ಮಂಗಳೂರು-ಬೆಂಗಳೂರು ಪ್ರಯಾಣಿಕರಿಗೆ ಆತಂಕ – ಜನಪ್ರಿಯ ರೈಲು ಸಮಯ ಬದಲಾವಣೆಯ ಚರ್ಚೆ

ಮಂಗಳೂರು : ಅದ್ಯಾಕೋ ಏನೋ ರೈಲ್ವೇಗೆ ಮಂಗಳೂರಿಗರೆಂದರೆ ಭಾರಿ ಸದರ, ಏನು ಮಾಡಿದರೂ ಮಾತನಾಡುವುದಿಲ್ಲ ಎಂಬ ನಂಬಿಕೆ. ಆದ್ದರಿಂದ ಅದು ಇರುವ ಸೌಲಭ್ಯಗಳನ್ನು ಮೊಟಕು ಮಾಡಲು ಹೊರಟಿದೆ. ಆ ಕುರಿತ ಒಂದು ಸ್ಟೋರಿ ಇದು.ಮಂಗಳೂರು ರೈಲು ನಿಲ್ದಾಣ ಅತ್ಯಂತ ಹಳೆಯ ನಿಲ್ದಾಣಗಳಲ್ಲಿ ಒಂದು. ಮಂಗಳೂರಿನ ಹಂಚು ಸಾಗಾಟಕ್ಕಾಗಿ ಇಲ್ಲಿಗೆ ರೈಲು ಮಾರ್ಗ ಬಂತು. ಹಂಚಿನ ಕಾಲ ಮುಗಿಯಿತು. ರೈಲು ಪ್ರಯಾಣ ಮರುರೂಪಿಸಲ್ಪಟ್ಟ ಕಾಲಘಟ್ಟ ಇದು.ಆದರೆ ಮಂಗಳೂರಿನ ಮಟ್ಟಿಗೆ ನೆಮ್ಮದಿಯ ರೈಲು ಪ್ರಯಾಣ ಎಂದರೆ ಅದೊಂದು ಕನಸು ಎಂಬಂತಾಗುತ್ತಿದೆ….

Read More

ಅಪ್ರಾಪ್ತೆಯ ಅಪಹರಣ ಸುಳ್ಳು: ಕಟ್ಟುಕಥೆ ಹೇಳಿ ಸಿಕ್ಕಿಬಿದ್ದ ವಿದ್ಯಾರ್ಥಿನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಿನ್ನೆ ನಡೆದಿದೆ ಎನ್ನಲಾದ ಶಾಲಾ ಬಾಲಕಿಯ ಅಪಹರಣ ಸುಳ್ಳು ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.ಈ ಕುರಿತು ಮಂಗಳವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ, ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿನಿಯ ಅಪಹರಣ, ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ CCTV ದೃಶ್ಯಗಳನ್ನು ಪರಿಶೀಲಿಸಿದ ಬಳಿಕ, ದೂರಿನಲ್ಲಿ ಉಲ್ಲೇಖಿಸಿದಂತೆ ಯಾವುದೇ ವಾಹನ ಕಂಡುಬಂದಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮವಾಗಿ ಇದು ಸ್ವಯಂ ಉಂಟುಮಾಡಿಕೊಂಡ ಗಾಯ (Self inflicted wound) ಎಂದು ತಿಳಿಸಲಾಗಿದೆ….

Read More

ಉಡುಪಿಯಲ್ಲಿ ಆರೋಗ್ಯ ಹಕ್ಕಿನ‌ ಜಾಥಾ- ಮಣಿಪಾಲದ ಟೈಗರ್ ಸರ್ಕಲ್‌ನಿಂದ ಡಿ.ಸಿ. ಕಚೇರಿಯವರೆಗೆ ಪಾದಯಾತ್ರೆ

ಉಡುಪಿ: ಉಡುಪಿಯ ಹಲವಾರು ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಹಕ್ಕಿನ‌ಜಾಥಾ ನಡೆಯಿತು. ಫೆಬ್ರವರಿ 2 ರಿಂದ 17 ರವರೆಗೆ ಕರ್ನಾಟಕದಾದ್ಯಂತ ಎಲ್ಲಾ 31 ಜಿಲ್ಲೆಗಳಲ್ಲಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಮಣಿಪಾಲದ ಟೈಗರ್ ಸರ್ಕಲ್‌ನಿಂದ ಡಿ.ಸಿ. ಕಚೇರಿಯವರೆಗೆ ಪಾದಯಾತ್ರೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ನೀಡಲಾಯಿತು. ಎಡಿಸಿ ಅಬೀದ್ ಗದ್ಯಾಳ ಮನವಿ ಸ್ವೀಕರಿಸಿದರು.ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಔಷಧಿಗಳು ಲಭ್ಯವಿರಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿತ್ತು. ಉಳಿದಂತೆ ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯಿದೆಯನ್ನು ಜಾರಿಗೆ ತರಬೇಕು.ಕರ್ನಾಟಕದ…

Read More

ಸೈಂಟ್ ಮೇರಿಸ್ ಶಾಲೆಯಲ್ಲಿ ಸಾಹಿತ್ಯ ಸಂಭ್ರಮ – ವಿದ್ಯಾರ್ಥಿಗಳ ಕವನ ವಾಚನ, ರಸಪ್ರಶ್ನೆ

ಮಂಗಳೂರು: ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏಕದಿನ ಸಾಹಿತ್ಯ ಅಭಿಯಾನ ಕನ್ನಡದ ನಡಿಗೆ ಶಾಲೆಯ ಕಡೆಗೆ, ದಿನಾಂಕ 10.02.2026 ರಂದು ಮಂಗಳವಾರ ಮಧ್ಯಾಹ್ನ 2.00 ರಿಂದ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಪಳ್ನೀರು ಮಂಗಳೂರು ಇಲ್ಲಿನ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮುಖೇನ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕರು, ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೇಖಾ ಸುದೇಶ್ ರಾವ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಂತಿಯ ಡಿಸೋಜಾ ದೀಪ ಬೆಳಗಿಸಿ ಉದ್ಘಾಟನೆಗೈದರು….

Read More

ಫೆಬ್ರವರಿ 12 ಮಹಾ ಮುಷ್ಕರ ಬೆಂಬಲಿಸಿ ಬಂದರು ಹಮಾಲಿ ಕಾರ್ಮಿಕರ ಸಭೆ

ಮಂಗಳೂರು:ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆ ರದ್ದೂಗೊಳಿಸಲು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಫೆಬ್ರವರಿ 12 ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಕಾರ್ಮಿಕರ ಮುಷ್ಕರವನ್ನು ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಬೆಂಬಲಿಸಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಇಂದು ಹಳೆ ಬಂದರಿನ ಕಾರ್ಮಿಕರ ಕಟ್ಟೆ ಬಳಿ ಸಭೆ ನಡೆಸಿದರು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಕೇಂದ್ರದ ಬಿಜೆಪಿ ಸರಕಾರ ಕಾರ್ಮಿಕ…

Read More

ಮುಕ್ಕ ಕಾಲೇಜಿನ ವಿದ್ಯಾರ್ಥಿನಿ ಕಾಣೆಯಾಗಿದ್ದ ಪ್ರಕರಣ – ವಯನಾಡಿನಲ್ಲಿ ಮದುವೆ ನೋಂದಣಿ ಬೆಳಕಿಗೆ

ಮಂಗಳೂರು: ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡಿನ ಹಿಂದು ಯುವತಿ ವಯನಾಡಿನ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿದ್ದಾಳೆ.ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಕ್ರಿಮಿನಾಲಜಿ ಬಿಎಸ್ಪಿ ಕಲಿಯುತ್ತಿದ್ದ ಕಾಸರಗೋಡು ಮೂಲದ ಹಿಂದು ಯುವತಿ, ಕೇರಳದ ವಯನಾಡು ಮೂಲದ ಮುಸ್ಲಿಂ ಯುವಕನೊಂದಿಗೆ ಎಸ್ಕೆಪ್ ಆಗಿದ್ದು, ವಯನಾಡಿನಲ್ಲಿ ರಿಜಿಸ್ಟರ್ ಮದುವೆಯಾಗಲು ಮುಂದಾಗಿರುವ ಘಟನೆ ನಡೆದಿದೆ. ಕಾಸರಗೋಡು ಜಿಲ್ಲೆಯ ಮಧೂರು ಬಳಿಯ ಮೀಪುಗುರಿ ನಿವಾಸಿ, ಬಿಲ್ಲವ ಸಮುದಾಯದ ವಿದ್ಯಾರ್ಥಿನಿ ವೈಶಾಲಿ ಮೂರು ವರ್ಷಗಳಿಂದ ಮಂಗಳೂರಿನ ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಬಿಎಸ್ಪಿ ಕಲಿಯುತ್ತಿದ್ದಳು. ಈ ಬಾರಿ ಬಿಎಸ್ಸಿ ಪದವಿ…

Read More

ತೌಳವ ಚಿತ್ರರಂಗದ ‘ದಶ ಯಾತ್ರೆ’ ಸಂಭ್ರಮ- ಫೆ.11ರಿಂದ 15ರವರೆಗೆ ನೆಹರೂ ಮೈದಾನದಲ್ಲಿ ರಂಗೇರಲಿದೆ ಕ್ರಿಕೆಟ್ ಹಬ್ಬ …. !

ಮಂಗಳೂರು:ಕರಾವಳಿಯ ತುಳು ಚಿತ್ರರಂಗ ಮತ್ತು ರಂಗಭೂಮಿ ಕಲಾವಿದರ ಬಹುನಿರೀಕ್ಷಿತ ‘ದಶ ಯಾತ್ರೆ’ ಸಂಭ್ರಮೋತ್ಸವವು ಫೆಬ್ರವರಿ 11ರಿಂದ 15ರವರೆಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ಕ್ರಿಕೆಟ್ ಹಬ್ಬ ಹಾಗೂ ಸನ್ಮಾನ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ.)ದ ಅಧ್ಯಕ್ಷ ಲಂಚು ಲಾಲ್ ಕೆ.ಎಸ್ ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಮಿಟಿ ಸದಸ್ಯ ಜಿತೇಶ್ ಉಳಿಯ ನೀಡಿ , ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ…

Read More

ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದ ಡಾ. ಧೃತಿ ಆಳ್ವಗೆ ಗೌರವ ಸಮಾರಂಭ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ನ ನಮ್ಮ ಕ್ಲಿನಿಕ್ ವೈದ್ಯರಾದ ಡಾ.ಧೃತಿ ಆಳ್ವ ಇವರು ಉನ್ನತ ವಿದ್ಯಾಭ್ಯಾಸ ಕ್ಕಾಗಿ ತೆರಳುತ್ತಿದ್ದು ಇವರಿಗೆ ನಮ್ಮ ಕ್ಲಿನಿಕ್ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಯಾಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಶಾಲಾ ಮಕ್ಕಳ ಮೇಲಿನ ಮತ್ತು ಊರಿನ ನಾಗರೀಕರ ಮೇಲೆ ಇಟ್ಟಿರುವ ಕಾಳಜಿ ಮತ್ತು ಪ್ರೀತಿಯ ಆರೈಕೆಗೆ, ಹಾಗೂ ಬೆಂಗಳೂರಿನ ರಾಮ ನಗರ ಜಿಲ್ಲೆಯಲ್ಲಿ ಜರುಗಿದ ವಿಶೇಷ ಅಗತ್ಯ ವುಳ್ಳ ಮಕ್ಕಳ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮರಕಡ ಶಾಲೆಯ…

Read More

ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಡ್ರಾಮಾ ಬಯಲು

ಪುತ್ತೂರು:ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಡ್ರಾಮಾ ಇದೀಗ ಬಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿತ್ತು ಎನ್ನಲಾದ ಕಿಡ್ನಾಪ್ ಯತ್ನ ಪ್ರಕರಣದಲ್ಲಿ, ಇದು ಸಂಪೂರ್ಣ ನಾಟಕ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.ಮಂಗಳೂರು ಪಿಯುಸಿ ಕಾಲೇಜಿಗೆ ಸೇರ್ಪಡೆ ಪಡೆಯುವ ಉದ್ದೇಶದಿಂದ ವಿದ್ಯಾರ್ಥಿನಿಯೇ ಕಿಡ್ನಾಪ್ ಹೈಡ್ರಾಮಾ ಸೃಷ್ಟಿಸಿದ್ದಾಳೆ ಎಂಬುದು ತಿಳಿದುಬಂದಿದೆ. ಬ್ಲೇಡ್ ಬಳಸಿ ಕೈಗೆ ಸಣ್ಣ ಗಾಯ ಮಾಡಿಕೊಂಡು ಕಿಡ್ನಾಪ್ ನಡೆದಂತೆ ತೋರಿಸಲು ಯತ್ನಿಸಿದ್ದಾಳೆ. ಘಟನೆಗೆ ನಾಟಕೀಯ ತಿರುವು ನೀಡಲು ವಿದ್ಯಾರ್ಥಿನಿ ತನ್ನ ಶಾಲಾ ಬ್ಯಾಗ್‌ನಲ್ಲಿದ್ದ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿ,…

Read More

ಕೊಂಕಣಿ ಚಿತ್ರ ‘ವಾಗಾಂಚೊ ಖೇಳ್’ ಮೊದಲ ಹಾಡು ‘ಮೋಗ್ ಜಾಲಾ’ ಫೆ.14ರಂದು ಬಿಡುಗಡೆ

ಮಂಗಳೂರು :ಸನ್ ಶೈನ್ ಕ್ರಿಯೇಷನ್ ಲಾಂಛನದಲ್ಲಿ ಪ್ರವೀಣ್ ಫೆರ್ನಾಂಡೀಸ್ ನಿರ್ಮಾಣದ ಹಾಗೂ ಅರ್ವಿನ್ ಲೋಬೊ ಇವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಕೊಂಕಣಿ ಚಲನ ಚಿತ್ರ ವಾಗಾಂಚೊ ಖೇಳ್ ಚಿತ್ರದ ಮೊದಲ ಹಾಡು ಮೋಗ್ ಜಾಲಾ ಇದೇ ಬರುವ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು ಸನ್ ಶೈನ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕರಾದ ಅರ್ವಿನ್ ಲೋಬೊ ಅವರು ಹೇಳಿದರು. ಪತ್ರಿಕಾಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಲನಚಿತ್ರವು ಕರಾವಳಿ ಭಾಗದ…

Read More
error: Content is protected !!