ಮಂತ್ರಾಲಯದಿಂದ ವಾಪಸಾಗುತ್ತಿದ್ದ ಪುತ್ತೂರು ಮೂಲದ ಉದ್ಯಮಿಗೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಹೃದಯಾಘಾತ

ಪುತ್ತೂರು : ಮಂತ್ರಾಲಯಕ್ಕೆ ತೆರಳಿ ವಾಪಸ್ ಮಂಗಳೂರಿಗೆ ಬರುತ್ತಿದ್ದ ಪುತ್ತೂರು ಮೂಲದ ಉದ್ಯಮಿಯೊಬ್ಬರು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಪುತ್ತೂರಿನ ಬೆಳಿಯೂರುಕಟ್ಟೆ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿದ್ದ ಸಂದೀಪ್‌ ಶೆಟ್ಟಿ (44) ಎಂಬವರೆಂದು ಗುರುತಿಸಲಾಗಿದೆ. ಆಗಸ್ಟ್ 9ರಂದು ಮಂಗಳೂರಿನಿಂದ ಬಸ್ ಮೂಲಕ ಮಂತ್ರಾಲಯಕ್ಕೆ ತೆರಳಿದ್ದ ಸಂದೀಪ್ ಶೆಟ್ಟಿ, ಅಲ್ಲಿಂದ ವಾಪಸ್‌ ಆಗುವ ವೇಳೆ ಘಟನೆ ನಡೆದಿದೆ. ಆಗಸ್ಟ್ 10ರ ರಾತ್ರಿ ಬಸ್ ಬಳ್ಳಾರಿಯ ಎಪಿಎಂಸಿ ಬಸ್‌ ನಿಲ್ದಾಣದಲ್ಲಿ ತಂಗಿತ್ತು. ರಾತ್ರಿ ಸುಮಾರು…

Read More

ಅಕ್ರಮ–ಸಕ್ರಮ, 94C ಅರ್ಜಿಗಳ ತುರ್ತು ವಿಲೇವಾರಿ ಹಾಗೂ ಪೌತಿ ಖಾತೆ ಸಮಸ್ಯೆ ಪರಿಹಾರಕ್ಕೆ ತಹಶೀಲ್ದಾರ್‌ ಭೇಟಿ ಮಾಡಿದ ಪುತ್ತಿಲ ಪರಿವಾರ ನಿಯೋಗ

ಪುತ್ತೂರು ತಾಲೂಕಿನ ಸಾರ್ವಜನಿಕರು ಎದುರಿಸುತ್ತಿರುವ ಅಕ್ರಮ–ಸಕ್ರಮ ಹಾಗೂ 94C ಅರ್ಜಿಗಳ ವಿಲೇವಾರಿ ವಿಳಂಬ, ಜೊತೆಗೆ ಪೌತಿ ಖಾತೆ ಬದಲಾವಣೆಯಲ್ಲಿನ ಸಮಸ್ಯೆಗಳ ಕುರಿತು ಪುತ್ತೂರು ತಾಲೂಕಿನ ತಹಶೀಲ್ದಾರ್‌ರನ್ನು ಭೇಟಿ ಮಾಡಿ ಚರ್ಚಿಸಲಾಯಿತು. ಅಕ್ರಮ–ಸಕ್ರಮ ಯೋಜನೆಯಡಿ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿರುವ ಅರ್ಜಿದಾರರು ತಮ್ಮ ಅರ್ಜಿಗಳ ವಿಲೇವಾರಿಗಾಗಿ ಕಾಯುತ್ತಿರುವ ಪರಿಸ್ಥಿತಿ ಇದೆ. ಅದೇ ರೀತಿ, ಕರ್ನಾಟಕ ಭೂ ಕಂದಾಯ ಕಾಯ್ದೆಯ 94C ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳೂ ಹಲವು ಕಡೆಗಳಲ್ಲಿ ಬಾಕಿ ಉಳಿದಿದ್ದು, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಅಗತ್ಯ ದಾಖಲೆಗಳ…

Read More

ಫ್ಲೆಕ್ಸ್ ತೆರವು ಖಂಡಿಸಿ ಎಸ್‌ಡಿಪಿಐ ನಾಯಕರ ಪ್ರತಿಭಟನೆ; ಬಂಧನ

ಮಂಗಳೂರು:ನಗರದ ಟೌನ್‌ಹಾಲ್‌ನಲ್ಲಿ ನಡೆಯಲಿರುವ ಜಿಲ್ಲಾ ಯುವ ಅಸೆಂಬ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಳವಡಿಸಲಾಗಿದ್ದ ‘ಯಂಗ್ ಡೆಮಾಕ್ರಟಿಕ್’ ಕಾರ್ಯಕ್ರಮದ ಫ್ಲೆಕ್ಸ್ ತೆರವುಗೊಳಿಸಿದ ಕ್ರಮವನ್ನು ಖಂಡಿಸಿ ಎಸ್‌ಡಿಪಿಐ ಜಿಲ್ಲಾ ನಾಯಕರು ಪ್ರತಿಭಟನೆ ನಡೆಸಿದರು. ಮಂಗಳೂರು ಟೌನ್‌ಹಾಲ್‌ ಸಮೀಪ ಬ್ಯಾನರ್ ತೆರವುಗೊಳಿಸಿದ್ದನ್ನು ವಿರೋಧಿಸಿ ಎಸ್‌ಡಿಪಿಐ ನಾಯಕರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಪೊಲೀಸರ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು, ಫ್ಲೆಕ್ಸ್ ತೆರವುಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಬಳಿಕ ಎಸ್‌ಡಿಪಿಐ ನಾಯಕರನ್ನು ಬಿಡುಗಡೆ ಮಾಡಲಾಯಿತು. ಇದೇ ವೇಳೆ ಎಸ್‌ಡಿಪಿಐನ…

Read More

ವಿಟ್ಲದಲ್ಲಿ ಮೈತ್ರೇಯೀ ಆಯುರ್ವೇದ ಗುರುಕುಲ ಆರಂಭ; ಮಹಿಳೆಯರಿಗೆ ವಿಶೇಷ ಆಯುರ್ವೇದ ಶಿಕ್ಷಣ

ಮಂಗಳೂರು: ಪ್ರಾಚೀನ ಆಯುರ್ವೇದ ಗುರುಕುಲ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಮೂರುಕಜೆಯಲ್ಲಿ ಅಜೇಯ ಟ್ರಸ್ಟ್ ವತಿಯಿಂದ ಮೈತ್ರೇಯೀ ಆಯುರ್ವೇದ ಗುರುಕುಲ ಆರಂಭಿಸಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಸುಬ್ರಾಯ ಪೈ ತಿಳಿಸಿದ್ದಾರೆ. ನಗರದ ಓಷನ್ ಪರ್ಲ್ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜೇಯ ಟ್ರಸ್ಟ್ ವತಿಯಿಂದ ಕಳೆದ 32 ವರ್ಷಗಳಿಂದ ಮೂರುಕಜೆಯಲ್ಲಿ ಮೈತ್ರೇಯೀ ಗುರುಕುಲವನ್ನು ನಡೆಸಲಾಗುತ್ತಿದೆ. ಇಲ್ಲಿ ಬಾಲಕಿಯರಿಗೆ ಸಂಸ್ಕೃತ ಆಧಾರಿತ ಪಂಚಮುಖೀ ಶಿಕ್ಷಣದೊಂದಿಗೆ ಉಚಿತ ವಸತಿ ಮತ್ತು ಶಿಕ್ಷಣ ನೀಡಲಾಗುತ್ತಿದೆ. ವೇದ,…

Read More

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಸ್ಥಾಪನೆಗೆ ಆಗ್ರಹ

ಮಂಗಳೂರು: ಕರಾವಳಿ ಭಾಗದ ಜನರ ಪಾಸ್‌ಪೋರ್ಟ್ ಸೇವೆಯ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಸ್ಥಾಪಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1988ರಲ್ಲಿ ಮೊದಲ ಬಾರಿಗೆ ಪಾಸ್‌ಪೋರ್ಟ್ ಕಚೇರಿ ಆರಂಭಿಸಲಾಗಿತ್ತು. ಬಳಿಕ 2014ರಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳಕ್ಕೆ ಸ್ಥಳಾಂತರಿಸಲಾಯಿತು…

Read More

ಪ್ರತಿಷ್ಠಿತ ‘ಚೈತನ್ಯ ಶ್ರೀ’ ಪ್ರಶಸ್ತಿಗೆ ಡಾ. ವಾಮನ್ ರಾವ್ ಬೇಕಲ್–ಸಂಧ್ಯಾರಾಣಿ ದಂಪತಿ ಭಾಜನ!

ಮಂಗಳೂರು: ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ವತಿಯಿಂದ ಪಿ.ವಿ. ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವನ್ನು ಆಗಸ್ಟ್ 16ರಂದು ಮುಡಿಪಿನಲ್ಲಿ ಆಯೋಜಿಸಲಾಗಿದೆ. ಮುಡಿಪಿನ ಶ್ರೀ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕವಿಗೋಷ್ಠಿ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿಗಳಾದ ‘ಶಿಕ್ಷಕರತ್ನ’, ‘ಸಾಹಿತ್ಯರತ್ನ’ ಹಾಗೂ ‘ಚೈತನ್ಯ ಶ್ರೀ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಗಡಿನಾಡು ಕಾಸರಗೋಡಿನ ಕನ್ನಡ ಭವನದ…

Read More

80ನೇ ಸ್ವಾತಂತ್ರ್ಯೋತ್ಸವ: ತೊಕ್ಕೊಟ್ಟಿನಲ್ಲಿ ಬೃಹತ್ ತಿರಂಗಾ ಯಾತ್ರೆ

ಉಳ್ಳಾಲ: 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಂಗಳೂರು ವಿಧಾನಸಭಾ ಕ್ಷೇತ್ರದ ತಿರಂಗಾ ಯಾತ್ರೆ ಸಮಿತಿ ವತಿಯಿಂದ ತೊಕ್ಕೊಟ್ಟಿನಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು. ತೊಕ್ಕೊಟ್ಟು ಓವರ್‌ಬ್ರಿಡ್ಜ್‌ನಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ನಡೆದ ಯಾತ್ರೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ತಿರಂಗಾ ಧ್ವಜವು ತ್ಯಾಗ, ಶಾಂತಿ ಮತ್ತು ಪ್ರಗತಿಯ ಸಂಕೇತವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ. ಪೋರ್ಚುಗೀಸರ ವಿರುದ್ಧ ಹೋರಾಡಿದ ಉಳ್ಳಾಲದ ರಾಣಿ ಅಬ್ಬಕ್ಕಳ ಸಾಹಸವೂ ಸ್ಮರಣೀಯವಾಗಿದೆ…

Read More

ಮಂಗಳೂರಿನಲ್ಲಿ ಇಂದು ತಿರಂಗ ಯಾತ್ರೆ

ಮಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಭಕ್ತರ ವೇದಿಕೆ, ಮಂಗಳೂರು ನಗರ ದಕ್ಷಿಣ ವತಿಯಿಂದ ಇಂದು (ಆಗಸ್ಟ್ 12) ತಿರಂಗ ಯಾತ್ರೆ ಆಯೋಜಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಕುದ್ಮಲ್ ರಂಗರಾವ್ ಪುರಭವನ (ಟೌನ್ ಹಾಲ್) ಎದುರಿನ ರಾಜಾಜಿ ಪಾರ್ಕ್‌ನಿಂದ ತಿರಂಗ ಯಾತ್ರೆ ಆರಂಭವಾಗಲಿದ್ದು, ಕೊಡಿಯಾಲ್‌ಬೈಲ್‌ನಲ್ಲಿರುವ ಗೋವಿಂದ ಪೈ ವೃತ್ತದ ಬಳಿ ಸಮಾಪನಗೊಳ್ಳಲಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಕುಟುಂಬದ ಸದಸ್ಯರೊಂದಿಗೆ ತಿರಂಗ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಆಚರಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ದೇಶಪ್ರೇಮದ ಗುಣವನ್ನು ಬೆಳೆಸುವ ಮೂಲಕ…

Read More

ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಮಂಗಳೂರಿನಲ್ಲಿ 600ಕ್ಕೂ ಹೆಚ್ಚು ಅರ್ಜಿದಾರರ ಪರದಾಟ

ಮಂಗಳೂರು:ಭಾರತದಾದ್ಯಂತ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಸಾವಿರಾರು ಅರ್ಜಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಗಸ್ಟ್ 10ರಿಂದ ಸರ್ವ‌ರ್ ಸಮಸ್ಯೆ ಕಾಣಿಸಿಕೊಂಡಿದ್ದು, ಹೊಸ ಅಪಾಯಿಂಟ್‌ ಮೆಂಟ್ ಕಾಯ್ದಿರಿಸುವುದು, ಮರುನಿಗದಿ ಹಾಗೂ ಅರ್ಜಿಗಳ ಪ್ರಕ್ರಿಯೆ ವಿಳಂಬವಾಗಿದೆ. ಮಂಗಳೂರಿನ ನವಭಾರತ್ ಸರ್ಕಲ್‌ನ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲೂ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಚಿಕ್ಕಮಗಳೂರು, ಮಡಿಕೇರಿ, ಕುಶಾಲನಗರ, ತೀರ್ಥಹಳ್ಳಿ, ಶಿವಮೊಗ್ಗ ಸೇರಿದಂತೆ ದೂರದ ಊರುಗಳಿಂದ ಬಂದ 600ಕ್ಕೂ ಹೆಚ್ಚು ಅರ್ಜಿದಾರರು ಗಂಟೆಗಟ್ಟಲೆ ಕಾಯಬೇಕಾಯಿತು. ಕುಳಿತುಕೊಳ್ಳಲು ಆಸನ, ಕುಡಿಯುವ ನೀರು ಹಾಗೂ ಸೂಕ್ತ ಗಾಳಿ…

Read More

ಸಂಶೋಧನಾ ಪ್ರವೃತ್ತಿ ಪತ್ರಕರ್ತರ ವೃತ್ತಿಗೆ ಘನತೆ ತಂದಿದೆ -ಪ್ರೊ.ಪಿ.ಎಲ್.ಧರ್ಮ

ಸಂಶುದ್ಧೀನ್ ರಿಗೆ ಪ.ಗೋ ಪ್ರಶಸ್ತಿ ಪ್ರದಾನ ಮಂಗಳೂರು; ಜಿಲ್ಲೆಯ ಪತ್ರಕರ್ತರ ಸಂಶೋಧನಾ ಪ್ರವೃತ್ತಿ ಪತ್ರಕರ್ತರವೃತ್ತಿಗೆ ಘನತೆಯನ್ನು ತಂದು ಕೊಟ್ಟಿದೆ ಎಂದು ಮಂಗಳೂರು ಮಂಗಳ ಗಂಗೋತ್ರಿ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ತಿಳಿಸಿದ್ದಾರೆ. ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ದ.ಕ. ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನಾ ಟ್ರಸ್ಟ್ ವತಿಯಿಂದ ನೀಡಲಾಗುವ 2026ನೆ ಸಾಲಿನ ಪ.ಗೋ. ಪ್ರಶಸ್ತಿ ಪ್ರದಾನ ಸಮಾ ರಂಭವನ್ನುದ್ದೇಶಿಸಿ ಮಾತನಾಡುತ್ತಾ, ಪತ್ರಕರ್ತರ ಕೆಲವೊಂದು ವರದಿಗಳು,ಪುಸ್ತಕ ಗಳು ಯಾವುದೇ ಸಂಶೋಧನಾ ಬರಹಗಳಿಗೂ…

Read More
error: Content is protected !!