ಸಚಿವ ಯು.ಟಿ. ಖಾದರ್ ಅವರಿಗೆ ‘ರಾಜಕಾರಣದ ಅನರ್ಘ ರತ್ನ’ ಗೌರವ ಬಿರುದು
ಮಂಗಳೂರು: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317D ವತಿಯಿಂದ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ. ಖಾದರ್ ಅವರಿಗೆ ‘ರಾಜಕಾರಣದ ಅನರ್ಘ ರತ್ನ’ ಗೌರವ ಬಿರುದು ನೀಡಿ ಸನ್ಮಾನಿಸಲಾಯಿತು. ಜಿಲ್ಲೆಯ ಸಮಸ್ತ ಲಯನ್ಸ್ ಸದಸ್ಯರ ಪರವಾಗಿ ನಡೆದ ಈ ಗೌರವ ಸಮಾರಂಭದಲ್ಲಿ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ್ ಶೆಣೈ ಅಧ್ಯಕ್ಷತೆ ವಹಿಸಿ ಸಚಿವ ಯು.ಟಿ. ಖಾದರ್ ಅವರನ್ನು ಸನ್ಮಾನಿಸಿದರು. ಸಮಾಜಮುಖಿ ಸೇವೆ ಹಾಗೂ ಜನಪರ ಆಡಳಿತದ ಮೂಲಕ…
