ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ ವಿದ್ಯಾರ್ಥಿಗಳ ” ಪೀಸ್ ಟ್ಯಾಲೆಂಟ್ ಹಂಟ್” ಸಾಂಸ್ಕೃತಿಕ ಕಾರ್ಯಕ್ರಮ

ಮಂಜೇಶ್ವರ : ಗಡಿ ಪ್ರದೇಶದಲ್ಲಿ ಗಮನ ಸೆಳೆಯಿತ್ತಿರುವ ಕುಂಜತ್ತೂರು ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲಾ ವಿದ್ಯಾರ್ಥಿಗಳು ತಮ್ಮ ಅನೇಕ ಪ್ರತಿಭೆಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರದಂದು ನಡೆದ “ಪೀಸ್ ಟ್ಯಾಲೆಂಟ್ ಹಂಟ್” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಕಲೆಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಪ್ರಶಂಶೆಗೆ ಪಾತ್ರರಾದರು. ಸಕಲ ಸಿದ್ಧತೆಗಳೊಂದಿಗೆ ಅದ್ದೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ಶೈಕ್ಷಣಿಕ ಕ್ಷೇತ್ರದ ಶಿಸ್ತು ಪಾಲನೆಯಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ತೀರ್ಪುಗಾರರ ಪರಿಶೀಲನೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಿನ್ನೆಸ್ ದಾಖಲೆಯಲ್ಲಿ ಸ್ಥಾನ…

Read More

“ಭೂದಾನ ಚಳುವಳಿಯೇ, ಭೂಮಸೂದೆ ಕಾಯ್ದೆಗೆ ಪ್ರೇರಣೆ : ಪಿ .ಸೋಮಪ್ಪ

ಮಂಜೇಶ್ವರ : ಮಹಾತ್ಮಾ ಗಾಂಧಿಜಿಯವರ ಅನುಯಾಯಿ, ಸ್ವಾತಂತ್ರ್ಯ ಹೋರಾಟಗಾರ ಆಚಾರ್ಯ ವಿನೋಬಾ ಭಾವೆಯವರ ಭೂದಾನ ಚಳುವಳಿಯಿಂದ ಪ್ರೇರಿತರಾಗಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಭೂಮಸೂದೆ ಕಾಯ್ದೆಯನ್ನು ಜಾರಿಗೆ ತಂದರು. ಉಳುವವನೇ ಹೊಲದೊಡೆಯ ಎಂಬ ಪರಿಕಲ್ಪನೆ ವಿನೋಬಾ ಭಾವೆಯವರದ್ದಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಸೋಮಪ್ಪ ಹೇಳಿದ್ದಾರೆ. ಅವರು ವರ್ಕಾಡಿಯಲ್ಲಿ ಜರುಗಿದ ಆಚಾರ್ಯ ವಿನೋಬಾ ಭಾವೆಯವರ 130 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿನೋಬಾ – ವೆಂಕಟೇಶರಾವ್ ಶಾಂತಿ ಸೇನಾ ಫೌಂಡೇಶನ್ ಪ್ರಧಾನ ಸಂಚಾಲಕ…

Read More

ಮನೆಗೆ ಕಳ್ಳರು ನುಗ್ಗಿ ಹಣ ಹಾಗೂ ಚೆಕ್ ಲೀಫ್ ಕಳವು.

ಮಂಜೇಶ್ವರ: ಮನೆಗೆ ಬೀಗ ಹಾಕಿ ಮಸೀದಿಯ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಿ ಹಣ ಹಾಗೂ ಚೆಕ್ ಲೀಫ್ ಕಳವುಗೈದಿರುವ ಬಗ್ಗೆ ದೂರಲಾಗಿದೆ. ಪೆರ್ಮುದೆ ನಿವಾಸಿ ಹಾಗೂ ಗಲ್ಫ್ ಉದ್ಯೋಗಿಯಾಗಿರುವ ರಫೀಕ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 3೦ ಸಾವಿರ ರೂಪಾಯಿ ಹಾಗೂ ಬ್ಯಾಂಕ್‌ನ ಚೆಕ್ ಲೀಫ್ ಕಳವುಗೈದಿದ್ದಾರೆ. ಈ ಬಗ್ಗೆ ರಫೀಕ್‌ರ ಪತ್ನಿ ಶಮ್ನ ಕೆ.ಎ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶಮ್ನ ಹಾಗೂ ಮಕ್ಕಳು ಈ…

Read More

ಕೆ ಎಸ್‌ ಆರ್‌ ಟಿ ಸಿ ಬಸ್‌ನಲ್ಲಿ ಮದ್ಯ ಸಾಗಾಟ: ಮೊಗ್ರಾಲ್ ನಿವಾಸಿ ಸೆರೆ.

ಮಂಜೇಶ್ವರ: ಸಾರಿಗೆ ಬಸ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯವನ್ನು ಅಬಕಾರಿ ತಂಡ ವಶಪಡಿಸಿ ಒಬ್ಬನನ್ನು ಬಂಧಿಸಿದ್ದಾರೆ.ಮೊಗ್ರಾಲ್ ನೀರೋಳ್ ನಿವಾಸಿ ಬಿ. ಶಿವಪ್ರಸಾದ್ (26) ಬಂಧಿತ ವ್ಯಕ್ತಿ. ಈತನ ಬ್ಯಾಗ್‌ನಿಂದ 9 ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ತಂಡ ಬಸ್‌ನಲ್ಲಿ ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿದೆ. ಅಬಕಾರಿ ಇನ್‌ಸ್ಪೆಕ್ಟರ್ ಜಿನು ಜೇಮ್ಸ್ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್ ಎಂ.ವಿ. ಜಿಜಿನ್, ಗ್ರೇಡ್ ಪ್ರಿವೆಂಟೀವ್ ಆಫೀಸರ್ ಪಿ.ಕೆ. ಬಾಬು ರಾಜ್, ಸಿವಿಲ್ ಎಕ್ಸೆಸ್ ಆಫೀಸರ್ ಸುನೀಲ್ ಎಂಬಿವರು…

Read More

ಹೋಟೆಲೊಂದರಿಂದ ಖರೀದಿಸಲಾದ ಶವರ್ಮ ಸೇವಿಸಿ 8 ರಿಂದ 14 ರ ಮಧ್ಯೆ ಪ್ರಾಯದ 14 ಮಕ್ಕಳು ತೀವ್ರ ಅಸ್ವಸ್ಥ.

ಹೋಟೆಲೊಂದರಿಂದ ಖರೀದಿಸಲಾದ ಶವರ್ಮ ಸೇವಿಸಿ 8 ರಿಂದ 14 ರ ಮಧ್ಯೆ ಪ್ರಾಯದ 14 ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದಾರೆ.ಪಳ್ಳಿಕ್ಕೆರೆ ಸಮೀಪದ ಪೂಚಕ್ಕಾಡಿನ ಹೋಟೆಲೊಂದರಿಂದ ಖರೀದಿಸಲಾದ ಶವರ್ಮ ಸೇವಿಸಿ ಈ ದುರ್ಘಟನೆ ಸಂಭವಿಸಿದೆ. ಇವರೆಲ್ಲರಿಗೂ ಹೊಸದುರ್ಗ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು ಪಳ್ಳಿಕ್ಕೆರೆಯಲ್ಲಿ ನಡೆದ ನಬಿ ದಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ ನಬಿ ದಿನ ಸಂಘಟಕರು ಆಹಾರ ಪೂರೈಸಲು ತರಿಸಲಾಗಿದ್ದ ಆಹಾರ ಸಾಕಾಗದಿದ್ದಾಗ ಸಮೀಪದ ಹೋಟೆಲೊಂದರಿಂದ ಶವರ್ಮ ಖರೀದಿಸಿ ವಿತರಿಸಿದ್ದರು. ಅದನ್ನು ಸೇವಿಸಿದ ಅರ್ಧ…

Read More

ಕಾಸರಗೋಡು-ಕಾಞ್ಞಂಗಾಡು ನಡುವಿನ ರಾಜ್ಯ ಹೆದ್ದಾರಿಯಲ್ಲಿ ಬೀದಿ ದೀಪ ಕೊರತೆ.ಜನಸಾಮಾನ್ಯರ ಪರದಾಟ

ಕಾಸರಗೋಡು – ಕಾಞ್ಞಂಗಾಡು ನಡುವಿನ ರಾಜ್ಯ ಹೆದ್ದಾರಿಯ ಮೂಲಕ ಹಾದುಹೋಗುವಾಗ ಸಿಗುವ ತ್ರಿಕನಾಡ್ ಪ್ರದೇಶವು ಮುಸ್ಸಂಜೆಯ ಸಮಯದಲ್ಲಿ ಸೂರ್ಯ ಮುಳುಗುತ್ತಿದಂತೆ ಕಡು ಕತ್ತಲು ಸುತ್ತಲೂ ಮೂಡುತ್ತದೆ . ತ್ರಿಕನಾಡ್ ತ್ರಯಂಬಕೇಶ್ವರ ದೇವಾಲಯದ ಸಮೀಪವೇ ಇರುವ ಪ್ರದೇಶವು ಭಯಂಕರ ಕತ್ತಲೆಯಲ್ಲಿ ರಾತ್ರಿ ಕಳೆಯುವಂತೆ ಮಾಡುತ್ತದೆ . ಯಾಕೆಂದರೆ ಇಲ್ಲಿ ಕತ್ತಲನ್ನು ದೂರ ಮಾಡುವ ಬೀದಿ ದೀಪ ಇರದೇ ಇರುವುದು ಆ ಊರಿನ ಭಯಾನಕ ಚಿತ್ರಣವನ್ನು ಕಾಣಿಸುತ್ತದೆ . ಸ್ಥಳೀಯರು ಈ ಸನ್ನಿವೇಶದಿಂದ ಕರಾಳ ರಾತ್ರಿಯನ್ನು ಕಳೆಯುವಂತೆ ಮಾಡುತ್ತಿದೆ ….

Read More

ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣ ಪೂರ್ಣಗೊಂಡು ಒಂದೂವರೆ ವರ್ಷವಾದರೂ ಉದ್ಘಾಟನೆಯಾಗದ ಬಾಯಾರ್ ಕುಟುಂಬ ಆರೋಗ್ಯ ಕೇಂದ್ರದ ಸಾಂಕೇತಿಕ ಉದ್ಘಾಟನೆ

ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣ ಪೂರ್ಣಗೊಂಡು ಒಂದೂವರೆ ವರ್ಷವಾದರೂ ಉದ್ಘಾಟನೆಯಾಗದ ಬಾಯಾರ್ ಕುಟುಂಬ ಆರೋಗ್ಯ ಕೇಂದ್ರದ ಸಾಂಕೇತಿಕವಾಗಿ ಪ್ರತಿಭಟನ ಮೆರವಣಿಗೆ ತೆರಳಿ ಬಿಜೆಪಿ ಪೈವಳಿಕೆ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ಉದ್ಘಾಟನೆ ಮಾಡಿದರು. ಬಿಜೆಪಿ ಮುಖಂಡರಾದ ಪಿ ಆರ್ ಸುನಿಲ್,ಮಣಿಕಂಠ ರೈ, ಆದರ್ಶ ಬಿ ಎಂ, ಪ್ರಸಾದ್ ರೈ ಕಯ್ಯರ್,ಲೋಕೇಶ್ ನೊಂಡ, ಸದಾಶಿವ ಚೇರಲ್, ಸುಬ್ರಮಣ್ಯ ಭಟ್, ಸತ್ಯಶಂಕರ್, ಪ್ರವೀಣ ಪಟ್ಲ, ಜಯಲಕ್ಷ್ಮಿ ಭಟ್, ಚಂದ್ರವತಿ ಶೆಟ್ಟಿ, ರಾಜೀವಿ ನೇತೃತ್ವದಲ್ಲಿ ಹೊರಟ…

Read More

ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರ ಮಠ ಮೊಗ್ರಾಲ್ ಪುತ್ತೂರು.ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರ ಮಠ ಮೊಗ್ರಾಲ್ ಪುತ್ತೂರು ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಮಂದಿರದಲ್ಲಿ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀದರ ನಡುಹಿತ್ಲು ಇವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು, ಈ ಸಂದರ್ಭದಲ್ಲಿ ಮಹಿಳಾ ಸಮಿತಿ ಅಧ್ಯಕ್ಷೆ ಸುಶೀಲ, ಮಂದಿರದ ಅರ್ಚಕರಾದ ಶ್ರೀ ಪ್ರಭಾಕರ ದೊಡ್ಡಹಿತ್ಲು, ಸಮಿತಿ ಕಾರ್ಯದರ್ಶಿ ಗಳು, ಸದಸ್ಯರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು

Read More

ಜನನಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವೀರ ನಗರ ಅಡ್ಕ ಇದರ 29 ನೇ ವಾರ್ಷಿಕ ಗಣೇಶ ಚತುರ್ಥಿ

ಜನನಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವೀರ ನಗರ ಅಡ್ಕ ಇದರ 29 ನೇ ವಾರ್ಷಿಕ ಗಣೇಶ ಚತುರ್ಥಿಯ ಪ್ರಯುಕ್ತ ನಡೆದಂತ ವಿವಿಧ ಆಟೋಟ ಸ್ಪರ್ಧೆ ಹಾಗೂ ಧಾರ್ಮಿಕ ಸಭೆ ಶ್ರೀ ನಾಗ ರಕ್ತೇಶ್ವರಿ ಗುಳಿಗಜ್ಜ ಕೊರಗಜ್ಜ ಸಾನಿಧ್ಯ ವೀರನಗರ ಅಡ್ಕ ಇಲ್ಲಿ ವಿವಿಧ ಸಾಂಸ್ಕೃತಿಕ ಧಾರ್ಮಿಕ ಹಾಗೂ ಆಟೋಟ ಸ್ಪರ್ಧೆಗಳೊಂದಿಗೆ ನಡೆಯಿತು.ಬೆಳಗ್ಗೆ 7 ಗಂಟೆಗೆ ಗಣಹೋಮ ನಡೆಯಿತು. ಯುವಕರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ವಿನಾಯಕ ಹೇರೂರು ,ಧ್ವಿತೀಯ ಸ್ಥಾನ PFC ಪರೆಂಕಿಲ .ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ…

Read More

ಉಪ್ಪಳ ಸೊಂಕಾಲಿನ ಮನೆಯಿಂದ ಗಾಂಜಾ ವಶಪಡಿಸಿಕೊಂಡ ಪ್ರಕರಣ-ಇನ್ನೋರ್ವ ಆರೋಪಿ ಬಂಧನ.

ಮಂಜೇಶ್ವರ: ಉಪ್ಪಳ ಸೊಂಕಾಲಿನ ಮನೆಯಿಂದ 33.5 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಬ್ಬ ಆರೋಪಿ ಕೂಡಾ ಬಂಧನಕ್ಕೊಳಗಾಗಿದ್ದಾನೆ. ಉಪ್ಪಳ ಕುಕ್ಕಾರಿನ ಟಿಪ್ಪರ್ ಹಮೀದ್ (32) ಬಂಧಿತ ಆರೋಪಿ. ಈತನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸುತ್ತಿದ್ದಾರೆ. ಜೂನ್ 1ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಉಪ್ಪಳ ಸೊಂಕಾಲಿನ ಎ. ಅಶೋಕ್ (45) ಅವರ ಮನೆಯಲ್ಲಿ, ಹಾಸಿಗೆಯ ಕೆಳಭಾಗದಲ್ಲಿದ್ದ ಚೀಲಗಳಲ್ಲಿ ಗಾಂಜಾ ಪತ್ತೆಯಾಗಿತ್ತು. ಅಶೋಕರನ್ನು ವಿಚಾರಿಸಿದಾಗ ಹಮೀದ್ ಸಹಪ್ರತಿಯಾಗಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More
error: Content is protected !!