ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಂಎಸ್ ಪ್ರತಿಭಟನೆ

ಮಂಗಳೂರು: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ನೇತೃತ್ವದಲ್ಲಿ ಮಂಗಳೂರಿನ ರಾಜಾಜಿ ಪಾರ್ಕ್‌ನಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು. ರಾಷ್ಟ್ರೀಯ ಕನಿಷ್ಠ ಮಾಸಿಕ ವೇತನವನ್ನು ₹30 ಸಾವಿರಕ್ಕೆ ನಿಗದಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇಎಸ್‌ಐಸಿ ವೇತನ ಮಿತಿಯನ್ನು ₹21 ಸಾವಿರದಿಂದ ₹42 ಸಾವಿರಕ್ಕೆ ಹಾಗೂ ಇಪಿಎಫ್ ವೇತನ ಮಿತಿಯನ್ನು ₹15 ಸಾವಿರದಿಂದ ₹30 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಇಎಸ್‌ಐ ಆಸ್ಪತ್ರೆಗಳ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೇವೆಗಳನ್ನು ತಕ್ಷಣ ಬಲಪಡಿಸಬೇಕು. ಇಪಿಎಸ್-95…

Read More

ಆ.23ರಂದು ‘ಗುರುಚಿತ್ತಾರ–2026’ ಚಿತ್ರಕಲಾ ಸ್ಪರ್ಧೆ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಜಂಟಿ ಆಶ್ರಯದಲ್ಲಿ ‘ಗುರುಚಿತ್ತಾರ–2026’ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆ.23ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1912ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ…

Read More

ಮಂಗಳೂರಿನಲ್ಲಿ ಆ.20ರಿಂದ ಅಂತರರಾಷ್ಟ್ರೀಯ ಇಎನ್‌ಟಿ ಸಮ್ಮೇಳನ

ಮಂಗಳೂರು: ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ), ಮಂಗಳೂರು ಹಾಗೂ ಕೆ.ಎಸ್. ಹೆಗಡೆ ಮೆಡಿಕಲ್ ಅಕಾಡೆಮಿಯ ಇಎನ್‌ಟಿ ವಿಭಾಗಗಳ ಜಂಟಿ ಆಶ್ರಯದಲ್ಲಿ ‘SEOCON-2026’ ಅಂತರರಾಷ್ಟ್ರೀಯ ಸಮ್ಮೇಳನವು ಆಗಸ್ಟ್ 20ರಿಂದ 23ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ದೇವಿಪ್ರಸಾದ್ ಡಿ. ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಸೈಟಿ ಆಫ್ ಎಂಡೋಸ್ಕೋಪಿಕ್ ಒಟೋ-ರೈನೋ-ಲ್ಯಾರಿಂಗೋಲಜಿ (SEO) ಆಯೋಜಿಸುತ್ತಿರುವ ನಾಲ್ಕನೇ ಅಂತರರಾಷ್ಟ್ರೀಯ ಸಮ್ಮೇಳನ ಇದಾಗಿದೆ. ಮಂಗಳೂರಿನ ಅವತಾರ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ಸಮ್ಮೇಳನದ ಪ್ರಮುಖ…

Read More

25 ಗಂಟೆಗಳ ನಿರಂತರ ದಾಸರಪದ ಗಾಯನಕ್ಕೆ ಸಂಗೀತ ಬಾಲಚಂದ್ರರಿಂದ ವಿಶ್ವ ದಾಖಲೆ ಪ್ರಯತ್ನ

ಮಂಗಳೂರು: ಆಕಾಶವಾಣಿಯ ಉನ್ನತ ಶ್ರೇಣಿಯ (ಟಾಪ್ ಗ್ರೇಡ್) ಕಲಾವಿದೆ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ಸಂಗೀತ ಬಾಲಚಂದ್ರ ಅವರು ತಮ್ಮ 25 ವರ್ಷಗಳ ಸಂಗೀತ ಪಯಣದ ಸ್ಮರಣಾರ್ಥ 25 ಗಂಟೆಗಳ ಕಾಲ ನಿರಂತರವಾಗಿ ದಾಸರಪದಗಳನ್ನು ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಐತಿಹಾಸಿಕ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಠದ ಸಮೀಪದಲ್ಲಿರುವ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ಈ ವಿಶೇಷ ಗಾಯನ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 23ರಂದು ಬೆಳಗ್ಗೆ 6.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮವು…

Read More

ಪ್ರತಿಭಾವಂತ ವಿದ್ಯಾರ್ಥಿನಿಗೆ ₹1.5 ಕೋಟಿ ವೈದ್ಯಕೀಯ ಸ್ಕಾಲರ್‌ಶಿಪ್

ಮಂಗಳೂರು: ಅರ್ಹ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬರಿಗೆ ವೈದ್ಯಕೀಯ ಸ್ನಾತಕೋತ್ತರ ಪದವಿ (ಎಂ.ಡಿ) ಶಿಕ್ಷಣ ಪಡೆಯಲು ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್ ಅವರು ₹1.5 ಕೋಟಿ ಮೊತ್ತದ ಸ್ಕಾಲರ್‌ಶಿಪ್ ಘೋಷಿಸಿದ್ದಾರೆ. ಮಂಗಳೂರಿನ ಪುರಭವನದಲ್ಲಿ ನಡೆದ ಬಿಸಿಎಫ್ ವಿದ್ಯಾರ್ಥಿವೇತನ ವಿತರಣೆ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್–2026 ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿನಿಗೆ ‘ತುಂಬೆ ಇಂಟರ್‌ನ್ಯಾಷನಲ್ ಪಾಥ್‌ವೇ ಪ್ರೋಗ್ರಾಂ’ನ ಸ್ಕಾಲರ್‌ಶಿಪ್ ಮಂಜೂರಾತಿ ಪತ್ರ ಹಸ್ತಾಂತರಿಸಲಾಯಿತು. ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ…

Read More

ಕೆಎನ್‌ಎಸ್‌ಎಸ್ ಮಂಗಳೂರು ಕರಯೋಗಂ ವತಿಯಿಂದ ಸಂಭ್ರಮದ ಓಣಂ ಆಚರಣೆ

ಮಂಗಳೂರು: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ (ಕೆಎನ್‌ಎಸ್‌ಎಸ್) ಮಂಗಳೂರು ಕರಯೋಗಂ ವತಿಯಿಂದ ಓಣಂ ಹಬ್ಬವನ್ನು ಆ.16ರಂದು ಕೊಡಿಯಾಲ್‌ಬೈಲ್‌ನ ಕೂಟಕ್ಕಲ್ ಭಗವತಿ ಆಡಿಟೋರಿಯಂನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕೆಎನ್‌ಎಸ್‌ಎಸ್ ಮಂಗಳೂರು ಕರಯೋಗಂ ಅಧ್ಯಕ್ಷ ಮುರಳಿ ನಾಯರ್ ಹೊಸಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ವಿ.ಎಂ. ಸತೀಶನ್ ಸ್ವಾಗತಿಸಿದರು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಖ್ಯಾತ ವಾಗ್ಮಿ ರಾಧಾಕೃಷ್ಣನ್ ಮಣಿಕೋತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾತನಾಡಿದ ಅವರು, ಹಿಂದೂ ಸಮಾಜ ಹಾಗೂ ಭಾರತೀಯ ಸಂಸ್ಕೃತಿಯ ಉತ್ತೇಜನದಲ್ಲಿ ನಾಯರ್ ಸಮುದಾಯದ…

Read More

ಬಂಟರ ಸಂಘ – ಗ್ರಾಮ ಸಮಿತಿ ಉಜಿರೆ ಇವರ ನೇತೃತ್ವದಲ್ಲಿ “ಆಟಿಡೊಂಜಿ ದಿನ “

ಉಜಿರೆ : ಬಂಟರ ಸಂಘ, ಗ್ರಾಮ ಸಮಿತಿ ಉಜಿರೆ ಇವರ ನೇತೃತ್ವದಲ್ಲಿ ತುಳುನಾಡಿನ ಸಂಸ್ಕೃತಿ ಆಹಾರ ಕ್ರಮ ಆಚಾರ ವಿಚಾರಗಳನ್ನು ಬಿಂಬಿಸುವ ಮತ್ತು ಮುಂದಿನ ಪೀಳಿಗೆಗೆ ಅದನ್ನು ತಿಳಿಯಪಡಿಸುವ ಸಲುವಾಗಿ “ಆಟಿಡೊಂಜಿ ದಿನ” ಎಂಬ ವಿಶೇಷ ಕಾರ್ಯಕ್ರಮ ಉಜಿರೆಯ ಶಾರದಾ ಮಂಟಪದಲ್ಲಿ ಸಮಸ್ತ ಬಂಟ ಸಮಾಜದ ಬಾಂಧವರ ಕೂಡುವಿಕೆಯಿಂದ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಯುತ ಚಿತ್ರೇಶ್ ಶೆಟ್ಟಿ ಉಜಿರೆ ಅಧ್ಯಕ್ಷರು, ಗ್ರಾಮ ಸಮಿತಿ, ಬಂಟರ ಸಂಘ ಉಜಿರೆ ಇವರು ಕಾರ್ಯಕ್ರಮದ ಉದ್ದೇಶದ ಬಗ್ಗೆ ತಮ್ಮ…

Read More

ಮೀನುಗಾರಿಕಾ ದೋಣಿಯಿಂದ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಉಳ್ಳಾಲ: ಆ.9 ರಂದು ಮೀನುಗಾರಿಗೆಕೆ ದೋಣಿಯಲ್ಲಿ ತೆರಳುವ ಸಂದರ್ಭ ದೊಡ್ಡ ಗಾತ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದ ಕುಂದಾಪುರ ಮೂಲದ ನಾರಾಯಣ(31) ಮೃತದೇಹ ಉಳ್ಳಾಲದ ಕೋಟೆಪುರ ಅಳಿವೆಬಾಗಿಲಿನಲ್ಲಿ ಇಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಳ್ಳಾಲ ಮೂಲದ ಓಷಿಯನ್‌ ಸ್ಟಾರ್‌ ಹೆಸರಿನ ಬೋಟ್‌ ಮಂಗಳೂರಿನ ಧಕ್ಕೆಯಿಂದ ಮೀನುಗಾರಿಕೆಗೆ ತೆರಳುವ ಸಂದರ್ಭ ದೊಡ್ಡ ಗಾತ್ರದ ಅಲೆ ದೋಣಿಗೆ ಬಡಿದು ಕುಂದಾಪುರ ನಿವಾಸಿ ನಾರಾಯಣ (31) ಎಂಬವರು ನಾಪತ್ತೆಯಾಗಿದ್ದರು. ಹೊಸತಾಗಿ ಬೋಟಿಗೆ ಬಂದಿದ್ದ ಅವರು ಸಮುದ್ರದ ಅಲೆಗಳ ನಡುವೆ ಸಿಲುಕಿ ನಾಪತ್ತೆಯಾಗಿದ್ದರು. ಈ…

Read More

ಕುಂಜತ್ತಬೈಲ್‌ನಲ್ಲಿ ಸಾಮ್ರಾಟ್ ಕ್ರಿಕೆಟರ್ಸ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸಾಮ್ರಾಟ್ ಕ್ರಿಕೆಟರ್ಸ್ (ರಿ.)ಕುಂಜತ್ತ್ ಬೈಲ್, ಮಂಗಳೂರು ಇದರ ವತಿಯಿಂದ 80 ನೇ ಸ್ವಾತಂತ್ರೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮವು ಕುಂಜತ್ತಬೈಲ್ ಜಂಕ್ಷನ್ ನಲ್ಲಿ ಜರುಗಿತು‌‌‌‌‌.ಮ.ನ.ಪಾ ನಿಕಟ ಪೂರ್ವ ಸದಸ್ಯರಾದ ಶರತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿ ಗಳಾಗಿ ಸಿದ್ದೀಖ್ ಜುಮಾ ಮಸ್ಜಿದ್ ಮರಕಡ ಇದರ ಅಧ್ಯಕ್ಷರಾದ ಮೈಯದ್ದಿ ಬ್ಯಾರಿ,ಕೂಳೂರು ಕಾವೂರು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹುಸೈನ್ ರಿಯಾಝ್,ಕಾವೂರು ಪೋಲಿಸ್ ಠಾಣೆಯ ಸಹಾಯಕ ನಿರೀಕ್ಷಕರಾದ ರಾಮಣ್ಣ ಶೆಟ್ಟಿ, ಸಾಮ್ರಾಟ್ ತಂಡದ ಅಧ್ಯಕ್ಷ ನಾಸೀರ್ ಕುಂಜತ್ತಬೈಲ್, ಖವ್ವತುಲ್ ಇಸ್ಲಾಂ ಮದರಸ…

Read More

ಲಯನ್ಸ್ ಕ್ಲಬ್ ಕುದ್ರೆಮುಖದ ಪದಗ್ರಹಣ

ಲಯನ್ಸ ಕ್ಲಬ್ ಕುದ್ರೆಮುಖದ 2026-27ನೇ ಸಾಲಿನ ಲಯನ್ಸ್ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಗಳೂರಿನ ಲಾಲ್ ಬಾಗ್ ನ ಬಳಿ ಇರುವ ಹೋಟೆಲ್ ಫುಡ್ ಲ್ಯಾಂಡ್ ನಲ್ಲಿ ಜರಗಿತು. ಕ್ಲಬ್ಬಿನ ನಿರ್ಗಮಿತ ಅಧ್ಯಕ್ಷ ಲ. ಸುಭಾಷ್ ರಾಥೋಡ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಸಿಕ್ಯುಐನ ಮುಖ್ಯ ಸಂಯೋಜಕರಾದ ಶ್ರೀಮತಿ ಲ. ಉಮಾ ಬಿ ಹೆಗ್ಡೆಯವರು ಪದಗ್ರಹಣ ಅಧಿಕಾರಿಯಾಗಿ ಪ್ರಮಾಣವಚನ ಬೋಧಿಸಿ ನೂತನ ಪದಾದಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಪತಿ ಲ. ಬಾಲಕೃಷ್ಣ ಹೆಗಡೆಯವರು ಉಪಸ್ಥಿತರಿದ್ದರು. ಲ.ಡಾಕ್ಟರ್ ಯೋಗೀಶ್ ರವರು…

Read More
error: Content is protected !!