“ಮನೆರೇಗಾ ಬಚಾವೋ ಸಂಗ್ರಾಮ್” ಪಾದಯಾತ್ರೆಗೆ ಚಾಲನೆ.ಕೇಂದ್ರ ನೀತಿಗೆ ವಿರೋಧವಾಗಿ ಕಾಂಗ್ರೆಸ್ 26 ಕಿಮೀ ಪಾದಯಾತ್ರೆ

ಮಂಗಳೂರು: ಜಿಲ್ಲಾ ಕಾಂಗ್ರೆಸ್ ವತಿಯಿಂದ “ಮನೆರೇಗಾ ಬಚಾವೋ ಸಂಗ್ರಾಮ್” ಅಭಿಯಾನದ ಅಂಗವಾಗಿ ಪಾದಯಾತ್ರೆಗೆ ಮಹಾನಗರಪಾಲಿಕೆ ಎದುರುಗಡೆಯಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಯಿಂದ ಚಾಲನೆ ನೀಡಲಾಯಿತು. ಪಾದಯಾತ್ರೆ ಮುಲ್ಕಿ ಕಡೆಗೆ ಹೊರಟಿತು.ಕಾಂಗ್ರೆಸ್ ಮುಖಂಡ ವಿನಯ ಕುಮಾರ್ ಸೊರಕೆ ಗಾಂಧೀಜಿ ಪ್ರತಿಮೆಗೆ ಹಾರ ಅರ್ಪಿಸುವ ಮೂಲಕ ಪಾದಯಾತ್ರೆಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರದ ಮೋದಿ ಸರ್ಕಾರ ಜಾರಿಗೆ ತಂದಿರುವ ವಿ.ಬಿ. ರಾಮ್ ಜಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. “ಗಾಂಧೀಜಿ ಪೂಜಿಸುತ್ತಿದ್ದ ರಾಮನಲ್ಲ, ಅದು ನಾಥೂರಾಮ್ ಗೋಡ್ಸೆಯ ರಾಮ….

Read More

ಹಿಂಸೆಯನ್ನು ಪ್ರಚೋಧಿಸುವ ಜಾಹಿರಾತಿನಿಂದಾಗಿ : ಗಾಂಧೀಜಿ ಗೆ ಅಪಮಾನ.ವಿಬಿ ರಾಮ್ ಜಿ ವಿರುದ್ಧ ದ ಪಾದಾಯಾತ್ರೆ ಉದ್ಘಾಟಿಸಿದ ರಮಾನಾಥ ರೈ ಆರೋಪ

ಹಿಂದೆ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ವಿರೂಪಗೊಳಿಸಿ ದೇಶದ ಜನರಿಗೆ ಅನ್ಯಾಯಮಾಡಿರುವುದಲ್ಲದೆ ಇದನ್ನು ವಿರೋಸಿರುವ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಗಾಂಧೀಜಿಯವರು ಕೋಲಿನಿಂದ ಹೊಡೆಯುವ ಜಾಹಿರಾತು ನೀಡಿ ಅಹಿಂಸೆಯನ್ನು ಭೋಧಿಸಿರುವ ಗಾಂಧೀಜಿಯವರು ಹಿಂಸೆಯನ್ನು ಪ್ರಚೋಸುವಂತೆ ಅಪಮಾನ ಮಾಡಿದ್ದಾರೆ ಎಂದು ಮಾಜಿ ಸಚಿವ ಹಿರಿಯ ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಆರೋಪಿಸಿದರು. ಅವರು ಶನಿವಾರ ಮರ್ಧಾಳದಲ್ಲಿ ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯನ್ನು ವಿಬಿ ರಾಮ್ ಜಿ ಎಂದು ಮರುನಾಮಕರಣ…

Read More

ಕಾರ್ಮಿಕ ಸಂಹಿತೆಗಳ ವಿರುದ್ದ ಅಖಿಲ ಭಾರತ ಮಹಾಮುಷ್ಕರ – ಮಂಗಳೂರಿನಲ್ಲಿ ರಸ್ತೆತಡೆ ಹಾಗೂ ಪ್ರತಿಭಟನಾ ಪ್ರದರ್ಶನ

ಕಾರ್ಮಿಕ ವರ್ಗದ 29 ಪ್ರಮುಖ ಕಾನೂನುಗಳನ್ನು ರದ್ದುಗೊಳಿಸಿ, ಕಾರ್ಪೊರೇಟ್ ಪರ 4 ಸಂಹಿತೆಗಳನ್ನು ಜಾರಿಗೊಳಿಸಿದ ಕೇಂದ್ರ ಸರಕಾರದ ವಿರುದ್ಧ ಇಂದು (ಫೆಬ್ರವರಿ – 12) ರೈತ ಕಾರ್ಮಿಕರ ನೇತ್ರತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ ಅತ್ಯಂತ ಯಶಸ್ವಿಯಾಗಿ ಜರುಗಿದ್ದು,ಅದರ ಭಾಗವಾಗಿ ಮಂಗಳೂರಿನ ಹೃದಯಭಾಗದ ಕ್ಲಾಕ್ ಟವರ್ ಬಳಿಯಲ್ಲಿ ವಿವಿಧ ವಿಭಾಗದ ಕಾರ್ಮಿಕರು ನೌಕರರು ಜತೆಯಾಗಿ ಸೇರಿ ರಸ್ತೆತಡೆ ನಡೆಸಿ ಬಳಿಕ ಪ್ರತಿಭಟನಾ ಸಭೆಯನ್ನು ನಡೆಸಿದರು.500ಕ್ಕೂ ಮಿಕ್ಕಿದ ಪ್ರತಿಭಟನಾಕಾರರು, ಕಾರ್ಪೊರೇಟ್ ಹಿತಾಸಕ್ತಿಗಳನ್ನು ತನ್ನ ಮೂಲಮಂತ್ರವನ್ನಾಗಿಸಿದ ಕೇಂದ್ರ ಸರಕಾರದ ವಿರುದ್ದ ಆಕ್ರೋಶಭರಿತರಾಗಿ…

Read More

ಕೇರಳ ರಾಜ್ಯದಲ್ಲಿ ವ್ಯವಸ್ಥಿತವಾಗಿ ಲವ್ ಜಿಹಾದ್ ನಡೆಯುತ್ತಿದೆ ಇದಕ್ಕೆ ಅಲ್ಲಿನ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದೆ : ಹಿಂದೂ ಜಾಗರಣಾ ವೇದಿಕೆ‌ ಮುಖಂಡ ನರಸಿಂಹ ಮಾಣಿ

ಮಂಗಳೂರು:ಕೇರಳ ರಾಜ್ಯದಲ್ಲಿ ವ್ಯವಸ್ಥಿತವಾಗಿ ಲವ್ ಜಿಹಾದ್ ನಡೆಯುತ್ತಿದೆ. ಇದಕ್ಕೆ ಅಲ್ಲಿನ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಹಿಂದೂ ಜಾಗರಣಾ ವೇದಿಕೆ‌ ಮುಖಂಡ ನರಸಿಂಹ ಮಾಣಿ ಕಿಡಿಕಾರಿದರು .ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾಸರಗೋಡಿನ ಯುವತಿ ವೈಶಾಲಿ ಅನ್ಯ ಮತದ ಯುವಕನೊಂದಿಗೆ ವಯನಾಡಿನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿರುವ ಮಾಹಿತಿ ಆಕೆಯ ತಂದೆಗೆ ತಿಳಿದ ಕೂಡಲೇ ಅವರು ಆಕೆ ವಾಸ್ತವ್ಯವನ್ನು ಹೂಡುತ್ತಿದ್ದ ಪಿಜೆ ಭೇಟಿನೀಡುತ್ತಾರೆ .ಅಲ್ಲಿ ಫೆ.9ರಂದು ಪಿಜಿ…

Read More

ಕಡಬದಲ್ಲಿ ಅಕ್ರಮ ಕೋಳಿ ಅಂಕ: ಪ್ರಕರಣ ದಾಖಲು

ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಗಾನದ ಕೊಟ್ಯದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವ ಕುರಿತು ಬಂದ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ ಘಟನೆ ಮಂಗಳವಾರ ನಡೆದಿದೆ. ದಾಳಿಯ ವೇಳೆ ಕೆಲವರು ಕೋಳಿಗಳ ಕಾಲಿಗೆ ಬಾಳ್ ಕತ್ತಿ ಕಟ್ಟಿ ಹಣವನ್ನು ಪಣಕ್ಕಿಟ್ಟು ಜೂಜಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆಗಮಿಸುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಉಮೇಶಗೌಡ (ಬಂಟ್ರ ಗ್ರಾಮ) ಹಾಗೂ ವಿನಯ ಸಿ (ಐತ್ತೂರು ಗ್ರಾಮ) ಸೇರಿದಂತೆ…

Read More

ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ – ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ ಹಾಗೂ ಪ್ರತಿಭಟನಾ ಸಭೆ

ಮಂಗಳೂರು: 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ 4 ಕಾರ್ಮಿಕ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ವಿರುದ್ಧ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತಂದ ತಿದ್ದುಪಡಿ ವಿರೋಧಿಸಿ ರೈತ ಕಾರ್ಮಿಕರ ನೇತೃತ್ವದಲ್ಲಿ ನಾಳೆ(ಫೆಬ್ರವರಿ 12) ಅಖಿಲ ಭಾರತ ಮಹಾಮುಷ್ಕರ ನಡೆಯಲಿದ್ದು,ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ,ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಗಳನ್ನು ನಡೆಸುವ ಮೂಲಕ ರೈತ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಲಿದ್ದಾರೆ…

Read More

ಪ್ರೊ. ಬಿ.ಎ. ವಿವೇಕ ರೈ ಇವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ … !

ಮಂಗಳೂರು: ಆಕೃತಿ ಆಶಯ ಪಬ್ಲಿಕೇಶನ್ಸ್ ಇದರ ವತಿಯಿಂದ ಪ್ರೊ. ಬಿ.ಎ. ವಿವೇಕ ರೈ ಇವರ ಕೃತಿ ಬಿಡುಗಡೆ ಸರಣಿ -1 ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆಯು ನಗರದ ಪತ್ರಿಕಾಭವನದಲ್ಲಿ ಇಂದು ನಡೆಯಿತು . ಕೃತಿ ಲೋಕಾರ್ಪಣೆಯ ನಂತರ ಪ್ರೊ. ಬಿ.ಎ. ವಿವೇಕ ರೈ ಪ್ರಾಸ್ತಾವಿಕ ನುಡಿಯನ್ನು ಆಡಿ, ಪತ್ರಿಕಾಭವನದಲ್ಲಿ ಈ ವರ್ಷದ ನನ್ನ ಮೊದಲ ಕೃತಿ ಬಿಡುಗಡೆ ಮಾಡುತ್ತಿರುವುದು ಖುಷಿ ತಂದಿದೆ . ಇದು ನನ್ನ ಅಸೆ ಕೂಡ ಆಗಿತ್ತು . ಈ ಕೃತಿಯಲ್ಲಿ…

Read More

ಜಾಲ್ಸೂರು ಭಾಗದ ರೈತರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ: ನೂತನ 33/11 ಕೆವಿ ಉಪಕೇಂದ್ರ ಮಂಜೂರಾತಿಗೆ ಶಾಸಕ ಕಿಶೋರ್ ಕುಮಾರ್ ಒತ್ತಾಯ

ಬೆಂಗಳೂರು: ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ, ನೂತನ 33/11 ಕೆವಿ (33/11 KV) ವಿದ್ಯುತ್ ಉಪಕೇಂದ್ರವನ್ನು ತುರ್ತಾಗಿ ಮಂಜೂರು ಮಾಡುವಂತೆ ಕೋರಿ ಪುತ್ತೂರು ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಗೌರವ್ ಗುಪ್ತ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬೆಂಗಳೂರಿನ ವಿಕಾಸ ಸೌಧದಲ್ಲಿ ಶ್ರೀ ಗೌರವ್ ಗುಪ್ತ ಅವರನ್ನು ಭೇಟಿಯಾದ…

Read More

ಅಬ್ಬಕ್ಕ @ 500 ರಾಷ್ಟ್ರೀಯ ವಿಚಾರ ಸಂಕೀರ್ಣಕ್ಕೆ 100ರ ಸಂಭ್ರಮ

ಮಂಗಳೂರು: ಭಾರತ ಉತ್ಕೃಷ್ಟ ಕ್ಷಾತ್ರ ಪರಂಪರೆಯನ್ನು ಹೊಂದಿರುವ ಮಹಾನ್ ರಾಷ್ಟ್ರ. ಪುರುಷರು ಮಹಿಳೆಯರಾದಿಯಾಗಿ ಅನೇಕರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ನೀಡಿದ್ದಾರೆ. ಅದೆಷ್ಟೋ ವೀರಗಾಥೆ ಇತಿಹಾಸದ ಪುಟಗಳಲ್ಲಿ ಅಳಿದು ಹೋಗಿದೆ. ಇನ್ನೊಂದಷ್ಟು ವಿಚಾರಗಳು ಬಲವಂತಕ್ಕೆ ಮಣಿದು ತೆರೆಮರೆಗೆ ಸರಿಸಲ್ಪಟ್ಟಿವೆ. ಅಂತಹ ಪರಂಪರೆಯಲ್ಲಿ ಕ್ಷಾತ್ರ ತೇಜದಲ್ಲಿ ಹೊಳೆಯಬೇಕಾಗಿದ್ದ ಮಹಿಳೆಯರದ್ದೂ ಸೇರಿಕೊಂಡಿದೆ ಅನ್ನುವುದು ದುರಂತ. ಹೆಣ್ಣನ್ನು ಅಬಲೆ, ಶೋಷಿತೆ ಎಂದು ನಮ್ಮ ಇತಿಹಾಸ ಪುಸ್ತಕಗಳು ಬಿಂಬಿಸಿದ್ದೇ ಹೆಚ್ಚು. ಆದರೆ ನಿಜವಾದ ಭಾರತದ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಅಪ್ರತಿಮ ಧೈರ್ಯ,…

Read More

ಪಲ್ಗುಣಿ ನದಿ ಮಾಲಿನ್ಯ ತೀವ್ರ – ಕೈಗಾರಿಕೆಗಳ ವಿರುದ್ಧ ಆಕ್ರೋಶ

ಮಂಗಳೂರು:ಕೂಳೂರು ಬಳಿಯ ರಾಯಿಕಟ್ಟೆ ಪ್ರದೇಶದಲ್ಲಿ ಹರಿಯುವ ಪಲ್ಗುಣಿ ನದಿಗೆ ಸೇರುವ ಹಳ್ಳದಲ್ಲಿ ನೀರು ಕೊಳೆತು ನಾರುತ್ತಿದೆ. ಮೀನುಗಳು ಸತ್ತಿವೆ.ಕಳೆದ ಒಂದು ವಾರದಿಂದ ಈ ಸ್ಥಿತಿ ಇದ್ದರೂ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಈ ಭಾಗದ ಕೈಗಾರಿಕೆಗಳು ಹಲವು ವರ್ಷಗಳಿಂದ ತಮ್ಮ ಕೈಗಾರಿಕಾ ಮಾಲಿನ್ಯವನ್ನು ಆನಧಿಕೃತವಾಗಿ ಪಲ್ಗುಣಿಯನ್ನು ಸೇರುವ ಹಲವು ಹಳ್ಳಗಳಿಗೆ ನೇರವಾಗಿ ಹರಿಸುತ್ತಿವೆ. ಈ ಕುರಿತು ಪ್ರತಿಭಟನೆಗಳನ್ಜು ನಡೆಸಿದರೂ ಸೂಕ್ತವಾದ ಕ್ರಮಗಳು ಜರುಗುತ್ತಿಲ್ಲ. ಈಗ ಪರಿಸ್ಥಿತಿ ಅತಿರೇಕಕ್ಕೆ ತಲುಪಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

Read More
error: Content is protected !!