ಬಾವಿಯಲ್ಲಿ ಮಹಿಳೆಯ ಶವ ಪತ್ತೆ.

ಮಂಜೇಶ್ವರ:ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಮಂಜೇಶ್ವರ ಸಮೀಪದ ಮೀಯಪದವು ಅಡ್ಕದಗುರಿ ಎಂಬಲ್ಲಿ ನಡೆದಿದೆ.ಅಡ್ಕದಗುರಿಯ ಐರಿನ್ ಡಿಸೋಜ (60) ಮೃತಪಟ್ಟವರು. ಬುಧವಾರ ರಾತ್ರಿ ಮಲಗಿದ್ದ ಐರಿನ್ ಬೆಳಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿದ್ದರು. ಶೋಧ ನಡೆಸಿದಾಗ ಮೃತದೇಹ ಮನೆ ಅಂಗಳದ ಬಾವಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತಲಪಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದರು. ಮಂಜೇಶ್ವರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.

Read More

ಮಂಜೇಶ್ವರದೆಲ್ಲೆಡೆ ಸಂಭ್ರಮದ ಈದ್ ಮಿಲಾದ್.

ಮಂಜೇಶ್ವರ: ಪ್ರವಾದಿ ಹಜರತ್ ಮುಹಮ್ಮದ್ ನಬಿ (ಸ.ಅ.ವ) ಅವರ ಜನ್ಮ ದಿನಾಚರಣೆಯಾದ ಈದ್ ಮಿಲಾದ್ ಉಲ್ ನಬಿ ಪವಿತ್ರತೆಯೊಂದಿಗೆ ಹಾಗೂ ಭಕ್ತಿ ಭಾವದಿಂದ ಮಂಜೇಶ್ವರದಾದ್ಯಂತ ಆಚರಿಸಲಾಯಿತು. ಮಸೀದಿಗಳಲ್ಲಿ ವಿಶೇಷ ಮೌಲೂದ್ ಪಠಣ, ಧಾರ್ಮಿಕ ಉಪನ್ಯಾಸಗಳು ಮತ್ತು ಪ್ರಾರ್ಥನೆಗಳು ನೆರವೇರಿದವು. ಮಂಜೇಶ್ವರದ ಪ್ರಮುಖ ಬೀದಿಗಳು ಹಸಿರು ಧ್ವಜಗಳು, ಬೆಳಕಿನ ಅಲಂಕಾರ ಮತ್ತು ಧಾರ್ಮಿಕ ಸಂದೇಶಗಳಿಂದ ಕಂಗೊಳಿಸಿತು. ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರೂ ಶೋಭಾಯಾತ್ರೆಗಳಲ್ಲಿ ಪಾಲ್ಗೊಂಡು ಪ್ರವಾದಿಯ ಜೀವನೋಪದೇಶಗಳನ್ನು ಸ್ಮರಿಸಿದರು. ಧಾರ್ಮಿಕ ಪಂಡಿತರು ಪ್ರವಾದಿಯ ಆದರ್ಶಗಳನ್ನು ಪಾಲಿಸುವ ಮಹತ್ವವನ್ನು…

Read More

ವರ್ಕಾಡಿ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಮತದಾರರ ಪಟ್ಟಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಂಚುವ ಕಾರ್ಯಕ್ರಮ.

ಮಂಜೇಶ್ವರ :ವರ್ಕಾಡಿ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಮತದಾರರ ಪಟ್ಟಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಂಚುವ ಕಾರ್ಯಕ್ರಮ ನಡೆಯಿತು. .ಕಾರ್ಯಕ್ರಮದಲ್ಲಿ ವರ್ಕಾಡಿ ಮಂಡಲ ಅಧ್ಯಕ್ಷ ಪುರುಷೋತ್ತಮ ಅರಿಬೈಲ್ ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ. U. D.F.ಅಧ್ಯಕ್ಷ ಮಜಲ್ ಮಹಮ್ಮದ್. ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಗಣೇಶ್ ಪಾವೂರು. ಕಾಂಗ್ರೆಸ್ ಕಾರ್ಯದರ್ಶಿವಸಂತ ರಾಜ್ ಸದಾಶಿವ ಆಜೀಸ್ ಕಲ್ಲೂರು ಮಹಮ್ಮದ್ ಕೆದುoಬಾಡಿ ಇನ್ನು ಹಲವು ನಾಯಕರು ಕಾರ್ಯಕರ್ತರು ಭಾಗವಹಿಸಿದರು

Read More

ಕೈಕಂಬದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ. ಪರಿಹಾರವನ್ನು ಕಲ್ಪಿಸದ ಅಧಿಕಾರಸ್ಥರ ವಿರುದ್ಧ ಪ್ರತಿಭಟನೆ.

ಮಂಜೇಶ್ವರ : ಕೈಕಂಬದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯಗಳಿಗೆ ಯಾವುದೇ ಪರಿಹಾರವನ್ನು ಕಲ್ಪಿಸದ ಅಧಿಕಾರಸ್ಥರ ವಿರುದ್ಧ ಹಾಗೂ ಕೈಕಂಬದ ಅಪಾರ್ಟ್‌ಮೆಂಟೊಂದರ ಮಲಿನ ಜಲವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಡುವುದರ ವಿರುದ್ಧ ಕೈಕಂಬ ಮಾಲಿನ್ಯಮುಕ್ತ ಕ್ರಿಯಾ ಸಮಿತಿ ಪ್ರತಿಭಟನೆ ನಡೆಸಿತು. ಕೈಕಂಬ ಅಪಾರ್ಟ್‌ಮೆಂಟ್‌ನಿಂದ ಸಮೀಪ ನಿವಾಸಿಗಳ ಕುಡಿಯುವ ನೀರಿನ ಮೂಲ ಕೂಡಾ ಮಲಿನೀಕರಣಗೊಳ್ಳುತ್ತಿದ್ದು ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸಲಾಗುತಿದ್ದರೂ ಇವರ ವಿರುದ್ಧ ನಿರಂತರ ದೂರು ನೀಡಲಾಗುತಿದ್ದರೂ ಇದ್ಯಾವುದನ್ನೂ ಲೆಕ್ಕಿಸದೆ ನಿರಂತರವಾಗಿ ಫ್ಲಾಟ್‌ನಿಂದ ಮಲಿನ ಜಲವನ್ನು ಸಾರ್ವಜನಿಕ ಸ್ಥಳಗಳಿಗೆ ಹರಿಯಬಿಡಲಾಗುತ್ತಿದ್ದರೂ ಈ…

Read More

ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಮೀಲಾದ್ ಆಚರಣೆ.

ಪುಚ್ಚತ್ತವಯಲ್: ಪ್ರವಾದಿ ಹಜ್ರತ್ ಮುಹಮ್ಮದ್ ಮುಸ್ತಫಾ (ಸ.ಅ) ಅವರ 1500ನೇ ಜನ್ಮದಿನಾಚರಣೆ ಅಂಗವಾಗಿ ಹಯಾತುಲ್ ಇಸ್ಲಾಂ ಮದ್ರಸ, ಪುಚ್ಚತ್ತವಯಲ್‌ನಲ್ಲಿ ಭಕ್ತಿಪೂರ್ಣ ಮೀಲಾದ್ ರ‍್ಯಾಲಿ ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಮಾಅತ್ ಖತೀಬ್ ಉಮರುಲ್ ಫಾರೂಖ್ ಹನೀಫಿ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ಮದ್ರಸ ವಿದ್ಯಾರ್ಥಿಗಳು ವರ್ಣರಂಜಿತ ಘೋಷಯಾತ್ರೆಯಲ್ಲಿ ಭಾಗವಹಿಸಿದರು. ದಫ್, ಸ್ಕೌಟ್ ಮತ್ತು ಹೂವಿನಿಂದ ಅಲಂಕರಿಸಿದ ಫ್ಲವರ್‌ಶೋಗಳು ಮೀಲಾದ್ ರ‍್ಯಾಲಿಗೆ ಮೆರುಗು ನೀಡಿದವು. ಮೀಲಾದ್ ರ‍್ಯಾಲಿಯು ಮಚ್ಚಂಬಾಡಿ ಜುಮಾ ಮಸೀದಿಯಿಂದ ಕೋಡಿ…

Read More

ಪ್ರಶಾಂತಿ ವಿದ್ಯಾ ಕೇಂದ್ರ, ಬಾಯಾರು — ಓಣಂ ಹಬ್ಬದ ಸಂಭ್ರಮ

ಬಾಯಾರು: ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ 04-09-2025 ರಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಓಣಂ ಆಚರಣೆಯ ಮಹತ್ವದ ಮಾತಿನೊಂದಿಗೆ ಪ್ರಾರಂಭವಾಗಿ ಸೊಗಸಾದ ಓಣಂ ಪೂಕಳಂ ರಚಿಸಿ ಅಲಂಕಾರ ದ ವೇದಿಕೆಯಲ್ಲಿ ಈ ತಿಂಗಳ ಮಾಸಪತ್ರಿಕೆಯನ್ನು ಬಿಡುಗಡೆ ಗೊಳಿಸಿದ ಅತಿಥಿಗಳಾದ ಪೆಳತ್ತಡ್ಕ ಶ್ರೀ ರಾಮಕೃಷ್ಣ ಭಟ್ ,ವ್ಯವಸ್ಥಾಪಕರಾದ ಶ್ರೀ ಎಚ್ ಮಹಾಲಿಂಗ ಭಟ್ , ಟ್ರಸ್ಟ್ ಸದಸ್ಯರಾದ ಪಯ್ಯರಕೋಡಿ ಶ್ರೀ ಸದಾಶಿವ ಭಟ್ , ಶಾಲಾ ಪ್ರಾಂಶುಪಾಲರಾದ ಶ್ರೀ ವಾಮನನ್,ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಾಕ್…

Read More

ಮೀಂಜ ಪಂಚಾಯತ್ NREG ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಮಾರ್ಚ್ ಹಾಗೂ ಧರಣಿ

ಮಂಜೇಶ್ವರ : ಮೀಂಜ ಪಂಚಾಯತ್ NREG ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಮೀಯಪದವು ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು. ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೇರಳ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ಕೆ.ಆರ್.ಜಯಾನಂದ ಉದ್ಘಾಟಿಸಿದರು. ಅಧ್ಯಕ್ಷತೆ NREG ಏರಿಯಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಎಲಿಯಾನ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ, ಲೋಕಲ್ ಕಾರ್ಯದರ್ಶಿ ಲೋಕೇಶ್ ಚಿನಾಲ, ಮಹಿಳಾ ಅಸೋಸಿಯೇಶನ್ ನ ನೇತಾರೆ ಶ್ರೀಮತಿ ಐರಿನ್ ಜೋಸ್ಫಿನ್…

Read More

ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ” ಯಲ್ಲಿ ಓಣಂ ಹಬ್ಬ ಆಚರಣೆ.

ಚಿಗುರುಪಾದೆ ಮೀಂಜ ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ” ಯಲ್ಲಿ ಜರಗಿದ ಓಣಂ ಹಬ್ಬವನ್ನು, ಉದುಮ ಶಾಸಕ ಸಿ.ಎಚ್.ಕುಂಞಂಬು ರವರು ಪೂಕಳಂ ನ ದೀಪ ಬೆಳಗಿಸಿ ಉದ್ಘಾಟಿಸಿದರು. ಸೊಸೈಟಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ,ಉಪಾಧ್ಯಕ್ಷ ಶ್ರೀ ರವೀಂದ್ರ ಶೆಟ್ಟಿ ಬೊಳ್ಳಾರು, ನಿರ್ದೇಶಕರುಗಳಾದ ಶ್ರೀ ರವೀಂದ್ರ ನ್, ಲೋಕೇಶ್ ಚಿನಾಲ, ರಾಮಚಂದ್ರ ಟಿ. ಶ್ರೀಮತಿ ಚಂದ್ರಾವತಿ ಕು ಳೂರು, ಶ್ರೀ ವಿಶ್ವನಾಥ,ಶ್ರೀ ಮೊಹಮ್ಮದ್ ಖಾಲಿದ್ ಮೊದಲಾದವರು ಭಾಗವಹಿಸಿದರು. ಸೊಸೈಟಿ ಕಾರ್ಯದರ್ಶಿ ಶ್ರೀ ಉದಯ ಚಿನಾಲ ಸ್ವಾಗತಿಸಿ, ಸಿಬ್ಬಂದಿ…

Read More

ಕೇರಳ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ಸಾಂಸ್ಕೃತಿಕ ಭವನ ಉದ್ಘಾಟಣೆ

2022-23ನೇ ಸಾಲಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ರೂ.40.00ಲಕ್ಷಗಳ ಅನುದಾನದಿಂದ ಗಡಿ ಭಾಗದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಇವರ ಮೂಲಕ ಮಹಾಜನ ಸಂಸ್ಕೃತ ಕಾಲೇಜು, ಹೈಯರ್ ಸೆಕೆಂಡರಿ ಶಾಲೆ, ಪೆರಡಾಲ, ನೀರ್ಚಾಲು, ನೀರ್ಚಾಲು (ಅಂಚೆ), ಕುಂಬಳೆ (ದಾರಿ), ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಶತಮಾನ ಕಂಡ ಕನ್ನಡ ಶಾಲೆಯ ಆವರಣದಲ್ಲಿ ನಿರ್ಮಿಸಲಾಗಿರುವ ಸಾಂಸ್ಕೃತಿಕ ಭವನವನ್ನು ನಿನ್ನೆ ಉದ್ಘಾಟನೆ ಮಾಡಲಾಯಿತು..

Read More

ಕಾಸರಗೋಡು ಜಿಲ್ಲೆಯ ಕೆ.ಪಿ.ಎಸ್.ಎಂ.ಎ.ಯ ನೇತೃತ್ವದಲ್ಲಿ, ಕಾಞ್ಙಂಗಾಡು ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸಾಮೂಹಿಕ ಧರಣಿ

ಕಾಸರಗೋಡು ಜಿಲ್ಲೆಯ ಕೆ.ಪಿ.ಎಸ್.ಎಂ.ಎ.ಯ ನೇತೃತ್ವದಲ್ಲಿ, ಕಾಞ್ಙಂಗಾಡು ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸಾಮೂಹಿಕ ಧರಣಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಮಣಿ ಕೊಲ್ಲಂ ಉದ್ಘಾಟಿಸಿದರು. ಕೇರಳದ ಎಯ್ಡೆಡ್ ಶಾಲೆಗಳ ವ್ಯವಸ್ಥಾಪಕರು ಎದುರಿಸುತ್ತಿರುವ ತೊಂದರೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕು, ಇಲ್ಲವಾದರೆ ರಾಜ್ಯದಾದ್ಯಂತ ಪ್ರಬಲವಾದ ಪ್ರತಿಭಟನೆಗಳನ್ನು ಸಂಘಟಿಸಲಾಗುವುದೆಂದು ಪ್ರಧಾನ ಕಾರ್ಯದರ್ಶಿ ಹೇಳಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಕೆ. ರಾಜನ್ ನಾಯರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೀವನ್ ಮೇಲನಡಿ, ಪ್ರಸೀತ್ ಕುಮಾರ್, ಎಸ್.ಎನ್. ಶರ್ಮ, ಶ್ರೀಧರ ರಾವ್, ಜಯದೇವ…

Read More
error: Content is protected !!