ಹುಟ್ಟುಹಬ್ಬದಂದೇ ಮೃತಪಟ್ಟ ಯುವಕ.ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ.

ಕನಕಗಿರಿ: ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಇಲ್ಲಿನ 10ನೇ ವಾರ್ಡ್ ನಿವಾಸಿ ಹಾಗೂ ನಟ ಗವಿಸ್ವಾಮಿ ವಸ್ತ್ರದ ಅವರ ಪುತ್ರ ಆರ್ಯನ್(22) ಅವರು ಸಾವಿನಲ್ಲಿ ಸಾರ್ಥಕ ಮೆರೆದಿದ್ದಾರೆ. ಅಪಘಾತಕ್ಕೆ ಒಳಗಾಗಿ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರ್ಯನ್ ತನ್ನಹುಟ್ಟಿದ ದಿನದಂದೇ ಮೃತಪಟ್ಟಿರುವುದು ಕುಟುಂಬದಲ್ಲಿ ದುಃಖ, ನೋವು ತರಿಸಿದೆ. ಎರಡು ಕಣ್ಣು, ಎರಡು ಕಿಡ್ನಿ, ಲಿವರ್ ಪ್ರ್ಯಾಂಕ್ರಿಯ್ಸ್, ಹೃದಯದ ಕವಟಗಳನ್ನು ದಾನ ಮಾಡಲಾಗಿದ್ದು, ಕಳೇಬರವನ್ನು ವಾಹನಕ್ಕೆ ತರುವ ಮುಂಚೆ ಆಸ್ಪತ್ರೆಯವರು ಮೃತನ ಕೈಯಿಂದ ಕೇಕ್ ಕಟ್ ಮಾಡಿಸಿದ್ದಾರೆ.ಮತ್ತೊಂದು ಜೀವಕ್ಕೆ…

Read More

ಯುವಕನೊಬ್ಬನ ಸಮಯ ಪ್ರಜ್ಞೆಯಿಂದ ಮನೆಮಂದಿ ಗ್ಯಾಸ್ ಸಿಲಿಂಡರ್ ಅವಘಡದಿಂದ ಪಾರು.

ಬಂಟ್ವಾಳ : ಯುವಕನೊಬ್ಬನ ಸಮಯ ಪ್ರಜ್ಞೆಯಿಂದ ಮನೆಮಂದಿ ಗ್ಯಾಸ್ ಸಿಲಿಂಡರ್ ಅವಘಡದಿಂದ ಪಾರಾದ ಘಟನೆ ಬುಧವಾರ ರಾತ್ರಿ ಅನಂತಾಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ‌ ಬಾಬನಕಟ್ಟೆ ಸಮೀಪದ ಹಿರ್ತಂದ ಬೈಲು ಎಂಬಲ್ಲಿ‌ ರಾತ್ರಿ 9.45ರ ಸುಮಾರಿಗೆ ಘಟನೆ ನಡೆದಿದ್ದು, ಘಟನೆಯಲ್ಲಿ ಸಮಯಪ್ರಜ್ಞೆ ಮೆರೆದ ಯುವಕ ಜಯರಾಜ್ ನ ಮುಖ ಹಾಗೂ ಕೈ ಗೆ ಗಾಯಗಳಾಗಿದೆ. ಘಟನೆಯಲ್ಲಿ ದ್ವಿಚಕ್ರವಾಹನ ಸಹಿತ ಹಲವು ಉಪಕರಣಗಳಿಗೆ ಹಾನಿಯಾಗಿದೆ. ಘಟನೆ ವಿವರ : ತಾಯಿ ಸುಶೀಲ‌ ಹಾಗೂ ಜಯರಾಜ್ ವಾಸ್ತವ್ಯವಿರುವ ಮನೆಯಲ್ಲಿ, ಬುಧವಾರ ಗ್ಯಾಸ್…

Read More

GST ಕಡಿತ ಜನತೆಗೆ ಖುಷಿ ನೀಡಿದ್ರೆ ಐವನ್, ಪದ್ಮರಾಜ್ ಗೆ ಏಕೆ ಹೊಟ್ಟೆಕಿಚ್ಚು ? ಅರುಣ್ ಶೇಟ್ ಪ್ರಶ್ನೆ

ಮಂಗಳೂರು:”ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ಮಾಡಿ ಜನತೆಗೆ ನೆಮ್ಮದಿ ನೀಡಿದರೆ, ರಾಜ್ಯ ಸರ್ಕಾರ ಪ್ರತಿಯೊಂದು ವಸ್ತುಗಳ ಬೆಲೆ ಏರಿಸಿ ಜನರ ಬದುಕಿಗೆ ಸಂಕಷ್ಟ ತಂದೊಡ್ಡಿದೆ. ಕೇಂದ್ರದ ಜಿಎಸ್‌ಟಿ ದರ ಇಳಿಕೆ ಕುರಿತು ಶಾಸಕ ವೇದವ್ಯಾಸ ಕಾಮತ್ ಮನೆಮನೆಗೆ ಕರಪತ್ರ ವಿತರಣೆ ಕಾರ್ಯ ಆರಂಭಿಸಿದಾಗ ಕಾಂಗ್ರೆಸ್ ನಾಯಕರಾದ ಐವನ್ ಡಿ’ಸೋಜಾ ಮತ್ತು ಪದ್ಮರಾಜ್ ಅವರಲ್ಲಿ ಹೊಟ್ಟೆಕಿಚ್ಚು ಶುರುವಾಗಿದೆ. ಜನರಿಗೆ ಸಿಗುತ್ತಿರುವ ಪ್ರಯೋಜನವೇ ಇವರಿಗೆ ಅಸಹ್ಯ,” ಎಂದು ಅರುಣ್ ಶೇಟ್ ವ್ಯಂಗ್ಯವಾಡಿದರು. ಅವರು ಜಿಲ್ಲಾ ಬಿಜಿಪಿ ಕಚೇರಿಯಲ್ಲಿ ಕರೆದ…

Read More

ಉದ್ಯಮಿ, ಪೂಂಜಾ ಟ್ರಾವಲ್ಸ್ ನ ಮಾಲೀಕ ಸಂಜಯ್ ಶೆಟ್ಟಿ ನಿಧನ

ಉಡುಪಿ: ಹೋಟೆಲ್ ಉದ್ಯಮಿ, ಪೂಂಜಾ ಟ್ರಾವಲ್ಸ್ ನ ಮಾಲೀಕ ಸಂಜಯ್ ಶೆಟ್ಟಿ ಕೊರಂಗ್ರಪಾಡಿ (65) ಅವರು ಅಲ್ಪಕಾಲದ ಅಸ್ವೌಖ್ಯದಿಂದ ಗುರುವಾರ (ಅ.23) ನಿಧನ ಹೊಂದಿದರು‌. ಕೊರಂಗ್ರಪಾಡಿ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ ಹಾಗೂ ಬೈಲೂರು ಮಹಿಷಮರ್ದಿನಿ ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಅಲ್ಲದೆ, ಮಾರ್ಪಳ್ಳಿ, ಕೊರಂಗ್ರಪಾಡಿ, ಬೈಲೂರು ಪ್ರದೇಶದಲ್ಲಿ ಸಾಮಾಜಿಕ ಕಾರ್ಯಗಳ ಹೆಸರುವಾಸಿಯಾಗಿದ್ದರು. ಅವರು ಒರ್ವ ಪುತ್ರ, ಪತ್ನಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

Read More

ಅಮೃತ ಪ್ರಕಾಶ ಪತ್ರಿಕೆ 45ನೇ ಸರಣಿ ಕೃತಿ ಬಿಡುಗಡೆ

ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಇದರ ವತಿಯಿಂದ ನಡೆಯುವ ಅಮೃತ ಪ್ರಕಾಶ 45ನೇ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈ ಯವರ ಸಾಹಿತ್ಯ ಮತ್ತು ಡಿಜಿಟಲ್ ಗ್ರಾಫಿಕ್ಸ್ ನ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಮೂಡಿ ಬಂದಿರುವ ಕೊಡಗಿನ ಕುಲದೇವತೆ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರ ಕಥಾ ಪುಸ್ತಕ ಕನ್ನಡ, ಇಂಗ್ಲೀಷ್, ಅರೆಭಾಷೆ ಮತ್ತು ತಮಿಳು…

Read More

ಪಟಾಕಿ ಅಂಗಡಿಗಳ ಮಾಲೀಕರಿಗೆ ಬೆದರಿಕೆ: ಕೊಲೆ ಆರೋಪಿ ವಿರುದ್ಧ ದಾಖಲಾಯ್ತು ಕೇಸ್ .

ಪಟಾಕಿ ಅಂಗಡಿಗಳ ಮಾಲೀಕರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿರುವ ಆರೋಪದಲ್ಲಿ ಇಬ್ಬರ ವಿರುದ್ಧ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರತ್ಕಲ್ ಮಂಗಳಪೇಟೆಯ ಫಾಝಿಲ್ ಕೊಲೆ ಆರೋಪಿ, ರೌಡಿ ಶೀಟರ್ ಪ್ರಶಾಂತ್ ಯಾನೆ ಪಚ್ಚು ಮತ್ತು ಅಶ್ವಿತ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ಬಜ್ಪೆಯ ಪಟಾಕಿ ಮಾರಾಟ ಮಳಿಗೆಗಳಿಗೆ ತೆರಳಿ ಹಣ ಕೊಡುವುದಿಲ್ಲ, ಆದರೆ ಎಲ್ಲರೂ ಪಟಾಕಿ ಕೊಡಲೇಬೇಕು ಎಂದು ಬೆದರಿಸಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಂದಹಾಗೇ ಈ ಘಟನೆ ಅ.22ರಂದು ನಡೆದಿದ್ದು,…

Read More

ಕೇಸ್ ಇದ್ದವರ ಜತೆ ತಿರುಗಾಡಿದ್ರೆ ನಿಮಗೆ ತೊಂದರೆ: ಮಂಗಳೂರು ಪೊಲೀಸ್‌ ಕಮಿಷನ‌ರ್ ಸುಧೀರ್ ರೆಡ್ಡಿಯವರಿಂದ ಎಚ್ಚರಿಕೆ……!

ಮಂಗಳೂರು: ಈಗಾಗಲೇ ಪ್ರಕರಣದಲ್ಲಿ ಭಾಗಿಯಾದವರ ಜತೆ ಯಾವುದೇ ಪ್ರಕರಣ ಇಲ್ಲದವರು ತಿರುಗಾಡದಂತೆ ಈಗಾಗಲೇ ನಾವು ಎಚ್ಚರಿಕೆ ನೀಡಿದ್ದೇವೆ. ಸರಿಯಾಗಿ ಕೇಳಿಸಿದಂತೆ ಕಾಣುತ್ತಿಲ್ಲ. ಈಗಾಗಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಜತೆ ತಿರುಗಾಡುವವರಿಗೂ ತೊಂದರೆ ಆಗಲಿದೆ. ಇಲ್ಲ ನಾವು ತಿರುಗುತ್ತೇವೆ. ನಮ್ಮ ಇಷ್ಟ ಎಂದು ನೀವು ಬಯಸಿದರೆ ನಮಗೆ ಸಮಸ್ಯೆ ಇಲ್ಲ. ನೀವು ಮಾಡುವುದು ನೀವು ಮಾಡಿ, ನಾವು ಮಾಡುವುದು ನಾವು ಮಾಡುತ್ತೇವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀ‌ರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

Read More

ಬಡ ರೈತರ ಕೃಷಿ ಭೂಮಿಯ ಅಕ್ರಮ ಸ್ವಾಧೀನದ ವಿರುದ್ಧ ಉಳ್ಳಾಲ ತಹಶೀಲ್ದಾರ್ ಕಚೇರಿಯೆದುರು ಪ್ರತಿಭಟನೆ .

ಬಡ ಗೇಣಿದಾರರ ಭೂಮಿಯನ್ನು ಮಾಲೀಕರಿಂದ ನೇರವಾಗಿ ಖರೀದಿ ಮಾಡಿ ಗೇಣಿದಾರರಿಗಾದ ಅನ್ಯಾಯದ ವಿರುದ್ಧ, ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿರುವುದರ ವಿರುದ್ಧ ಹಾಗೂ ಪಂಚಾಯತ್ ನಿಂದ ನಿರ್ಮಿಸಲ್ಪಟ್ಟಿದ್ದ ರಸ್ತೆಯ ಅತಿಕ್ರಮಣದ ವಿರುದ್ಧ ಅಂಬ್ಲಮೊಗರು ಗ್ರಾಮದ ನಾಗರೀಕರು ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಇಂದು ಉಳ್ಳಾಲ ತಹಶೀಲ್ದಾರ್ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಂಬ್ಲಮೊಗರು ಮುನ್ನೂರು ಬೆಳ್ಮ ಗ್ರಾಮದ ನಾಗರಿಕರು ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಬೇಜವಾಬ್ದಾರಿ ವರ್ತನೆಯನ್ನು ಘೋಷಣೆಗಳನ್ನು ಕೂಗುವ ಮೂಲಕ…

Read More

ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ಕಿಶೋರ್ ಡಿ ಶೆಟ್ಟಿ ಆಯ್ಕೆ .

ಮಂಗಳೂರು : ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಇದರ ನೂತನ ಅಧ್ಯಕ್ಷರಾಗಿ ಕಿಶೋರ್ ಡಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಮಂಗಳೂರು ತುಳು ನಾಟಕ ಕಲಾವಿದರ ಒಕ್ಕೂಟ ಇದರ 2024-2025 ನೇ ಸಾಲಿನ ವಾರ್ಷಿಕ ಮಹಾಸಭೆಯು ಕದ್ರಿ ಪಾರ್ಕ್ ಬಳಿಯ ಲಯನ್ಸ್ ಅಶೋಕ ಸೇವಾಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಿಶೋರ್ ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕಿಶೋರ್ ಡಿ. ಶೆಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗೋಕುಲ್ ಕದ್ರಿ ಮತ್ತು…

Read More

ಸುರತ್ಕಲ್ ಚೂರಿ ಇರಿತ ಪ್ರಕರಣ.ನಾಲ್ವರು ಆರೋಪಿಗಳ ಗುರುತು ಪತ್ತೆ .

ಸುರತ್ಕಲ್: ದೀಪಕ್ ಬಾರ್ ಬಳಿ ಗುರುವಾರ ರಾತ್ರಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಸಂಘ ಪರಿವಾರದ ಕಾರ್ಯಕರ್ತ ಗುರುರಾಜ್, ಆತನ ಸ್ನೇಹಿತರಾದ ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ದುಷ್ಕೃತ್ಯ ಎಸಗಿದ ಆರೋಪಿಗಳೆಂದು ತಿಳಿದು ಬಂದಿದೆ. ಪ್ರಕರಣದ ತನಿಖೆ ಆರಂಭಿಸಿದ ಸುರತ್ಕಲ್ ಪೊಲೀಸ್ ನಿರೀಕ್ಷ ಪ್ರಮೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ, ಘಟನೆ ನಡೆಯುವ ಸಂದರ್ಭ ಸ್ಥಳದಲ್ಲಿದ್ದ ಸಂತ್ರಸ್ತರ ಸ್ನೇಹಿತನೊಬ್ಬನ…

Read More
error: Content is protected !!