ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ‘ಚಿ. ಸೌ. ಸುಮಂಗಲ’ ನಾಟಕದ ಶುಭ ಮುಹೂರ್ತ

ಧರ್ಮಸ್ಥಳ, ಜುಲೈ 6: ಸುಂದರ್ ರೈ ಮಂದಾರ ಅವರ ನೇತೃತ್ವದ ಅಮ್ಮ ತಂಡ ಕುಡ್ಲದ ಈ ವರ್ಷದ ನೂತನ ನಾಟಕ ‘ಚಿ. ಸೌ. ಸುಮಂಗಲ’ ಇದರ ಶುಭ ಮುಹೂರ್ತವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ದಿವ್ಯ ಹಸ್ತದಲ್ಲಿ ನೆರವೇರಿತು. ಖ್ಯಾತ ರಂಗಕಲಾವಿದ ದೀಪಕ್ ರೈ ಪಾಣಾಜೆ ಅಭಿನಯಿಸುತ್ತಿರುವ ಈ ನಾಟಕದ ರಚನೆ ಸೋಮನಾಥ ಶೆಟ್ಟಿ ಮಂಗಲ್ಪಾಡಿ ಅವರದು. ನಾಟಕಕ್ಕೆ ಶ್ರೇಯಸ್ ಕಲ್ಲಡ್ಕ ಸಂಗೀತ ಸಂಯೋಜನೆ ನೀಡಿದ್ದು, ವಿಭಿನ್ನ ಕಥಾಹಂದರ ಹಾಗೂ…

Read More

ರಾಮಕ್ಷತ್ರಿಯ ಸಂಘಗಳ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ

ಸತ್ಯನಾರಾಯಣ ಹೂಡೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ; ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಗಸ್ಟ್ 30ಕ್ಕೆ ಮಂಗಳೂರು, ಜುಲೈ 6: ದಕ್ಷಿಣ ಕನ್ನಡ ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ (ರಿ)ಯ 2026–28ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಹಾಗೂ ಕಾರ್ಯಕಾರಿಣಿ ಸಭೆ ಜಪ್ಪುವಿನ ರಾಮಕ್ಷತ್ರಿಯ ಸಂಘದ ಸಭಾಂಗಣದಲ್ಲಿ ನಡೆಯಿತು. ಶ್ರೀಮತಿ ರೇಖಾ ಸುದೇಶ್ ರಾವ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ರಾವ್ ಸ್ವಾಗತಿಸಿ ಕಳೆದ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿದರು. ನಿರ್ಗಮಿತ…

Read More

ಚಿನ್ನಾಭರಣದ ತೂಕ ಹೆಚ್ಚಿಸಿ ಬ್ಯಾಂಕ್‌ಗೆ ವಂಚನೆ ಯತ್ನ: ಇಬ್ಬರ ಬಂಧನ

120 ಗ್ರಾಂ ಚಿನ್ನ ಅಡವಿಡಲು ಬಂದಿದ್ದ ಆರೋಪಿಗಳು ಪೊಲೀಸರ ಬಲೆಗೆ ಕಡಬ, ಜುಲೈ 6: ಚಿನ್ನಾಭರಣಗಳನ್ನು ಕೃತಕವಾಗಿ ಹೆಚ್ಚು ತೂಕ ಬರುವಂತೆ ಮಾಡಿ ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆಯುವ ಮೂಲಕ ವಂಚನೆ ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ಇಬ್ಬರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ. ಜುಲೈ 3ರಂದು ಸಂಜೆ ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವ…

Read More

ಗಾಳಿ-ಮಳೆಗೆ ಅಂಗಡಿ ಮೇಲೆ ಮರ ಬಿದ್ದು ಹಾನಿ

ಬೋಳಂತೂರಿನಲ್ಲಿ ಘಟನೆ; ಪ್ರಾಣಾಪಾಯದಿಂದ ಪಾರಾದ ಅಂಗಡಿ ಮಾಲೀಕ ಬಂಟ್ವಾಳ, ಜುಲೈ 6: ಬಂಟ್ವಾಳ ತಾಲೂಕಿನ ಮಂಚಿ ಸಮೀಪದ ಬೋಳಂತೂರಿನಲ್ಲಿ ಭಾರೀ ಗಾಳಿ-ಮಳೆಯ ಪರಿಣಾಮ ಮರವೊಂದು ಅಂಗಡಿಯ ಛಾವಣಿಯ ಮೇಲೆ ಬಿದ್ದು ಹಾನಿಗೊಳಗಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಬೋಳಂತೂರು ಕೊಕ್ಕಪುಣಿ ನಿವಾಸಿ ರಹೀಂ ಅವರಿಗೆ ಸೇರಿದ ಹಂಚಿನ ಅಂಗಡಿಯ ಮಧ್ಯಭಾಗದ ಮೇಲೆ ಮರ ಬಿದ್ದ ಪರಿಣಾಮ ಛಾವಣಿ ಜಖಂಗೊಂಡಿದ್ದು, ಅಂಗಡಿಯೊಳಗೂ ಹಾನಿಯಾಗಿದೆ. ಘಟನೆ ಸಂಭವಿಸಿದ ವೇಳೆ ಅಂಗಡಿಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಳೆದ…

Read More

ಅಪ್ರಾಪ್ತೆಗೆ ಮಚ್ಚಿನಿಂದ ಹಲ್ಲೆ: ಯುವಕ ಪೊಲೀಸ್ ಠಾಣೆಗೆ ಶರಣು

ಬಂಟ್ವಾಳ, ಜುಲೈ 6: ಕಾಲೇಜಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಯುವಕನೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಮೊಂತಿಮಾರು ಬಸ್ ನಿಲ್ದಾಣದ ಬಳಿ ಸೋಮವಾರ ನಡೆದಿದೆ. ಹಲ್ಲೆಗೊಳಗಾದ ಬಾಲಕಿಯ ತಲೆ ಹಾಗೂ ಕೈಗೆ ಗಾಯಗಳಾಗಿದ್ದು, ಆಕೆಯನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಬಂಟ್ವಾಳ ತಾಲೂಕಿನ ಮಂಚಿ ನಿವಾಸಿ ಮೊಹಮ್ಮದ್ ಜವ್ವಾರ್ (28) ಎಂದು ಗುರುತಿಸಲಾಗಿದೆ….

Read More

ಕೃಷ್ಣಾಪುರ-ಕಾಟಿಪಳ್ಳದಲ್ಲಿ ಸೆ.14ರಿಂದ 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಂಗಳೂರು, ಜುಲೈ 6: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.), ಕೃಷ್ಣಾಪುರ-ಕಾಟಿಪಳ್ಳ ವತಿಯಿಂದ 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸೆಪ್ಟೆಂಬರ್ 14ರಿಂದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯು ಹಲವು ವರ್ಷಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಪರಿಸರ ಜಾಗೃತಿ, ಶೈಕ್ಷಣಿಕ ಪುರಸ್ಕಾರ ಹಾಗೂ ಆರೋಗ್ಯ…

Read More

ತಾಯಿಯ ಹೆಸರಿನಲ್ಲಿ ಗಿಡ ನೆಟ್ಟ ಕೇಂದ್ರ ಸಚಿವ ಸುರೇಶ್ ಗೋಪಿ: ಮಂಗಳೂರಿನಲ್ಲಿ ಸ್ವಚ್ಛತಾ ಪಖ್ವಾಡಾ-2026ಕ್ಕೆ ಚಾಲನೆ

ಮಂಗಳೂರು, ಜು. 6: ಪ್ರಧಾನಿ ನರೇಂದ್ರ ಮೋದಿ ಅವರ “ಏಕ್ ಪೇಡ್ ಮಾ ಕೆ ನಾಮ್” ಅಭಿಯಾನದ ಅಂಗವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ತಮ್ಮ ತಾಯಿ ಶ್ರೀಮತಿ ವಿ. ಜ್ಞಾನಲಕ್ಷ್ಮಿ ಅಮ್ಮ ಅವರ ಹೆಸರಿನಲ್ಲಿ ಮಾವಿನ ಗಿಡ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಸೋಮವಾರ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ವತಿಯಿಂದ, ಪೆಟ್ರೋಲಿಯಂ ಮತ್ತು…

Read More

ಲಕ್ಷದ್ವೀಪದಲ್ಲಿ 47 ಸರ್ಕಾರಿ ನೌಕರರಿಗೆ ಕಡ್ಡಾಯ ನಿವೃತ್ತಿ; ಸಾಮೂಹಿಕ ಕ್ರಮಕ್ಕೆ ವ್ಯಾಪಕ ವಿರೋಧ

ಲಕ್ಷದ್ವೀಪ ಆಡಳಿತವು 47 ಸರ್ಕಾರಿ ನೌಕರರನ್ನು ಕಡ್ಡಾಯ ನಿವೃತ್ತಿಗೆ ಒಳಪಡಿಸಿದೆ. ಕೇಂದ್ರ ನಾಗರಿಕ ಸೇವೆಗಳ (Central Civil Services) ನಿಯಮಾವಳಿಯಡಿ ಈ ಕ್ರಮ ಕೈಗೊಳ್ಳಲಾಗಿದೆ. ದೀರ್ಘಕಾಲದಿಂದ ಸೇವೆಯಲ್ಲಿದ್ದ ನೌಕರರನ್ನು ವಿಶೇಷ ಪರಿಶೀಲನಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಸೇವೆಯಿಂದ ನಿವೃತ್ತಿಗೊಳಿಸಲಾಗಿದೆ. ಸಂಬಂಧಿತ ನೌಕರರು ಸೇವೆಯಲ್ಲಿ ಮುಂದುವರಿಯುವುದು ಸಾರ್ವಜನಿಕ ಹಿತಾಸಕ್ತಿಗೆ ಅನುಕೂಲಕರವಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಕ್ರಮಕ್ಕೆ ಕಾರಣವಾದ ನಿರ್ದಿಷ್ಟ ಆರೋಪಗಳು ಅಥವಾ ವಿವರಗಳನ್ನು ಆದೇಶದಲ್ಲಿ ಸ್ಪಷ್ಟಪಡಿಸಲಾಗಿಲ್ಲ. ಕಡ್ಡಾಯ ನಿವೃತ್ತಿಗೊಳಗಾದ ನೌಕರರಿಗೆ ಮೂರು ತಿಂಗಳ ವೇತನ,…

Read More

ದಾವಣಗೆರೆ ಅಘೋರಿ ಚಿದಂಬರ ಯೋಗಿಗೆ ಕನ್ನಡ ಭವನದ “ಧಾರ್ಮಿಕ ಸಮಾಜ ಸೇವಾ ರತ್ನ “ಪ್ರಶಸ್ತಿಗೆ ಆಯ್ಕೆ

ಮಂಗಳೂರು, ಜುಲೈ 6: ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಜುಲೈ 26ರಂದು ನಡೆಯಲಿರುವ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮ್ಮೇಳನದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಕಲೆ, ಸಂಸ್ಕೃತಿ ಹಾಗೂ ಸಮಾಜಸೇವೆ ಸೇರಿದಂತೆ…

Read More

ಮುಡಿಪು “ಸ್ವಸ್ತಿ ಶ್ರೀ” ನಿವಾಸದಲ್ಲಿ ಮನಸ್ವಿನಿ ಮಹಿಳಾ ವೇದಿಕೆಯ ಮನೆ ಮನೆ ಸಾಹಿತ್ಯ ಅಭಿಯಾನ:

“ತಿಳಿ ನೀಲ ಗಗನದಲ್ಲಿ ಒಂದು ಸುತ್ತು”: ಜಯಲಕ್ಷ್ಮಿ ಕಾರಂತ ವಿಶೇಷ ಉಪನ್ಯಾಸ. ಜೀವನದಲ್ಲಿ ಸವಾಲುಗಳನ್ನು ಕಂಡು ಹಿಂಜರಿಯಬಾರದು. ಒತ್ತಡ, ಸಮಸ್ಯೆಗಳು ಬದುಕಿನ ಅವಿಭಾಜ್ಯ ಅಂಗ. ಸಮಸ್ಯೆಗಳೆ ಬರಬಾರದು ಎನ್ನುವುದಕ್ಕಿಂತ ಸಮಸ್ಯೆಗಳನ್ನೆ ಸವಾಲುಗಳನ್ನಾಗಿ ಸ್ವೀಕರಿಸಿ ಸಂಗಾತಿಯನ್ನಾಗಿ ಪ್ರೀತಿಸಬೇಕೆಂದು ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರು ಇಲ್ಲಿನ ವಿಶ್ರಾಂತ ಪ್ರಾಧ್ಯಾಪಕರು ಡಾ.ಮೀನಾಕ್ಷಿ ರಾಮಚಂದ್ರ ಮಹತ್ವದ ಸಲಹೆ ನೀಡಿದರು. ಇವರು ದಿನಾಂಕ 05.07.2026 ರಂದು ಹಿರಿಯ ಸಾಹಿತಿ ಲಕ್ಷ್ಮೀ ವಿ ಭಟ್ ಮಂಜೇಶ್ವರ ಇವರ ನಿವಾಸ ‘ಸ್ವಸ್ತಿಶ್ರೀ’ ಮುಡಿಪು ಇಲ್ಲಿ ನಡೆದ ಮನಸ್ವಿನಿ…

Read More
error: Content is protected !!