ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಾಧ್ಯತೆ …. !

ಮಂಗಳೂರು: ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್ ವಜಾಗೊಳಿಸಿದ್ದು, ಅವರಿಗೆ ಬಂಧನ ಭೀತಿ ಎದುರಾಗಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಈ ತೀರ್ಪು ನೀಡಿದೆ. ಕಳೆದ 20 ದಿನಗಳಿಂದ ತಲೆಮರೆಸಿಕೊಂಡಿದ್ದ ತಿಮರೋಡಿ, ಮುಂಚಿತ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ್ದು, ಇದೀಗ ಅವರಿಗೆ ಹೈಕೋರ್ಟ್‌ನಲ್ಲಿ ಮರುಅರ್ಜಿ ಸಲ್ಲಿಸಲು…

Read More

ವಾರಗಳ ಹಿಂದೆ ಪರಾರಿಯಾಗಿದ್ದ ಇಬ್ಬರು ಗಾಂಜಾ ಮಾರಾಟಗಾರರ ಬಂಧನ.

ಬಂಟ್ವಾಳ: ಅಬಕಾರಿ ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ವಾರಗಳ ಹಿಂದೆ ಪರಾರಿಯಾಗಿದ್ದ ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಟ್ವಾಳ ಪೋಲೀಸರು ಬಂಧಿಸಿ, ಬಂಧಿತರಿಂದ ಲಕ್ಷಾಂತರ ರೂ ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಅಬ್ದುಲ್ ಮಜೀದ್ ಹಾಗೂ ಸಹಸವಾರ ಅಬ್ದುಲ್ ಸಾಧಿಕ್ ಎಂಬವರನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಂಧಿತರಿಂದ ಗಾಂಜಾ ಸಹಿತ ಒಟ್ಟು 2,17,460 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ಧಾರೆ. ಸೆ. 25 ರಂದು ಈ ಇಬ್ಬರು ಆರೋಪಿಗಳು ಪಿಕಪ್ ವಾಹನದಲ್ಲಿ ನಿಷೇಧಿತ ಗಾಂಜಾವನ್ನು ಸಾಗಿಸುತ್ತಿರುವ…

Read More

ಮಂಗಳೂರು ಜನತೆಗೆ ಸಮಸ್ಯೆ ತಂದೊಡ್ಡಿದ ಅವೈಜ್ಞಾನಿಕ ಸಮೀಕ್ಷೆ :- ಶಾಸಕ ಕಾಮತ್

ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಅವೈಜ್ಞಾನಿಕ ಜಾತಿ ಸಮೀಕ್ಷೆಯಿಂದಾಗಿ ಮಂಗಳೂರಿನ ಜನತೆ ತೀವ್ರ ಸಮಸ್ಯೆ ಅನುಭವಿಸುತ್ತಿದ್ದು ಅಗತ್ಯ ಕೆಲಸಗಳಿಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರು ಮಹಾನಗರ ಪಾಲಿಕೆ, ತಾಲೂಕು ಕಚೇರಿ ಸೇರಿದಂತೆ ಎಲ್ಲಾ ಇಲಾಖೆಯ ಡಾಟಾ ಎಂಟ್ರಿ ಆಪರೇಟರ್ ಗಳು, ಕಿರಿಯ ಇಂಜಿನಿಯರ್ ಗಳ ಗ್ರಾಮ ಲೆಕ್ಕಾಧಿಕಾರಿಗಳು, ಹೀಗೆ ಬಹುತೇಕ ಸಿಬ್ಬಂದಿಗಳನ್ನು ಹಾಗೂ ಶಾಲಾ ಶಿಕ್ಷಕರನ್ನು ಅವೈಜ್ಞಾನಿಕ ಸಮೀಕ್ಷೆಗೆ ಬಳಸಿಕೊಂಡಿರುವುದು ಇಡೀ ಜಿಲ್ಲೆಯ ವ್ಯವಸ್ಥೆ ಹದಗೆಡಲು ಕಾರಣವಾಗಿದೆ….

Read More

ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲು.

ಮಂಗಳೂರು: ತೋಟ ಬೆಂಗ್ರೆ ಅಳಿವೆ ಬಾಗಿಲು ಬಳಿ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯಲು, ಮೀನುಗಾರಿಕೆಗೆ ಹೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ‌ ಘಟನೆ ನಡೆದಿದೆ.ಮನೋಹರ್ ಪುತ್ರನ್ (53) ಮೃತ ವ್ಯಕ್ತಿ. ಬುಧವಾರ ಸಂಜೆ 6:30ಕ್ಕೆ‌ ಈ ಘಟನೆ ನಡೆದಿದೆ. ಇವರು ಬಲೆ ಹಾಕಿ ಮೀನು ಹಿಡಿಯಲು ಹೋದಾಗ ನೀರಿಗೆ ಬಿದ್ದು ಮೃತ ಪಟ್ಟಿರುತ್ತಾರೆ. ಬಳಿಕ ಸ್ಥಳೀಯರು ಹಾಗೂ ಪಣಂಬೂರು ಠಾಣಾ ಪೋಲಿಸ್ ಅಧಿಕಾರಿಗಳ ಸಹಾಯದಿಂದ ಹುಡುಕಾಟ ನಡೆಸಲಾಯಿತು. ಸುಮಾರು ರಾತ್ರಿ 9:30 ಸಮಯ ಮೃತದೇಹ ಪತ್ತೆಯಾಗಿದೆ. ಪಣಂಬೂರು ಠಾಣೆಯಲ್ಲಿ…

Read More

ನವೀನ ‘ತುಝರ್’ ಪರ್ಪ್ಯೂಮ್ ಸಂಸ್ಥೆಯ ಶುಭಾರಂಭ.

ಮಂಗಳೂರು: ಅಲ್ ನಜೀಂ ಉಸ್ ಸಕೀಬ್ ಪರ್ಪ್ಯೂಮ್ ಟ್ರೇಡರ್ಸ್ ಸಂಸ್ಥೆಯ ಅಬ್ದುಲ್ ಹಮೀದ್ ಅವರ ಮಾಲಕತ್ವದಲ್ಲಿ ಹೊಚ್ಚ ಹೊಸ ಫರ್ಪ್ಯೂಮ್ ಬ್ರಾಂಡ್ ‘ತುಝರ್ (TUZHAR)’ ಉತ್ಪನ್ನವನ್ನು ಯೆನೆಪೊಯ ಡೀಮ್ಸ್ ಟು ಬಿ ಯೂನಿವರ್ಸಿಟಿಯ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಣಿ ಅಕ್ಟೋಬರ್ 9ರಂದು ಮಂಗಳೂರು ಬೆಂದೂರ್‌ವೆಲ್‌ನ ಅಗ್ನೆಸ್ ಕಾಲೇಜು ಪಕ್ಕದ ಸೇಂಟ್ ಸೆಬಾಸ್ಟಿಯನ್‌ ಮಿನಿ ಹಾಲ್‌ನಲ್ಲಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕಣಚೂರು ಹೆಲ್ತ್ ಸೈನ್ಸನ್ ಅಡ್ಡೆಸರಿ ಸಂಸ್ಥೆಯ ಚೇರ್ಮ್ಯಾನ್, ವೈದ್ಯಕೀಯ ತಜ್ಞ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ ,…

Read More

ಕುಂಪಲದಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಸರಕಾರಿ ಬಸ್,ನಿತ್ಯವು ಸಂಚಾರಕ್ಕೆ ಹರಸಾಹಸ..!

ಮಂಗಳೂರು:ಮಂಗಳೂರಿನಿಂದ ಕುಂಪಲಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ನಗರದ ಹೊರವಲಯ ಕುಂಪಲದಲ್ಲಿ ನಡೆದಿದೆ. ಬೈಪಾಸ್ ನಿಂದ ಕುಂಪಲ ತನಕ ಸುಮಾರು 2 ಕಿಮೀ ರಸ್ತೆ ದುರಸ್ತಿ ಮಾಡಿ ಕೆಲವು ದಶಕಗಳಾಗಿವೆ. ನಂತರದ ದಿನದಲ್ಲಿ ಚುನಾವಣೆ ಹತ್ತಿರವಾದಾಗ ಆಶ್ವಾಸನೆ ದೊರೆಯುತ್ತಿದೆ ಅಷ್ಟೆ. ಹೊರತುಪಡಿಸಿ ಈವರೆಗೆ ರಸ್ತೆ ದುರಸ್ತಿಯಾಗಿಲ್ಲ,ಇದು ಕಿರಿದಾದ ರಸ್ತೆಯಾಗಿದ್ದು ಜಲ್ಲಿಮೇಲೆದ್ದಿರುವುದರಿಂದ ನಿತ್ಯವು ಸಂಚಾರಕ್ಕೆ ಹರಸಾಹಸ ಪಡಬೇಕಿದೆ..

Read More

ರಾಜ್ಯ ಮಟ್ಟದ ‘ ಸ್ವಿಮ್ ಗಾಲ 2025 ‘ ಈಜು ಸ್ಪರ್ಧೆ ಅ. 12 ರಂದು ಮಂಗಳೂರಿನಲ್ಲಿ

ಮಂಗಳೂರು: ರಾಜ್ಯದ ಪ್ರತಿಷ್ಠಿತ ಈಜು ಕ್ಲಬ್‌ಗಳಲ್ಲಿ ಒಂದಾದ ಮಂಗಳ ಸ್ವಿಮ್ಮಿಂಗ್ ಕ್ಲಬ್ ತನ್ನ 35 ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಜ್ಯಮಟ್ಟದ ಮೆಡಲಿಸ್ಟ್ ಹಾಗೂ ನಾನ್ ಮೆಡಲಿಸ್ಟ್ ‘ ಸ್ವಿಮ್ ಗಾಲ 2025 ‘ ಈಜು ಸ್ಪರ್ಧೆಯನ್ನು ಮಂಗಳೂರಿನ ಕಾರ್ಪೋರೇಷನ್ ಈಜುಕೊಳದಲ್ಲಿ ಅಕ್ಟೋಬರ್ 12 ರಂದು , ಬೆಳಿಗ್ಗೆ 8.00ರಿಂದ – ರಾತ್ರಿ 8.00ರ ತನಕ ನಡೆಯಲಿದೆ ಎಂದು ಮಂಗಳೂರಿನ ಮಂಗಳಾ ಈಜು ಸಂಸ್ಥೆಯ ಅಧ್ಯಕ್ಷರಾದ ಪ್ರಮುಖ್ ರೈ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ…

Read More

ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಶುದ್ಧ ಎಳ್ಳೆಣ್ಣೆಯ ಅಭಿಷೇಕಕ್ಕೆ ಸಿದ್ಧತೆ.

ದಕ್ಷಿಣಕನ್ನಡ: ಇತಿಹಾಸ ಪ್ರಸಿದ್ಧ ಮಹತೋಭಾರ ಮಹಲಿಂಗೇಶ್ವರ ದೇವಸ್ಥಾನದಲ್ಲಿ ಇತಿಹಾಸದಲ್ಲೇ ಮೊದಲಬಾರಿಗೆ ದೇವರ ವಿಗ್ರಹಕ್ಕೆ ಎಳ್ಳೆಣ್ಣೆ ಅಭಿಷೇಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ನಿರ್ಧಾರಕ್ಕೆ ಬರಲಾಗಿದೆ. ಮೋದಕ ಹೋಮ, ತುಪ್ಪದೀಪ, ಶುದ್ದ ಎಣ್ಣೆ, ಗಾಯತ್ರಿ ಪೂಜೆ ಸಹಿತ ದೇವರಿಗೆ ಪ್ರೀತ್ಯರ್ಥವಾಗಿ ಭಕ್ತರ ಬೇಡಿಕೆಯಂತೆ ಹಲವು ಸೇವೆಗಳನ್ನು ನೆರವೇರಿಸಲು ಕಾರಣಕರ್ತರಾದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ…

Read More

ಉಳ್ಳಾಲ- ಮೀನು ಆಹಾರ ತಯಾರಿಕಾ ಘಟಕದ ಗೋಡೌನ್ ಗೆ ಬೆಂಕಿ ತಗಲಿ ಅಪಾರ ನಷ್ಟ .

ಮಂಗಳೂರು: ಉಳ್ಳಾಲ- ಮೀನು ಆಹಾರ ತಯಾರಿಕಾ ಘಟಕದ ಗೋಡೌನ್ ಗೆ ಬೆಂಕಿ ತಗಲಿ ಅಪಾರ ನಷ್ಟ ಸಂಭವಿಸಿದೆ.ಮೀನಿನ ಆಹಾರ ತಯಾರಿ ಮತ್ತು ಸಂಸ್ಕರಣಾ ಘಟಕದ ಗೋಡೌನ್ ಗೆ ಬೆಂಕಿ ಬಿದ್ದ ಘಟನೆ ಉಳ್ಳಾಲದ ಕೋಟೆಪುರದಲ್ಲಿ ಸಂಭವಿಸಿದೆ. ಈ ಪರಿಸರದಲ್ಲಿ ಹಲವು ಮೀನಿನ ಪ್ಯಾಕ್ಟರಿಗಳಿದ್ದರೂ ಯಾವುದೇ ರೀತಿಯ ಬೆಂಕಿ ಅವಘಡ ತಪ್ಪಿಸುವ ಸುರಕ್ಷತಾ ವ್ಯವಸ್ಥೆ ಇಲ್ಲ ಎಂದು ಹೇಳಲಾಗುತ್ತಿದೆ. ಬೆಂಕಿ ಅವಘಢಕ್ಕೆ ಒಳಗಾದ ಎಂಎಪಿ ಫಿಶ್ ಫುಡ್ ಗೋದಾಮು ಖಾದರ್ ಎಂಬುವರಿಗೆ ಸೇರಿದ್ದು ಎಂದು ಹೇಳಲಾಗಿದ್ದು, ಸಂಜೆ ವೇಳೆ…

Read More

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಬಂಧನ.

ಮಂಗಳೂರು: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸಲಾಗಿದೆ. ಬರೋಬ್ಬರಿ 12 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಸಬ ಬೆಂಗ್ರೆ ನಿವಾಸಿ ಅಲ್ತಾಫ್ (47) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ದಂಗೆ, ಶಸ್ತ್ರ ಪ್ರಯೋಗ, ಹಾನಿ ಮತ್ತು ಬೆದರಿಕೆ ಸೇರಿ ಹಲವು ಪ್ರಕರಣ ದಾಖಲಾಗಿತ್ತು. ಈತನ ಬಗ್ಗೆ ಮಂಗಳೂರು 2ನೇ ಸಿ.ಜೆ.ಎಂ ನ್ಯಾಯಾಲಯಕ್ಕೆ…

Read More
error: Content is protected !!