೆ ಹಂಚಿಕೆಗೆ ಕ್ರಮ ಕೈಗೊಳ್ಳದಿದ್ದರೆ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್, ಡಿಸಿ ಮನ್ನಾ ಭೂಮಿ ಹಂಚಿಕೆಗೆ ಸಂಬಂಧಿಸಿ ಜಿಲ್ಲಾಡಳಿತವು…

Read More

ದ.ಕ ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆಗಳ ಘಟಕವನ್ನು ಶೀಘ್ರ ಆರಂಬಿಸಲು ಒತ್ತಾಯಿಸಿ ಹಕ್ಕೊತ್ತಾಯ ಧರಣಿ

ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಬೇಕು, ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗಳ ಘಟಕಗಳ ಸರಕಾರಿ ಸೇವೆಯನ್ನು ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಬಿಸಲು ಒತ್ತಾಯಿಸಿ ಮಂಗಳೂರಿನ ಮಿನಿವಿದಾನ ಸೌದದ ಎದುರು CPIM ಮಂಗಳೂರು ನಗರ ದಕ್ಷಿಣ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ CPIM ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸುವ ಖಾಸಗೀ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಂಡಿರುವ…

Read More

ನರಿಂಗಾನ ಬಾವಳಿಗುಳಿಯಲ್ಲಿ ಅದ್ದೂರಿ ಗಣೇಶೋತ್ಸವ: ಸೆ.14ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ನರಿಂಗಾನ: ವರ್ಕಾಡಿ ಗಡಿ ಪ್ರದೇಶವಾದ ನರಿಂಗಾನ ಬಾವಳಿಗುಳಿಯಲ್ಲಿ 12ನೇ ವರ್ಷದ ಗಣೇಶೋತ್ಸವವು ತಾರೀಕು 14 /09/ 26ನೇ ಸೋಮವಾರ ಬಹಳ ಅದ್ದೂರಿಯಾಗಿ ನಡೆಯಲಿದೆ. ಅಂದು ಬೆಳಿಗ್ಗೆ ವರ್ಕಾಡಿ ದಿನೇಶ್ ಕೃಷ್ಣ ತಂತ್ರಿ ಅವರ ಮುಂದಾಳತ್ವದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳು ಜರಗಲಿಕ್ಕಿವೆ. ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಶ್ರೀ ಮಹಮ್ಮಾಯ ಭಜಕ ವೃಂದ ಶಾಂತಿ ಪಳಿಕೆ ಇವರಿಂದ ಭಜನಾ ಸಂಕೀರ್ತನೆ, ಮನೋರಂಜನಾ ಕಾರ್ಯಕ್ರಮ ದಂಗವಾಗಿ ಬೆಳಿಗ್ಗೆ 11:30 ರಿಂದ ದತ್ತಾಂಜನೇಯ ಕಲಾಬಳಗ ರಾಮಾಡಿ ಕಣ್ವ…

Read More
error: Content is protected !!