ಜೂ. 28ರಂದು ‘ವಿಧಾತ್ರಿ ಸಂಭ್ರಮ-2026’; ‘ಜೈ ಹನುಮಾನ್’ ನಾಟಕ ಪ್ರದರ್ಶನ

ಮಂಗಳೂರು, ಜೂ.25: ಕಳೆದ 17 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ವಿಧಾತ್ರಿ ಕಲಾವಿದೆರ್ ಕುಡ್ಲ (ರಿ.) ಸಂಸ್ಥೆಯ ವತಿಯಿಂದ ‘ವಿಧಾತ್ರಿ ಸಂಭ್ರಮ-2026’ ಕಾರ್ಯಕ್ರಮವು ಜೂನ್ 28ರಂದು ಸಂಜೆ 4.30ಕ್ಕೆ ನಗರದ ಪುರಭವನ (ಟೌನ್ ಹಾಲ್)ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಚಿದಾನಂದ ಅಡ್ಯಪಾಡಿ ಸಾರಥ್ಯದಲ್ಲಿ, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಹಾಗೂ ಭರತ್ ಎಸ್. ಕರ್ಕೇರ ರಚನೆಯ ತುಳು-ಕನ್ನಡ ದ್ವಿಭಾಷಾ ನಾಟಕ ‘ಜೈ ಹನುಮಾನ್’ ಪ್ರದರ್ಶನಗೊಳ್ಳಲಿದೆ. ಈ ಕುರಿತು ಮಾಹಿತಿ ನೀಡಿದ ತುಳು ರಂಗಭೂಮಿ ಕಲಾವಿದ ಚಿದಾನಂದ…

Read More

ಗರ್ಭಿಣಿ ಅಪ್ರಾಪ್ತೆ ಆತ್ಮಹತ್ಯೆ: ಯುವಕನ ವಿರುದ್ಧ ಪೋಕ್ಸೊ, ಅತ್ಯಾಚಾರ ಪ್ರಕರಣ ದಾಖಲು

ಮಂಗಳೂರು, ಜೂ. 25: ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ವಿರುದ್ಧ ಪೋಕ್ಸೊ ಕಾಯ್ದೆ, ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಏಪ್ರಿಲ್ 23ರಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ ಬಾಲಕಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಆಕೆ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ, “ನಾನು ಒಂದು…

Read More

ಸಚಿವ ಸಂಪುಟದಲ್ಲಿ ಈಡಿಗ-ಬಿಲ್ಲವ ಸಮಾಜಕ್ಕೆ ಮತ್ತೊಂದು ಸ್ಥಾನ ನೀಡಲಿ: ಸತ್ಯಜಿತ್ ಸುರತ್ಕಲ್

ಮಂಗಳೂರು, ಜೂ.25: ರಾಜ್ಯದಲ್ಲಿ ಈಡಿಗ-ಬಿಲ್ಲವ ಸೇರಿದಂತೆ 26 ಪಂಗಡಗಳ ಪ್ರತಿನಿಧಿತ್ವ ಹೊಂದಿರುವ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.) ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರದಲ್ಲಿ ಸಮಾಜದ ಪ್ರತಿನಿಧಿತ್ವ ಕೇವಲ ಒಬ್ಬ ಸಚಿವರಿಗೆ ಸೀಮಿತವಾಗಿದ್ದು, ಉಳಿದಿರುವ ಸರ್ಕಾರದ ಅವಧಿಯಲ್ಲಿ ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡಿ ಕನಿಷ್ಠ ಇಬ್ಬರು ಸಚಿವರ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ…

Read More

ಕೊಳ್ನಾಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ SIR ಜಾಗೃತಿ ಸಭೆ: ಮತದಾರರ ಹಕ್ಕುಗಳ ರಕ್ಷಣೆಗೆ ಕಾರ್ಯಕರ್ತರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲಿ – ರಮನಾಥ ರೈ

ಬಂಟ್ವಾಳ, ಜೂ.24: ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಕುರಿತು ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಬೂತ್ ಲೆವೆಲ್ ಏಜೆಂಟರಿಗೆ (BLA) ಜಾಗೃತಿ ಮೂಡಿಸುವ ಉದ್ದೇಶದಿಂದ ಕೊಳ್ನಾಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೊಳ್ನಾಡು, ಮಂಚಿ, ಸಾಲೆತ್ತೂರು, ಕನ್ಯಾನ ಹಾಗೂ ಕರೋಪಾಡಿ ವಲಯಗಳ BLA ಗಳಿಗೆ ಜಾಗೃತಿ ಸಭೆ ನಡೆಯಿತು. ಕೊಳ್ನಾಡು, ಮಂಚಿ ಹಾಗೂ ಸಾಲೆತ್ತೂರು ವಲಯಗಳ ಜಾಗೃತಿ ಸಭೆಯು ಕೊಳ್ನಾಡು ಸೌಹಾರ್ದ ಭವನದಲ್ಲಿ ನಡೆದರೆ, ಕನ್ಯಾನ ಹಾಗೂ ಕರೋಪಾಡಿ ವಲಯಗಳ ಸಭೆಯು…

Read More

ರಾಮಮಂದಿರ ಸ್ಫೋಟಕ್ಕೆ ಸಂಚು? ದಾವಣಗೆರೆಯಲ್ಲಿ ಶಂಕಿತ ಉಗ್ರ ಬಂಧನ

ದಾವಣಗೆರೆ: ಜಿಲ್ಲೆಯ ಹರಿಹರದಲ್ಲಿ ಬಂಧಿತನಾಗಿರುವ ಉತ್ತರ ಪ್ರದೇಶ ಮೂಲದ 20 ವರ್ಷದ ಶಂಕಿತ ಉಗ್ರ ಸುಹೇಲ್ ವಿಚಾರಣೆ ವೇಳೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಂಬ್ ಸ್ಫೋಟ ನಡೆಸುವ ಉದ್ದೇಶ ಹೊಂದಿದ್ದಾಗಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಹರಿಹರ ಕೈಗಾರಿಕಾ ಪ್ರದೇಶದ ಖಾಸಗಿ ಕಾರ್ಖಾನೆಯೊಂದರಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಸುಹೇಲ್ ತನ್ನ ನೈಜ ಚಟುವಟಿಕೆಗಳನ್ನು ಮರೆಮಾಚಿಕೊಂಡಿದ್ದ ಎನ್ನಲಾಗಿದೆ. ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಈ ಸಂಬಂಧ ಹರಿಹರ ಗ್ರಾಮಾಂತರ…

Read More

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಡೆಯಾರ್‌ಗೆ ಸನ್ಮಾನ

ಪುತ್ತೂರು: ಲಯನ್ಸ್ ಕ್ಲಬ್ ಮಂಗಳೂರು ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಲಯನ್ಸ್ ಜಿಲ್ಲೆಯ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡೆಯಾರ್ ವಿಟ್ಲ ಅವರನ್ನು ಪುತ್ತೂರಿನಲ್ಲಿ ನಡೆದ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ರಾಜೇಶ್ ಎಂ. ಕಾಮತ್ ಅವರು ಸುದರ್ಶನ್ ಪಡೆಯಾರ್ ಅವರನ್ನು ಗೌರವಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಮಾಜಿ ಅಧ್ಯಕ್ಷ ವಿಜಯ ವಿಷ್ಣುಮಯ್ಯ, 2026-28ನೇ ಸಾಲಿನ ಅಧ್ಯಕ್ಷ ಹೇಮಾರಾವ್, ಕಾರ್ಯದರ್ಶಿ ಸೀಮಾ ಮಯ್ಯ, ರಚನಾ…

Read More

ಬಿಸಿರೋಡಿನಲ್ಲಿ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ: 25 ವಾಹನಗಳ ವಿರುದ್ಧ ಪ್ರಕರಣ

ಬಂಟ್ವಾಳ: ಬಿಸಿರೋಡಿನ ಹೃದಯಭಾಗದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿದ್ದ ವಾಹನ ಸವಾರರ ವಿರುದ್ಧ ಟ್ರಾಫಿಕ್ ಎಸ್‌ಐ ಆದರ್ಶ್ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದೆ. ಜೊತೆಗೆ ಸಂಚಾರ ದಟ್ಟಣೆ ಮತ್ತು ಕಿರಿಕಿರಿ ಉಂಟು ಮಾಡುತ್ತಿದ್ದ ಬಸ್ ಹಾಗೂ ರಿಕ್ಷಾ ಚಾಲಕರಿಗೆ ಎಚ್ಚರಿಕೆ ನೀಡಿ ನಿಯಮ ಪಾಲನೆಯ ಪಾಠ ಮಾಡಿದ್ದಾರೆ. ಬಿಸಿರೋಡಿನ ಬಸ್ ನಿಲ್ದಾಣದ ಬಳಿ ಗ್ರಾಮೀಣ ಭಾಗಗಳಿಗೆ ಸಂಚರಿಸುವ ಖಾಸಗಿ ಬಸ್‌ಗಳು ಹಾಗೂ ಗ್ರಾಮೀಣ ಪರವಾನಗಿ ಹೊಂದಿರುವ ರಿಕ್ಷಾಗಳು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಿ ಸಂಚಾರಕ್ಕೆ ತೊಂದರೆ…

Read More

ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬಂಟ್ವಾಳ: ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಒಬ್ಬನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತನನ್ನು ಕಾಟಿಪಳ್ಳ ಸುರತ್ಕಲ್ ನಿವಾಸಿ ಮೊಹಮ್ಮದ್ ಆಯುಬ್ ಅವರ ಪುತ್ರ ಮೊಹಮ್ಮದ್ ಫರಾಜ್ ಎಂದು ಗುರುತಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯ ಅ.ಕ್ರ. 98/2023 ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಸಿ.ಸಿ. ನಂ. 440/2024 ಪ್ರಕರಣದಲ್ಲಿ ಫರಾಜ್ ವಾರಂಟ್ ಆರೋಪಿಯಾಗಿ ತಲೆಮರೆಸಿಕೊಂಡಿದ್ದನು. ಬಂಟ್ವಾಳ ನಗರ ಪೊಲೀಸ್ ಠಾಣೆಯ…

Read More

ಜ್ಞಾನವಿಕಾಸ ಯೋಜನೆಯಡಿ ಮಾದಕ ವಸ್ತು ನಿಷೇಧ ಮಸಾಚರಣೆ

ಕಲ್ಲಮುಂಡ್ಕೂರು ಪ್ರಾಥಮಿಕ ಶಾಲಾ ಬಳಿಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮ: ಮೂಡುಬಿದಿರೆ ತಾಲೂಕು ಕಲ್ಲಮುಂಡ್ಕೂರು ಗ್ರಾಮದ ಧರ್ಮಸ್ಥಳ ಜ್ಞಾನವಿಕಾಸ ಯೋಜನೆಯ ಆಶ್ರಯದಲ್ಲಿ ಜೂನ್ 23ರಂದು ಪ್ರಾಥಮಿಕ ಶಾಲಾ ಬಳಿಯ ಸಮುದಾಯ ಭವನದಲ್ಲಿ ನಡೆಯಿತು. ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಗ್ರಾಹಕ ವೇದಿಕೆಯ ಸಂಪನ್ಮೂಲ ವ್ಯಕ್ತಿ, ಹಿರಿಯ ಪತ್ರಕರ್ತ ರಾಯಿ ರಾಜ ಕುಮಾರರು ಮಾಹಿತಿದಾರರಾಗಿ ಆಗಮಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಮಾದಕ ವಸ್ತು ಬಳಕೆಯಿಂದಾಗುವ ಅನಾನುಕೂಲತೆ, ಅದರಿಂದ ಕುಟುಂಬದ ವ್ಯವಸ್ಥೆಯ ಮೇಲಾಗುವ ಪರಿಣಾಮಗಳು, ಆರೋಗ್ಯಕ್ಕೆ ಅತ್ಯಂತ ಹಾನಿಕರವಾದ ಗುಟ್ಕಾ,…

Read More

ಚಿತ್ರ ಕಲಾಲೋಕದ ಅಪ್ರತಿಮ ಸಾಧಕ ಬಿ.ಕೆ. ಮಾದವ ರಾವ್‌ಗೆ ‘ಕನ್ನಡ ಪಯಸ್ವಿನಿ ಚಿತ್ರ ಕಲಾರತ್ನ’ ಪ್ರಶಸ್ತಿ

ಮಂಗಳೂರು: ಚಿತ್ರಕಲಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದು ರಾಜ್ಯದಾದ್ಯಂತ ಗುರುತಿಸಿಕೊಂಡಿರುವ ಹಿರಿಯ ಕಲಾವಿದ ಬಿ.ಕೆ. ಮಾಧವ ರಾವ್ ಅವರು ಕನ್ನಡ ಭವನದ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಚಿತ್ರ ಕಲಾರತ್ನ ಅಚೀವ್‌ಮೆಂಟ್ ಅವಾರ್ಡ್–2026’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿರುವ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ’ದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ…

Read More
error: Content is protected !!