“ಕಾಂತಾರ” ಸಿನಿಮಾದಿಂದ ದೈವಗಳಿಗೆ ಅಪಚಾರ ನಡೆದಿಲ್ಲ: ಐಕಳ ಹರೀಶ್ ಶೆಟ್ಟಿ

ಮಂಗಳೂರು: ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ತಯಾರಾದ ರಿಷಬ್ ಶೆಟ್ಟಿ ನಿರ್ದೇಶನದ “ಕಾಂತಾರ” ಸಿನಿಮಾದ ಬಗ್ಗೆ ಪರ ವಿರೋಧ ಚರ್ಚೆಯಾಗುತ್ತಿದ್ದು, ಸಿನಿಮಾದಲ್ಲಿ ಎಲ್ಲೂ ದೈವಗಳಿಗೆ ಅಪಚಾರ ಆಗಿಲ್ಲ. ಸಿನಿಮಾವನ್ನು ಸಿನಿಮಾದ ರೀತಿಯಲ್ಲೇ ನೋಡಿದರೆ ಚೆಂದ. ಸಿನಿಮಾದ ಉದ್ದಕ್ಕೂ ಎಲ್ಲೂ ದೈವಗಳ ನಿಂದನೆಯಾಗಿಲ್ಲ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ. ಕಾಂತಾರ ಸಿನಿಮಾ ಇಂದು ವಿಶ್ವದೆಲ್ಲೆಡೆ ಬಿಡುಗಡೆಯಾಗಿ ಸಂಚಲನವನ್ನೇ ಸೃಷ್ಟಿ ಮಾಡಿದೆ. ಇದರ ಬೆನ್ನಲ್ಲೇ ಸಿನಿಮಾದ ಕುರಿತು ಅಪಸ್ವರ ಎದ್ದಿದೆ, ಪರ ವಿರೋಧ…

Read More

ಅರಣ್ಯ ಇಲಾಖೆಯ ಮಂಗಳೂರಿನ ಅರಣ್ಯಾಧಿಕಾರಿ ಜಿತೇಶ್ .ಪಿ ಅವರಿಗೆ ಮುಖ್ಯಮಂತ್ರಿ ಪದಕ..

ಬಂಟ್ವಾಳ : ಅರಣ್ಯ ಇಲಾಖೆಯ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಕರ್ನಾಟಕ ಸರಕಾರದಿಂದ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನೀಡುವ ಮುಖ್ಯಮಂತ್ರಿ ಪದಕವನ್ನು ಮಂಗಳೂರು ವಿಭಾಗದ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರು ಅಕ್ರಮ ಮರ ಕಡಿಯುವುದು ಮತ್ತು ಕಳ್ಳ ಸಾಗಾಣಿಕೆ ತಡೆಗಟ್ಟುವಿಕೆಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಅ.08ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕೆಟ್ ಹಾಲ್ ನಲ್ಲಿ ಸ್ವೀಕರಿಸಿದರು. ಬಂಟ್ವಾಳ ವಲಯದ…

Read More

ಕಾರ್ಕಳ ಆತ್ಮಹತ್ಯೆಗೈದ ಯುವಕನ ಡೆತನೋಟ್ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ , ಏನಿದೆ ಅಸಲಿಯತ್ತು ….. ?

ಮಂಗಳೂರು: ಕಾರ್ಕಳ ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ(23) ಬೆಳ್ಳ ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಬರೆದ ಡೆತ್ ನೋಟ್‌ ಸಿಕ್ಕಿದೆ. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಬಯೋಮೆಡಿಕಲ್ ಆಗಿದ್ದ ಅಭಿಷೇಕ್‌ತನ್ನ ಡೆತನೋಟ್‌ನಲ್ಲಿ ತನ್ನ ಗೆಳೆಯರಿಂದಾದ ಅನ್ಯಾಯದ ಬಗ್ಗೆ, ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈತ ಬರೆದಿದ್ದಾನೆ ಎನ್ನಲಾದ ಮುದ್ದಾದ ಅಕ್ಷರಗಳುಳ್ಳ ಏಳು ಪುಟಗಳ ಡೆತ್‌ನೋಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಕರಣದ ಬಗ್ಗೆ ಉಡುಪಿ ಎಸ್‌ಪಿಪಿ ಹರಿರಾಂ…

Read More

ಆರೋಗ್ಯ ಕ್ಷೇತ್ರಕ್ಕೆ ಅಮ್ಮನವರ ಸೇವೆ ಮಹತ್ತರ – ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್.

ಮಂಗಳೂರು: ಆಧುನಿಕ ಭಾರತದ ಅಭಿವೃದ್ಧಿಯ ಕಲ್ಪನೆಯಲ್ಲಿ ಆರೋಗ್ಯ ರಕ್ಷಣೆಯು ಪ್ರಮುಖ ಪಾತ್ರವಹಿಸಿದ್ದು ಈ ಕ್ಷೇತ್ರಕ್ಕೆ ಮಾತಾ ಅಮೃತಾನಂದಮಯಿ ದೇವಿಯವರ ಕೊಡುಗೆ ಅಪಾರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು. .ಅವರು ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಅಮ್ಮನವರ 72 ನೆಯ ಜನ್ಮ ದಿನಾಚರಣೆಯ ಪ್ರಯುಕ್ತ ಜರುಗಿದ ಅಮೃತೋತ್ಸವ 2025 ನ್ನು ಉದ್ಘಾಟಿಸಿ ಮಾತನಾಡಿ, ಮಠದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಬೃಹತ್ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ 100 ಉಚಿತ ಹೃದಯ…

Read More

ದೇಶವನ್ನು ದಿವಾಳಿ ಮಾಡಿದ್ದು ಮೋದಿ ಅವರ ಸರ್ಕಾರವೇ ಹೊರತು‌ ನಾವಲ್ಲ – ಕಾರ್ಮಿಕ ಸಚಿವ ಸಂತೋಷ್ ಲಾಡ್

ಮಂಗಳೂರು: 2014ರ ವರೆಗೆ ದೇಶದ ಸಾಲ 53 ಲಕ್ಷ ಕೋಟಿ ಇತ್ತು. ನರೇಂದ್ರ ಮೋದಿ ಪ್ರಧಾನಿ ಆದ 10 ವರ್ಷಗಳಲ್ಲಿ ದೇಶದ ಸಾಲ 185 ಲಕ್ಷ ಕೋಟಿಗೆ ಏರಿಕೆಯಾಗಿದೆ. ದೇಶವನ್ನು ದಿವಾಳಿ ಮಾಡಿದ್ದು ಮೋದಿ ಅವರ ಸರ್ಕಾರವೇ ಹೊರತು‌ ನಾವಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ. ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಬಳಿಕ ಅವರು ಮಾತನಾಡುತ್ತಿದ್ದರು. ಬಿಜೆಪಿಗರು ಚುನಾವಣೆ ಸಂದರ್ಭ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ…

Read More

ಬಿಸಿರೋಡು ಬಸ್ ನಿಲ್ದಾಣದ ರಸ್ತೆ ಹಾಗೂ ರೈಲ್ವೇ ಮೇಲ್ಸೇತುವೆಯ ಗುಂಡಿ ಗಳಿಗೆ ತಾತ್ಕಾಲಿಕ ತೇಪೆ.

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಬಿಸಿರೋಡು ಬಸ್ ನಿಲ್ದಾಣದ ಮುಂಭಾಗದಲ್ಲಿ ಹಾಗೂ ರೈಲ್ವೆ ಮೇಲ್ಸೇತುವೆಯ ಭಾಗದಲ್ಲಿ ಮಳೆಗಾಲದ ಆರಂಭದ ದಿನಗಳಲ್ಲಿ ಬಿದ್ದಿದ್ದ ಬೃಹತ್ ಹೊಂಡಗಳನ್ನು ಇಂದು ಹೆದ್ದಾರಿ ಇಲಾಖೆಯ ಮೊಗರೋಡಿ ಕನ್ಸ್್ಟ್ರಕ್ಸನ್ ಅಧಿಕೃತ ಗುತ್ತಿಗೆ ಸಂಸ್ಥೆಯಿಂದ ಮುಚ್ಚಲಾಯಿತು. ಮಂಗಳೂರಿನಿಂದ ಬಿಸಿರೋಡು ವರೆಗೆ ಹೆದ್ದಾರಿಯ ನಿರ್ವಹಣೆ ವಹಿಸಿಕೊಂಡ ಮೊಗರೊಡಿ ಕಂಪೆನಿಯವರು ಎರಡು ದಿನಗಳಿಂದ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾರ್ಯವನ್ನು ಕೈಗೊಂಡಿದ್ದಾರೆ. ಬಿಸಿರೋಡು ಬಸ್ ನಿಲ್ದಾಣ ಹಾಗೂ ರೈಲ್ವೇ ಮೇಲ್ಸೇತುವೆಯಲ್ಲಿ ಬಿದ್ದ ಗುಂಡಿಗಳಿಂದ ನಿತ್ಯ ಟ್ರಾಫಿಕ್ ಸಮಸ್ಯೆ…

Read More

ಎರಡನೇ ವರ್ಷದ ‘ರೋಟರಿ ಕಂಬಳ’ ಸಿದ್ಧಕಟ್ಟೆ ಕೊಡಂಗೆ ವೀರ -ವಿಕ್ರಮ ಜೋಡುಕರೆಯಲ್ಲಿ ಅ.12ರಂದು

ಬಂಟ್ವಾಳ: ಕಳೆದ ವರ್ಷ ರೋಟರಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ‘ರೋಟರಿ ಕಂಬಳ’ ಕೂಟ ನಡೆಸಿ ಗಮನ ಸೆಳೆದಿದ್ದ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಈ ಬಾರಿ ಇತರ ನಾಲ್ಕು ರೋಟರಿ ಕ್ಲಬ್ ಗಳ ಸಹಭಾಗಿತ್ವದಲ್ಲಿ ಸಿದ್ಧಕಟ್ಟೆ ಕೊಡಂಗೆ ವೀರ -ವಿಕ್ರಮ ಜೋಡುಕರೆಯಲ್ಲಿ ಅ.12ರಂದು ಎರಡನೇ ವರ್ಷದ ‘ರೋಟರಿ ಕಂಬಳ’ ನಡೆಸಲು ಮುಂದಾಗಿದೆ ಎಂದು ಈ ಕಂಬಳ ಕೂಟದ ನೇತೃತ್ವ ವಹಿಸಿಕೊಂಡಿರುವ ಮೊಡಂಕಾಪು ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಎಲ್ಯಾಸ್ ಸ್ಯಾಂಕ್ಟಿಸ್ ಹೇಳಿದ್ದಾರೆ. ಇಲ್ಲಿನ ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ…

Read More

ವಿಟ್ಲದಲ್ಲಿ 400 ಕೆವಿ ವಿದ್ಯುತ್ ಪ್ರಸರಣ ಯೋಜನೆಯ ವಿರುದ್ಧ ಬೃಹತ್ ಶಕ್ತಿ ಪ್ರದರ್ಶನ .

ವಿಟ್ಲ: ಸನಾತನ ಹಿಂದು ಧರ್ಮ ಮತ್ತು ಧಾರ್ಮಿಕ ಸಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ ವಿಟ್ಲ, ಹಲವು ಹಿಂದು ಸಂಘಟನೆಗಳು, ಸಾಮಾಜಿಕ ಮತ್ತು ರೈತ ಸಂಘಟನೆಗಳ ಸಹಯೋಗದೊಂದಿಗೆ 4೦೦ ಕೆವಿ ವಿದ್ಯುತ್ ಪ್ರಸರಣ ಯೋಜನೆಯ ವಿರುದ್ಧ ಗುರುವಾರ ಬೃಹತ್ ಶಕ್ತಿ ಪ್ರದರ್ಶನ ವಿಟ್ಲ ಸಮೀಪದ ಮಂಗಳಪದವಿನಲ್ಲಿ ನಡೆಯಿತು . ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ,‌ ದಕ್ಷಿಣ ಕನ್ನಡ‌ ಜಿಲ್ಲೆ ಉಡುಪಿ ಜಿಲ್ಲೆಗಳ ಜನರು ಅಭಿವೃದ್ಧಿ ಹೆಸರಿನಲ್ಲಿ ಈಗಾಗಲೇ ಅದೆಷ್ಟು ಭೂಮಿ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು, ಧಾರ್ಮಿಕ ಶ್ರದ್ದಾ…

Read More

ಹನಿಟ್ರ್ಯಾಪ್ ಗೆ ಯುವಕನೋರ್ವ ಬಲಿ .

ಮಂಗಳೂರು: ಹನಿಟ್ರ್ಯಾಪ್ ಗೆ ಯುವಕನೋರ್ವ ಬಲಿಯಾಗಿದ್ದಾನೆ. ವಿಡಿಯೋ ಮಾಡಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ನಾಲ್ವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೋಟ್ ನಲ್ಲಿ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ನಿಟ್ಟೆ ಪರಪಾಡಿ ನಿವಾಸಿ ಅಬಿಷೇಕ್ ಎಂದು ಗುರುತಿಸಲಾಗಿದೆ. ಈತ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬಯೋಮೆಡಿಕಲ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದನು .ಈತ ಆತ್ಮಹತ್ಯೆ ಗೈಯ್ಯುವ ಮೊದಲು ಡೀಟೆಲ್ ಆಗಿ ಯಾರೆಲ್ಲ ಕಿರುಕುಳ ನೀಡಿದ್ದಾರೆಂದು ಮತ್ತು ಯಾವ ವಿಚಾರಕ್ಕೆಂದು ನೋಟ್ ನಲ್ಲಿ ಬರೆದು ಆತ್ಮಹತ್ಯೆ ಮಾಡಿದ್ದಾನೆ. ನಿರೀಕ್ಷಾ,ರಾಹುಲ್,ರಾಕೇಶ…

Read More

ಬಾಕಿ ಉಳಿಸಿದ ಕನಿಷ್ಟ ಕೂಲಿ ಪಾವತಿಗೆ ಆಗ್ರಹಿಸಿ ಬೀಡಿ ಡಿಪೋ ಗೆ ಮುತ್ತಿಗೆ.

ಮಂಗಳೂರು: ಬಾಕಿ ಉಳಿಸಿದ ಕನಿಷ್ಟ ಕೂಲಿ ಪಾವತಿಗೆ ಆಗ್ರಹಿಸಿ ಬೀಡಿ ಡಿಪೋ ಗೆ ಮುತ್ತಿಗೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.2018 ರಿಂದ 2024 ರ ವರಗಿನ ಬಾಕಿ ಉಳಿಸಿರುವ ಕನಿಷ್ಟ ವೇತನ, 2024 ರಲ್ಲಿ ಹೆಚ್ಚಳಗೊಂಡಿರುವ ತುಟ್ಟಿಭತ್ತೆ ಪಾವತಿಗೆ ಒತ್ತಾಯಿಸಿ “ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ” ಆಶ್ರಯದಲ್ಲಿ ಈ ಪ್ರತಿಭಟನೆ ನಡೆಯಿತು. ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘ, ಗುರುಪುರ, ಸುರತ್ಕಲ್ ಬೀಡಿ ಲೇಬರ್ ಯೂನಿಯನ್, ವಾಮಂಜೂರು…

Read More
error: Content is protected !!