EV ಆಟೋ ಪರ್ಮಿಟ್ ಗೊಂದಲ: ನಿಯಮ ಸಡಿಲಿಕೆಗೆ ಆಟೋ ಚಾಲಕರ ಆಗ್ರಹ
ಮಂಗಳೂರು: EV ಆಟೋಗಳ ಪರ್ಮಿಟ್ ಹಾಗೂ ವಿಂಗಡಣೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಟೀಮ್ ಗ್ರೀನ್ ಸಿಟಿ ದಕ್ಷಿಣ ಕನ್ನಡ ಜಿಲ್ಲಾ ಆಟೋ ಚಾಲಕ-ಮಾಲಕರ ಸಂಘದ ವತಿಯಿಂದ ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಮಾತನಾಡಿದ ಟೀಮ್ ಗ್ರೀನ್ ಸಿಟಿಯ ಮಾಜಿ ಅಧ್ಯಕ್ಷ ಪ್ರಜೇಶ್, ಅಕ್ಟೋಬರ್ 30ರೊಳಗೆ ಬಂದಿರುವ ಎಲ್ಲಾ EV ಆಟೋಗಳಿಗೆ ಮಂಗಳೂರು ನಗರದಲ್ಲಿ ಸಂಚರಿಸಲು ಪರ್ಮಿಟ್ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಗ್ರಾಮಾಂತರ ವಿಳಾಸ ಹೊಂದಿರುವ ಹಾಗೂ ಮಹಿಳೆಯರ ಹೆಸರಿನಲ್ಲಿರುವ ಹಲವು ವಾಹನಗಳ ಪರ್ಮಿಟ್‌ಗಳನ್ನು ಬಾಕಿ…
