ಮಾರ್ಚ್ 15ರಂದು ಕುಂಬಳೆಯಲ್ಲಿ ಟೀಮ್ ಜೋಶ್ ವಿಶ್ವಕರ್ಮ ಕ್ರಿಕೆಟ್ ಪ್ರೀಮಿಯರ್ ಲೀಗ್

ಕುಂಬಳೆ: ಟೀಮ್ ಜೋಶ್ ಕಾಸರಗೋಡುವಿನ ನೇತೃತ್ವದಲ್ಲಿ ಮಾರ್ಚ್ 15 ಆದಿತ್ಯವಾರದಂದು ಕುಂಬಳೆ ಶಾಲಾ ಮೈದಾನದಲ್ಲಿ ವಿಶ್ವಕರ್ಮ ಸಮಾಜ ಬಾಂಧವರ ಅಂಡರ್ ಆರ್ಮ್ ಕ್ರಿಕೇಟ್ ಪಂದ್ಯಾಟ ನಡೆಯಲಿದೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನ 25,000 ನಗದು ಹಾಗೂ ಫಲಕ, ದ್ವಿತೀಯ ಬಹುಮಾನ 15,000 ಹಾಗೂ ಫಲಕ ದೊರೆಯಲಿದೆ. ಕ್ರೀಡೆಯ ಪೂರ್ವಭಾವಿಯಾಗಿ ಸ್ಪರ್ಧಿಸುವ ತಂಡಗಳ ಹರಾಜು ಪ್ರಕ್ರಿಯೆಯು ಆರಿಕ್ಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಮೈದಾನದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಭಾಗವಹಿಸುವ ಫೈರ್ ಬ್ಲ್ಯಾಸ್ಟರ್ ಮಧೂರು, ಟೀಮ್ ಶ್ಲಾಘ, ಯಂಗ್ ಸ್ಟಾರ್ಸ್ ಕಾಸರಗೋಡು,…

Read More

ಮಂಜೇಶ್ವರ ಗ್ರಾಮ ಪಂಚಾಯತ್ 2026-27 ವಾರ್ಷಿಕ ಯೋಜನೆಗೆ ಅಭಿವೃದ್ಧಿ ಸೆಮಿನಾರ್

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್‌ನ 2026-27ನೇ ಸಾಲಿನ ವಾರ್ಷಿಕ ಯೋಜನೆ ಹಾಗೂ 14ನೇ ಹಣಕಾಸು ಆಯೋಗದ ಅನುದಾನದ ಯೋಜನಾ ತಯಾರಿಯ ಭಾಗವಾಗಿ ಹಮ್ಮಿಕೊಳ್ಳಲಾದ ‘ಅಭಿವೃದ್ಧಿ ಸೆಮಿನಾರ್’ ಮಂಜೇಶ್ವರದ ಎ ಕೆ ಗಾರ್ಡನ್‌ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತು.ಮುಂಬರುವ ಹಣಕಾಸು ವರ್ಷದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಮತ್ತು ತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಸೆಮಿನಾರ್ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ, ಕಳೆದ ಫೆಬ್ರವರಿ 9 ರಿಂದ ಫೆಬ್ರವರಿ 17ರ ವರೆಗೆ ಪಂಚಾಯತ್‌ನ ವಿವಿಧ ವಾರ್ಡ್‌ಗಳಲ್ಲಿ ಗ್ರಾಮ ಸಭೆಗಳನ್ನು ಹಾಗೂ ವರ್ಕಿಂಗ್ ಗ್ರೂಪ್…

Read More

ಕನ್ನಿ( ಪ್ರಥಮ ಮತದಾರರು)ಮತದಾರರನ್ನು ಭೇಟಿ ಮಾಡಲು ‘ಮತದಾರರ ಜಾಗೃತಿ ವಾಹನ’ ಕ್ಯಾಂಪಸ್‌ಗಳಿಗೆ

ಜನಾಧಿಪತ್ಯ ಪ್ರಕ್ರಿಯೆಯಲ್ಲಿ ಚುನಾವಣೆಯ ಮಹತ್ವವನ್ನು ತಿಳಿಸಿ, ಕನ್ನಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ” ಮತದಾರರ ಜಾಗೃತಿ” ವಾಹನಕ್ಯಾಂಪಸ್‌ಗಳತ್ತ ಪ್ರಚಾರ ಯಾತ್ರೆ ನಡೆಸಿತು.ಇಂದಿನ ಕಾರ್ಯಕ್ರಮವು ಮಂಜೇಶ್ವರದ ಗೋವಿಂದ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಕಲಾವಿದರಾಗಿ ಗಾಯಕರು ರಂಷಿ ಪಟ್ಟುವಂ, ಸುದೇಶ್ ಭಾಗವಹಿಸಿ ಜಾಗೃತಿ ಸಂದೇಶವನ್ನು ಸಂಗೀತದ ಮೂಲಕ ಹರಡಿದರು. ಕುಟುಂಬಶ್ರೀ ಬ್ಲಾಕ್ ಕೋಆರ್ಡಿನೇಟರ್ ಸಚಿನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು….

Read More

ಮಂಜೇಶ್ವರ ಬಜಿಲೇರಿಯ ಬಡಾಜೆ ಕಂಚಾರ್ದ್ ನ ಕುಟುಂಬಸ್ತರ ಶ್ರೀ ಕೋಮರಾಯ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ನೇಮೋತ್ಸವ

ಮಂಜೇಶ್ವರ: ಬಾಕುಡ ಸಮಾಜದ 18 ದೈವಸ್ಥಾನದಲ್ಲಿ ಒಂದಾದ ಬಡಾಜೆ ಕಂಚಾರ್ದ್ ನ ಕುಟುಂಬಸ್ತರ ಶ್ರೀ ಕೋಮರಾಯ, ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಬಜಿಲೇರಿಯ,ಮಂಜೇಶ್ವರ ಇಲ್ಲಿ ದೈವಗಳ ನೆಮೋತ್ಸವವು 2026 ರ ಮಾರ್ಚ್ 21, 22 ರಂದು ಜರಗಲಿದೆ. ತಾರೀಕು 21 ಶನಿವಾರದಂದು ಬೆಳಗ್ಗೆ ಬಡಾಜೆ ಬೂಡು ಶ್ರೀ ಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶುದ್ದಿ ಕಲಶ, ಗಣಹೋಮ ಜರಗಿಸಂಜೆ 4 ರಿಂದ ಸ್ಥಳ ಗುಳಿಗ, ಸುಬ್ಬಿ ಗುಳಿಗ ದೈವಗಳ ನೇಮ.ಸಂಜೆ 6 ಗಂಟೆಗೆ ದೈವಗಳ ಭಂಡಾರ ಏರಿ, ಅನ್ನದಾನ…

Read More

ಮಂಜೇಶ್ವರದ ಪೊಯ್ಯೇ ಜುಮಾಧಿ ಬಂಟ ಪರಿವಾರ ದೈವಸ್ಥಾನದಲ್ಲಿ ವಾರ್ಷಿಕೋತ್ಸವ ಸಂಪನ್ನ

ಮಂಜೇಶ್ವರ: ಪೊಯ್ಯೇ ಜುಮಾಧಿ ಬಂಟ ಪರಿವಾರ ದೈವಸ್ಥಾನದಲ್ಲಿ ವಾರ್ಷಿಕೋತ್ಸವದ ಸಂಭ್ರಮದಿಂದ ಹಾಗೂ ಭಕ್ತಿಭಾವದಿಂದ ನೆರವೇರಿತು.ಕಾರ್ಯಕ್ರಮದಲ್ಲಿ ದೈವಸ್ಥಾನದ ಗೌರವ ಅಧ್ಯಕ್ಷರಾದ ವಿಶ್ವನಾಥ್ ಉಚ್ಚಿಲ್, ಅಧ್ಯಕ್ಷರಾದ ವಿಜಯ ಕುಮಾರ್ ಉಳ್ಳಾಲ್ ಉಪಸ್ಥಿತರಿದ್ದರು. ಮಾಡ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಲ್ಚಾಡ, ನಾರಾಯಣ ಗುರಿಕಾರ, ಮಾದವ ಮಾಡ, ಉಳ್ಳಾಲ ಶ್ರೀ ಭಗವತಿ ಕ್ಷೇತ್ರದ ನಿಖಿಲ್ ಗುರಿಕಾರ, ವಸಂತ ಉಚ್ಚಿಲ್, ಗಣೇಶ್ ಪಾವೂರು, ಹರೀಶ್ ಬೆಂಗಳೂರು, ಗಂಗಾಧರ ಮಂಗಳೂರು, ಪದ್ಮನಾಭ ಪೊಯ್ಯೇ, ಸೀತಾರಾಮ ಮಜಿಬೈಲ್, ಯಶವಂತ ಉಚ್ಚಿಲ್, ರಾಘವ ಕಣ್ಣೀರ್ ತೋಟ…

Read More

ಕಾಸರಗೋಡು: ಚಂದ್ರಗಿರಿ ಕೊಪ್ಪಲು ಶ್ರೀ ಮಹಮ್ಮಾಯಿ ಅಮ್ಮನವರ ದೇವಳದಲ್ಲಿ 55ನೇ ಪ್ರತಿಷ್ಠಾ ಮಹೋತ್ಸವಕ್ಕೆ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಚಂದ್ರಗಿರಿ ಕೊಪ್ಪಲು ಶ್ರೀ ಮಹಮ್ಮಾಯಿ ಅಮ್ಮನವರ ದೇವಳದಲ್ಲಿ ಏಪ್ರಿಲ್ 3 ರಿಂದ 5, 2026ರವರೆಗೆ ನಡೆಯಲಿರುವ 55ನೇ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾದ ಶ್ರೀ ಲೋಕೇಶ್ ಕೊಪ್ಪಲು, ಕಾರ್ಯದರ್ಶಿ ಸೀತಾರಾಮ ಕೊಪ್ಪಲು, ಖಜಾಂಚಿ ಬಾಲಕೃಷ್ಣ ಪರಿಯಾರ, ಜೊತೆ ಕಾರ್ಯದರ್ಶಿ ಸುರೇಶ್ ತೋಟ, ಸತೀಶ್ ಪರಿಯಾರ, ಅರ್ಚಕ ದಯಾನಂದ ಕೊಪ್ಪಲು, ಹಿರಿಯ ಸದಸ್ಯರಾದ ಸತೀಶ್ ಕೆ. ದೇರೆಬೈಲು, ರವೀಂದ್ರ ಸಿ.ಹೆಚ್. ಕೊಪ್ಪಲು, ಜನಾರ್ಧನ ಪರಿಯಾರ, ಉಮೇಶ್…

Read More

​ಮಂಜೇಶ್ವರ : ಪಾವೂರು ನಿವಾಸಿಯ ಅಪಹರಣ ಪ್ರಕರಣ – ನಾಲ್ವರು ಆರೋಪಿಗಳ ಬಂಧನ

​ಮಂಜೇಶ್ವರ: ಮಂಜೇಶ್ವರ ಸಮೀಪದ ಪಾವೂರಿನಲ್ಲಿ ವ್ಯಕ್ತಿಯೊಬ್ಬರನ್ನು ಮನೆಯಿಂದ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ​ಪಾವೂರು ಕೊಂಬಂಗುದಿಯ ಅಬ್ದುಲ್ ರಹಮಾನ್ ಎಂಬುವವರನ್ನು ಫೆಬ್ರವರಿ 20ರಂದು ರಾತ್ರಿ 10:30 ಗಂಟೆಗೆ ಕಾರಿನಲ್ಲಿ ಬಂದ ನಾಲ್ವರ ತಂಡ ಬಲವಂತವಾಗಿ ಕರೆದೊಯ್ದಿತ್ತು. ಈ ಕುರಿತು ಅಬ್ದುಲ್ ರಹಮಾನ್ ಅವರ ಪತ್ನಿ ತಾಹಿರಾ ಪೊಲೀಸರಿಗೆ ದೂರು ನೀಡಿದ್ದರು.ಇದರಂತೆ ಮಂಜೇಶ್ವರ ಠಾಣಾಧಿಕಾರಿ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸಿ ​…

Read More

ಅಪಘಾತಕ್ಕೀಡಾದ ಕಾರಿನಿಂದ ಬ್ಯಾಟ್ರಿ ಕದಿಯಲು ಬಂದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಮಂಜೇಶ್ವರ : ಎರಡು ದಿವಸ ಮೊದಲು ಅಪಘಾತಕ್ಕೀಡಾದ ಕಾರಿನಿಂದ ಬ್ಯಾಟ್ರಿ ಕದಿಯುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿ ಕೊಂಡಿದ್ದಾರೆ.ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಎರಡು ದಿವಸಕ್ಕೆ ಮೊದಲು ಮಂಜೇಶ್ವರ ಅಂಡರ್ ಪಾಸಿನಲ್ಲಿ ಸ್ಕೂಟರ್ ಗೆ ಕಾರೊಂದು ಡಿಕ್ಕಿ ಹೊಡೆದು ಅಪಘಾತ ಉಂಟಾಗಿತ್ತು. ಅಪಘಾತಕ್ಕೀಡಾದ ಸ್ಕೂಟರ್ ಸವಾರವನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತಕ್ಕೀಡಾದ ಕಾರನ್ನು ಕರೋಡಾ ಮಸೀದಿ ಪರಿಸರದಲ್ಲಿ ನಿಲುಗಡೆಗೊಳಿಸಲಾಗಿತ್ತು. ಶನಿವಾರ ಮಧ್ಯಾಹ್ನ…

Read More

ತೃಶೂರ್‌ನ ಕುಖ್ಯಾತ ರೌಡಿಗಳ ಬಂಧನ – ಕುಂಬಳೆಯ ಮನೆಯ ಟೆರೇಸ್ ಮೇಲೆ ಸಿನಿಮಾ ಮಾದರಿಯ ಕಾರ್ಯಾಚರಣೆ

ಮಂಜೇಶ್ವರ : ತೃಶೂರ್‌ನಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಕುಖ್ಯಾತ ರೌಡಿಗಳನ್ನು ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತೃಶೂರ್ ಮತ್ತು ಕುಂಬಳೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಜಾಸ್ (27), ನಿಯಾಸ್ (31) ಮತ್ತು ಗೋಕುಲ್ ಕೃಷ್ಣ (27) ಎಂಬುವವರನ್ನು ಕುಂಡಂಕೆರಡ್ಕದ ಮನೆಯೊಂದರ ಟೆರೇಸ್‌ನಿಂದ ಸಾಹಸಿಕವಾಗಿ ಸೆರೆಹಿಡಿಯಲಾಗಿದೆ. ಕಳೆದ ಫೆಬ್ರವರಿ 17ರಂದು ಪೆರಿಂಜನಂ ನಿವಾಸಿ ಅನೀಸ್ ಎಂಬವರ ಮನೆಗೆ ನುಗ್ಗಿ ಕಬ್ಬಿಣದ ರಾಡ್‌ಗಳಿಂದ ಭೀಕರವಾಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈ ಮೂವರು ಪ್ರಮುಖ ಆರೋಪಿಗಳಾಗಿದ್ದಾರೆ.ಇಜಾಸ್ ವಿರುದ್ಧ…

Read More

ಕುಂಜತ್ತೂರು ಶಿವ ಶಕ್ತಿ ಸೀತಾರಾಮ ಭಜನಾ ಮಂದಿರದ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಯಶಸ್ವಿ

ಕುಂಜತ್ತೂರು ಶಿವ ಶಕ್ತಿ ಸೀತಾರಾಮ ಭಜನಾ ಮಂದಿರದಲ್ಲಿ ನಡೆದ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಧಾರ್ಮಿಕ ಸಂಪ್ರದಾಯಗಳು ಸಮಾಜದ ಏಕತೆ ಹಾಗೂ ನೈತಿಕ ಮೌಲ್ಯಗಳನ್ನು ಬಲಪಡಿಸುವ ಶಕ್ತಿ ಹೊಂದಿವೆ ಎಂದು ಅವರು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ವಿಜಯ್ ಕುಮಾರ್ ರೈ, ಆದರ್ಶ ಬಿ.ಎಂ., ಜಯರಾಮ್, ಹರೀಶ್ ಶೆಟ್ಟಿ ಮಾಡ ಸೇರಿದಂತೆ ಹಲವರು ಉಪಸ್ಥಿತರಿದ್ಧರು .ಸ್ಥಳೀಯ ಭಕ್ತರು ಹಾಗೂ ಗಣ್ಯರು…

Read More
error: Content is protected !!