ನರೇಂದ್ರ ಮೋದಿ ಸರ್ಕಾರ ಸುಶಾಸನದ ಮಾದರಿ: ನವ್ಯಾ ಹರಿದಾಸ್
ಪೆರ್ಲ: ನರೇಂದ್ರ ಮೋದಿ ಸರ್ಕಾರವು ಸುಶಾಸನಕ್ಕೆ ಜಗತ್ತಿನ ದೇಶಗಳಿಗೇ ಮಾದರಿಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಸೇರಿದಂತೆ ಭಾರತ ಸಾಧಿಸಿರುವ ಪ್ರಗತಿಯು ಮುಂದುವರಿದ ದೇಶಗಳನ್ನೂ ಬೆರಗುಗೊಳಿಸಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ತಿಳಿಸಿದ್ದಾರೆ. ಬಿಜೆಪಿ ಕುಂಬಳೆ ಮಂಡಲ ಹಮ್ಮಿಕೊಂಡಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನದ ದ್ವಿದಿನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಅರ್ಧದಷ್ಟಿರುವ ಮಹಿಳಾ ಸಮಾಜದ ಕಲ್ಯಾಣವನ್ನು ಖಾತರಿಪಡಿಸಲು ನರೇಂದ್ರ ಮೋದಿ ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು…
