ನಾಗರಕಟ್ಟೆ ಶ್ರೀ ಶಾರದಾ ಭಜನಾಶ್ರಮದಿಂದ ಶೃಂಗೇರಿ ಗುರುಪಾದಪೂಜೆ -ಅನುಗ್ರಹ ಪ್ರಾಪ್ತಿ

ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ ಗುರುದೇವ ಶ್ರೀ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಗಳವರಿಂದ ಕಾಸರಗೋಡು ಕೋಟೆಯ ಪೂರ್ವ ಭಾಗದಲ್ಲಿನ ನಾಗರಕಟ್ಟೆ ಯಲ್ಲಿ ಸಮಾಜದ ಏಳಿಗೆಗಾಗಿ ಸ್ಥಾಪಿಸಿದ “ಶ್ರೀ ಶಾರದಾ ಭಜನಾಶ್ರಮ ” ಇದರ ಜೀರ್ಣೋದ್ದಾರ, ನೂತನ ನಾಗರಕಟ್ಟೆ, ರಕ್ತೇಶ್ವರಿ ಕಟ್ಟೆ ಪುನರ್ ನಿರ್ಮಾಣ ಹಾಗೂ ಡಿಸೆಂಬರ್ ತಿಂಗಳ ನಾಲ್ಕು, ಐದನೇ ತಾರೀಕಿಗೆ ನಡೆಯುವ ಬ್ರಹ್ಮ ಕಲಶ ಪ್ರಯುಕ್ತ, ಶೃಂಗೇರಿ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿ ಗಳಿಗೆ ಪಾದಪೂಜೆ, ವಸ್ತ್ರ ಸಂಹಿತೆಯೊಂದಿಗೆ ನೀಡಿ ಪರಮ…

Read More

ಇತಿಹಾಸ ಪ್ರಸಿದ್ಧ ಮಂಜೇಶ್ವರ ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ಭೇಟಿ ಕೊಟ್ಟ ಕೊಡುಗೈ ದಾನಿ ಅಸ್ತ್ರ ಗ್ರೂಪ್ CEO ಕೆ.ಎಸ್ ಲಂಚುಲಾಲ್ .

ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕೆಲಸಗಳು ಬರದಿಂದ ಸಾಗುತ್ತಿದ್ದು ಇಂದು ಕೊಡುಗೈ ದಾನಿ , ಬಡವರ ಬಂಧು ಅಸ್ತ್ರ ಗ್ರೂಪ್ ನ ಸಿ ಇ ಓ ಲಂಚುಲಾಲ್ ಕೆ. ಎಸ್ ಅವರು ಕ್ಷೇತ್ರಕ್ಕೆ ಭೇಟಿ ಕೊಟ್ಟರು. ಬರದಿಂದ ಸಾಗುವ ಜೀರ್ಣೋದ್ದಾರ ಕೆಲಸವನ್ನು ವೀಕ್ಷಿಸಿ ರೂಪುರೇಷೆ ನೋಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಜೀರ್ಣೋದ್ದಾರ ಸಮಿತಿ ಹಾಗೂ ಆಡಳಿತ ಸಮಿತಿಯಿಂದ ಲಂಚುಲಾಲ್ ರವರಿಗೆ ಕಿರು ಗೌರವಾರ್ಪಣೆಯನ್ನು ಸಮರ್ಪಿಸಿದರು. ಈ ಸಂದರ್ಭ ಮಾತನಾಡಿದ ಲಂಚುಲಾಲ್ ರವರು ..ಮೊದಲು…

Read More

ಮಂಜೇಶ್ವರದ ದಿವ್ಯಾಂಗಿ ಲಾಟರಿ ವ್ಯಾಪಾರಿಗೆ ದ್ವಿಚಕ್ರ ವಾಹನ ಹಸ್ತಾಂತರಿಸಿದ ಅಸ್ತ್ರ ಗ್ರೂಪಿನ ಸಿ ಇ ಓ ಲಂಚುಲಾಲ್.

ಮಂಜೇಶ್ವರದ ಹೊಸಂಗಡಿಯಲ್ಲಿ ಲಾಟರಿ ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿರುವ ದಿವ್ಯಾಂಗಿ ರೋಹಿತ್ ಹೊಸಂಗಡಿ ಯವರಿಗೆ ಲಂಚುಲಾಲ್ ಅವರು ತಮ್ಮ ಪ್ರಾಣಾಸ್ತ್ರ ಚಾರಿಟೇಬಲ್ ಟ್ರಸ್ಟ್ ಮೂಲಕ ದ್ವಿಚಕ್ರ ವಾಹನವನ್ನು ಕನಿಲ ಶ್ರೀ ಭಗವತಿ ಕ್ಷೇತ್ರದ ವಠಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀ ಕ್ಷೇತ್ರದ ಕಾರ್ನವರ ಮೂಲಕ ನೀಡಿದರು. ಮಂಜೇಶ್ವರ ಪಿಲಿಗೊಬ್ಬು ನಡೆಯುವ ಸಂದರ್ಭದಲ್ಲಿ ರೋಹಿತ್ ಅವರ ಬಗ್ಗೆ ಲಂಚುಲಾಲ್ ಅವರಿಗೆ ತಿಳಿಸಲಾಗಿತ್ತು. ಅಂದೇ ನೀಡಿದ ವಾಗ್ದಾನದಂತೆ ಇಂದು ಈ ದ್ವಿಚಕ್ರ ವಾಹನವನ್ನು ಹಸ್ತಾಂತರಿಸಲಾಗಿದೆ. ಮಂಜೇಶ್ವರ ಪಿಲಿಗೊಬ್ಬು ವೇದಿಕೆಯಲ್ಲಿ ಸಾಂಕೇತಿಕವಾಗಿ…

Read More

ಮಂಜೇಶ್ವರ ವಾಮಂಜೂರು ಶ್ರೀ ಶಾಸ್ತವೇಶ್ವರ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಿದ್ಧತೆ .

ಇತಿಹಾಸ ಪಸಿದ್ದ ಮಂಜೇಶ್ವರ ವಾಮಂಜೂರು ಶ್ರೀ ಶಾಸ್ತವೇಶ್ವರ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಿದ್ಧತೆ ನಡೆಯುತ್ತಿದ್ದು ,ಸರಿ ಸುಮಾರು 17 ವರ್ಷಗಳ ಹಿಂದೆ ಕ್ಷೇತ್ರ ಜೀರ್ಣೋದ್ದಾರ ನಡೆದು ಬ್ರಹ್ಮ ಕಲಶ ನಡೆದಿತ್ತು . ಇದೀಗ ಕ್ಷೇತ್ರ ಎದುರಿನಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಗೊಂಡ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಬೇಟಿಕೊಡುವವರಿಗೆ ಅವ್ಯವಸ್ಥೆ ಉಂಟಾಗಿದ್ದು ಮುಂದೆ ರಾಷ್ಟ್ರೀಯ ಹೆದ್ದಾರಿಯ ಸಮಾನ ಎತ್ತರಕ್ಕೆ ಏರಿಸಿ ಕ್ಷೇತ್ರವನ್ನು ಪುನರ್ ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿದ್ದು ಈ ಬಗ್ಗೆ ಜೀರ್ಣೋದ್ದಾರ ಸಮಿತಿಯನ್ನು ರಚಿಸುವ ಸಲುವಾಗಿ ಊರ ಪರವೂರ ಭಕ್ತಾದಿಗಳನ್ನು…

Read More

ಸಂಬಂಧಿಕರ ಮನೆಗೆ ಆಗಮಿಸಿದ್ದ ಅನ್ಯ ರಾಜ್ಯದ ಇಬ್ಬರು ಬಾಲಕಿಯರಲ್ಲಿ ಜ್ವರದ ತೀವ್ರ ತೊಂದರೆ ಕಾಣಿಸಿಕೊಂಡ ಪರಿಣಾಮ ಒಬ್ಬಳ ಸಾವು , ಮತ್ತೊಬ್ಬಳು ತೀವ್ರ ನಿಗಾ ಘಟಕದಲ್ಲಿ ದಾಖಲು

ಮಂಜೇಶ್ವರ: ಸಂಬಂಧಿಕರ ಮನೆಗೆ ಆಗಮಿಸಿದ್ದ ಅನ್ಯ ರಾಜ್ಯದ ಇಬ್ಬರು ಬಾಲಕಿಯರಲ್ಲಿ ಜ್ವರದ ತೀವ್ರ ತೊಂದರೆ ಕಾಣಿಸಿಕೊಂಡ ಪರಿಣಾಮ ಒಬ್ಬಳು ಸಾವನ್ನಪ್ಪಿ, ಮತ್ತೊಬ್ಬಳನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿರುವ ದುರ್ಘಟನೆ ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತೂಮಿನಾಡಿನಲ್ಲಿ ನಡೆದಿದೆ. ಹರ್ಯಾನಾ ಮೂಲದ 9 ವರ್ಷದ ಮಾಹಿ ಎಂಬ ಬಾಲಕಿ ಸಾವನ್ನಪ್ಪಿದರೆ, ಅವಳ ಜೊತೆಯಲ್ಲಿದ್ದ 13 ವರ್ಷದ **ಕಾಣಿಕಾ ಎಂಬ ಬಾಲಕಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಬಂಧಿಕರ ಮನೆಗೆ ಬಂದಿದ್ದ ಈ ಇಬ್ಬರು ಬಾಲಕಿಯರು ಅಸ್ವಸ್ಥಗೊಂಡ ಸಂದರ್ಭ ಸ್ಥಳೀಯರಲ್ಲಿ…

Read More

ಪಾವಳದಲ್ಲಿ ನಾಟಕ ಗರಡಿ ಕಾರ್ಯಾಗಾರ

ವರ್ಕಾಡಿ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಮತ್ತು ವರ್ಕಾಡಿ ಪಂಚಾಯತ್ ನೇತೃತ್ವ ಸಮಿತಿ ವತಿಯಿಂದ ನಾಟಕ ಗರಡಿ ಎಂಬ ಅಭಿನಯ ತರಬೇತಿ ಕಾರ್ಯಕ್ರಮವು ಪಾವಳದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ಕವಿ ಸಾಹಿತಿ ಚೇತನ್ ವರ್ಕಾಡಿ ನೆರವೇರಿಸಿದರು. ಮಂಜೇಶ್ವರ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕಿಶೋರ್ ಕುಮಾರ್ ಪಾವಳರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಂಜೇಶ್ವರ ಲೈಬ್ರರಿ ಕೌನ್ಸಿಲ್ ನ ಸದಸ್ಯರಾದ ಸುಧಾಕರ್ ಕಲ್ಲೂರು, ಸಂತೋಷ್ ಪ್ರೆಂಡ್ಸ್ ಕ್ಲಬ್ ಲೈಬ್ರರಿಯ ಅಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ ಪಾವಳ, ಕವಿ-ಸಾಹಿತಿಯಾದ…

Read More

ಸೀತಾಂಗೋಳಿ ಕಾರ್ಯ ಕ್ಷೇತ್ರದಲ್ಲಿ ನೂತನವಾಗಿ ಪ್ರಾರಂಭಿಸಿದ ” ಕಲ್ಪ ವೃಕ್ಷ ” ಜ್ಞಾನವಿಕಾಸ ಕೇಂದ್ರ

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಕಾಸರಗೋಡು , ಸೀತಾಂಗೋಳಿ ಕಾರ್ಯ ಕ್ಷೇತ್ರದಲ್ಲಿ ನೂತನವಾಗಿ ಪ್ರಾರಂಬಿಸಿದ ” ಕಲ್ಪ ವೃಕ್ಷ ” ಜ್ಞಾನವಿಕಾಸ ಕೇಂದ್ರ ಸೀತಾಂಗೋಳಿ ಇದರ ಮೊದಲ ಸಭೆಯು ಜ್ಞಾನಿಕಾಸ ಸಮನ್ವಯಧಿಕಾರಿ ಶ್ರೀಮತಿ ಸೌಮ್ಯ ಅವರ ಮಾರ್ಗದರ್ಶನದಲ್ಲಿ ವೀರ ಹನುಮನ್ ಕ್ಲಬ್ ಮುಕಾರಿಕಂಡದಲ್ಲಿ ನಿನ್ನೆ ನಡೆಯಿತ್ತು. ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ ದೀಪ ಬೆಳಗಿಸಿ ಉದ್ಘಾಟಿಸಿ , ಜ್ಞಾನಿಕಾಸ ಕೇಂದ್ರದ ಸಭೆ ಹಾಗೂ ನಿರ್ವಣೆ ಬಗ್ಗೆ ತುಂಬಾ ಪ್ರಯೋಜನಕಾರಿಯಾಗಿದೆ…

Read More

ಕುಂಬಳೆ : ಗಲ್ಫ್ ಉದ್ಯೋಗಿಯ ಮನೆಯಿಂದ 20 ಪವನ್ ಚಿನ್ನಾಭರಣ ಕಳವು

ಕುಂಬಳೆ, ಅ. 27 : ಗಲ್ಫ್ ಉದ್ಯೋಗಿಯ ಮನೆಯಿಂದ 20 ಪವನ್ ಚಿನ್ನಾಭರಣ ಕಳವುಗೈದ ಘಟನೆ ಕಾಸರಗೋಡಿನ ಪೆರ್ಮುದೆ ಸಮೀಪದ ಕುಂಬಳೆ ಠಾಣಾ ವ್ಯಾಪ್ತಿಯ ಪೆರಿಯಡ್ಕ ಎಂಬಲ್ಲಿ ನಡೆದಿದೆ. ರವಿವಾರ ಸಂಜೆ ಕೃತ್ಯ ಬೆಳಕಿಗೆ ಬಂದಿದೆ. ಶರೀಫ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಶರೀಫ್ ದುಬೈ ಯಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ರುಕ್ಸಾನಾ ಹಾಗೂ ಇಬ್ಬರು ಮಕ್ಕಳು ಮನೆಗೆ ಬೀಗ ಹಾಕಿ ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದರು. ರವಿವಾರ ಸಂಜೆ ಮರಳಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ…

Read More

ಮಂಜೇಶ್ವರ, ಹೊಸಬೆಟ್ಟು ಹಿಂದೂ ರುದ್ರಭೂಮಿ ಲೋಕಾರ್ಪಣೆ .

ಮಂಜೇಶ್ವರ: ಇಲ್ಲಿನ ಹೊಸ ಬೆಟ್ಟು ಗುಡ್ಡೆ ರುದ್ರ ಭೂಮಿಯ ನೂತನ ಕಟ್ಟಡಗಳು ಹಾಗೂ ಮೂಲಭೂತ ಸೌಕರ್ಯಗಳ ಲೋಕಾರ್ಪಣೆ ಕಾರ್ಯಕ್ರಮ ಜರಗಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗುಡ್ಡೆ ಹಿಂದೂ ರುದ್ರಭೂಮಿ ಪರಿಪಾಲನ ಸಮಿತಿಯ ಅಧ್ಯಕ್ಷರಾದ ಯಾದವ್ ಬಡಾಜೆ ವಹಿಸಿದ್ದರು. ಸುಸಜ್ಜಿತ ಕಟ್ಟಡಗಳು, ಸಿಲಿಕಾನ್ ಪೆಟ್ಟಿಗೆ ವ್ಯವಸ್ಥೆ, ಕೊಳವೆಬಾವಿ, ಅಶ್ವತ ಕಟ್ಟೆ ಸೇರಿದಂತೆ ಸುಮಾರು 28 ಲಕ್ಷ ರೂಪಾಯಿ ವೆಚ್ಚದ ರುದ್ರಭೂಮಿ ಅಭಿವೃದ್ಧಿ ಯೋಜನೆಗಳನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾ ಎಂ. ಶಿಲಾ ಫಲಕವನ್ನು…

Read More

ಪರಿಶಿಷ್ಟ ಜಾತಿ, ಪಂಗಡ ಬಿಜೆಪಿ ಜೊತೆ -ರಾಮ ಏದರ್

ವರ್ಕಾಡಿ : ಎಸ್ ಸಿ ಸಮುದಾಯ ಮತ್ತು ಪರಿಶಿಷ್ಟ ಪಂಗಡ ಈ ಬಾರಿ ಬಿಜೆಪಿ ಗೆ ರಾಜಕೀಯ ಬೆಂಬಲ ನೀಡಲಿದೆ.ಹಿಂದೂ ಧರ್ಮ ಸಂರಕ್ಷಣೆ ನಮ್ಮೆಲ್ಲರ ಹೊಣೆ ಶಬರಿಮಲೆ ಮಲೆ ಯಲ್ಲಿ ಲೂಟಿ ಹಾಗೂ ಅನಾಚಾರ ಮಾಡಿರುವ ಎಡರಂಗ, ಎಸ್ ಸಿ ಸಮುದಾಯದ ವೋಟ್ ನ್ನು ಮುಸ್ಲಿಂ ಲೀಗ್ ಗೆ ಹಾಕಿಸುವ ಕಾಂಗ್ರೆಸ್ ಕುತಂತ್ರ ಕ್ಕೆ ಇನ್ನು ಪರಿಶಿಷ್ಟ ಜಾತಿ ಸಮುದಾಯ ಬಲಿ ಆಗುವುದಿಲ್ಲ ಎಂದು ಎಸ್ ಸಿ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ರಾಮ ಏದರ್ ಮಂಡಲ…

Read More
error: Content is protected !!