ಜು. 6ರಂದು ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಎಚ್ಚರಿಕೆ ಮುಷ್ಕರ
ಕಾಸರಗೋಡು, ಜು. 4: ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಜಾರಿಯಾದ ಬಳಿಕ ಖಾಸಗಿ ಬಸ್‌ಗಳ ಆದಾಯದಲ್ಲಿ ಗಣನೀಯ ಕುಸಿತ ಉಂಟಾಗಿದ್ದು, ನಷ್ಟದಲ್ಲಿರುವ ಖಾಸಗಿ ಬಸ್ ಉದ್ಯಮವನ್ನು ರಕ್ಷಿಸುವಂತೆ ಆಗ್ರಹಿಸಿ ಜುಲೈ 6ರಂದು (ಸೋಮವಾರ) ಜಿಲ್ಲೆಯಾದ್ಯಂತ ಒಂದು ದಿನದ ಎಚ್ಚರಿಕೆ ಮುಷ್ಕರ ನಡೆಸಲು ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಷನ್ ತೀರ್ಮಾನಿಸಿದೆ. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಪದಾಧಿಕಾರಿಗಳು, ಕೆಎಸ್‌ಆರ್‌ಟಿಸಿ ಸಂಚರಿಸುವ ಮಾರ್ಗಗಳಲ್ಲಿ ಓಡಾಡುವ ಖಾಸಗಿ ಬಸ್‌ಗಳಿಗೆ ಡೀಸೆಲ್ ವೆಚ್ಚ ಭರಿಸುವಷ್ಟು ಆದಾಯವೂ ದೊರೆಯುತ್ತಿಲ್ಲ. ಇತರ…
