ವಾಟ್ಸಪ್‌ನಲ್ಲಿ ‘ಇದು ನನ್ನ ಕೊನೆಯ ಸ್ಟೇಟಸ್’ – ಯುವಕನ ಆತ್ಮಹತ್ಯೆ ಪ್ರಕರಣ
ಕಾಸರಗೋಡು : ಯುವಕನೊಬ್ಬ ತನ್ನ ಕೈ ಕೊಯ್ದುಕೊಂಡು , ಬಳಿಕ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕದ್ರಿ ಶಿವಭಾಗ್ ಬಳಿಯ ಅಪಾರ್ಟೆಂಟ್ ಒಂದರಲ್ಲಿ ನಡೆದಿದೆ. ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಪೆರುವಾಡ್ ನಿವಾಸಿ ರೋಶನ್ (22) ಮೃತಪಟ್ಟ ಯುವಕ. ಕದ್ರಿ ಪಾರ್ಕ್ ಬಳಿಯ ಐಸ್ ಕ್ರೀಂ ಅಂಗಡಿ ಒಂದರಲ್ಲಿ ಕೆಲಸಕ್ಕಿದ್ದ ರೋಶನ್ ನಾಲ್ಕು ತಿಂಗಳಿನಿಂದ ಅಪಾರ್ಟೆಂಟಿನಲ್ಲಿ ಇತರೇ ಯುವಕರೊಂದಿಗೆ ಬಾಡಿಗೆಗೆ ನೆಲೆಸಿದ್ದ. ತನ್ನ ಕೈಯನ್ನು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದು ಕೊಠಡಿಯಲ್ಲಿ ರಕ್ತದ ಕೋಡಿಯೇ ಹರಿದಿದೆ….
