ಕಟ್ಟೆ ಪ್ರೆಂಡ್ಸ್ ಮತ್ತು ಅಡ್ಕ ಕಟ್ಟೆ sc ಗ್ರಾಮ ಕ್ಷೇಮ ಸಮಿತಿ ನೆತೃತ್ವದಲ್ಲಿ ಓಣಂ ಹಬ್ಬ.

ಕಟ್ಟೆ ಪ್ರೆಂಡ್ಸ್ ಮತ್ತು ಅಡ್ಕ ಕಟ್ಟೆ sc ಗ್ರಾಮ ಕ್ಷೇಮ ಸಮಿತಿ ನೇತೃತ್ವ ದಲ್ಲಿ ಓಣಂ ಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಅಡ್ಕ ಶ್ರೀ ಚಕ್ರಪತಿ ಬೀರಮಾರ್ಲರ್ ಮಾಡ ಪರಿಸರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೈವದ ಪಾತ್ರಿ ರಾಧಾಕೃಷ್ಣ ಅಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು .ಸಂಸ್ಥೆಯ ಅಧ್ಯಕ್ಷರಾದ ಸಂಜೀವ ವೀರನಗರ ಅಧ್ಯಕ್ಷತೆ ವಹಿಸಿದ್ದರು. ಶಾಂತಾರಾಮ್ ಶೆಟ್ಟಿ,ಭಗವಾನ್ ದಾಸ್ ಶೆಟ್ಟಿ ಉಪಸ್ಥಿತರಿದ್ದರು. ಸ್ಪರ್ಧೆಯ ನಂತರ ಬಹುಮಾನ ವಿತರಣೆಯು ನಡೆಯಿತು .ಕಾರ್ಯಕ್ರಮವನ್ನು ಬಾಲಕೃಷ್ಣ ವಿ ಎನ್ ನಿರೂಪಿಸಿದರು.

Read More

ಯುನೈಟೆಡ್ ಸೀಫುಡ್ ಫ್ಯಾಕ್ಟರಿ ಎಂಬ ಮೀನು ಸಂಸ್ಕರಣಾ ಕೇಂದ್ರದ ವಿರುದ್ಧ ಕಣ್ವತೀರ್ಥ ನಾಗರೀಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ

ಮಂಜೇಶ್ವರ: ಕಣ್ವತೀರ್ಥ ಪರಿಸರದಲ್ಲಿ ಹಲವು ವರ್ಷಗಳಿಂದ ಪರಿಸರ ಮಾಲಿನ್ಯ ಚಟುವಟಿಕೆಗಳಿಗೆ ಕಾರಣವಾಗಿರುವ ಯುನೈಟೆಡ್ ಸೀಫುಡ್ ಫ್ಯಾಕ್ಟರಿ ಎಂಬ ಮೀನು ಸಂಸ್ಕರಣಾ ಕೇಂದ್ರದ ವಿರುದ್ಧ ಕಣ್ವತೀರ್ಥ ನಾಗರೀಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಯಿತು.ಕಣ್ವತೀರ್ಥ ಗೇಟ್ ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಮಂಜೇಶ್ವರ ಗ್ರಾಮ ಪಂಚಾಯತು ಮುಂಭಾಗದಲ್ಲಿ ಪೊಲೀಸರು ತಡೆದರು. ಬಳಿಕ ಮಂಜೇಶ್ವರ ಗ್ರಾಮಪಂಚಾಯತ್ ಮುಂಭಾಗದಲ್ಲಿ ನಿವೃತ ಸೇನಾಧಿಕಾರಿ ವಿಜಯ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಮಧುಸೂಧನ್ ಆಚಾರ್ಯ ಉದ್ಘಾಟಿಸಿದರು….

Read More

ಮೀಂಜ-ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ

ಮೀಯಪದವು ಚಿಗುರುಪಾದೆಯಲ್ಲಿ ಕಾರ್ಯವೆಸಗುತ್ತಿರುವ “ಮೀಂಜ_ ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ”ಯ ಮಹಾಸಭೆಯು ದಿನಾಂಕ 14 ರಂದು ಚಿಗುರುಪಾದೆ ಸಿ.ಸಿ. ಕಾಂಪ್ಲೆಕ್ಸ್ ನಲ್ಲಿ ಜರಗಿತು. ಸೊಸೈಟಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ಯವರ ಅಧ್ಯಕ್ಷತೆ ಯಲ್ಲಿ , ಮಂಜೇಶ್ವರ ವಿಭಾಗದ ಸಹಕಾರಿ ಸಹಾಯಕ ನಿಬಂಧಕ ಶ್ರೀ ರವೀಂದ್ರ ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೊಸೈಟಿ ಯ ಸದಸ್ಯರೂ, ಕರ್ನಾಟಕ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ಜಗದೀಶ್ ಶೆಟ್ಟಿ ಮಾಸ್ಟರ್, ಎಲಿಯಾಣ ಅವರಿಗೆ ಸಭೆಯಲ್ಲಿ…

Read More

ಮುಡಿಮಾರು ಪಾವೂರಿನಲ್ಲಿ ಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗುರು ಪೂಜೆ.

ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಮುಡಿಮಾರು ಪಾವೂರು ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗುರು ಪೂಜೆಯನ್ನು ಮುಡಿಮಾರ್ ಶ್ರೀ ಮಲರಾಯ ಗುಳಿಗ ದೈವಸ್ಥಾನದ ವಠಾರದಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಗೆ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ಕೃಷ್ಣ ಶಿವ ಕೃಪ ಗುರುಗಳ ಸಂದೇಶಗಳನ್ನು ನೀಡಿದರು. ಅರಿಬೈಲು ಬರುವ ಜುಮಾದಿ ದೈವಸ್ಥಾನದ ಅರ್ಚಕರಾದ ಅರಸ ಪೂಜಾರಿ ಕುದುಕೋರಿ, ಮುಡಿಮಾರ್ ಮಲರಾಯ ಕ್ಷೇತ್ರದ ಅರ್ಚಕರಾದ ಚಂದ್ರಹಾಸ ಪೂಜಾರಿ ಮುಡಿಮಾರು,ಜಿಲ್ಲಾ ವೇದಿಕೆ…

Read More

ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಕೋರಿ ಮಂಗಳೂರಿನ ಸಿಖ್ ಸಮುದಾಯದ ವತಿಯಿಂದ ನಾಳೆ ದೇಣಿಗೆ ಸಂಗ್ರಹಣೆ ಅಭಿಯಾನವು ನಡೆಯಲಿದೆ – ಕಮಲ್ ಜಿತ್ ಸಿಂಗ್

ಕಾಸರಗೋಡು: ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಕೋರಿ ಮಂಗಳೂರಿನ ಸಿಖ್ ಸಮುದಾಯದ ವತಿಯಿಂದ ನಾಳೆ ಬೆಳ್ಳಿಗೆ 10 ರಿಂದ 5 ಗಂಟೆಯ ತನಕ ಕೊಟ್ಟಾರ ಚೌಕಿಯಲ್ಲಿ ದೇಣಿಗೆ ಸಂಗ್ರಹಣೆ ಅಭಿಯಾನವು ನಡೆಯಲಿದೆ ಎಂದು ಕಮಲ್ ಜಿತ್ ಸಿಂಗ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಸುಖ್ವಿಂದರ್ ಸಿಂಗ್ , ಇಂದು ಪಂಜಾಬ್ ರಾಜ್ಯದಲ್ಲಿ ತೀವ್ರ ಪ್ರವಾಹದ ಪರಿಣಾಮ ಸಾವಿರಾರು ಕುಟುಂಬಗಳು ತಮ್ಮ ಮನೆ, ಹೊಲ ಹಾಗೂ ಜೀವನೋಪಾಯ ಕಳೆದುಕೊಂಡಿವೆ. ಬೆಳೆಗಳು, ಜಾನುವಾರುಗಳು ಹಾಗೂ ಆಸ್ತಿ-ಪಾಸ್ತಿಗಳು…

Read More

ಕಾಸರಗೋಡು ಕನ್ನಡ ಗ್ರಾಮೋತ್ಸವ 2025 ನವಂಬರ್ 4ಕ್ಕೆ

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮ ದಿನಾಚರಣೆ – ಜನ್ಮ ವರ್ಷಾಚರಣೆ ,ಅಭಿನಂದನಾ ಕಾರ್ಯಕ್ರಮವನ್ನು ಕೇರಳ – ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಉತ್ಸವವನ್ನಾಗಿಸಿ ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ – ‘ಕಾಸರಗೋಡು ಕನ್ನಡ ಗ್ರಾಮೋತ್ಸವ ‘2025 ಎಂಬ ಶೀರ್ಷಿಕೆಯ…

Read More

ಮಂಜೇಶ್ವರದಲ್ಲಿ ಮಿನಿ ಹೈ ಮಾಸ್ಟ್ ಲೈಟ್ ಉದ್ಘಾಟನೆ ವಿಳಂಬ – ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ.

ಮಂಜೇಶ್ವರ: ಮಂಜೇಶ್ವರ ಕಣ್ಣೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಮುಂಭಾಗದಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಲಾಗಿರುವ ಮಿನಿ ಹೈ ಮಾಸ್ಟ್ ಲೈಟ್ ವರ್ಷಗಳಾಗಿ ಸ್ಥಾಪನೆಯಾಗಿದ್ದು, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ತಾಂತ್ರಿಕ ಕಾಮಗಾರಿಗಳು ಪೂರ್ಣಗೊಂಡಿರುವಂತೆಯೇ, ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗದೇ ಇರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರದೇಶವಾಸಿಗಳ ಹೇಳಿಕೆಯಂತೆ ಈ ಲೈಟ್ ಯೋಜನೆಗೆ ಸುಮಾರು 2 ಲಕ್ಷ ರೂ. ವೆಚ್ಚವಾಗಿದ್ದು, ಬಹುತೇಕ ವರ್ಷದ ಹಿಂದೆ ಕಾಮಗಾರಿ ಪೂರ್ಣಗೊಂಡಿದ್ದರೂ ಈಗಾಗಲೇ ಉದ್ಘಾಟನೆಯಿಲ್ಲದ ಕಾರಣ ಅದು ‘ಊಟಕ್ಕಿಲ್ಲದ ಉಪ್ಪಿನಕಾಯಿ’ ಎಂಬಂತಾಗಿದೆ. ಇದರ ಪರಿಣಾಮವಾಗಿ…

Read More

ಅಭಿವೃದ್ಧಿ ಬಿಟ್ಟಿಯಾಗಿ ಪಡೆದು ದೇಶ ನಾಶ ಮಾಡಬೇಡಿ -ಆದರ್ಶ ಬಿ .ಎಂ

ಕಾಸರಗೋಡು:ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಗುತ್ತಿರುವಾಗ ಇದು ನಮ್ಮ ಸಾಧನೆ ಎಂದ ಎಡರಂಗ ಸರಕಾರ, pwd ಸಚಿವ ರಿಯಾಜ್, ಕಾಸರಗೋಡು ಸಂಸದ ಉಣ್ಣಿತನ್, ಮಂಜೇಶ್ವರ, ಕಾಸರಗೋಡು ಶಾಸಕರು ಗಳು ರಸ್ತೆಯಲ್ಲಿ ನಿಂತು ಫೋಟೋ ತೇಗದದ್ದೇ ತೆಗೆದದ್ದು, ಬಿಜೆಪಿ ಜಿಲ್ಲಾ ಸಮಿತಿಯ ಪ್ರಯತ್ನ ದ ಫಲವಾಗಿ ಕೆಲವು ಕಡೆ ಅಂಡರ್ ಪಾಸ್, ಫುಟ್ ಓವರ್ ಬ್ರಿಡ್ಜ್, ಲಭಿಸಿದಾಗ ಅದು ನಮ್ಮ ಸಾಧನೆ ಎಂದು ಬಿಂಬಿಸಲು ಫ್ಲೆಕ್ಸ್ ಹಾಕಿಸಿದ ಶಾಸಕರುಗಳುಈಗ ಕುಂಬ್ಳೆ ಯಲ್ಲಿ ತಾತ್ಕಾಲಿಕ ಟೋಲ್ ಬರುತ್ತೆ ಅಂತ ರಸ್ತೆ…

Read More

ಮೊಗ್ರಾಲ್ ಪುತ್ತೂರು ರಾ. ಹೆದ್ದಾರಿಗೆ ಲೈಟ್ ಜೋಡಿಸುವಾಗ ದುರ್ಘಟನೆ -ಸಾವಿನ ಸಂಖ್ಯೆ ಎರಡಕ್ಕೇರಿಕೆ

ಕುಂಬಳೆ : ಮೊಗ್ರಾಲ್ ಪುತ್ತೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸುವಾಗ ಕ್ರೈನ್ ನಿಂದ ಬಿದ್ದು ಗಾಯಗೊಂಡ ವ್ಯಕ್ತಿಯೂ ಮೃತಪಡುವುದರೊಂದಿಗೆ ಸಾವಿನ ಸಂಖ್ಯೆ ಎರಡಕ್ಕೇರಿದೆ.ಕೋಝಿಕ್ಕೋಡ್ ಬಳಿಯ ವಡಗರ ನಿವಾಸಿಗಳಾದ ಅಕ್ಷಯ್ (30), ಅಶ್ವಿನ್ (26)ಮೃತ ವ್ಯಕ್ತಿಗಳಾಗಿದ್ದಾರೆ. ಗುರುವಾರ ಮಧ್ಯಾಹ್ನ 12ರ ವೇಳೆಗೆ ಹೆದ್ದಾರಿಗೆ ದೀಪ ಅಳವಡಿಸುವ ವೇಳೆ ಕ್ರೈನ್ ನ ಬಾಕ್ಸ್ ಕಳಚಿದಾಗ, ಕರ್ತವ್ಯದಲ್ಲಿದ್ದ ಇವರಿಬ್ಬರೂ ಬಿದ್ದಿದ್ದರು. ಈ ಪೈಕಿ ಅಕ್ಷಯ್ ಮೊದಲು ಮೃತಪಟ್ಟಿದ್ದರು.ಕುಂಬಳೆ ಸಹಕಾರಿ ಆಸ್ಪತ್ರೆಗೆ ಕರೆತರುವ ವೇಳೆ ಅಕ್ಷಯ್ ನ ಮರಣ ಸಂಭವಿಸಿತು. ಅಶ್ವಿನ್…

Read More

ರಾಮಕ್ಷತ್ರಿಯ ಮಹಿಳಾ ಯಕ್ಷವೃಂದ ಜೆಪ್ಪು ಮಂಗಳೂರು ಸ0ಯುಕ್ತ ಆಶ್ರಯದಲ್ಲಿ ನಡೆದ ನುಡಿ ನಮನ, ಕೃತಿ ಬಿಡುಗಡೆ ಸಂಸ್ಮರಣೆ.

ಪರರ ಸೇವೆ ದೇವರ ಸೇವೆ ಎಂಬ ಧ್ಯೇಯವನ್ನು ತನ್ನದಾಗಿಸಿಕೊಂಡು ಬಾಳನ್ನು ಸಾಗಿಸಿದ್ದ ಶ್ರೀಮತಿ ದಿ. ಗಾಯತ್ರಿ ನಾಗೇಶ್ ರಾಮಕ್ಷತ್ರಿಯ ಸಮಾಜದ ಅಭಿಮಾನದ ಪುತ್ರಿ ಬಹುಮುಖ ಪ್ರತಿಭೆಯ ಗಾಯತ್ರಿ ಇವರ ವೈಕುಂಠ ಸಮಾರಾಧನೆ ಕ್ರಿಯೆಯ ದಿನದಂದು ಪೂರ್ವಾಹ್ನ 11.00 ರ ವೇಳೆಗೆ ಮಂಗಳೂರು ಶರವು ದೇವಸ್ಥಾನದ ಸಮೀಪವಿರುವ ಬಾಳಂಭಟ್ ರಾಧಾಕೃಷ್ಣ ಸಭಾಂಗಣದಲ್ಲಿ ಮರೆಯಲಾಗದವರು ವ್ಯಕ್ತಿ ಚಿತ್ರಣ ಕೃತಿ ಕನ್ನಡ ಭವನ ಪ್ರಕಾಶನ ಕಾಸರಗೋಡು, ಇದರ ಸಂಸ್ಥಾಪಕ ಅಧ್ಯಕ್ಷರು ಸಂಚಾಲಕರು ಆಗಿರುವಂತಹ ಡಾ. ವಾಮನ್ ರಾವ್ ಬೇಕಲ್ ಇವರ ನೇತೃತ್ವದಲ್ಲಿ…

Read More
error: Content is protected !!