ಬಿಳಿನೆಲೆ ಸಿಎ ಬ್ಯಾಂಕ್ ವಿರುದ್ಧದ ಆರೋಪಗಳು ಆಧಾರರಹಿತ: ವಾಡ್ಯಪ್ಪ ಗೌಡ

ಕಡಬ,ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ (ಸಿಎ ಬ್ಯಾಂಕ್) ವ್ಯವಹಾರಗಳ ಕುರಿತು ಕೆಲವರು ಸುಳ್ಳು ಆರೋಪ ಹಾಗೂ ಅಪಪ್ರಚಾರ ನಡೆಸುತ್ತಿದ್ದು, ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ಅಥವಾ ಅವ್ಯವಹಾರ ನಡೆದಿಲ್ಲ ಎಂದು ಸಂಘದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಸ್ಪಷ್ಟಪಡಿಸಿದರು. ಮಂಗಳವಾರ ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಆಡಳಿತ ಮಂಡಳಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಆರೋಪಗಳನ್ನು ಹರಿಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸತ್ಯ ಬಹಿರಂಗವಾಗಲೆಂದು ಕೋಡಿಂಬಾಳದ ಕಾರಣಿಕ ಕ್ಷೇತ್ರ ಮಜ್ಜಾರು ಶ್ರೀ ರಾಜನ್ ದೈವದ…

Read More

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಸಿ. ಪಾಟಾಳಿ ಪಡುಮಲೆ ನಿಧನ

ಪುತ್ತೂರು,: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಪುತ್ತೂರು ಘಟಕದ ಆಜೀವ ಸದಸ್ಯರು ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಸಿ. ಪಾಟಾಳಿ ಪಡುಮಲೆ (78) ಅವರು ಬುಧವಾರ ಮುಂಜಾನೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಶೈಕ್ಷಣಿಕ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಅವರು, ತಮ್ಮ ವೃತ್ತಿಜೀವನವನ್ನು ಸುಳ್ಯ ಪದವು ಅನುದಾನಿತ ಶಾಲೆಯಲ್ಲಿ ಆರಂಭಿಸಿದ್ದರು. ಬಳಿಕ ಈಶ್ವರಮಂಗಲ ಶಾಲೆಗೆ ವರ್ಗಾವಣೆಗೊಂಡು ಸಹ ಶಿಕ್ಷಕರಾಗಿ ಹಾಗೂ ನಂತರ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು. ಇತ್ತೀಚಿನ…

Read More

ದ.ಕ.ಜಿ.ಪಂ. ಕಿ.ಪ್ರಾ. ಶಾಲೆ ಏಮಾಜೆ: ಸಂಭ್ರಮದ ‘ಸೃಜನೋತ್ಸವ – 2026’ ವಿನೂತನ ಕಾರ್ಯಕ್ರಮ

ಮಾಣಿ : ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರಲು ಹಾಗೂ ಅವರ ಕನಸುಗಳ ಸಾಕಾರಕ್ಕಾಗಿ ಸಂತಸದಾಯಕ ಕಲಿಕಾ ವಾತಾವರಣ ಅತ್ಯಗತ್ಯ” ಎಂದು ಬಂಟ್ವಾಳ ಬಿ.ಐ.ಆರ್.ಟಿ. ಸುರೇಖಾ ಏರವಾಳ ಅಭಿಪ್ರಾಯಪಟ್ಟರು. ಅವರು ಬಂಟ್ವಾಳ ತಾಲೂಕಿನ ನೆಟ್ಲಾ ಮುಡ್ಡೂರು ಗ್ರಾಮದ ದ. ಕ. ಜಿ. ಪಂ. ಕಿರಿಯ ಪ್ರಾಥಮಿಕ ಶಾಲೆ ಏಮಾಜೆ ಇಲ್ಲಿ ಜೂನ್ 16, ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದ *ಸೃಜನೋತ್ಸವ -2026’ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಅವರು ಶಾಲೆಯ ಮಹತ್ವಾಕಾಂಕ್ಷೆಯ ದ್ವಿ-ಭಾಷಾ ಮಾಧ್ಯಮಕ್ಕೂ ಚಾಲನೆ ನೀಡಿದರು. ವಿವಿಧ ಯೋಜನೆಗಳ…

Read More

ಜೂನ್ 19ರಂದು ಲಯನ್ಸ್ ಸೇವಾ ಸದನದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್‌ಗೆ ಸನ್ಮಾನ

ಮಂಗಳೂರು,: ಲಯನ್ಸ್ ಕ್ಲಬ್‌ನ ಹೆಮ್ಮೆಯ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರಿಗೆ ಲಯನ್ಸ್ ಸದಸ್ಯರ ಪರವಾಗಿ ಸನ್ಮಾನ ಕಾರ್ಯಕ್ರಮವನ್ನು ಜೂನ್ 19ರಂದು ಬೆಳಿಗ್ಗೆ 10.30ಕ್ಕೆ ಅಸೈಗೋಳಿಯ ಲಯನ್ಸ್ ಸೇವಾ ಸದನದಲ್ಲಿ ಆಯೋಜಿಸಲಾಗಿದೆ. ಲಯನ್ಸ್ ಜಿಲ್ಲೆ ಹಾಗೂ ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಲಯನ್ಸ್ ಕ್ಲಬ್‌ಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ರಾಜ್ಯಪಾಲ ಕುಡುಪಿ ಅರವಿಂದ್ ಶೆಣೈ ಹಾಗೂ ಮಾಜಿ ರಾಜ್ಯಪಾಲ ದೇವದಾಸ್…

Read More

ರೈಲ್ವೇ ಲೆವೆಲ್ ಕ್ರಾಸಿಂಗ್ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ; ಆರು ಚಾಲಕರ ಪರವಾನಿಗೆ ಅಮಾನತು

ಮಂಗಳೂರು: ರೈಲ್ವೇ ಲೆವೆಲ್ ಕ್ರಾಸಿಂಗ್‌ಗಳಲ್ಲಿ ನಿಯಮ ಉಲ್ಲಂಘಿಸಿ ಅಪಘಾತಗಳಿಗೆ ಕಾರಣವಾಗುತ್ತಿರುವ ಪ್ರಕರಣಗಳನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಪಾಲಕ್ಕಾಡ್ ವಿಭಾಗದ ಪ್ರಕಟಣೆಯ ಪ್ರಕಾರ, ರಸ್ತೆ ಬಳಕೆದಾರರ ನಿರ್ಲಕ್ಷ್ಯದಿಂದ 2025 ಮತ್ತು 2026ರ ಅವಧಿಯಲ್ಲಿ ಒಟ್ಟು 79 ಲೆವೆಲ್ ಕ್ರಾಸಿಂಗ್ ಅಪಘಾತಗಳು ಸಂಭವಿಸಿವೆ. ಇದರಲ್ಲಿ 2025ರಲ್ಲಿ 55 ಹಾಗೂ 2026ರಲ್ಲಿ 24 ಪ್ರಕರಣಗಳು ದಾಖಲಾಗಿವೆ. ಗೇಟ್‌ಗಳನ್ನು ಮುಚ್ಚಿದ್ದರೂ ಅಥವಾ ಎಚ್ಚರಿಕೆ ಸಂಕೇತಗಳನ್ನು ನಿರ್ಲಕ್ಷಿಸಿ ರೈಲು ಹಳಿಗಳನ್ನು ದಾಟಲು…

Read More

ಬೆಳೆವಿಮೆ ಪರಿಹಾರಕ್ಕೆ ರೈತರಿಗೆ ಸಿಹಿಸುದ್ದಿ: ಪಕ್ಕದ ಪಂಚಾಯತ್ ಮಳೆ ವರದಿಗೂ ಮಾನ್ಯತೆ

ಬಂಟ್ವಾಳ: ಬೆಳೆವಿಮೆ ಮೌಲ್ಯಮಾಪನಕ್ಕೆ ಮಳೆಮಾಪಕ ಸರಿ ಇಲ್ಲದಿದ್ದರೆ ಹತ್ತಿರದ ಎರಡು ಪಂಚಾಯತ್ ಗಳ ವರದಿ ಪರಿಗಣನೆ ಮಾಡಿಕೊಳ್ಳಲು ಅವಕಾಶವಿದೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಹೇಳಿದ್ದಾರೆ.ಬಂಟ್ವಾಳ ತಾ.ಪಂ. ಆಡಳಿತಾಧಿಕಾರಿ ಇಬ್ರಾಹಿಂ ದೊಡ್ಡಮನಿ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಅವರು ಮಳೆಮಾಪಕಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಬಗ್ಗೆ ದೂರುಗಳ ಕುರಿತು ಪ್ರಸ್ತಾವಿಸಿ, ಈ…

Read More

ಜ್ವರದಿಂದ ಬಳಲುತ್ತಿದ್ದ 5 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಬಂಟ್ವಾಳ,: ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆಯಲ್ಲಿ ನಡೆದಿದೆ. ಅಲ್ಲಿಪಾದೆಯ ಅನೇಜ ಛಾಯ ಅವರ ಪುತ್ರಿ ಅರ್ನಿಕಾ (5) ಮೃತ ಬಾಲಕಿ. ಆಕೆ ಬಂಟ್ವಾಳ ದೇವಳ ಶಾಲೆಯ ಯುಕೆಜಿ ವಿದ್ಯಾರ್ಥಿನಿಯಾಗಿದ್ದಳು. ಕಳೆದ ಶುಕ್ರವಾರ ಶಾಲೆಗೆ ತೆರಳಿದ್ದ ಬಾಲಕಿಗೆ ಬಳಿಕ ಜ್ವರ ಕಾಣಿಸಿಕೊಂಡಿದ್ದು, ಶನಿವಾರ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಳು. ಜ್ವರ ತೀವ್ರಗೊಂಡ ಹಿನ್ನೆಲೆಯಲ್ಲಿ ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ…

Read More

ಆರ್‌ಎಸ್‌ಎಸ್ ನೋಂದಣಿ ಮಾಡಿಕೊಂಡರೆ ಉತ್ತಮ: ಹರೀಶ್ ಕುಮಾರ್

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸೇರಿದಂತೆ ದೇಶದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಂಘಟನೆಗಳು ಕಾನೂನಿನಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಆರ್‌ಎಸ್‌ಎಸ್ ಕೂಡ ನೋಂದಣಿ ಮಾಡಿಕೊಂಡರೆ ಉತ್ತಮ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಂಘಟನೆ ಸಾರ್ವಜನಿಕವಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ಸಂಘಟನೆಯ ಚಟುವಟಿಕೆಗಳಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಕಾಪಾಡಲು ನೋಂದಣಿ ಅಗತ್ಯವಾಗಿದೆ ಎಂದು ಹೇಳಿದರು. ದೇಶದ ವಿವಿಧ ಸಾಮಾಜಿಕ,…

Read More

ಪರಿಸರದ ನಾಶಕ್ಕೆ ಮಾನವನ ಆಸೆ-ದುರಾಸೆಗಳೇ ಕಾರಣ: ಅನಿಲ್ ಪಂಡಿತ್

ಕಲ್ಲಡ್ಕ,: ಪರಿಸರದ ನಾಶಕ್ಕೆ ಮಾನವನ ಅತಿಯಾದ ಆಸೆ ಮತ್ತು ದುರಾಸೆಗಳೇ ಪ್ರಮುಖ ಕಾರಣವಾಗಿದ್ದು, ಪರಿಸರವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸಂಸ್ಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಹೇಳಿದರು. ಅವರು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ) ಹಾಗೂ ಜವಾಹರ ಬಾಲ್ ಮಂಚ್, ದಕ್ಷಿಣ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಭದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ, ವನಮಹೋತ್ಸವ ಹಾಗೂ ಬಾಲಕಾರ್ಮಿಕ…

Read More

ಬಂಟ್ವಾಳದಲ್ಲಿ ಬಿಜೆಪಿ ವಿಶೇಷ ಸಂಪರ್ಕ ಅಭಿಯಾನ: ಹಿರಿಯ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ಸಂಸದ ಬ್ರಿಜೇಶ್ ಚೌಟ

ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಸುದೀರ್ಘ 12 ವರ್ಷಗಳ ಜನಪರ ಆಡಳಿತ, ಅಭಿವೃದ್ಧಿ ಮತ್ತು ಸೇವಾ ಸಂಕಲ್ಪದ ಅಂಗವಾಗಿ ಬಂಟ್ವಾಳ ಮಂಡಲದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರಿಂದ ವಿಶೇಷ ಸಂಪರ್ಕ ಅಭಿಯಾನ ನಡೆಯಿತು.ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಹಿರಿಯರ ಸೂಚನೆಯಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಕಾರ್ಯಕರ್ತರ ಜೊತೆ ಹಿರಿಯ ಬಿಜೆಪಿ ಕಾರ್ಯಕರ್ತರ ಮನೆಗೆ ಬೇಟಿ ನೀಡಿ ಗೌರವಿಸುವ ಕಾರ್ಯ ಮಾಡಿದ್ದೇನೆ‌…

Read More
error: Content is protected !!