ಅನಂತಪುರ ಉದ್ದಿಮೆ ಪಾರ್ಕ್ ದುರ್ನಾತ ವಿರೋಧಿಸಿ ಬೃಹತ್ ಪ್ರತಿಭಟನೆ

ಮಾಲಿನ್ಯಕ್ಕೆ ಶಾಶ್ವತ ಪರಿಹಾರ, ಆರೋಗ್ಯಕ್ಕೆ ಹಾನಿಕಾರಕ ಕೈಗಾರಿಕೆಗಳ ಮುಚ್ಚುವಂತೆ ಆಗ್ರಹ ಕುಂಬಳೆ: ಅನಂತಪುರ ಉದ್ದಿಮೆ ಪಾರ್ಕ್‌ನ ಕಾರ್ಖಾನೆಗಳಿಂದ ಹೊರಸೂಸುತ್ತಿರುವ ತೀವ್ರ ದುರ್ನಾತಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಸ್ಥಳೀಯರ ಆರೋಗ್ಯಕ್ಕೆ ಮಾರಕವಾಗಿರುವ ಕೈಗಾರಿಕೆಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿ ಸೋಮವಾರ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮಾರ್ಚ್ ನಡೆಯಿತು. ನಾಯ್ಕಾಪಿನಿoದ ಆರಂಭವಾದ ಪ್ರತಿಭಟನಾ ಜಾಥಾಕ್ಕೆ ನೂರಾರು ಮಂದಿ ಸ್ಥಳೀಯರು ಭಾಗವಹಿಸಿದ್ದು, ಮಂಜೇಶ್ವರ ಶಾಸಕ A. K. M. Ashraf ಚಾಲನೆ ನೀಡಿದರು. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಅನಂತಪುರ…

Read More

​ಮಂಜೇಶ್ವರದಲ್ಲಿ ಕಳಪೆ ಕಾಮಗಾರಿಯ ಅಟ್ಟಹಾಸ: 6 ತಿಂಗಳಲ್ಲೇ ಕಿತ್ತುಬಂದ 14 ಲಕ್ಷದ ರಸ್ತೆ

​ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತ್ ಅನುದಾನದಲ್ಲಿ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ‘ಮಂಜೇಶ್ವರ ಓಲ್ಡ್ ಎಂ.ಸಿ.ಸಿ’ ಕಾಂಕ್ರೀಟ್ ರಸ್ತೆ, ಇಂಟರ್‌ಲಾಕ್ ಮತ್ತು ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದೀಗ ಮೊದಲ ಮಾನ್ಸೂನ್ ಮಳೆಗೆ ತನ್ನ ಅಸಲಿ ಬಣ್ಣವನ್ನು ಹೊರಹಾಕಿದೆ.​ಕಾಮಗಾರಿ ಮುಗಿದು ಕೇವಲ 6 ತಿಂಗಳು ಕಳೆಯುವಷ್ಟರಲ್ಲೇ ರಸ್ತೆಯ ಕಾಂಕ್ರೀಟ್ ಜಲ್ಲಿಕಲ್ಲುಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ. ಚರಂಡಿಯ ಅಕ್ಕಪಕ್ಕದ ಭಾಗಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ರಸ್ತೆ ಯಾವುದೇ ಕ್ಷಣದಲ್ಲೂ ಕುಸಿಯುವ ಭೀತಿಯಲ್ಲಿದೆ. ಈ ಅವ್ಯವಸ್ಥೆಯನ್ನು ಕಂಡು ಸಾರ್ವಜನಿಕರು…

Read More

“ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಹೊಸಂಗಡಿಯಲ್ಲಿ CITU ಧರಣಿ”

ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಗೆದುರಾಗಿ citu ಹೊಸಂಗಡಿ ಪೋಸ್ಟ್ ಆಫೀಸ್ ಬಳಿ ಧರಣಿ ಸಂಘಟಿಸಲಾಯಿತು. ಧರಣಿ ಯನ್ನು citu ಜಿಲ್ಲಾ ಉಪಾಧ್ಯಕ್ಷೆ ಕಾo ಬೇಬಿ ಶೆಟ್ಟಿ ಉದ್ಘಾಟಿಸಿ ,ಕೇಂದ್ರ ಸರ್ಕಾರ ಪಶ್ಚಿಮ ಏಷ್ಯಾ ಯುದ್ದದ ಕಾರಣ ನೀಡಿ ಬಂಡವಾಳ ಶಾಹಿಗಳಿಗೆ ದೇಶದ ಬಡಜನತೆಯನ್ನೂ ಕೊಳ್ಳೆ ಒಡೆಯಲು ಲೈಸೆನ್ಸ್ ಕೊಟ್ಟಂತಾಗಿದೆ . ನಗರ ಪ್ರದೇಶದಲ್ಲಿ ಹೋಟೆಲ್ ಗಳು ಬಂದ್ ಮಾಡಲಾಗಿದೆ ,ಆಹಾರ ಸಮೇತ ಸಿಗದ ಪರಿಸ್ಥಿತಿ ಬಂದಿದೆ .ಇದರಿಂದಾಗಿ ಕಾರ್ಮಿಕ ಕೆಲಸ ನಷ್ಟ ವಾಗಿದೆ,…

Read More

ಸಂತಡ್ಕ ಮಾಡ ಕ್ಷೇತ್ರದಲ್ಲಿ ಮಹಾರುದ್ರಯಾಗ-ಗಿರಿಜಾ ಕಲ್ಯಾಣೋತ್ಸವ ವೈಭವ

ಸಂತಡ್ಕ, ಜೂನ್ 7: ಲೋಕ ಕಲ್ಯಾಣದ ದಿವ್ಯ ಸಂಕಲ್ಪದೊಂದಿಗೆ ಸಂತಡ್ಕದ ಮಾಡ ಕ್ಷೇತ್ರದಲ್ಲಿ ಮಹಾರುದ್ರಯಾಗ, ಶ್ರೀ ಗಿರಿಜಾ ಕಲ್ಯಾಣೋತ್ಸವ ಹಾಗೂ ನೂತನ ಭೋಜನ ಶಾಲೆಯ ಉದ್ಘಾಟನಾ ಸಮಾರಂಭವು ಭಾನುವಾರ ಭಕ್ತಿಭಾವ ಮತ್ತು ವೈಭವದಿಂದ ನೆರವೇರಿತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಸಮ್ಮಿಲನವಾಗಿದ್ದ ಈ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ದೈವಾನುಗ್ರಹಕ್ಕೆ ಪಾತ್ರರಾದರು. ಕ್ಷೇತ್ರದಲ್ಲಿ ಆಯೋಜಿಸಲಾದ ಮಹಾರುದ್ರಯಾಗವು ಲೋಕ ಕಲ್ಯಾಣ, ಸಮಾಜದಲ್ಲಿ ಶಾಂತಿ-ಸೌಹಾರ್ದತೆ ನೆಲೆಸುವುದು, ಪ್ರಕೃತಿ ವಿಕೋಪಗಳ ಶಮನ ಹಾಗೂ ಸಾಂಕ್ರಾಮಿಕ ರೋಗ-ರುಜಿನಗಳಿಂದ ಜನರು ಮುಕ್ತರಾಗಲಿ ಎಂಬ…

Read More

ಕುಂಬಳೆಯಲ್ಲಿ ‘ಚಿರಂಜೀವಿ’ ಸಂಸ್ಥೆಯಿಂದ 109 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆಶೈಕ್ಷಣಿಕ ಸಾಧಕರಿಗೆ ಸನ್ಮಾನ; ಶಿಕ್ಷಣದ ಮಹತ್ವ ಸಾರಿದ ಗಣ್ಯರು

ಕುಂಬಳೆ ಜೂನ್ 8: ಶಿಕ್ಷಣದ ಮೂಲಕ ಸಮಾಜದ ಉನ್ನತಿಗೆ ಕೊಡುಗೆ ನೀಡುವ ಉದ್ದೇಶದಿಂದ ಕುಂಬಳೆಯ ಚಿರಂಜೀವಿ (ರಿ.) ಸಂಸ್ಥೆಯು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತು. ಕಾರ್ಯಕ್ರಮದಲ್ಲಿ 109 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಗಿದ್ದು, ವಿವಿಧ ಪರೀಕ್ಷೆಗಳಲ್ಲಿ ಸಾಧನೆಗೈದ ಒಂಬತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್…

Read More

ಅಡೂರಿನಲ್ಲಿ ಮಣ್ಣುಕುಸಿತ ದುರಂತ: ಇಬ್ಬರು ಬಾಲಕರ ಜೀವಬಲಿ

ಕಾಸರಗೋಡು, ಜೂನ್ 8: ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಡೂರು ಸಮೀಪದ ಸಂಚಕ್ಕಡವು ಪ್ರದೇಶದಲ್ಲಿ ಸಂಭವಿಸಿದ ಭೀಕರ ಮಣ್ಣುಕುಸಿತ ದುರಂತದಲ್ಲಿ ಇಬ್ಬರು ಬಾಲಕರು ಸಾವನ್ನಪ್ಪಿದ್ದು, ಮತ್ತೋರ್ವ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಸಾವನ್ನಪ್ಪಿದವರನ್ನು ಅಬೂಬಕ್ಕರ್ ಅವರ ಪುತ್ರರಾದ ಮುನ್ಸೀರ್ (10) ಹಾಗೂ ಮುಜಮ್ಮಿಲ್ (14) ಎಂದು ಗುರುತಿಸಲಾಗಿದೆ. ಗಾಯಗೊಂಡ ಬಾಲಕನನ್ನು ತಕ್ಷಣವೇ ಚೆಂಗಳ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇತ್ತೀಚೆಗೆ ಗೃಹಪ್ರವೇಶ ನಡೆದ ಮನೆಯ ಸಮೀಪ…

Read More

ಬಿಎಂಎಸ್ ವರ್ಕಾಡಿ ಪಂಚಾಯತ್ ಸಮ್ಮೇಳನ: ನೂತನ ಪದಾಧಿಕಾರಿಗಳ ಆಯ್ಕೆ

ಸುಂಕದಕಟ್ಟೆ, ಜೂನ್ 8: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ವರ್ಕಾಡಿ ಪಂಚಾಯತ್ ಸಮ್ಮೇಳನವು ಸುಂಕದಕಟ್ಟೆಯ ಬಿಜೆಪಿ ಕಾರ್ಯಾಲಯದಲ್ಲಿ ಯಶಸ್ವಿಯಾಗಿ ನಡೆಯಿತು. ಸಮಿತಿ ಅಧ್ಯಕ್ಷೆ ವನಿತಾ ಜೆ. ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾ ಜಂಟಿ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ ಯಶವಂತಿ ಬೆಜ್ಜ, ಪಂಚಾಯತ್ ಸದಸ್ಯರಾದ ಚಂದ್ರಶೇಖರ ವರ್ಕಾಡಿ, ತುಳಸಿ ವರ್ಕಾಡಿ ಹಾಗೂ ರವಿ ಎಂ.ಕೆ. ಕೊಲ್ಯೂರು ಶುಭಾಶಯಗಳನ್ನು ತಿಳಿಸಿ ಮಾತನಾಡಿದರು. ಸಮ್ಮೇಳನದ ಸಮಾರೋಪ ಭಾಷಣವನ್ನು ಬಿಎಂಎಸ್ ಜಿಲ್ಲಾ…

Read More

‘ಭರವಸೆಯ ಬೆಳಕು’ ಹಾಗೂ ‘ಭರವಸೆಯ ಶಿಕ್ಷಣ ರತ್ನ’ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯ ರಾಮಕ್ಷತ್ರಿಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ “ಭರವಸೆಯ ಬೆಳಕು (Light of Hopes) – Student Achievement Award 2026” ಹಾಗೂ “ಭರವಸೆಯ ಶಿಕ್ಷಣ ರತ್ನ (Light of Hopes – Teachers Achievement Award 2026)” ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.90 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ರಾಮಕ್ಷತ್ರಿಯ ಸಮಾಜದ…

Read More

ಕೊಟ್ಟಿಯೂರು ದೇವಸ್ಥಾನದಲ್ಲಿ ಕನ್ನಡಿಗರಿಗೆ ಅವಮಾನ? ಭಕ್ತರ ಆಕ್ರೋಶಕ್ಕೆ ಕಾರಣವಾದ ಅವ್ಯವಸ್ಥೆ!

ಕಣ್ಣೂರು: ಕೇರಳದ ಪ್ರಸಿದ್ಧ ಕೊಟ್ಟಿಯೂರು ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ವೈಶಾಖ ಮಹೋತ್ಸವದ ವೇಳೆ ಕನ್ನಡಿಗ ಭಕ್ತರು ಅನುಭವಿಸಿದ ಕಹಿ ಘಟನೆಗಳು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿವೆ. ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದರೂ, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಅವ್ಯವಸ್ಥೆ ಹಾಗೂ ದುರ್ವರ್ತನೆ ನಡೆಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯುವ ಈ ಪವಿತ್ರ ಕ್ಷೇತ್ರದಲ್ಲಿ ಈ ಬಾರಿ ಕನ್ನಡಿಗರು ನೂಕುನುಗ್ಗಲು, ತಳ್ಳಾಟ ಹಾಗೂ ಸಿಬ್ಬಂದಿಯ ಅಸಭ್ಯ ವರ್ತನೆಯಿಂದ ತೀವ್ರ ಅಸಮಾಧಾನ…

Read More

ಜೂನ್ 7ರಂದು ಸುಂಕದಕಟ್ಟೆಯಲ್ಲಿ ಬಿಎಂಎಸ್ ವರ್ಕಾಡಿ ಪಂಚಾಯತ್ ಸಮ್ಮೇಳನ

ಉಪ್ಪಳ, ಜೂ. 6:ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ವರ್ಕಾಡಿ ಪಂಚಾಯತ್ ಸಮಿತಿಯ ವತಿಯಿಂದ ಜೂನ್ 7ರಂದು ಆದಿತ್ಯವಾರ ಸಂಜೆ 3 ಗಂಟೆಗೆ ಸುಂಕದಕಟ್ಟೆಯ ಬಿ.ಜೆ.ಪಿ. ಕಾರ್ಯಾಲಯದಲ್ಲಿ ಪಂಚಾಯತ್ ಸಮ್ಮೇಳನ ನಡೆಯಲಿದೆ. ಈ ಕುರಿತು ಸಂಘದ ಅಧ್ಯಕ್ಷೆ ವನಿತಾ ಜೆ. ನಾಯಕ್ ಹಾಗೂ ಕಾರ್ಯದರ್ಶಿ ರವೀಂದ್ರ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ಶ್ರಮವೇ ಆರಾಧನೆ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮಜ್ದೂರ್ ಸಂಘವು ಕಾರ್ಮಿಕರು ತಮ್ಮ ಕರ್ತವ್ಯವನ್ನು ರಾಷ್ಟ್ರಸೇವೆಯೆಂದು ಭಾವಿಸಿ ಕಾರ್ಯನಿರ್ವಹಿಸುವ ಮನೋಭಾವ ಬೆಳೆಸುವ ಉದ್ದೇಶ ಹೊಂದಿದೆ. ಕಾರ್ಮಿಕರು, ಮಾಲಕರು…

Read More
error: Content is protected !!