ಸುವರ್ಣ ಕ್ಲಿನಿಕ್‌ನಲ್ಲಿ ಉಚಿತ ಆಟಿ ಕಷಾಯ ವಿತರಣೆ

ಮಂಗಳೂರು: ಆಟಿ ಅಮವಾಸ್ಯೆ ಪ್ರಯುಕ್ತ ಆ.೧೨ (ಬುಧವಾರ)ರಂದು ನಗರದ ಅಳಕೆ ಸ್ಯಾನ್‌ಪ್ಲೋ ಕಾಂಪ್ಲೆಕ್ಸ್‌ನಲ್ಲಿರುವ ಸುವರ್ಣ ಕ್ಲಿನಿಕ್, ಪ್ರಕೃತಿ ಆಯುರ್ವೇದ ಪಂಚಕರ್ಮ ಸೆಂಟರ್‌ನಲ್ಲಿ ಉಚಿತವಾಗಿ ಆಟಿ ಕಷಾಯ ವಿತರಿಸಲಾಯಿತು. ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದರು. ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಚಾಲನೆ ನೀಡಿ, ತುಳುವರ ವಿಶಿಷ್ಟ ಆಟಿ ಆಚರಣೆ ಮತ್ತು ಆಟಿ ಕಷಾಯದ ಮಹತ್ವವನ್ನು ತಿಳಿಸಿದರು. ಹಿರಿರ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಶುಂ ಕೋರಿದರು.ಸಂಸ್ಥೆಯ ಗುಲಾಬಿ ಸುವರ್ಣ, ಹರಿಪ್ರಸಾದ್ ಚಾಲಿಯಾನ್, ಯಶವಂತ ಅಮೀನ್,…

Read More

ಪ್ರವೀಣ್ ಕುಮಾರ್ ಕೋಡಿಯಾಲ್ ಬೈಲ್ ಅವರಿಗೆ ‘ನ್ಯಾಷನಲ್ ಐಕಾನ್ ಅವಾರ್ಡ್ ಫಾರ್ ಸೋಶಿಯಲ್ ಸರ್ವಿಸ್ 2026’ ಗೌರವ

ಮಂಗಳೂರು: ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ, ಸಮಾಜಮುಖಿ ಕಾರ್ಯಗಳು ಹಾಗೂ ಜನಪರ ಚಟುವಟಿಕೆಗಳನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರವೀಣ್ ಕುಮಾರ್ ಕೋಡಿಯಾಲ್ ಬೈಲ್ ಅವರು ಪ್ರತಿಷ್ಠಿತ ‘ನ್ಯಾಷನಲ್ ಐಕಾನ್ ಅವಾರ್ಡ್ ಫಾರ್ ಸೋಶಿಯಲ್ ಸರ್ವಿಸ್ 2026’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗ್ಲೋಬಲ್ ಅಚೀವರ್ಸ್ ಕೌನ್ಸಿಲ್ ವತಿಯಿಂದ ನೀಡಲಾಗುವ ಈ ರಾಷ್ಟ್ರೀಯ ಗೌರವದ ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 23ರಂದು ಮಧ್ಯಾಹ್ನ 2 ಗಂಟೆಗೆ ನವದೆಹಲಿಯ ಹೋಟೆಲ್ ಸಮ್ರಾಟ್‌ನಲ್ಲಿ ನಡೆಯಲಿದೆ. ಸಮಾಜದ…

Read More

ಸೇನೆಗೆ ಪಕ್ಷದ ಬಣ್ಣ ಬಳಿಯಬೇಡಿ, ಭಾರತೀಯ ಸೇನೆ 140 ಕೋಟಿ ಜನರ ಹೆಮ್ಮೆ: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್

ಮಂಗಳೂರು: ಭಾರತೀಯ ಸೇನೆ ದೇಶದ 140 ಕೋಟಿ ಜನರ ಭದ್ರತೆ ಮತ್ತು ಗೌರವವನ್ನು ಕಾಪಾಡುತ್ತಿರುವ ಅತ್ಯಂತ ಪವಿತ್ರ ಸಂಸ್ಥೆಯಾಗಿದ್ದು, ಸೇನೆಯನ್ನು ಯಾವುದೇ ಒಂದು ರಾಜಕೀಯ ಪಕ್ಷದ ಚಿಂತನೆ ಅಥವಾ ಕಾರ್ಯಕರ್ತರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಹೇಳಿದ್ದಾರೆ. ಮಂಗಳೂರಿನ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಭಾರತೀಯ ಸೇನೆಯ ಯೋಧರ ಚಿಂತನೆ ಹಾಗೂ ಬಿಜೆಪಿ ಕಾರ್ಯಕರ್ತರ ಚಿಂತನೆ “Nation…

Read More

ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪ್ಪಿಮೊಗರು ಮನೆಯಲ್ಲಿ ಕಳ್ಳತನ – ಮಹಾರಾಷ್ಟ್ರ ಮೂಲದ ಆರೋಪಿಯ ಬಂಧನ

ಮಂಗಳೂರು ಜೆಪ್ಪಿಮೊಗರು ಮನೆಯಲ್ಲಿ ಯಾರು ಇಲ್ಲದೆ ಅವಧಿಯಲ್ಲಿ ದಿನಾಂಕ 04-08-2026 ರಂದು ಯಾರೋ ಕಳ್ಳರು ಮನೆಯ ಬಾಗಿಲಿಗೆ ಅಳವಡಿಸಿದ್ದ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಮನೆಯೊಳಗೆ ನುಗ್ಗಿ ಮನೆಯ ಕಪಾಟಿನಲ್ಲಿರುವ 14 ಗ್ರಾಂ ಚಿನ್ನದ ಸರ, ತಲಾ 2 ಗ್ರಾಂ ತೂಕ ಇರುವ 2 ಉಂಗುರ ಹಾಗೂ 25.000/- ನಗದು ಹಣವನ್ನು ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 106/2026 ಕಲಂ 305(a),331(3) ಬಿ.ಎನ್.ಎಸ್ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿದಂತೆ…

Read More

ನಾಗರ ಪಂಚಮಿಗೆ ರಜೆ ನೀಡಿ: ಜಿಲ್ಲಾಧಿಕಾರಿಗೆ ಶಾಸಕ ವೇದವ್ಯಾಸ ಕಾಮತ್ ಮನವಿ

ಇದೇ ಆಗಸ್ಟ್ 17 ಸೋಮವಾರದಂದು ನಾಗರ ಪಂಚಮಿ ಹಬ್ಬವಿದ್ದು, ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಆದ್ದರಿಂದ ಹಿಂದೂ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಕೊಂಡು ಅಂದು ಸ್ಥಳೀಯ ರಜೆ ಘೋಷಣೆ ಮಾಡುವಂತೆ ಶಾಸಕ ವೇದವ್ಯಾಸ ಕಾಮತ್ ರವರು ದ.ಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ದೈವ ದೇವರುಗಳ ತುಳುನಾಡಿನಲ್ಲಿ ನಾಗರಾಧನೆಗೆ ಪ್ರಮುಖ ಸ್ಥಾನವಿದೆ. ಇಲ್ಲಿನ ಪ್ರತೀ ಕುಟುಂಬಕ್ಕೂ ನಾಗನ ಮೂಲಸ್ಥಾನವಿದ್ದು, ವರ್ಷಕ್ಕೊಮ್ಮೆ ಕುಟುಂಬ ಸಮೇತರಾಗಿ ಅಲ್ಲಿ ಹೋಗಿ ನಾಗನಿಗೆ ವಿಶೇಷ ಪೂಜೆ…

Read More

₹57 ಲಕ್ಷ ಖರ್ಚು… ಆದರೂ ಕುಡಿಯಲು ನೀರಿಲ್ಲ!

ಜಲ ಜೀವನ್ ಮಿಷನ್ ಕಾಮಗಾರಿ ಅಪೂರ್ಣ; ಚೇಲಾರು ಮಧ್ಯ ಗ್ರಾಮಸ್ಥರ ಆಕ್ರೋಶ ಮಂಗಳೂರು: ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಚೇಲಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಧ್ಯ ಗ್ರಾಮದಲ್ಲಿ ಇಂದಿಗೂ ಸಮರ್ಪಕ ಕುಡಿಯುವ ನೀರು ಸಿಗುತ್ತಿಲ್ಲ. ಕಾಮಗಾರಿ ಆರಂಭವಾಗಿ ಹಲವು ವರ್ಷ ಕಳೆದರೂ ಬಾವಿ, ಟ್ಯಾಂಕ್ ಹಾಗೂ ಪೈಪ್‌ಲೈನ್ ವ್ಯವಸ್ಥೆ ಪೂರ್ಣಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಮಧ್ಯ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಜಲ ಜೀವನ್ ಮಿಷನ್ ಯೋಜನೆಯಡಿ…

Read More

ರಾಜಕೀಯ ಒತ್ತಡದಿಂದ ಫ್ಲೆಕ್ಸ್ ತೆರವು ಆರೋಪ; ಎಸ್‌ಡಿಪಿಐ ಪ್ರತಿಭಟನೆ

ಮಂಗಳೂರು: ‘ಯಂಗ್ ಡೆಮಾಕ್ರಟಿಕ್’ ಸಂಘಟನೆಯ ಘೋಷಣೆಯ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ರಾಜಕೀಯ ಒತ್ತಡದಿಂದ ಪಾಲಿಕೆ ಹಾಗೂ ಪೊಲೀಸರು ಜಂಟಿಯಾಗಿ ತೆರವುಗೊಳಿಸಿದ್ದಾರೆ ಎಂದು ಮಂಗಳೂರು ನಗರ ಎಸ್‌ಡಿಪಿಐ ಅಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಆರೋಪಿಸಿದ್ದಾರೆ. ಫ್ಲೆಕ್ಸ್ ತೆರವು ಖಂಡಿಸಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅನ್ವರ್ ಸಾದಾತ್, ಯುವಕರು ಒಂದಾಗುತ್ತಿರುವುದನ್ನು ಕಂಡು ಕೆಲ ರಾಜಕೀಯ ನಾಯಕರು ಅಸಮಾಧಾನಗೊಂಡು ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ ಎಂದು…

Read More

ತಿರಂಗ ವಾಹನ ಜಾಥಕ್ಕೆ ಪೊಲೀಸ್ ಅನುಮತಿ: ಗೊಂದಲ ಬೇಡ ಸುದರ್ಶನ ಬಜ…

ಬಂಟ್ವಾಳ: ಅಗಸ್ಟ್ 13ರಂದು ನಡೆಯಲಿರುವ ತ್ರಿರಂಗ ವಾಹನ ಜಾಥಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ದೊರೆತಿದ್ದು, ಕಾರ್ಯಕ್ರಮವು ನಿಗದಿತ ನಿಯಮ ಹಾಗೂ ಕಾನೂನುಬದ್ಧವಾಗಿ ನಡೆಯಲಿದೆ ಎಂದು ಬಂಟ್ವಾಳ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ತಿಳಿಸಿದ್ದಾರೆ.ಅಗಸ್ಟ್ 13 ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಿಂದ ಆರಂಭಗೊಂಡು ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಸಮಾಪ್ತಿಗೊಳ್ಳಲಿದೆ. ಆರ್.ಎಸ್.ಎಸ್.ಪ್ರಮುಖರಾದ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರು ವಾಹನ ಜಾಥಕ್ಕೆ ಚಾಲನೆ ನೀಡಲಿದ್ದಾರೆ.ತ್ರಿರಂಗ ವಾಹನ ಜಾಥಕ್ಕೆ ಅನುಮತಿ ಕೋರಿ ಕಾರ್ಯಕ್ರಮದ…

Read More

ಅವಘಡ ತಪ್ಪಿಸಿ ಸಮಯಪ್ರಜ್ಞೆ ಮೆರೆದ ಶಾಲಾ ಬಾಲಕ

ಬಂಟ್ವಾಳ: ಬಿಸಿಯೂಟದ ಸಿಬ್ಬಂದಿಯೊಬ್ಬರ ಕೈ ವಿದ್ಯುತ್ ಚಾಲಿತ ತುರಿಮಣೆಯಲ್ಲಿ ಸಿಲುಕಿದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಮನ್ವಿತ್, ಸಂಭವಿಸಬಹುದಾಗಿದ್ದ ದೊಡ್ಡ ಅವಘಡವನ್ನು ತಪ್ಪಿಸಿ ಪ್ರಶಂಸೆಗೆ ಪಾತ್ರನಾಗಿದ್ದಾನೆ.ಶಾಲೆಯ ಅಕ್ಷರ ದಾಸೋಹದ ಸಿಬ್ಬಂದಿ ಎಂದಿನಂತೆ ಕೆಲಸದಲ್ಲಿ ನಿರತರಾಗಿದ್ದ ವೇಳೆ ವಿದ್ಯುತ್ ಚಾಲಿತ ತುರಿಮಣೆ ಬಳಿ ಆಕಸ್ಮಿಕವಾಗಿ ಅವರ ಕೈಬೆರಳು ಸಿಲುಕಿಕೊಂಡಿದೆ. ನೋವಿನಿಂದ ಅವರು ಕಿರುಚಿಕೊಂಡಾಗ, ಶಾಲಾ ಅಂಗಳದಲ್ಲಿ ಆಟವಾಡುತ್ತಿದ್ದ ಮನ್ವಿತ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾನೆ. ಪರಿಸ್ಥಿತಿಯನ್ನು ಅರಿತು ಕೂಡಲೇ ವಿದ್ಯುತ್…

Read More

ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ವಜ್ರತೇಜಸ್ ತಂಡದ ಆಸರೆ

ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಂಗ್ರಹವಾದ ಮೊತ್ತದಲ್ಲಿ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ವೀರಮಂಗಲ ನಿವಾಸಿ ಸತೀಶ್ ಕುಮಾರ್ ಅವರ ಮನೆಯವರು ಮನೆಯ ಆಧಾರಸ್ತಂಭ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದು, ಮನೆಯವರನ್ನು ವಜ್ರತೇಜಸ್ ತಂಡದಿಂದ ಮನೆಗೆ ಭೇಟಿ ನೀಡಿ ಸಹಾಯಧನ ನೀಡಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿಯಾದ ಶ್ರೀಧರ್ ತೆಂಕಿಲ, ವಿಶ್ವ ಹಿಂದೂ ಪರಿಷದ್ ಪುತ್ತೂರು ನಗರ…

Read More
error: Content is protected !!