ನಲ್ಕೆಮಾರ್‌ನಲ್ಲಿ ಭಾರೀ ಮಳೆಗೆ ಬೃಹತ್ ಮರ ಉರುಳಿ ರಸ್ತೆ ಬಂದ್
ಬಂಟ್ವಾಳ: ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮ ಬಂಟ್ವಾಳ ತಾಲೂಕಿನ ನಲ್ಕೆಮಾರ್‌ನಲ್ಲಿ ಬೃಹತ್ ಮರವೊಂದು ಬುಡಸಮೇತ ಉರುಳಿ ರಸ್ತೆಗೆ ಬಿದ್ದ ಘಟನೆ ನಡೆದಿದೆ. ಮಳೆಯ ಹಿನ್ನೆಲೆಯಲ್ಲಿ ಮರದ ಬುಡದ ಮಣ್ಣು ಸಡಿಲಗೊಂಡಿದ್ದರಿಂದ ಸೋಮವಾರ ರಾತ್ರಿ ವೇಳೆ ಮರ ಏಕಾಏಕಿ ಉರುಳಿದೆ. ಘಟನಾ ಸ್ಥಳದ ಸಮೀಪವೇ ನಲ್ಕೆಮಾರ್ ಸರ್ಕಾರಿ ಶಾಲೆ ಇದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ರಸ್ತೆ ಮೇಲೆ ಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾದರೂ, ಸಾರ್ವಜನಿಕರು ಪರ್ಯಾಯವಾಗಿ ಕರ್ನಾಟಕ ಗೃಹ ಮಂಡಳಿ ಬಡಾವಣೆಯ ರಸ್ತೆಯನ್ನು…
