ಕಟೀಲಿನ ಗೋಣಿಚೀಲ ಸಮಸ್ಯೆ – ಸುದ್ದಿಗೋಷ್ಠಿಯಲ್ಲಿ ಸ್ಪಷ್ಟತೆ

ಮಂಗಳೂರು: ಇತ್ತೀಚಿಗೆ ವೈರಲ್ ಆದ ಕಟೀಲು ಪರಿಸರದ ನ್ಯಾಯಬೆಲೆ ಅಂಗಡಿಯೊಂದರ ಗೋಣಿ ಚೀಲ ಸಮಸ್ಯೆಯ ಕುರಿತಾದ ಸ್ಪಷ್ಟತೆಯನ್ನು ನೀಡುವ ಸಲುವಾಗಿ ನಗರದ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ಕೇಶವ ಮೂರ್ತಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು . ಸುದ್ದಿಗೋಷ್ಠಿಯಲ್ಲಿ ಕಟೀಲು ಪರಿಸರದ ನ್ಯಾಯಬೆಲೆ ಪಡಿತರ ವಿತರಕರಾದ ದೀಪಾ ನಾಯಕ್ ಮಾತನಾಡಿ , ಇತ್ತೀಚೆಗೆ ಮಂಗಳೂರಿನ ಕಟೀಲು ಪರಿಸರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಗ್ರಾಹಕರಾದ ಸತೀಶ್ ಮತ್ತು ವಿಜಯ್ ಎಂಬಾತ ಚಿತ್ರೀಕರಿಸಿದ ವಿಡಿಯೋ…

Read More

ಎಸ್ ಪಿ ಸಿ ಓಣಂ ತ್ರಿದಿನ ಶಿಬಿರ ಸಂಪನ್ನ.

ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕ ದಲ್ಲಿ ಎಸ್ ಪಿ ಸಿ ವಿದ್ಯಾರ್ಥಿಗಳ ಓಣಂ ತ್ರಿದಿನ ಶಿಬಿರದ ಔಪಚಾರಿಕ ಉದ್ಘಾಟನಾ ಸಮಾರಂಭ ಜರಗಿತು.ಪ್ರಸ್ತುತ ಸಭೆಯ ಅಧ್ಯಕ್ಷತೆಯನ್ನು ಪುತ್ತಿಗೆ ಪಂಚಾಯತು ಅಧ್ಯಕ್ಷ ಶ್ರೀ ಸುಬ್ಬಣ್ಣ ಆಳ್ವ ನೆರವೇರಿಸಿ ಮಾತನಾಡುತ್ತಾ ಯೂನಿಟ್ ನಲ್ಲಿರುವ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಶಿಸ್ತಿನಿಂದ ಇತರರಿಗೆ ಮಾದರಿಯಾಗಬೇಕು ಎಂದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬದಿಯಡ್ಕ ಆರಕ್ಷಕ ಠಾಣೆಯ ಎಸ್. ಐ ಯಾಗಿರುವ ಶ್ರೀ ಅಖಿಲ್ ಟಿ ದೀಪ ಬೆಳಗಿಸಿ ಉದ್ಘಾಟಿಸಿ ಎಸ್…

Read More

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ, ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ವಿವಿಧ ಕ್ರೀಡಾ – ಸಾಂಸ್ಕೃತಿಕ ಕಾರ್ಯಕ್ರಮ

ಮಂಜೇಶ್ವರ : ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಕೇರಳ ಗಡಿ ಪ್ರದೇಶದಲ್ಲಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ವಿವಿಧ ಕ್ರೀಡಾ – ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಶಾಲಾ ಪ್ರಾಂಶುಪಾಲ ಅಬ್ದುಲ್ ಖಾದರ್ ಚಾಲನೆ ನೀಡಿದರು. ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ, ದೈಹಿಕ ಆರೋಗ್ಯ ಮತ್ತು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ದಿನಾಚರಣೆಯಲ್ಲಿ ಕ್ರೀಡಾ ಸ್ಪರ್ಧೆಗಳು, ವ್ಯಾಯಾಮ, ಓಟ, ವಾಲಿಬಾಲ್ ಮೊದಲಾದ ಹಲವು ಕ್ರೀಡಾ ಪಂದ್ಯಾವಳಿಗಳು ನಡೆಯಿತು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರೂ ಕೆಲವು ಮನರಂಜನಾ ಆಟಗಳಲ್ಲಿ ಪಾಲ್ಗೊಂಡು…

Read More

ಕೇರಳ ವ್ಯಾಪಾರಿ ಏಕೋಪನ ಸಮಿತಿ ,ಮಂಜೇಶ್ವರ ಘಟಕದ ವಾರ್ಷಿಕ ಸಭೆ

ಮಂಜೇಶ್ವರ : ಕೇರಳ ವ್ಯಾಪಾರಿ ಏಕೋಪನ ಸಮತಿ ಇದರ ಮಂಜೇಶ್ವರ ಘಟಕದ ವಾರ್ಷಿಕ ಸಭೆ ಮಂಜೇಶ್ವರ ವ್ಯಾಪಾರಿ ಭವಣದಲ್ಲಿ ಜರಗಿತು.ಸಂಘಟನೆಯ ಅಧ್ಯಕ್ಷ ಬಶೀರ್ ಕನಿಲರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಆಹ್ಮದ್ ಶೆರೀಫ್ ಉದ್ಘಾಟಿಸಿದರು. ಸಮಾರಂಭದಲ್ಲಿ ಮರಣ ಹೊಂದಿದ ವ್ಯಾಪಾರಿಗಳ ಕುಟುಂಬಗಳಿಗೆ 4ಲಕ್ಷ ರೂಪಾಯಿಯಂತೆ ಎರಡು ಕುಟುಂಬಗಳಿಗಿರುವ ಧನ ಸಹಾಯವನ್ನು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ವಿತರಣೆ ನಡೆಸಿದರು. ಜಿಲ್ಲಾ ವ್ಯಾಪಾರಿ ಭವನ ಕಟ್ಟಡ ಸಹಾಯಾರ್ಥ ಹಮ್ಮಿ ಕೊಳ್ಳಲಾದ ಲಕ್ಕಿ ಕೂಪನ್ ಡ್ರಾ…

Read More

ನಿರ್ಲಜ್ಜ ಓಟ್ ಚೋರತನದಿಂದ ಪ್ರಜಾಪ್ರಭುತ್ವ ಬುಡಮೇಲು-ಕಾಂಗ್ರೆಸ್.

ಶತಾಯಗತಾಯ ಅಧಿಕಾರ ಉಳಿಸಿಕೊಳ್ಳುವ ಧಾವಂತದಲ್ಲಿ ಬಿಜೆಪಿಯು ನಿರ್ಲಜ್ಜವಾಗಿ ಓಟ್ ಕಳ್ಳತನ ನಡೆಸಿದ್ದು ಜಗಜ್ಜಾಹೀರಾಗಿದೆ. ಒಂದೆಡೆ ಲಕ್ಷಾಂತರ ನಕಲಿ ಮತದಾರರ ಸೇರ್ಪಡೆಗೊಳಿಸಿ ತಮ್ಮ ಓಟ್ ಗಳ ಸಂಖ್ಯೆ ಹೆಚ್ಚಿಸುವುದು ಹಾಗೂ ಅರ್ಹ ಮತದಾರರನ್ನು ಅಂತಿಮ ಮತದಾರ ಪಟ್ಟಿಯಿಂದ ಹೊರತು ಪಡಿಸಿ ವಿಪಕ್ಷಗಳ ಬಲ ಕುಗ್ಗಿಸುವುದು ಮುಂತಾದ ವಾಮ ಮಾರ್ಗಗಳ ಮೂಲಕ ಆಡಳಿತವನ್ನು ಕದಿಯಲಾಗಿದೆ. ಇದಕ್ಕೆ ಚುನಾವಣಾ ಆಯೋಗವೂ ಕೈ ಜೋಡಿಸಿದ್ದು ವಿಪರ್ಯಾಸ. ಬಿಜೆಪಿಯಿಂದ ಮಾಸಿಕ ಚಂದಾ ಪಡೆಯುವ ಮಾನಗೇಡಿ ಮಡಿಲ ಮಾಧ್ಯಮಗಳು ಎಲ್ಲವನ್ನು ಕಂಡೂ ಕಾಣದಂತೆ ಜಾಣ ಕುರುಡುತನ…

Read More

ವ್ಯಾಪಕಗೊಂಡ ಅನಧಿಕೃತ ಮರಳು ಸಾಗಾಟ : ಇತಿಹಾಸದಲ್ಲೇ ಮೊಟ್ಟ ಮೊದಲಾಗಿ ಇಬ್ಬರನ್ನು ಜಾಮೀನು ರಹಿತ ಕೇಸು ದಾಖಲಿಸಿ ಜೈಲಿಗಟ್ಟಿದ ಕುಂಬಳೆ ಪೊಲೀಸರು

ಮಂಜೇಶ್ವರ : ಮಂಜೇಶ್ವರ ಹಾಗೂ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಾಗಾಟ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊತ್ತ ಮೊದಲಾಗಿ ಕುಂಬಳೆ ಪೊಲೀಸರು ಮರಳು ಸಾಗಾಟ ಮಾಡುವವರ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಿದ್ದಾರೆ. ಮರಳು ಸಾಗಾಟ ಮಾಡಲು ಉಪಯೋಗಿಸಿದ ಓಮ್ನಿ ವ್ಯಾನ್ ವಶಕ್ಕೆ ತೆಗೆಯಲಾಗಿದೆ. ಅರಿಕ್ಕಾಡಿ ನಿವಾಸಿ ಮನ್ಸೂರ್ ಅಲಿ (31) ಹಾಗೂ ಕುಂಬಳೆ ಪೆರ್ವಾಡ್ ನಿವಾಸಿ ಜುಸೈರ್ (33) ಬಂಧಿತ ಆರೋಪಿಗಳು. ಆರಿಕ್ಕಾಡಿಯಲ್ಲಿ ಅನಧಿಕೃತ ಕಡವಿನಿಂದ ಓಮ್ನಿ ವ್ಯಾನ್ ನಲ್ಲಿ 25 ಗೋಣಿ ಮರಳು…

Read More

ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಓಣಂ ಹಬ್ಬ ಆಚರಣೆ.

ಮಂಜೇಶ್ವರ : ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಆಗಸ್ಟ್ 29ರ ಶುಕ್ರವಾರದಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಶುಭ ಹಾರೈಸಿದರು. ವೈವಿಧ್ಯಮಯ ಪೂಕಳಂಗಳನ್ನು ರಚಿಸಿದ ನಂತರ ಶಿಕ್ಷಕಿಯರು ಕೈಕೊಟ್ಟಿಕಲಿ ನೃತ್ಯವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಎಲ್ಲರಿಗೂ ಓಣಂ ಸದ್ಯವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಎಸ್ಎಂಸಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Read More

ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಒಗ್ಗಟ್ಟಿನ ಸಂಕಲ್ಪ–ಎಡನೀರು ಮಠದಲ್ಲಿ ಭಕ್ತರ ಮಹಾಸಭೆ.

ಕಾಸರಗೋಡು ಎಡನೀರು ಮಠದಲ್ಲಿ ಧರ್ಮಸ್ಥಳ ಕ್ಷೇತ್ರ ಭಕ್ತರು ಮತ್ತು ಅಭಿಮಾನಿಗಳ ಮಹತ್ವದ ಸಭೆ ನಿನ್ನೆ ನಡೆಯಿತು. ಈ ಸಭೆಯಲ್ಲಿ ನೂರಾರು ಭಕ್ತರು, ಮಾತೆಯರು, ಗಣ್ಯರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು. ಸಭೆಯ ಉದ್ದೇಶ, ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯವನ್ನು ಕಾಪಾಡುವುದು ಹಾಗೂ ಕ್ಷೇತ್ರಾಧೀಶರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಮಾನಹಾನಿಕರ ಕೃತ್ಯಗಳಿಗೆ ಸಂಘಟಿತ ಪ್ರತಿಕ್ರಿಯೆ ನೀಡುವುದಾಗಿತ್ತು. ಚರ್ಚೆಯ ಅಂತ್ಯದಲ್ಲಿ, ಅಕ್ಟೋಬರ್ 26ರಂದು ಭಾನುವಾರ ಬೃಹತ್ ಪ್ರತಿಭಟನೆ ಹಾಗೂ ಧಾರ್ಮಿಕ ಸಮ್ಮೇಳನ ಹಮ್ಮಿಕೊಳ್ಳಲು ಮಹತ್ವದ…

Read More

ಕಾಲುವೆಯಲ್ಲಿ ನೀರಿನ ಹರಿವಿಗೆ ಸಿಲುಕಿ ಆರನೇ ತರಗತಿ ವಿದ್ಯಾರ್ಥಿಯ ದಾರುಣ ಅಂತ್ಯ

ಕಾಸರಗೋಡು : ಚೆರ್ಕಳ ಪಾಡಿಯಲ್ಲಿ ಆರನೇ ತರಗತಿ ವಿದ್ಯಾರ್ಥಿಯೊಬ್ಬ ನೀರಿನ ಹರಿವಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ.ಮುಟ್ಟತ್ತೋಡಿ ಗ್ರಾಮದ ಕಲ್ಲಕಟ್ಟ ಬೆಳ್ಳೂರಡ್ಕ ನಿವಾಸಿ ಹಸೈನಾರ್ ಎಂಬವರ ಪುತ್ರ ಮಿತ್ಲಾಜ್ (11) ಸಾವನ್ನಪ್ಪಿದ ದುರ್ದೈವಿ.ಈತ ಆಲಂಪಾಡಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿ.ಶನಿವಾರ ಸಂಜೆ ಶಾಲೆಯ ಸಹಪಾಠಿಗಳೊಂದಿಗೆ ಕಾಲುವೆಯಲ್ಲಿ ಸ್ನಾನಕ್ಕೆ ಹೋಗಿರುವುದಾಗಿ ಪ್ರಾಥಮಿಕ ಮಾಹಿತಿ. ಈ ಸಂದರ್ಭ ನೀರಿನ ಹರಿವಿಗೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ.ವಿದ್ಯಾನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕನ ಶವ ಶರೀರವನ್ನು ಪತ್ತೆ…

Read More

ಜನಪ್ರಿಯ ಕಂಪನಿಯೊಂದರ ಹೆಸರಿನಲ್ಲಿ ನಕಲಿ ಮಾಲುಗಳನ್ನು ಖರೀದಿ-ಪಂಚಾಯತು ಹಾಗೂ ಐಸಿಡಿಎಸ್ ಅಧಿಕಾರಸ್ಥರ ವಿರುದ್ಧ ವ್ಯಾಪಕ ಆಕ್ರೋಶ.

ಮಂಜೇಶ್ವರ : 2020 – 21 ರ ಆರ್ಥಿಕ ವರ್ಷದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತು ಮೀಸಲಿಟ್ಟ 4 ಲಕ್ಷ ರೂಪಾಯಿ ಹಾಗೂ ಐಸಿಡಿಎಸ್ ವತಿಯಿಂದ ಮಂಜೂರಾದ 1 ಲಕ್ಷ ರೂಪಾಯಿಯೊಂದಿಗೆ ಮಹಿಳಾ ಮೀಸಲಾತಿ ನಿಧಿಯಿಂದ ಸ್ಟ ಉದ್ಯೋಗ ಹೊಲಿಗೆ ಘಟಕ ಸ್ಥಾಪಣೆಗೆ ಜನಪ್ರಿಯ ಕಂಪನಿಯೊಂದರ ಹೆಸರಲ್ಲಿ ಕಳಪೆ ಗುಣಮಟ್ಟದ ಹೊಲಿಗೆ ಯಂತ್ರಗಳನ್ನು ಖರೀದಿಸಿ ಅವುಗಳು ಉಪಯೋಗಕ್ಕೆ ಬಾರದೆ ಐಸಿಡಿಎಸ್ ಕಚೇರಿಯ ಕೊಠಡಿಯೊಳಗೆ ಮೂಲೆ ಪಾಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.ಜನಪ್ರಿಯ ಕಂಪನಿಯೊಂದರ ಹೆಸರಿನಲ್ಲಿ ನಕಲಿ ಮಾಲುಗಳನ್ನು ಖರೀದಿಸಿರುವ ಬಗ್ಗೆ…

Read More
error: Content is protected !!