ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿದ ಹಿನ್ನಲೆ ಆರೋಪಿತೆ ಫರಿಧಾ ಬೇಗಂನ ಬಂಧನ .
ಮಂಗಳೂರು: ಮಾನ್ಯತೆ ಇಲ್ಲದ ಚೆಕ್ ನೀಡಿ ,ಹಣ ಪಾವತಿಸದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸಿ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮಂಗಳೂರು ನಗರ, ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ದಾಖಲಾದ ಒಟ್ಟು 09 ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ವಂಚಕಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ದೂರು ನೀಡಿದ ಜಯರಾಯ ಅವರು ಮಂಗಳೂರು ನಗರದ ಎಂಪಾಯರ್ ಮಾಲ್ ನಲ್ಲಿ ಲ್ಯಾಪ್ ಟಾಪ್ ಬಜಾರ್ ಎಂಬ ಸ್ಟೋರ್ ಇಟ್ಟುಕೊಂಡಿದ್ದು ಎಲ್ಲಾ ಕಂಪನಿಗಳ ಲ್ಯಾಪ್ ಟಾಪ್ ಗಳನ್ನು ಸೇಲ್ಸ್…
