ಸಂಡೇ ಬಜಾರ್ ಈ ಸಂಡೆ ನಡೆದೇ ನಡೆಯುತ್ತದೆ; ಮನಪಾಗೆ ಸುನಿಲ್ ಕುಮಾರ್ ಬಜಾಲ್ ಸವಾಲು..!
ಮಂಗಳೂರು: ಸಂಡೇ ಬಜಾರ್ (ಭಾನುವಾರದ ಮಾರುಕಟ್ಟೆ) ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಈ ಭಾನುವಾರ ನಿಗದಿಯಂತೆ ಸಂಡೇ ಬಜಾರ್ ನಡೆಯಲಿದ್ದು, ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಮುಖಂಡ ಸುನಿಲ್ ಕುಮಾರ್ ಬಜಾಲ್ ಮಂಗಳೂರು ಮಹಾನಗರ ಪಾಲಿಕೆಗೆ ಸವಾಲು ಹಾಕಿದರು. ನಗರ ಪಾಲಿಕೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ಸಂಡೇ ಬಜಾರ್‌ಗೆ ಅವಕಾಶ ನೀಡಲು ಸಾಧ್ಯವಾಗದಿದ್ದರೆ ಪಾಲಿಕೆಯೇ ಪರ್ಯಾಯ…
