ಹೂವಿನ ರಾಶಿಯೋ.. ಜಾರುವ ಪಾದಚಾರಿ ರಸ್ತೆಯೋ….
ಮಂಗಳೂರು: ನಗರದ ಹೃದಯ ಭಾಗವೆಂದು ಕರೆಯಲ್ಪಡುವ ಹಂಪನ ಕಟ್ಟೆಯ ಮಿನಿ ವಿಧಾನಸೌಧ ಎದುರು ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಹೂವಿನ ವ್ಯಾಪಾರ ಜೋರಾಗಿಯೇ ಇತ್ತು. ಘಟ್ಟ ಪ್ರದೇಶದಿಂದ ಕರಾವಳಿಯ ಕಡೆಗೆ ಹೂವಿನ ರಾಶಿಯೇ ಹರಿದು ಬಂದಿತ್ತು. ಸೇವಂತಿಕೆ, ಗೊಂಡೆ ಹೂವುಗಳ ರಾಶಿಯು ಕಣ್ಣಿಗೆ ಹಬ್ಬವಾಗಿತ್ತು. ಆದರೆ ಇದೀಗ ದೀಪಾವಳಿ ಹಬ್ಬ ಮುಗಿಯುತ್ತಿದಂತೆಯೇ ತಂದ ಹೂವುಗಳನ್ನು ಪಾದಚಾರಿ ಮಾರ್ಗದಲ್ಲೇ ಬಿಟ್ಟು ಹೋಗಿದ್ದು. ಅದು ಅಲ್ಲೇ ಚೆಲ್ಲಾಪಿಲ್ಲಿಯಾಗಿ ಉಳಿದು ಬಿಟ್ಟಿದೆ. ಸಂಜೆಯ ವೇಳೆಗೆ ಎಡೆ ಬಿಡದೆ ಸುರಿದ ಹಿಂಗಾರು ಮಳೆಯು ಹೂವಿನ…
