ಚೆಮ್ಮನಾಡ್‌ನ ಮನೆಯೊಂದರಿಂದ ಭಾರಿ ನಗ, ನಗದು ಕಳವು

​ಕಾಸರಗೋಡು: ಚೆಮ್ಮನಾಡ್‌ನಲ್ಲಿರುವ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಅಲ್ಮೇರಾದಲ್ಲಿದ್ದ ಅರ್ಧ ಲಕ್ಷ ರೂಪಾಯಿ ನಗದು ಕಳವು ಮಾಡಿದ್ದಾರೆ. ​ಚೆಮ್ಮನಾಡ್‌ ಕೆನ್ಸ್ ಆಡಿಟೋರಿಯಂ ಸಮೀಪದ ‘ಈಕೋಟ್ ಹೌಸ್’ನಲ್ಲಿ ಈ ಕಳವು ನಡೆದಿದೆ. ಜುಲೈ 19ರ ಬೆಳಿಗ್ಗೆ 6:30ರಿಂದ ಜುಲೈ 20ರ ಮಧ್ಯಾಹ್ನ 11:30ರ ನಡುವಿನ ಅವಧಿಯಲ್ಲಿ ಈ ಕೃತ್ಯ ಎಸಗಲಾಗಿದೆ. ಮನೆಯ ಮುಂಭಾಗದ ಮತ್ತು ಮಲಗುವ ಕೋಣೆಯ ಬಾಗಿಲುಗಳನ್ನು ಮುರಿದು ಒಳಗೆ ನುಗ್ಗಿದ ಕಳ್ಳರು, ಹಣವಿರಿಸಿದ್ದ ಅಲ್ಮೇರಾ ಇರುವ ಕೋಣೆಯನ್ನು ತಲುಪಿದ್ದಾರೆ.

Read More

ಮಸೀದಿ ಬಳಿ ನಿಲ್ಲಿಸಿದ್ದ ಬೈಕ್ ಕಳವು – ಚಂದೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

​ಕಾಸರಗೋಡು: ಮಸೀದಿಯ ಸಮೀಪ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ. ನಾರ್ತ್ ತೃಕ್ಕರಿಪುರ ತಂಗಯಂ ನಿವಾಸಿ ಸಿ.ವಿ. ಅವರ ಸಂಬಂಧಿಕರಿಗೆ ಸೇರಿದ ಬೈಕ್ ಕಳುವಾಗಿದೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಚಂದೇರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ​ಜೂನ್ 8ರ ಸಂಜೆ ತಂಗಯಂ ಪಳ್ಳಿಯ ಮುಂಭಾಗದಲ್ಲಿ ಬೈಕನ್ನು ನಿಲ್ಲಿಸಲಾಗಿತ್ತು. ವಿವಿಧ ಸ್ಥಳಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

Read More

ಕಾಲ್ಸೇತುವೆಯಿಂದ ನದಿಗೆ ಬಿದ್ದು ಕಾಲೇಜು ವಿದ್ಯಾರ್ಥಿನಿಗೆ ಗಾಯ; ಪ್ರಾಣ ಪಣಕ್ಕಿಟ್ಟು ಜೀವ ಉಳಿಸಿದ ಉದಯ ಕುಮಾರ್; ಧ್ವಂಸಗೊಂಡ ದೇರಂಬಳಂ ಸೇತುವೆ ಪುನರ್‌ ನಿರ್ಮಿಸದಿರುವುದಕ್ಕೆ ತೀವ್ರ ಪ್ರತಿಭಟನೆ

ಉಪ್ಪಳ:ಹಲವು ವರ್ಷಗಳಿಂದ ಧ್ವಂಸಗೊಂಡಿರುವ ಜೋಡುಕಲ್ಲು ಮಡಂದೂರು –ದೇರಂಬಳಂ ಸೇತುವೆಯನ್ನು ಪುನರ್‌ನಿರ್ಮಿಸದ ಕಾರಣ ಅಪಘಾತಗಳು ಪದೇಪದೇ ಸಂಭವಿಸುತ್ತಿರುವ ನಡುವೆಯೇ, ಕಾಲ್ಸೇತುವೆ ಮೂಲಕ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನದಿಗೆ ಬಿದ್ದು ಗಾಯಗೊಂಡಿದ್ದಾಳೆ. ಸ್ಥಳೀಯ ನಿವಾಸಿ ಐತ್ತಪ್ಪ ಪೂಜಾರಿಯವರ ಪುತ್ರಿ ನಿಷ್ಮಿತಾ ಅಪಘಾತಕ್ಕೀಡಾದ ವಿದ್ಯಾರ್ಥಿನಿ. ಸಹೋದರಿ ಸುಷ್ಮಿತಾ ಅವರ ಕೈ ಹಿಡಿದು ಕಾಲ್ಸೇತುವೆ ದಾಟುತ್ತಿದ್ದ ವೇಳೆ ನಿಷ್ಮಿತಾ ನದಿಗೆ ಏಕಾಏಕಿ ಬಿದ್ದಳು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ಉದಯ ಕುಮಾರ್ ನದಿಗೆ ಇಳಿದು ಸಾಹಸಮಯವಾಗಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ . ಗಾಯಗೊಂಡ ನಿಷ್ಮಿತಾಳನ್ನು…

Read More

ಗೊಲ್ಲ ಸಮಾಜ ಸಂಘ ಮಾನ್ಯ – ಕಾರ್ಯಲಯ ಉದ್ಘಾಟನೆ

ಬದಿಯಡ್ಕ : ಗೊಲ್ಲ ಸಮಾಜ ಸಂಘ ಮಾನ್ಯದ ನೂತನ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮವು ಸಂಘದ ಸದಸ್ಯರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು. ಸಂಘದ ಅಧ್ಯಕ್ಷ ನವೀನ್ ಚಂದ್ರ ಮಾಸ್ತರ್ ದೀಪ ಬೆಳಗಿಸಿ ಕಾರ್ಯಾಲಯವನ್ನು ಉದ್ಘಾಟಿಸಿ, ಸಮಾಜದ ಅಭಿವೃದ್ಧಿಗೆ ಸಂಘದ ಕಾರ್ಯಾಲಯ ಕೇಂದ್ರಬಿಂದುವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಂಜುನಾಥ ಡಿ ಮಾನ್ಯ, ರಾಧಾಕೃಷ್ಣ ಎಂ.ಕೆ., ಮಣಿಕಂಠ ಮಾನ್ಯ, ಮುದ್ದುಕೃಷ್ಣ ಸಿ.ಎಚ್., ಸೀತಾರಾಮ ಎಂ., ಶ್ರೀನಿವಾಸ ಎಂ.ಎಚ್., ಈಶ್ವರ ಕೊಡಗಿ, ಕಿಶೋರ ಪುದುಕೋಳಿ, ಸುಧೀರ್ ಮೇಗಿನಡ್ಕ, ದಿನೇಶ್ ಕೊಡಗಿ,…

Read More

ಹಿರಿಯ ಪತ್ರಕರ್ತ ಜಯಾನಂದ ಪೆರಾಜೆಗೆ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿ

ಕಾಸರಗೋಡು : ಕನ್ನಡ ಸಾಹಿತ್ಯ ಸಂಘಟಕ, ಹಿರಿಯ ಪತ್ರಕರ್ತ ಹಾಗೂ ಶಿಕ್ಷಕರಾದ ಜಯಾನಂದ ಪೆರಾಜೆ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿ’ ಪ್ರದಾನ ಮಾಡಲು ಆಯ್ಕೆ ಮಾಡಲಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಚುಟುಕು ಸಾಹಿತ್ಯ ಪರಿಷತ್, ಬರಹಗಾರರ ಸಂಘ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಗಳ ಮೂಲಕ ಕನ್ನಡ ಸೇವೆ ಸಲ್ಲಿಸಿರುವ ಪೆರಾಜೆಯವರ ಬಹುಮುಖ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ…

Read More

ಕುಂಬಳೆಯಲ್ಲಿ ಬಸ್ ಬ್ಯಾಟರಿ ಕಳವು: ಲಾರಿ ಬ್ಯಾಟರಿ ಕಳವು ಪ್ರಕರಣದ ಆರೋಪಿಗಳ ಮೇಲೆ ಕಣ್ಣಿಟ್ಟ ಪೊಲೀಸರು

ಕುಂಬಳೆ: ಕುಂಬಳೆ-ಬದಿಯಡ್ಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನ ಬ್ಯಾಟರಿಯನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಮಹಾಲಕ್ಷ್ಮಿ ಬಸ್ ನಿನ್ನೆ ರಾತ್ರಿ ಸರ್ವೀಸ್ ಮುಗಿಸಿದ ಬಳಿಕ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಇಂದು ಬೆಳಗ್ಗೆ ಚಾಲಕ ದಿನೇಶ್ ಬಂದು ಬಸ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದಾಗ ವಾಹನ ಚಾಲನೆಗೆ ಬರಲಿಲ್ಲ. ಪರಿಶೀಲನೆ ನಡೆಸಿದಾಗ ಬಸ್‌ನ ಬ್ಯಾಟರಿ ಕಾಣೆಯಾಗಿರುವುದು ಪತ್ತೆಯಾಗಿದೆ. ಈ ಸಂಬಂಧ ಚಾಲಕ ದಿನೇಶ್ ನೀಡಿದ ದೂರಿನ ಮೇರೆಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಇದೇ ವೇಳೆ ಕುಂಬಳೆ…

Read More

ಪೆರ್ಲದಲ್ಲಿ ಆಘಾತಕಾರಿ ಘಟನೆ: ಕ್ವಾರ್ಟರ್ಸ್‌ನಲ್ಲಿ 7ನೇ ತರಗತಿ ವಿದ್ಯಾರ್ಥಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಕ್ವಾರ್ಟರ್ಸ್‌ನೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಪಟ್ಟಿದ್ದಾನೆ.ಮೃತ ವಿದ್ಯಾರ್ಥಿಯನ್ನು ಬೆದ್ರಂಪಳ್ಳದಲ್ಲಿ ವಾಸಿಸುತ್ತಿದ್ದ ಪ್ರಕಾಶನ್ ಮತ್ತು ಸುನಿತಾ ದಂಪತಿಯ ಪುತ್ರ 12 ವರ್ಷದ ಶ್ರೀಹರಿ ಎಂದು ಗುರುತಿಸಲಾಗಿದೆ.ಪ್ರಕಾಶನ್ ಹಾಗೂ ಕುಟುಂಬ ಮೂಲತಃ ಪತ್ತನಂತಿಟ್ಟ ಜಿಲ್ಲೆಯ ಅಡೂರು ನಿವಾಸಿಗಳಾಗಿದ್ದು, ಬೆದ್ರಂಪಳ್ಳದ ಅಬ್ದುಲ್ಲ ಕುಂಣಿ ಅವರ ರಬ್ಬರ್ ತೋಟದಲ್ಲಿ ಪ್ರಕಾಶನ್ ಮತ್ತು ಅವರ ಪತ್ನಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಶ್ರೀಹರಿಗೆ ಹೊರತಾಗಿ ಪ್ರೀತು ಮತ್ತು ನಿಹಾರಿಕ ಎಂಬ ಇಬ್ಬರು ಮಕ್ಕಳು…

Read More

ಕಾಸರಗೋಡಿನಲ್ಲಿ ನವಜೀವನೋತ್ಸವ ಯಶಸ್ವಿ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಶೇಷ ಕಾರ್ಯಕ್ರಮ

ಕಾಸರಗೋಡು, ಜು. 20: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) (ರಿ ) ಕಾಸರಗೋಡು ತಾಲೂಕಿನ ವತಿಯಿಂದ ಆಯೋಜಿಸಿದ್ದ ‘ನವಜೀವನೋತ್ಸವ’ ಕೆಸರಿನಲ್ಲಿ ಜಾನಪದ ಕ್ರೀಡೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಭಾನುವಾರ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನ ಉಬ್ರ0ಗಳದಲ್ಲಿ ಯಶಸ್ವಿಯಾಗಿ ನಡೆಯಿತು. ಗ್ರಾಮೀಣ ಕ್ರೀಡೆಗಳಾದ ಹಗ್ಗಜಗ್ಗಾಟ , ಮಡಕೆ ಹೊಡೆಯುವುದು , ಕೆಸರು ಗದ್ದೆ ಹಾಗು ಇನ್ನಿತ್ತರ ಮನೋರಂಜನೆ ಸ್ಪರ್ಧೆಗಳು ನಡೆದವು.ಮತ್ತು ನವಜೀವನ ಸಮಿತಿಯ ಸಾಧಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ…

Read More

ಜು. 26ರಂದು ಕಾಸರಗೋಡಿನಲ್ಲಿ ಕರ್ನಾಟಕ–ಗಡಿನಾಡ ಕನ್ನಡ ಸಮ್ಮೇಳನ-2026

ಕಾಸರಗೋಡು: ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಹಾಗೂ ಕನ್ನಡ ಪ್ರಕಾಶನದ ರಜತ ಸಂಭ್ರಮ ಸಮಾರೋಪದ ಅಂಗವಾಗಿ ‘ಕರ್ನಾಟಕ–ಗಡಿನಾಡ ಕನ್ನಡ ಸಮ್ಮೇಳನ-2026’ ಜುಲೈ 26ರಂದು (ಭಾನುವಾರ) ಕಾಸರಗೋಡಿನ ಡಾ. ವಾಮನ್ ರಾವ್ ಬೇಕಲ್ ನೇತೃತ್ವದ ಕನ್ನಡ ಭವನದಲ್ಲಿರುವ ದಿ. ಡಾ. ಲಲಿತಾ ಎಸ್.ಎನ್. ಭಟ್ ವೇದಿಕೆಯಲ್ಲಿ ನಡೆಯಲಿದೆ. ಬೆಂಗಳೂರುದ ಡಾ. ಸಿ. ಸೋಮಶೇಖರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.), ಕಾಸರಗೋಡು ವತಿಯಿಂದ ‘ಸಾಂಸ್ಕೃತಿಕ ಕಲಾ ವೈಭವ – ಕಲಾವಿದರ ಕಲರವ’…

Read More

ಸಂಶೋಧಕ, ಶಿಕ್ಷಣ ತಜ್ಞ ಡಾ. ಬೆಟ್ಟಪ್ಪ ಕ. ಅವರಿಗೆ ‘ಕನ್ನಡ ಪಯಸ್ವಿನಿ ಶಿಕ್ಷಣ ರತ್ನ ಅಚೀವ್‌ಮೆಂಟ್ ಅವಾರ್ಡ್–2026’

ಕಾಸರಗೋಡು: ಸಂಶೋಧಕ, ಶಿಕ್ಷಣ ತಜ್ಞ ಹಾಗೂ ವಿದ್ವಾಂಸರಾದ ಡಾ. ಬೆಟ್ಟಪ್ಪ ಕ. ಅವರು ಅಂತರ್‌ರಾಜ್ಯ ‘ಕನ್ನಡ ಪಯಸ್ವಿನಿ ಶಿಕ್ಷಣ ರತ್ನ ಅಚೀವ್‌ಮೆಂಟ್ ಅವಾರ್ಡ್–2026’ಗೆ ಆಯ್ಕೆಯಾಗಿದ್ದಾರೆ. ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ‘ರಜತ ಸಂಭ್ರಮ’ ಸಮಾರೋಪ ಕಾರ್ಯಕ್ರಮ ಹಾಗೂ *ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ *ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್…

Read More
error: Content is protected !!