ಎ.ಯು.ಪಿ ಶಾಲೆ ಆನೆಕಲ್ಲಿನಲ್ಲಿ ಸಂಭ್ರಮದ ಶಾಲಾ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ.
ಎ.ಯು.ಪಿ ಶಾಲೆ ಆನೆಕಲ್ಲಿನಲ್ಲಿ ತಾರೀಕು 17/02/2026 ಮಂಗಳವಾರದಂದು ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಶಾಲಾ ಪ್ರಬಂಧಕ ಪ್ರತಿನಿಧಿ ಶ್ರೀ ಮುರಳಿ ಶ್ಯಾಮ್ ಧ್ವಜಾರೋಹಣ ನೆರವೇರಿಸಿ ಕೊಟ್ಟರು. ಮಧ್ಯಾಹ್ನ ನಂತರ 3:00ಗೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ರಾಮಣ್ಣ ನಾಯ್ಕ್ ದೀಪ ಪ್ರಜ್ವಲನೆಯ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಬಾಲ್ಯಕಾಲದ ನೆನಪುಗಳನ್ನು ಮೆಲುಕು ಹಾಕಿ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ…
