3.39 ಗ್ರಾಂ ಎಂಡಿಎಮ್‌ಎ ವಶ: ಮೂವರು ಯುವಕರ ಬಂಧನ; ಆಟೋ ಹಾಗೂ ಬುಲೆಟ್ ಜಪ್ತಿ
ಮಂಜೇಶ್ವರ: ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3.39 ಗ್ರಾಂ ಎಂಡಿಎಮ್‌ಎ (MDMA) ಸಾಗಾಟಕ್ಕೆ ಯತ್ನಿಸುತ್ತಿದ್ದ ಮೂವರು ಯುವಕರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ಸಂಜೆ 6.15ರ ಸುಮಾರಿಗೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಸ್ಸೋಟ್–ಸತ್ಯದುಕ್ಕ–ಬಡಾಜೆ ಹಿಂದೂಸ್ತಾನ್ ಗ್ರೌಂಡ್ ಸಮೀಪ ನಡೆಸಿದ ತಪಾಸಣೆಯ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. KL-14 AD 9865 ಸಂಖ್ಯೆಯ ಆಟೋ ರಿಕ್ಷಾದ ಹಿಂಬದಿ ಸೀಟಿನಲ್ಲಿ ಮಾರಾಟ ಹಾಗೂ ವೈಯಕ್ತಿಕ ಬಳಕೆಗೆಂದು ಕಾನೂನುಬಾಹಿರವಾಗಿ ಸಂಗ್ರಹಿಸಿದ್ದ…
