ಪಾಂಗೋಡು ನವರಾತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆ.

ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ವರ್ಷಮ್ಪ್ರತಿ ನಡೆಯುವ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆ ಶ್ರೀ ಕ್ಷೇತ್ರ ಪಾತ್ರಿಗಳಾದ ಪಾಂಗೋಡು ಪ್ರವೀಣ್ ನಾಯಕ್ ಬಿಡುಗಡೆ ಗೊಳಿಸಿದರು. ಕ್ಷೇತ್ರ ಕುಟುಂಬಸ್ಥರು ಹಾಗೂ ಭಕ್ತ ಭಾಂದವರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Read More

ಕೇಂದ್ರ ಹಾಗೂ ಕೇರಳ ಸರಕಾರಗಳ ದುರಾಡಳಿತಗಳಿಂದ ಜನಸಾಮಾನ್ಯರು ತೊಂದರೆಯಲ್ಲಿ -ಮುಂದಿನ ಚುನಾವಣೆಯಲ್ಲಿ ಎರಡೂ ಪಕ್ಷಗಳು ನೆಲ ಕಚ್ಚಲಿವೆ- ಶ್ರೀ ಸುಂದರ ಆರಿಕ್ಕಾಡಿ

ಕೇಂದ್ರ ಹಾಗೂ ಕೇರಳ ಸರಕಾರಗಳ ದುರಾಡಳಿತಗಳಿಂದ ಜನಸಾಮಾನ್ಯರು ರೋಸಿ ಹೋಗಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ನೆಲ ಕಚ್ಚಲಿವೆ ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸುಂದರ ಆರಿಕ್ಕಾಡಿ ಹೇಳಿದ್ದಾರೆ.ವರ್ಕಾಡಿ ಮಂಡಲ ಕಾಂಗ್ರೆಸ್ ವತಿಯಿಂದ ಶ್ರೀ ಉಮ್ಮರ್ ಬೋರ್ಕಳರ ನಿವಾಸದಲ್ಲಿ ನಡೆದ ಮಂಡಲ ಮಟ್ಟದ ಕಾಂಗ್ರೆಸ್ ಗೃಹಸಂದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಗೃಹಸಂದರ್ಶನ ಕಾರ್ಯಕ್ರಮದ ಉದ್ದೇಶಗಳ ಕುರಿತು ವಿವರಣೆ…

Read More

ಕೇಂದ್ರ-ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳಿಗೆದುರು ನಿರಂತರ ಹೋರಾಟ- ಕಾಂಗ್ರೆಸ್

ಕೇಂದ್ರದ ಮೋದಿ ಸರಕಾರ ಹಾಗೂ ಕೇರಳದ ಎಡರಂಗ ಸರಕಾರಗಳು ಜನತೆಗೆ ಕಿರುಕುಳ ನೀಡುವಲ್ಲಿ ಪರಸ್ಪರ ಸ್ಪರ್ಧಿಸುತ್ತಿದ್ದು, ಜನರ ಪ್ರತಿಭಟನೆಯ ಹಾದಿ ತಪ್ಪಿಸಲು ಮಹಿಳೆಯರನ್ನು ಮುಂದಿಟ್ಟು ಅಪವಾದ ಪ್ರಚಾರದಲ್ಲಿ ನಿರತವಾಗಿದ್ದು, ಇವುಗಳ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ, ಅದರ ಭಾಗವಾಗಿ ಗೃಹಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನತೆಯ ಆಶೀರ್ವಾದ ಬಯಸುತ್ತಿದ್ದೇವೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ. ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಶ್ರೀ ಅಶ್ರಫ್ ಮುಟ್ಟಂ ಅವರ ನಿವಾಸದಲ್ಲಿ ನಡೆದ…

Read More

ಎಡಬಿಡದೆ ಸುರಿಯುತ್ತಿರುವ ವರುಣಾರ್ಭಟ-ಕಾಸರಗೋಡಿನ ಮಧೂರು ಶ್ರೀ ಸಿದ್ದಿ ವಿನಾಯಕ ಕ್ಷೇತ್ರ ಸಂಪೂರ್ಣ ಜಲಾಮಯ

ಕಾಸರಗೋಡು: ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ವರುಣಾರ್ಭಟಕ್ಕೆ ಕಾಸರಗೋಡಿನ ಮಧೂರು ಶ್ರೀ ಸಿದ್ದಿ ವಿನಾಯಕ ಕ್ಷೇತ್ರ ಸಂಪೂರ್ಣ ಜಲಾಮಯವಾಗಿದೆ . ಈ ಮೂಲಕ ಸತತ ಮೂರನೇ ಬಾರಿಗೆ ಮಳೆಯಿಂದ ಮಧು ವಾಹಿನಿ ನದಿ ಉಕ್ಕೇರಿ ಹರಿದು ದೇವಾಲಯ ಜಲಾಮಯವಾಗಿದೆ . ಮಳೆಯಿಂದಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಕೊಂಚ ಮಟ್ಟಿಗೆ ಕಿರಿಕಿರಿಯನ್ನೇ ಉಂಟು ಮಾಡಿದೆ . ಹೀಗಾಗಿ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತು . ಆದ್ರೆ ಇದೀಗ ಮಳೆ ಆರ್ಭಟ ಕಮ್ಮಿಯಾಗಿದ್ದು ದೇವಾಲಯಕ್ಕೆ…

Read More

ಕಣ್ಣೂರು, ಕನ್ನಪುರಂ ಬಾಡಿಗೆ ಮನೆಯಲ್ಲಿ ಬಾಂಬ್ ಸ್ಪೋಟ, ಓರ್ವ ಮೃತ್ಯು

ಕಣ್ಣೂರು: ಕಣ್ಣೂರಿನ ಕನ್ನಪುರಂ ಬಾಡಿಗೆ ಮನೆಯೊಂದರಲ್ಲಿ ಬಾಂಬ್ ಸ್ಪೋಟಗೊಂಡು ವ್ಯತಿಯೋರ್ವನು ಮೃತ ಪಟ್ಟಿರುವಂತಹ ಘಟನೆಯೊಂದು ಮಧ್ಯರಾತ್ರಿ ೨ ಗಂಟೆಯ ಸುಮಾರಿಗೆ ನಡೆದಿದೆ . ಬಾಂಬು ಅಥವಾ ಸ್ಪೋಟಕ ವಸ್ತು ನಿರ್ಮಾಣದ ವೇಳೆ ಸ್ಪೋಟಗೊಂಡಿರಬೇಕು ಎಂದು ಅನುಮಾನವಿದೆ . ಭಾರೀ ಸ್ಪೋಟದ ಶಬ್ದ ಕೇಳಿ ಎಚ್ಚರಗೊಂಡು ಓಡಿ ಬ೦ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ಗೋವಿ೦ದನ್ ಎ೦ಬವರ ಮಾಲಕತ್ವದ ಮನೆ ಇದಾಗಿದ್ದು ಅನೂಪ್ ಎಂಬವರಿಗೆ…

Read More

ಸ್ಕೂಟರ್ ಡಿವೈಡರ್ ಗೆ ಡಿಕ್ಕಿ : ಯುವಕನ ದಾರುಣ ಅಂತ್ಯ

ಮಂಜೇಶ್ವರ : ಕುಂಬಳೆ ರಾ.ಹೆದ್ದಾರಿಯಲ್ಲಿ ಸ್ಕೂಟರ್ ಡಿವೈಡರ್ ಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಶುಕ್ರವಾರ ರಾತ್ರಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಪಚ್ಚಂಬಳ ದೀನಾರ್ ನಗರದ ಮೊಹಮ್ಮದ್ ಹಾಗೂ ಖೈರುನ್ನಿಸಾ ದಂಪತಿಗಳ ಪುತ್ರ ಈಚು ಯಾನೆ ಯೂಸುಫ್ (20) ಸಾವನ್ನಪ್ಪಿದ ದುರ್ದೈವಿ.ಅಪಘಾತ ನಡೆದ ಕೂಡಲೇ ಯುವಕನನ್ನು ಆಸ್ಪತ್ರೆಗೆ ತಲಪಿಸಿದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ.ಶವ ಶರೀರವನ್ನು ಕುಂಬಳೆ ಸಹಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ. ಶಿರಿಯಾ ಶಾಲೆಯಲ್ಲಿ ಓಣಂ ಹಬ್ಬದಲ್ಲಿ ಪಾಲ್ಗೊಂಡು ಸ್ನೇಹಿತನೊಬ್ಬನನ್ನು ಮೊಗ್ರಾಲಿನಲ್ಲಿ ಇಳಿಸಿ ಪಚ್ಚಂಬಳಕ್ಕೆ ಮರಳುತಿದ್ದ ದಾರಿ ಮಧ್ಯೆ…

Read More

ದುರಂತಗಳ ಸರಮಾಲೆ…ವಾಹನ ಅಪಘಾತಗಳಲ್ಲಿ ಅಜ್ಜಿನಡ್ಕ ಸಾಮನಿಗೆ ಕುಟುಂಬ ಕಳೆದುಕೊಂಡಿದ್ದು ಒಟ್ಟು 12 ಜೀವಗಳನ್ನು!

ಮಂಜೇಶ್ವರ : ತಲಪಾಡಿ ಕೆ.ಸಿ.ರೋಡು ಸಮೀಪದ ಅಜ್ಜಿನಡ್ಕ ಸಾಮಾನಿಗೆ ಕುಟುಂಬಕ್ಕೆ ದುರಂತಗಳ ಸರಮಾಲೆಯೇ ಇದೆ. ಒಟ್ಟು ನಾಲ್ಕು ಅಪಘಾತಗಳನ್ನಾಗಿ ಈ ಕುಟುಂಬಕ್ಕೆ ಸಂಬಂಧಪಟ್ಟ 12 ಮಂದಿ ಸಾವನ್ನಪ್ಪಿದ್ದಾರೆ.ಗುರುವಾರದಂದು ತಲಪಾಡಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ತಾರುಣ ಸಾವಿಗೀಡಾದ ಆರು ಮಂದಿ ಪೈಕಿ ಐದು ಮಂದಿ ಇದೇ ಕುಟುಂಬಕ್ಕೆ ಸೇರಿದವರು. ಒಂದರ ಹಿಂದೆ ಒಂದರಂತೆ ರಸ್ತೆ ಅಪಘಾತಕ್ಕೀಡಾಗಿ ಈ ಕುಟುಂಬದ ಸದಸ್ಯರು ಸಾವಿಗೀಡಾಗುವುದು ನಿಜಕ್ಕೂ ದಾರುಣ ಸಂಗತಿ.2018 ಜುಲೈ 9 ರಂದು ಮುಂಜಾನೆ ಉಪ್ಪಳ ಸಮೀಪದ ನಯಾಬಜಾರ್ ಬಳಿ ಅಜ್ಜಿನಡ್ಕ…

Read More

NREG ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಮೀಯಪದವು ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ.

ಮೀಂಜ ಪಂಚಾಯತ್ NREG ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ,ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲು ಗೊಳಿಸುವ ಕೇಂದ್ರ ಸರಕಾರದ ಧೋರಣೆಗೆದುರಾಗಿ ಹಾಗೂ ಕೇಂದ್ರ ಸರ್ಕಾರದ ತೀರ್ಮಾನವನ್ನು ತಿದ್ದುಪಡಿಗೊಳಿಸುವಂತೆ ಆಗ್ರಹಿಸಿ ,ಮೀಯಪದವು ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು. f ಧರಣಿ ಯ ಉದ್ಘಾಟನೆ ಯನ್ನು ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ ಕೇರಳ ರೈತ ಸಂಘದ ರಾಜ್ಯ ಸಮಿತಿ ಸದಸ್ಯರೂ ಆದ ಕಾ: ಕೆ.ಆರ್.ಜಯಾನಂದ ಉದ್ಘಾಟಿಸಿದರು. ಅಧ್ಯಕ್ಷತೆ ಯನ್ನು NREG ಏರಿಯಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಎಲಿಯಾನ…

Read More

ಜಿಲ್ಲಾ ನವಜೀವನ ಸಮಿತಿ ವತಿಯಿಂದ “ಕೇಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಕಾರ್ಯಕ್ರಮ

ಕುಂಬಳೆ ಸಮೀಪದ ಕಳತ್ತೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಮಂಜೇಶ್ವರ ತಾಲೂಕು , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಿ.ಸಿ. ಟ್ರಸ್ಟ್(ರಿ) ಮಂಜೇಶ್ವರ ತಾಲೂಕು , ಕಳತ್ತೂರು ಶ್ರೀ ಮಹಾದೇವ ನವಜೀವನ ಸಮಿತಿ ಹಾಗೂ ಜಿಲ್ಲಾ ನವಜೀವನ ಆಶ್ರಯದಲ್ಲಿ ದ್ವಿತೀಯ ವರ್ಷದ ನವಜೀವನೋತ್ಸವದ ಅಂಗವಾಗಿ ಕೇಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮ ಇಚ್ಲಂಪಾಡಿ ಗದ್ದೆಯಲ್ಲಿ ಇತ್ತೀಚೆಗೆ ನಡೆಯಿತ್ತು . ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್…

Read More

ಆ್ಯಸಿಡ್ ಕುಡಿದು ಒಂದೇ ಕುಟುಂಬದ ಮೂವರು ಸಾವು …… !

ಕಾಸರಗೋಡು: ಆ್ಯಸಿಡ್ ಕುಡಿದು ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಂಬಲತ್ತರ ಸಮೀಪದ ಪಾರಕ್ಕಾಯಿ ಎಂಬಲ್ಲಿ ನಡೆದಿದೆ. ಗೋಪಿ (58) , ಪತ್ನಿ ಇಂದಿರಾ (54) ,ಪುತ್ರ ರಂಜೇಶ್ (34) ಮೃತಪಟ್ಟವರು. ಇನ್ನೋರ್ವ ಪುತ್ರ ರಾಕೇಶ್ (27) ಗಂಭೀರ ಸ್ಥಿತಿಯಲ್ಲಿ ಕಣ್ಣೂರು ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದಿದೆ . ಬೆಳ್ಳಂಬೆಳಗ್ಗೆ ಮೂರು ಗಂಟೆ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ. ಸಂಬಂಧಿಕರೋರ್ವರ ಮೊಬೈಲ್‌ಗೆ ಕರೆ…

Read More
error: Content is protected !!