ಆಮ್ ಆದಿ ಪಾರ್ಟಿ ಮಂಗಳೂರು- ನಾಗರಿಕ ಅಹವಾಲು ಪೋರ್ಟಲ್ ಪ್ರಾರಂಭ
ಮಂಗಳೂರು: ಇಂದಿನಿಂದ ಮಂಗಳೂರಿನ ನಾಗರಿಕರು ಮಂಗಳೂರು ನಗರಸಭೆಯ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ಕುರಿತು ಅಹವಾಲುಗಳನ್ನು https://aapdakshinakannada.org/Grievance/ ಎನ್ನುವ ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿ ದಾಖಲಿಸಬಹುದು ಎಂದುಪೋರ್ಟಲ್ ಸಂಚಾಲಕರಾದ ನೈಜಲ್ ಅಲ್ಬುಕರ್ಕ್ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿ , ಸುತ್ತುಮುತ್ತಲಿನ ಸಮಸ್ಯೆಗಳ ಫೋಟೋಗಳು, ವೀಡಿಯೋಗಳು ಮತ್ತು ಸಮಸ್ಯೆಗಳ ಕುರಿತಾದ ವಿವರಣೆಗಳನ್ನು ಕೂಡ ನಾಗರಿಕ ಅಹವಾಲು ಪೋರ್ಟಲ್ ಸೇರಿಸಬಹುದಾಗಿದೆ . ಸ್ವಚ್ಛತೆ , ನೀರು , ರಸ್ತೆ ಮತ್ತು ಚರಂಡಿ ವ್ಯವಸ್ಥೆ , ಘನ…
