ಗಾಂಜಾ ಮಾರಾಟ ಪ್ರಕರಣ: 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
ಗಾಂಜಾ ಮಾರಾಟ ಪ್ರಕರಣದಲ್ಲಿ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಪೊಲೀಸ್ ಠಾಣಾ ಅ.ಕ್ರ 328/2016, ಕಲಂ :8(c) ಜೊತೆಗೆ 20(b) NDPS Act ಪ್ರಕರಣ ಹಾಗೂ LPC NO : 11/2024 ರಲ್ಲಿ ಸುಮಾರು 10 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಉತ್ತರ ಪ್ರದೇಶದ ನಸೀಮ್ ಎಂಬಾತನನ್ನು ಸುಳ್ಯ ಠಾಣಾ ಸಿಬ್ಬಂದಿಗಳಾದ Hc 359-ರಮೇಶ್ ಎಲ್, Hc 368-ರಾಜು…
