ದೌರ್ಜನ್ಯ ಪ್ರಕರಣ ಪರಿಹಾರ ತ್ವರಿತವಾಗಿ ವಿತರಿಸಲು ಜಿಲ್ಲಾಧಿಕಾರಿ ಸೂಚನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು ತ್ವರಿತವಾಗಿ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್. ವಿ ಸೂಚಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಹಾಗೂ ಎಸ್.ಸಿ.ಪಿ – ಟಿ.ಎಸ್.ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ದೌರ್ಜನ್ಯ ಪ್ರಕರಣಗಳ ಎಫ್.ಐ.ಆರ್ ದಾಖಲಾದ ನಂತರ ಪರಿಹಾರವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ಸಂತ್ರಸ್ತರು ಅಗತ್ಯ ದಾಖಲೆಗಳನ್ನು ಹೊಂದಿಸಲು ಸಮಾಜ ಕಲ್ಯಾಣ ಇಲಾಖೆಯು ಸಹಕಾರ ನೀಡಬೇಕು ಎಂದು…

Read More

ಮಂಗಳೂರು ವಿ.ವಿ. ವಾರ್ಷಿಕ ಘಟಿಕೋತ್ಸವ ಮಾ. 28ರಂದು

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವವು ಮಾರ್ಚ್ 28ರಂದು ಬೆಳಿಗ್ಗೆ 11 ಗಂಟೆಗೆ ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

Read More

ಸಜೀಪಮಾಗಣೆ ಪಡೇರ ಮಾಡ ಕ್ಷೇತ್ರದಲ್ಲಿ ನೇಮೋತ್ಸವ: ಸಂಪ್ರದಾಯಬದ್ಧ ರಜತಪಲ್ಲಕ್ಕಿ ಸೇವೆ

ಸಜೀಪಮಾಗಣೆ: ಪಡೇರ ಮಾಡ ಕ್ಷೇತ್ರದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ದೈವಗಳು ಹಾಗೂ ಶ್ರೀ ನಾಲ್ಕೈಥಾಯ ದೈವದ ನೇಮೋತ್ಸವದ ಅಂಗವಾಗಿ ಸಂಪ್ರದಾಯಬದ್ಧ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಪೂರ್ವಶಿಷ್ಟ ಸಂಪ್ರದಾಯದಂತೆ ಕಾಂತಡಿ ಗುತ್ತುವಿನಿಂದ ಸಂಕೇಶ ಬಂಡಾರದ ಮನೆಗೆ ಆಗಮಿಸಿದ ಶ್ರೀ ದೈವಗಳ ಕಿರುವಾಳು, ಆಭರಣಗಳು, ವಾದ್ಯ-ಬ್ಯಾಂಡು, ಕೊಂಬು ಸೇರಿದಂತೆ ಸಕಲ ಬಿರುದಾವಳಿಗಳೊಂದಿಗೆ ರಜತ ಪಲ್ಲಕ್ಕಿಯಲ್ಲಿ ಸುಮಾರು ಆರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ರಾತ್ರಿಯಿಡೀ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆ ಕಲ್ಲಾಡಿಗೋಳಿ, ದೇರಾಜೆ ಹಾಗೂ ಸಜೀಪ ಪೇಟೆಯ ಮೂಲಕ ಸಾಗುತ್ತಾ…

Read More

ಮಾಳದಲ್ಲಿ ಟಿಪ್ಪರ್–ಸ್ಕೂಟರ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ಉಡುಪಿ: ಟಿಪ್ಪರ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾ. 24ರಂದು ಬೆಳಿಗ್ಗೆ ಮಾಳ ಮುಳ್ಳೂರು ಪ್ರದೇಶದಲ್ಲಿ ನಡೆದಿದೆ. ನವೀನ್ ಬಜಗೋಳಿ (45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಅವರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಜೊತೆಗೆ ಹಾವು ಹಿಡಿಯುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಇಂದು ಬೆಳಿಗ್ಗೆ ಹಾವನ್ನು ಹಿಡಿದು ಕಾಡಿಗೆ ಬಿಡಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ನವೀನ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಕೂಟಿಯ…

Read More

ವಿಟ್ಲ ಬಳಿ ಬಸ್–ಟಿಪ್ಪರ್ ಮುಖಾಮುಖಿ ಡಿಕ್ಕಿ: ಕಂಡಕ್ಟರ್ ಮೇಲೆ ಹಲ್ಲೆ

ವಿಟ್ಲ: ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಟಿಪ್ಪರ್ ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಮುಚ್ಚಿರಪದವು ಪ್ರದೇಶದಲ್ಲಿ ನಡೆದಿದೆ.ಪಕಳಕುಂಜದಿಂದ ವಿಟ್ಲ ಕಡೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಪೆರುವಾಯಿ ಕಡೆ ಸಾಗುತ್ತಿದ್ದ ಟಿಪ್ಪರ್ ಲಾರಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಅಪಘಾತದ ನಂತರ ಬಸ್ ಚಾಲಕ ಮತ್ತು ಟಿಪ್ಪರ್ ಚಾಲಕನ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಟಿಪ್ಪರ್ ಚಾಲಕ ಬಿಲಾಲ್ ಎಂಬಾತ ಕರ್ತವ್ಯದಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್…

Read More

ವೇಣೂರು ಕಂಬಳದಲ್ಲಿ ನಿರೂಪಕರ ಮಾತಿಗೆ ಆಕ್ಷೇಪ: ಛಾಯಾಗ್ರಾಹಕರಿಂದ ಮನವಿ

ಬಂಟ್ವಾಳ: ವೇಣೂರು ಕಂಬಳ ಕಾರ್ಯಕ್ರಮದಲ್ಲಿ ನಿರೂಪಕರೊಬ್ಬರು ಛಾಯಾಗ್ರಾಹಕರ ವೃತ್ತಿಯ ಕುರಿತು ಆಕ್ಷೇಪಾರ್ಹ ಪದ ಬಳಕೆ ಮಾಡಿದ ಹಿನ್ನೆಲೆ ಉಭಯ ಜಿಲ್ಲೆಯ ಛಾಯಾಗ್ರಾಹಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. South Canara Photographers Association ಅಧ್ಯಕ್ಷ ನವೀನ್ ರೈ ಪಂಜಳ ಅವರ ನೇತೃತ್ವದಲ್ಲಿ ಛಾಯಾಗ್ರಾಹಕರ ಪ್ರತಿನಿಧಿಗಳು ಕಂಬಳ ಸಮಿತಿ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ವೇಣೂರು ಕಂಬಳದಲ್ಲಿ ನಿರೂಪಕರಾಗಿದ್ದ ರಾಜೀವ್ ಶೆಟ್ಟಿ ಅವರು ಛಾಯಾಗ್ರಾಹಕರ ವೃತ್ತಿಯ ಬಗ್ಗೆ ಅವಮಾನಕಾರಿ ಹಾಗೂ ಅಗೌರವಪೂರ್ಣ ಮಾತುಗಳನ್ನು ಆಡಿದ್ದಾರೆ…

Read More

ಮಂಗಳೂರು ನಗರದಲ್ಲಿ ಸಿಟಿ ಬಸ್ ಸಮಸ್ಯೆ: ಅಧಿವೇಶನದಲ್ಲಿ ಶಾಸಕ ವೇದವ್ಯಾಸ ಕಾಮತ್ ಒತ್ತಾಯ

ಮಂಗಳೂರು: ನಗರ ವ್ಯಾಪ್ತಿಯಲ್ಲಿ ಅನೇಕ ಸಿಟಿ ಬಸ್‌ಗಳು ನಿಗದಿತ ಮಾರ್ಗಗಳಿಗೆ ಸಂಚರಿಸದಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದರು. ನಗರದ ಕೆಲವು ಖಾಸಗಿ ಸಿಟಿ ಬಸ್‌ಗಳು ಆರ್ಥಿಕ ಕಾರಣಗಳನ್ನು ಉಲ್ಲೇಖಿಸಿ ಕೆಲ ಪ್ರದೇಶಗಳಿಗೆ ಸೇವೆಯನ್ನು ಕಡಿತಗೊಳಿಸಿರುವುದು, ಟ್ರಿಪ್‌ಗಳನ್ನು ರದ್ದುಪಡಿಸಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಬಸ್‌ಗಳನ್ನು ನಿಯೋಜಿಸಲಾಗಿದ್ದರೂ, ಅವುಗಳ ಸೇವೆಯೂ ನಂತರ ಸ್ಥಗಿತಗೊಂಡಿದೆ ಎಂದು ಅವರು ಆರೋಪಿಸಿದರು. ಈ ಪರಿಣಾಮವಾಗಿ ಶಕ್ತಿನಗರ, ಬಜಾಲ್-ಪಡ್ಪು-ಕೊಟ್ಟಾರ, ಪಡೀಲ್-ಕಣ್ಣಗುಡ್ಡೆ,…

Read More

ದ.ಕ.ಜಿಲ್ಲಾ ರೆಡ್‌ಕ್ರಾಸ್ ಚೇರ್ಮನ್ ಆಗಿ ಸಿಎ ಶಾಂತಾರಾಮ ಶೆಟ್ಟಿ ಪುನರಾಯ್ಕೆ

ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ೨೦೨೬-೨೯ನೇ ಸಾಲಿನ ಚೇರ್ಮನ್ ಆಗಿ ಸಿಎ ಶಾಂತಾರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ವೈಸ್ ಚೇರ್ಮನ್ ಆಗಿ ಡಾ. ಬಿ.ಸಚ್ಚಿದಾನಂದ ರೈ, ಖಜಾಂಜಿಯಾಗಿ ಗುರುದತ್ ನಾಯಕ್ ಆಯ್ಕೆಯಾಗಿದ್ದಾರೆ.ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದರ್ಶನ್.ಎಚ್.ವಿ. ಅವರು ಆಡಳಿತ ಮಂಡಳಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು. ನೂತನವಾಗಿ ಚುನಾಯಿತರಾದ ಸಿಎ ಶಾಂತಾರಾಮ ಶೆಟ್ಟಿ, ಡಾ. ಬಿ.ಸಚ್ಚಿದಾನಂದ ರೈ, ಗುರುದತ್ ನಾಯಕ್, ಡಾ.ಸತೀಶ್ ರಾವ್, ಯತೀಶ್…

Read More

ಕದ್ರಿ ಮೈದಾನದಲ್ಲಿ ಮಾ.26ರಿಂದ 29ರ ತನಕ ರಜತ ಮಹೋತ್ಸವ ಶ್ರೀ ರಾಮೋತ್ಸವ … !

ವಿಶ್ವ ಹಿಂದು ಪರಿಷತ್‌ ಮತ್ತು ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಮಾ.26ರಿಂದ 29ರ ತನಕ ನಗರದ ಕದ್ರಿ ಮೈದಾನದಲ್ಲಿ 25ನೇ ವರ್ಷದ ಶ್ರೀ ರಾಮೋತ್ಸವ ಸಂಭ್ರಮವು ವೈದಿಕ ,ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಕೊನೆಯ ದಿನ ರಾವಣನ ದಹನದ ಮೂಲಕ ಕಾರ್ಯಕ್ರಮ ಸಮಾಪ್ತಿಯಾಗಲಿದೆ ಎಂದು ಶ್ರೀರಾಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ ಎಂ.ಬಿ. ಪುರಾಣಿಕ್ ತಿಳಿಸಿದರು . ಅವರು ಕದ್ರಿಯ ವಿಶ್ವಶ್ರೀ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಶ್ರೀ ರಾಮನ ಜನ್ಮ…

Read More

ಮಾ. 26 ರಂದು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ 14 ಮಹಿಳಾ ಸಾಧಕಿಯರಿಗೆ ಸನ್ಮಾನ ….!

ಮಂಗಳೂರು: ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 26ರಂದು ನಗರದ ಬಿಜೈನ ಮೆಸ್ಕಾಂ ಕಚೇರಿ ಬಳಿಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭಾಂಗಣದಲ್ಲಿ ‘ವಿಶೇಷ ಮಹಿಳಾ ದಿನಾಚರಣೆ’ ಮತ್ತು ಸಾಧಕಿಯರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ, ಹಿರಿಯ ಪತ್ರಕರ್ತರಾದ ಭಾಸ್ಕರ್ ರೈ ಕಟ್ಟಾ ತಿಳಿಸಿದರು . ಅವರು…

Read More
error: Content is protected !!