ಮಂಜೇಶ್ವರ: ಬ್ಲಾಕ್ ಪಂಚಾಯತ್ ಅಭಿವೃದ್ಧಿ ವರ್ಕಿಂಗ್ ಗ್ರೂಪ್ ರಚನೆ
ಮಂಜೇಶ್ವರ : ಜನರ ಅಗತ್ಯತೆಗಳು, ಸ್ಥಳೀಯ ಅಭಿವೃದ್ಧಿ ಅವಕಾಶಗಳು ಹಾಗೂ ಭವಿಷ್ಯ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧೀನದಲ್ಲಿ ಅಭಿವೃದ್ಧಿ ವರ್ಕಿಂಗ್ ಗ್ರೂಪ್ ರಚಿಸಲಾಯಿತು. ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಗ್ರ ವರ್ಕಿಂಗ್ ಗ್ರೂಪ್‌ಗೆ ರೂಪು ನೀಡಲಾಯಿತು. ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ, ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಸುದೀರ್ಘ ಚರ್ಚೆ ನಡೆಯಿತು. ಜನರ ಸಕ್ರಿಯ ಭಾಗವಹಿಸುವಿಕೆಯಿಂದ ಯೋಜನೆಗಳನ್ನು ಜಾರಿಗೊಳಿಸುವ ಸ್ಪಷ್ಟ ರೂಪರೇಖೆ ತಯಾರಿಸುವುದು…
