ಕಾಸರಗೋಡು ಸುನಾಮಿ ಕಾಲೊನಿಯಲ್ಲಿ ಸೆಪ್ಟಿಕ್ ಟ್ಯಾಂಕ್ ತುಂಬಿ ಹರಿಯುತ್ತಿದೆ ಎಂಬ ದೂರು; ನಿವಾಸಿಗಳಿಂದ ನಗರಸಭೆ ಕಚೇರಿ ಎದುರು ಧರಣಿ*
ಕಾಸರಗೋಡು:* 101 ಫ್ಲ್ಯಾಟ್‌ಗಳನ್ನು ಹೊಂದಿರುವ ಕಾಸರಗೋಡಿನ ಸುನಾಮಿ ಕಾಲೊನಿಯ ಸೆಪ್ಟಿಕ್ ಟ್ಯಾಂಕ್ ತುಂಬಿ ಹರಿಯುತ್ತಿರುವುದಾಗಿ ನಿವಾಸಿಗಳು ಆರೋಪಿಸಿದ್ದಾರೆ. ಕಾಲೊನಿಯಲ್ಲಿರುವ ಇಷ್ಟೊಂದು ಕುಟುಂಬಗಳ ತ್ಯಾಜ್ಯವನ್ನು ಪ್ರಸ್ತುತ ಸೆಪ್ಟಿಕ್ ಟ್ಯಾಂಕ್ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೊಡ್ಡ ಸಾಮರ್ಥ್ಯದ ಹೊಸ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಬೇಕು ಹಾಗೂ ಸಾಂಕ್ರಾಮಿಕ ರೋಗಗಳಿಂದ ನಿವಾಸಿಗಳಿಗೆ ಸುರಕ್ಷತೆ ಒದಗಿಸಬೇಕು ಎಂದು ಆಗ್ರಹಿಸಿ ನಿವಾಸಿಗಳು ನಗರಸಭೆ ಕಚೇರಿ ಎದುರು ಧರಣಿ ನಡೆಸಿದರು. ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಆರೋಗ್ಯದ ಅಪಾಯದಿಂದ ರಕ್ಷಿಸಲು ತಕ್ಷಣ ಕ್ರಮ…
