ಮುಂಗಾರು ಬೆಳೆ ವಿಮೆ ಯೋಜನೆ: ಆಗಸ್ಟ್ 14ರೊಳಗೆ ನೋಂದಣಿ ಮಾಡಿಕೊಳ್ಳಲು ರೈತರಿಗೆ ಸೂಚನೆ
ಮಂಗಳೂರು: 2026-27ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಭತ್ತದ ಬೆಳೆಗೆ ನೋಂದಣಿ ಸಲ್ಲಿಸಲು ಆಗಸ್ಟ್ 14 ಕೊನೆಯ ದಿನವಾಗಿದೆ. ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಇಂಡಸ್ ಇಂಡ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಅನ್ನು ನೇಮಿಸಲಾಗಿದೆ. ಭತ್ತದ ಬೆಳೆಗೆ ಪ್ರತಿ ಎಕರೆಗೆ ಒಟ್ಟು ವಿಮಾ ಮೊತ್ತ ರೂ.30,595.32 ನಿಗದಿಯಾಗಿದ್ದು, ರೈತರ ವಂತಿಕೆಯಾಗಿ ಶೇ.2ರಂತೆ ರೂ.611.91 ವಿಮಾ ಕಂತು…
