ಶಾಸಕರ ನಿರಂತರ ಪ್ರಯತ್ನ ಫಲಿತಾಂಶ: ಕುಂಬಳೆ ಕಂಜಿಕಟ್ಟೆ ಸೇತುವೆ ಪುನರ್‌ನಿರ್ಮಾಣಕ್ಕೆ ನಬಾರ್ಡ್‌ನಿಂದ ₹27.10 ಕೋಟಿ

ಕುಂಬಳೆ : ಕಾಲಪರಿಣಾಮದಿಂದ ಹಾನಿಗೊಳಗಾದ ಕುಂಬಳೆ ನದಿಗೆ ಅಡ್ಡವಾಗಿ ನಿರ್ಮಿಸಲಾದ ಕಂಜಿಕಟ್ಟೆ ನಿಯಂತ್ರಕ-ಸೇತುವೆಯ ಪುನರ್‌ನಿರ್ಮಾಣಕ್ಕೆ ನಬಾರ್ಡ್ ವತಿಯಿಂದ ₹27.10 ಕೋಟಿ ಮಂಜೂರಾಗಿದೆ ಎಂದು ಶಾಸಕ ಎ.ಕೆ.ಎಂ. ಅಶ್ರಫ್ ತಿಳಿಸಿದ್ದಾರೆ. ಪ್ರಸ್ತುತ ಸಾಲಿನ ಆರ್‌ಐಡಿಎಫ್ (ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ) ಯೋಜನೆಯಡಿ ಈ ಅನುದಾನ ಮಂಜೂರಾಗಿದೆ. 2024ರ ಏಪ್ರಿಲ್‌ನಲ್ಲಿ ಸೇತುವೆಯ ದುಸ್ಥಿತಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಅದನ್ನು ಮುಚ್ಚಿ ಸಂಚಾರವನ್ನು ನಿಷೇಧಿಸಿದ್ದರು. ಇದರ ಪರಿಣಾಮವಾಗಿ ಕುಂಬಳೆ ಪಂಚಾಯತ್ ವ್ಯಾಪ್ತಿಯ ಕಂಜಿಕಟ್ಟೆ , ಮಳಿ, ಕುಂಡಪ್ಪು, ತಳ ಕೊಡಿಯಮ್ಮ, ಆರಿಕ್ಕಾಡಿ, ಚತ್ರಂಪಳ್ಳಂ,…

Read More

ಸಂಸ್ಕೃತಿ, ಏಕತೆಗೆ ಸಂದೇಶ: ಮಂಜೇಶ್ವರದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

ಮಂಜೇಶ್ವರ: ಹಿಂದೂ ಸಂಗಮ ಆಯೋಜನ ಸಮಿತಿ ಮಂಜೇಶ್ವರ ಪಂಚಾಯತ್ ವತಿಯಿಂದ ಮಂಜೇಶ್ವರ ಹಿಂದೂ ಸಂಗಮ ಕಾರ್ಯಕ್ರಮವು ಮಾರ್ಚ್ 8ರಂದು ಎಸ್.ಎ.ಟಿ. ಶಾಲಾ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಂಜೆ 3 ಗಂಟೆಗೆ ಶ್ರೀಮತ್ ಅನಂತೇಶ್ವರ ದೇವಾಲಯದ ವಠಾರದಿಂದ ಭವ್ಯ ಶೋಭಾಯಾತ್ರೆ ಆರಂಭವಾಯಿತು. ಶೋಭಾಯಾತ್ರೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಂಡಗಳು ಭಾಗವಹಿಸಿ ಮಂಜೇಶ್ವರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಳಿಕ ಎಸ್.ಎ.ಟಿ. ಶಾಲಾ ಮೈದಾನಕ್ಕೆ ಆಗಮಿಸಿತು. ನಂತರ ಆದರ್ಶ ವ್ಯಕ್ತಿಗಳ ಅನಾವರಣ ಕಾರ್ಯಕ್ರಮ ನಡೆಯಿತು. ಬಳಿಕ…

Read More

ಮಂಜೇಶ್ವರ ವಿಧಾನಸಭಾ ಚುನಾವಣೆ: ಎಡರಂಗದ ಅಭ್ಯರ್ಥಿಯಾಗಿ ಕೆ.ಆರ್. ಜಯಾನಂದ ಅಂತಿಮ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಎಡರಂಗದ ಅಭ್ಯರ್ಥಿಯಾಗಿ ಕೆ.ಆರ್. ಜಯಾನಂದ ಅವರನ್ನು ಸಿಪಿಐಎಂ ಜಿಲ್ಲಾ ನೇತೃತ್ವ ಅಂತಿಮಗೊಳಿಸಿದೆ.ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಷಾನವಾಸ್ ಪಾದೂರು ಅವರ ಹೆಸರು ಕೇಳಿಬಂದಿತ್ತಾದರೂ, ಕಾರ್ಯಕರ್ತರ ಆಕ್ಷೇಪ ಹಾಗೂ ಮತ ವಿಭಜನೆಯ ಭೀತಿಯಿಂದಾಗಿ ಪಕ್ಷವು ಸ್ಥಳೀಯ ನಾಯಕ ಜಯಾನಂದ ಅವರಿಗೆ ಮಣೆ ಹಾಕಿದೆ. ​ಷಾನವಾಸ್ ಅವರ ಸ್ಪರ್ಧೆಯಿಂದ ಮುಸ್ಲಿಂ ಮತಗಳು ವಿಭಜನೆಗೊಂಡು ಬಿಜೆಪಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರದ ಮೇಲೆ ಈ ಬದಲಾವಣೆ ಮಾಡಲಾಗಿದೆ. ಇದರೊಂದಿಗೆ ಮಂಜೇಶ್ವರದಲ್ಲಿ ಎಕೆಎಂ ಅಶ್ರಫ್ ಹಾಗೂ ಕೆ.ಆರ್. ಜಯಾನಂದ…

Read More

ಮಲಬಾರ್ ಕಲಾ ಸಾಂಸ್ಕೃತಿಕ ವೇದಿಯಿಂದ ಕುಂಬಳೆಯಲ್ಲಿ ಇಫ್ತಾರ್ ಸೌಹಾರ್ದ ಸಭೆ

ಕುಂಬಳೆ: ದುಬೈ ಮೂಲದ ಮಲಬಾರ್ ಕಲಾ ಸಾಂಸ್ಕೃತಿಕ ವೇದಿ ಸಂಘಟನೆಯು ಚೆರ್ಕಳಂ ಅಬ್ದುಲ್ಲಾ ಅವರ ಸ್ಮರಣಾರ್ಥವಾಗಿ ಕುಂಬಳೆಯಲ್ಲಿ ಇಫ್ತಾರ್ ಸೌಹಾರ್ದ ಕೂಟ ಮತ್ತು ಗೌರವ ಸಮಾರಂಭ ಜರಗಿತು ಪ್ರವಾಸಿ ಲೋಕದಲ್ಲಿಯೂ ಹಾಗೂ ಜನ್ಮನಾಡಲ್ಲಿಯೂ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಮಾನವೀಯ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಮಲಬಾರ್ ಕಲಾ ಸಾಂಸ್ಕೃತಿಕ ವೇದಿ, ಈ ವರ್ಷವೂ ರಮಝಾನ್ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ನೆರವೇರಿಸಿದರು . ಬೆಂಗಳೂರು ಅಲ್‌ಫಲಾಹ್ ಫೌಂಡೇಶನ್ ಸಹಯೋಗದಲ್ಲಿ ಈ ವರ್ಷದ ರಮಝಾನ್…

Read More

ಕುಂಬಳೆ: ಕಾರಿನಲ್ಲಿ ಅಕ್ರಮ ಪಾನ್ ಮಸಾಲಾ ಸಾಗಾಟ – 17,226 ಪ್ಯಾಕೆಟ್‌ಗಳೊಂದಿಗೆ ಯುವಕ ಬಂಧನ

ಕುಂಬಳೆ: ಕಾರಿನಲ್ಲಿ ಅಕ್ರಮವಾಗಿ ವಿವಿಧ ರೀತಿಯ ಪಾನ್ ಮಸಾಲಾ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಯುವಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಶಫೀರ್ (27) ಎಂದು ಗುರುತಿಸಲಾಗಿದೆ. ಇವರು ಕಾಸರಗೋಡು ಮುತ್ತತ್ತೋಡಿ ಚೆಟ್ಟುಕುಝಿ ಸಿಎ ಅಪಾರ್ಟ್‌ಮೆಂಟ್ ನಿವಾಸಿಯಾಗಿದ್ದು, ಮೂಲತಃ ನಾರ್ತ್ ತ್ರಿಕ್ಕರಿಪ್ಪೂರು ಮೀಲಿಯಾಟ್ ಹೌಸ್‌ನವರು ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಶಿರಿಯಾ ಸೇತುವೆ ಸಮೀಪ ವಾಹನ ತಪಾಸಣೆ ನಡೆಸುವ ವೇಳೆ ಈ ಬಂಧನ ನಡೆದಿದೆ. KL 24 K 4300 ಸಂಖ್ಯೆಯ ಕಾರನ್ನು ಚಲಾಯಿಸುತ್ತಿದ್ದ ಶಫೀರ್‌ಗೆ ಪೊಲೀಸರು ನಿಲ್ಲಲು…

Read More

ಮಂಜೇಶ್ವರ ಶಾಸಕರಿಗೆ ವಿದೇಶದಲ್ಲಿ ಏನು ಕೆಲಸ -ಡಾ ಭಾರತ್ ಶೆಟ್ಟಿ

ಮಂಜೇಶ್ವರ: ಕೇರಳ ಸರಕಾರ ಮಲಯಾಳಂ ಭಾಷೆ ಕಡ್ಡಾಯ ಮಸೂದೆ ಜಾರಿ ಮಾಡಿದಾಗ ಮಂಜೇಶ್ವರ ಶಾಸಕರು ಎಲ್ಲಿ ಇದ್ದರು? ಮಂಜೇಶ್ವರ ಶಾಸಕರು ಪ್ರತಿ ತಿಂಗಳು ವಿದೇಶಕ್ಕೆ ಹೋಗುವ ರಹಸ್ಯ ಏನು? ಮಂಜೇಶ್ವರ ಜನತೆ ಮುಸ್ಲಿಂ ಲೀಗ್ ಶಾಸಕರನ್ನು ಕಳೆದ 40ವರ್ಷ ಗಳಿಂದ ಗೆಲ್ಲಿಸಿದ್ದೀರಿ.ಆದರೂ ಇಲ್ಲಿನ ಜನತೆ ವಿದ್ಯಾಭ್ಯಾಸ, ಅರೋಗ್ಯ ಉದ್ಯೋಗಕ್ಕೆ ಮಂಗಳೂರನ್ನೇ ಆಶ್ರಯ ಪಡಬೇಕಾದ ಪರಿಸ್ಥಿತಿ. ಎಂದು ಮಂಗಳೂರು ಉತ್ತರ ವಿಧಾನಸಭಾ ಶಾಸಕ ರಾದ ಡಾ ಭಾರತ್ ಶೆಟ್ಟಿ ಹೇಳಿದರು. ಬಿಜೆಪಿ ಮಂಜೇಶ್ವರ ಮಂಡಲ ನೇತೃತ್ವ ಸಭೆ ಯಲ್ಲಿ…

Read More

10 ಲಕ್ಷ ವೆಚ್ಚದ ರಸ್ತೆ ಕಾಮಗಾರಿಯಲ್ಲಿ ಅಕ್ರಮ ಆರೋಪ

ಮಂಜೇಶ್ವರ: ಜಿಲ್ಲಾ ಪಂಚಾಯತ್ ವತಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಟಾರ್ ಹಾಕಿ ನಿರ್ಮಿಸಿದ ಮುನ್ನಿಪಾಡಿ–ಮೀಯಪ್ಪದವು ರಸ್ತೆ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 300 ಮೀಟರ್ ಟಾರ್ ಕಾಮಗಾರಿಗೆ 10 ಲಕ್ಷ ರೂ. ಅಗತ್ಯವಿಲ್ಲ, ಆದರೆ ಕಾಮಗಾರಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆಟೋ ರಿಕ್ಷಾ ಚಾಲಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಈ ರಸ್ತೆ ವರ್ಕಾಡಿ ಹಾಗೂ ಮೀಂಜ ಗ್ರಾಮ ಪಂಚಾಯತ್ ಪ್ರದೇಶಗಳ ಮೂಲಕ ಹಾದು ಹೋಗಿ, ಕರ್ನಾಟಕವನ್ನು ಸಂಪರ್ಕಿಸುವ…

Read More

ವೈದ್ಯರ ಮೇಲೆ ಹಲ್ಲೆ: ಇಬ್ಬರು ಆರೋಪಿಗಳ ಬಂಧನ

​ಮಂಜೇಶ್ವರ: ಉಪ್ಪಳದ ಆಸ್ಪತ್ರೆಯೊಂದರ ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಕೋಡಿಬೈಲು ನಿವಾಸಿ ಉಮ್ಮರ್ (45) ಮತ್ತು ಆತನ ಸಹೋದರ ಹೈದರಾಲಿ (33) ಬಂಧಿತ ಆರೋಪಿಗಳು. ​ಈ ತಿಂಗಳ 4ರಂದು ರಾತ್ರಿ 8:30ರ ಸುಮಾರಿಗೆ ಉಪ್ಪಳ ರೈಲು ನಿಲ್ದಾಣ ರಸ್ತೆಯ ದೇವಿಪ್ರಸಾದ್ ಮಾವೆ ಆಸ್ಪತ್ರೆಯ ಆವರಣದಲ್ಲಿ ವೈದ್ಯ ಕುಮಾರ್ ಶಾಶ್ವತ್ (42) ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಈ ಕುರಿತು ದಾಖಲಾದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ…

Read More

ಮಂಜೇಶ್ವರದಲ್ಲಿ ಮಾರ್ಚ್ 8ರಂದು ಹಿಂದೂ ಸಂಗಮ ಕಾರ್ಯಕ್ರಮ

ಮಂಜೇಶ್ವರ: ಹಿಂದೂ ಸಂಗಮ ಆಯೋಜನ ಸಮಿತಿ ಮಂಜೇಶ್ವರ ಪಂಚಾಯತ್ ವತಿಯಿಂದ ಮಂಜೇಶ್ವರ ಹಿಂದೂ ಸಂಗಮ ಕಾರ್ಯಕ್ರಮವು ಮಾರ್ಚ್ 8ರಂದು ಎಸ್.ಎ.ಟಿ ಶಾಲಾ ಮೈದಾನದಲ್ಲಿ ಸಂಜೆ 3 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಸಂಜೆ 3 ಗಂಟೆಗೆ ಶ್ರೀಮತ್ ಅನಂತೇಶ್ವರ ದೇವಾಲಯದ ವಠಾರದಿಂದ ಭವ್ಯ ಶೋಭಾಯಾತ್ರೆ ಆರಂಭವಾಗಲಿದೆ. ಶೋಭಾಯಾತ್ರೆಯಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ತಂಡಗಳು ಭಾಗವಹಿಸಲಿದ್ದು, ಮಂಜೇಶ್ವರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಎಸ್.ಎ.ಟಿ ಶಾಲಾ ಮೈದಾನಕ್ಕೆ ಆಗಮಿಸಲಿದೆ. ಶೋಭಾಯಾತ್ರೆಯ ನಂತರ ಆದರ್ಶ ವ್ಯಕ್ತಿಗಳ ಅನಾವರಣ ಕಾರ್ಯಕ್ರಮ…

Read More

ಡಾ. ವಾಮನ್ ರಾವ್ ಬೇಕಲ್ – ಸಂಧ್ಯಾ ರಾಣಿ ದಂಪತಿಗಳಿಗೆ “ಗಡಿನಾಡ ಆದರ್ಶ ಕನ್ನಡ ದಂಪತಿಗಳು” ಗೌರವ ಪ್ರಶಸ್ತಿ

ಕಾಸರಗೋಡು: ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಇರುವ “ಚುಟುಕು ಯುಗಾಚಾರ್ಯ ಎಂ.ಜಿ.ಆರ್. ಅರಸ್” ವೇದಿಕೆಯಲ್ಲಿ 22.02.2026 ರಂದು ನಡೆದ “ಕಾಸರಗೋಡು – ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026” ಕಾರ್ಯಕ್ರಮದಲ್ಲಿ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾ ರಾಣಿ ದಂಪತಿಗಳಿಗೆ “ಗಡಿನಾಡ ಆದರ್ಶ ಕನ್ನಡ ದಂಪತಿಗಳು” ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಾಡೋಜ ಡಾ. ಕೃಷ್ಣ ಪ್ರಸಾದ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಡಾ. ಕೊಲಚಪ್ಪೆ ಗೋವಿಂದ ಭಟ್ ಅವರ ಅಧ್ಯಕ್ಷತೆಯಲ್ಲಿರುವ ದಕ್ಷಿಣ ಕನ್ನಡ…

Read More
error: Content is protected !!